ಬ್ಲಾಗರುಗಳಿಗೆ ಗೂಗಲ್ ನಿಂದ ಉಚಿತ ಸೆಮಿನಾರ್!

Posted By: Varun
ಬ್ಲಾಗರುಗಳಿಗೆ ಗೂಗಲ್ ನಿಂದ ಉಚಿತ ಸೆಮಿನಾರ್!

ನೀವು ಆನ್ಲೈನಿನಲ್ಲಿ ತುಂಬಾ ಸಕ್ರೀಯವಾಗಿದ್ದೀರ? ಬ್ಲಾಗಿಂಗ್ ಮಾಡುವುದು ಹಾಗು ವೆಬ್ಸೈಟ್ ಗಳಿಗೆ ಬರೆಯುತ್ತೀರಾ? ನಿಮ್ಮ ಐಡಿಯಾಗಳನ್ನು, ಅನುಭವಗಳನ್ನು ಹಂಚಿಕೊಳ್ಳಲು ಆನ್ಲೈನ್ ವೇದಿಕೆಯನ್ನು ಬಳಸಿಕೊಳ್ಳಲು ಇಷ್ಟ ಪಡುತ್ತೀರಾ? ಯೂಟ್ಯೂಬ್ ಬಳಸಿಕೊಂಡು ನಿಮ್ಮ ಬ್ಲಾಗ್ ಹಾಗು ವೆಬ್ಸೈಟುಗಳನ್ನು ಇನ್ನೂ ಹೆಚ್ಚು ಸಮರ್ಪಕವಾಗಿ ಬಳಸಿಕೊಳ್ಳಲು, ಇಚ್ಛೆ ಇದೆಯೇ?

ಈ ಮೇಲಿನ ಯಾವುದಾದರೂ ಒಂದು ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ಗೂಗಲ್ ನಿಮಗಾಗಿ ಒಂದು ಸುವರ್ಣ ಅವಕಾಶವನ್ನು ಒದಗಿಸುತ್ತಿದೆ. ಬ್ಲಾಗರುಗಳಿಗೆ, ಹಾಗು ನೈಜ ಮಾಹಿತಿ ಹಾಗು ಅನುಭವವನ್ನು ಹಂಚಿಕೊಳ್ಳುವವರಿಗಾಗಿ ಗೂಗಲ್ ನ ಯೂಟ್ಯೂಬ್, ಸೆಮಿನಾರ್ ಒಂದನ್ನು ಬೆಂಗಳೂರು (ಜೂನ್ 16), ಮುಂಬೈ(ಜೂನ್ 9), ಹೈದರಾಬಾದ್ (ಜೂನ್ 15) ಹಾಗು ಗುರ್ಗಾವ್ (ಜೂನ್ 9) ನಗರಗಳಲ್ಲಿ ಏರ್ಪಡಿಸಿದ್ದು, ಯೂಟ್ಯೂಬ್ ಬಳಸಿಕೊಂಡು ಹೇಗೆ ವೀಡಿಯೋ ಮೂಲಕ ನಿಮ್ಮ ವಿಷಯಗಳನ್ನು ಚೆನ್ನಾಗಿ ಪ್ರಸ್ತುತಪಡಿಸಬಹುದು (ವ್ಲಾಗಿಂಗ್ ಎನ್ನುತ್ತಾರೆ) ಎಂದುಸೆಮಿನಾರ್ ಮೂಲಕ ಹೇಳಿಕೊಡುತ್ತದೆ.

ಇದಕ್ಕೆ ಪ್ರವೇಶ ಉಚಿತವಾಗಿದ್ದು, ಯಾವುದೇ ಬ್ಲಾಗರ್ ಹಾಗು ಸ್ವಂತ ಸುದ್ದಿಗಳನ್ನು ಬರೆಯುವವರು ಇದರಲ್ಲಿ ಪಾಲ್ಗೊಳ್ಳಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಪ್ರಾಶಸ್ತ್ಯ ಇರಲಿದ್ದು, ಕೂಡಲೇ ನೊಂದಾಯಿಸಿಕೊಳ್ಳಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot