ZTE ಸಂಸ್ಥೆಯಿಂದ ಹೊಸ ಫೋನ್‌ ಅನಾವರಣ! ಇದರ ಲುಕ್‌ಗೆ ಫಿದಾ ಆಗೋದು ಗ್ಯಾರಂಟಿ!

|

ಗ್ರಾಹಕರ ಆಯ್ಕೆಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ZTE ಕೂಡ ಒಂದಾಗಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ZTE ಕಂಪೆನಿ ಗಮನಸೆಳೆದಿದೆ. ಸದ್ಯ ಇದೀಗ ZTE ಕಂಪೆನಿ ಹೊಸ ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಏರೋಸ್ಪೇಸ್‌ ಪ್ಯಾನಲ್‌ ಅನ್ನು ಹೊಂದಿದ್ದು, ಆಕರ್ಷಕವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸೆಕೆಂಡರಿ ಚಿಪ್‌ ಅನ್ನು ಹೊಂದಿದ್ದು, ನಾಲ್ಕು ಬದಲಿಗೆ ಕೇವಲ ಎರಡು ಮೆಮೊರಿ ಕಾನ್ಫಿಗರೇಶನ್‌ನಲ್ಲಿ ಬರಲಿದೆ.

ZTE

ಹೌದು, ZTE ಕಂಪೆನಿ ಹೊಸ ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿ ಫೋನ್‌ ಬಿಡುಗಡೆ ಮಾಡಿದೆ. ಇದು ಸೆರಾಮಿಕ್ ರಿಯರ್‌ ಪ್ಯಾನಲ್‌ ಅನ್ನು ಹೊಂದಿದೆ. ಇದನ್ನು ಸಂಯೋಜಿತ ನ್ಯಾನೊ-ಕಾಸ್ಟಿಂಗ್ ಮೋಲ್ಡಿಂಗ್ ಪ್ರೊಸೆಸರ್‌ ಬಳಸಿಕೊಂಡು ತಯಾರಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿಯು 6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲ ಹೊಂದಿದೆ. ಈ ಡಿಸ್‌ಪ್ಲೇ 1116 x 2480 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 93.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 400 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಬೆಂಬಲಿಸಲಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿಯು ಕ್ವಾಲ್ಕಾಮ್‌ SM8450 ಸ್ನಾಪ್‌ ಡ್ರಾಗನ್‌ 8+ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಅಡ್ರಿನೊ 730 ಸಪೋರ್ಟ್‌ ಅನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 12GB RAM + 512GB ಮತ್ತು 18GB RAM + 1TB ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ಯಾವುದೇ ರೀತಿಯ ಮೆಮೊರಿ ಕಾರ್ಡ್‌ ಬೆಂಬಲಿಸುವ ಆಯ್ಕೆಗಳನ್ನು ನೀಡಲಾಗಿಲ್ಲ.

ಕ್ಯಾಮೆರಾ ಎಷ್ಟಿದೆ?

ಕ್ಯಾಮೆರಾ ಎಷ್ಟಿದೆ?

ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿಯು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಮುಖ್ಯ ಕ್ಯಾಮೆರಾ 64 ಮೆಗಾ-ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 64 ಮೆಗಾ-ಪಿಕ್ಸೆಲ್ ಟೆಲಿಪೋಟೋ ಲೆನ್ಸ್‌ ಅನ್ನು ಪಡೆದಿರಲಿದೆ. ಮೂರನೇ ಕ್ಯಾಮೆರಾ ಕೂಡ 64 ಮೆಗಾ-ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾವೈಡ್‌ ಲೆನ್ಸ್‌ ಅನ್ನು ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿಯು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್-ಸಿ ಬೆಂಬಲವನ್ನು ಹೊಂದಿದೆ. ಇದಲ್ಲದೆ ಅಂಡರ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಆಕ್ಸಿಲೆರೋಮೀರ್‌, ಗೈರೊ, ಪ್ರಾಕ್ಸಿಮಿಟಿ ಸೆನ್ಸಾರ್‌, ಕಂಪಾಸ್‌ ಅನ್ನು ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ZTE ಆಕ್ಸನ್‌ ಆಕ್ಸಾನ್ 40 ಅಲ್ಟ್ರಾ ಏರೋಸ್ಪೇಸ್ ಆವೃತ್ತಿಯು ಪ್ರಸ್ತುತ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ 12GB + 512GB ಆಯ್ಕೆಗೆ ¥5,898 (ಅಂದಾಜು 67,228ರೂ) ಬೆಲೆ ಹೊಂದಿದೆ. ಹಾಗೆಯೇ 18GB + 1TB ಆಯ್ಕೆಯ ಬೆಲೆ ¥7,698 (ಅಂದಾಜು 87,745ರೂ) ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಇದೇ ಡಿಸೆಂಬರ್ 6 ರಿಂದ ಮಾರಾಟವಾಗಲಿದೆ.

Best Mobiles in India

English summary
ZTE Axon 40 Ultra Aerospace Edition Launched: Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X