18,999 ರೂ ದರದಲ್ಲಿ ಝೋಪೋ ಸ್ಮಾರ್ಟ್‌ಫೋನ್‌ ಬಂದಿದೆ

Posted By: Vijeth

18,999 ರೂ ದರದಲ್ಲಿ ಝೋಪೋ ಸ್ಮಾರ್ಟ್‌ಫೋನ್‌ ಬಂದಿದೆ

ಇತ್ತೀಚಿನ ಬೆಳವಣಿಗೆ ಎಂಬಂತೆ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯಾದಂತಹ ಝೋಪೋ ಮೊಬೈಲ್ಸ್‌ ಭಾರತೀಯ ಮಾರುಕಟ್ಟೆಗೆ ತನ್ನಯ ನೂತನ ಸ್ಮಾರ್ಟ್‌ಫೋನ್‌ ಆದಂತಹ ಝೋಪೋ ಝಡ್‌ಪಿ900 ಅನ್ನು ರೂ.18,999 ರೂ.ರಿಟೇಲ್‌ ದರದಲ್ಲಿ ಬಿಡುಗಡೆ ಮಾಡಿದೆ.

ಅಂದಹಾಗೆ ಚೀನಾ ಮೂಲದ ಸ್ಮಾರ್ಟ್‌ ಫೋನ್‌ ತಯಾರಿಕಾ ಸಂಸ್ಥೆಯಾದ ಝೋಪೋ ದ ನೂತನ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿದುಕೊಳ್ಳೋಣ. ಝೋಪೋ ಝಡ್‌900 ಸ್ಮಾರ್ಟ್‌ಫೋನ್‌ನಲ್ಲಿ 5.3 ಇಂಚಿನ IPS TFT ಮಲ್ಟಿ-ಟಚ್‌ ಹಾಗೂ 960 x 540 ಪಿಕ್ಸೆಲ್ಸ್‌ನ ದರ್ಶಕ. ನೂತನ ಎಂಟಿಕೆ6577 ಡ್ಯುಯೆಲ್‌-ಕೋರ್‌ ಪ್ರೊಸೆಸರ್‌ ಚಾಲಿತ ಹಾಗೂ 1GHz, ಅಲ್ಲದೆ 8.0 MP ನ ಮುಂಬದಿಯ ಕ್ಯಾಮೆರಾ ಸೇರಿದಂತೆ 2.0MP ನ ಹೀಬದಿಯ ಕಾಯಮೆರಾ ಕೂಡ ಹೊಂದಿದ್ದು LED ಫ್ಲಾಷ್‌ ಲೈಟ್‌, ಆಟೋ ಫೋಕಸ್‌ ಸೇರಿದಂತೆ 1080phd ನ ವೀಡಯೋ ಸೆರೆಹಿಡಿಯಬಲ್ಲದು.

ಸಂಸ್ಥೆಯು ತಿಳಿಸಿರುವಂತೆ ನೂತನ ಸ್ಮಾರ್ಟ್‌ಫೋನ್‌ ಝೋಪೋ ZP900 ನಲ್ಲಿ ಆಂಡ್ರಾಯ್ಡ್‌ 4.0 ಆಪರೇಟಿಂಗ್‌ ಸಿಸ್ಟಂ ಇದ್ದು ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ಗೆ ಅಪ್ಗ್ರೇಡ ಮಾಡಿಕೊಳ್ಳ ಬಹುದಾಗಿದೆ. ನೋಡಲು ಸ್ಟೈಲಿಷ್‌ ಲುಕ್‌ ಹಾಗೂ ಸ್ಲೀಕ್‌ ವಿನ್ಯಾಸ ಹೊಂದಿರುವಂತಹ ನೂತನ ಸ್ಮಾರ್ಟ್‌ಫೋನ್‌ ಈಗಾಗಲೆ ಚೀನಾದ ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದೆ. ಈ ಯಶಸ್ಸಿನ ಹಿನ್ನಲೆಯಲ್ಲಿ ಸಂಸ್ಥೆಯು ನೂತನ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ತನ್ನಯ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಶೇಷ ಆಫರ್‌ ಮೂಲಕ ರೂ.15,999 ದರದಲ್ಲಿ ಒಂದು ವರ್ಷದ ವ್ಯಾರಂಟಿಯೊಂದಿಗೆ ಟ್ರಾವೆಲ್‌ ಚಾರ್ಜರ್‌, ಲೆದರ್‌ ಕವರ್‌, ಯುಎಸ್‌ಬಿ ಕೇಬಲ್‌, ಹೆಡ್‌ಫೋನ್‌ ಬ್ಯಾಟರಿ ಸಹಿತ ಗ್ರಾಹಕರುಗಳಿಗೆ ನೇರ ಖರೀದಿಗಾಗಿ ಅವಕಾಷ ನೀಡಿದೆ.

ಇದಲ್ಲದೆ ಝೋಪೋ ZP900 ನಲ್ಲಿ ಡ್ಯುಯೆಲ್‌ ಸಿಮ್‌ಮ, 3ಜಿ ನೆಟ್ವರ್ಕ್‌ ಸೇರಿದಂತೆ WCDMA/GSM+GSM, ಮೈಕ್ರೋ ಎಸ್‌ಡಿ ಕಾರ್ಡ್‌ಸ್ಲಾಟ್‌ ಕಾರ್ಟ್‌ ಮೂಲಕ 64 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹದಾಗಿದೆ. ಇಂಟೆಲ್‌ ಫೋನ್‌ ಸ್ಟೋರೇಜ್‌ ಕೂಡಾ ಲಭ್ಯವಿದ್ದು 4GB RAM ಹಾಗೂ ಬಿಲ್ಟ್‌-ಇನ್‌ Li-on 2300 mAh ಬ್ಯಾಟರಿ ಇದ್ದು 120-180 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

149.6×78×10.2mm ಸುತ್ತಳತೆಯೋದಿಗೆ 198ಗ್ರಾಂ ತೂಕವಿದ್ದು(ಬ್ಯಾಟರಿ ಸಹಿತ).ಇಂಗ್ಲೀಷ್‌, ಫ್ರೆಂಚ್‌, ಸ್ಪಾನಿಷ್‌, ಜರ್ಮನ್‌, ಪೋರ್ಚುಗೀಸ್‌, ಪಷಿಯಾ ಹಾಗೂ ಟಚ್‌ ಭಾಷೆಗಳಿಗೆ ಸಹಕರಿಸುತ್ತದೆ.

ಇದಲ್ಲದೆ ಸಂಸ್ಥೆಯು ದಿಪಾವಳಿ ಹಬ್ಬದ ವೇಳೆಗೆ 5 ನೂತನ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟ್‌ಫೋನ್ಸ್‌ಗಳನ್ನು ರೂ,15,999 ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ತರುವುದಾಗಿ ತಿಳಿಸಿದೆ.

Read In English...

ಸ್ಮಾರ್ಟ್‌ಫೋನ್‌ ಖರೀದಿಗಾಗಿ ದೀಪಾವಳಿ ಆಫರ್ಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot