ಲಾಕ್‌ಡೌನ್ ಪರಿಣಾಮ ನೀಲಿಚಿತ್ರ ವೀಕ್ಷಣೆಯಲ್ಲಿ ಭಾರಿ ಏರಿಕೆ!

|

ಕೊರೊನಾ ವೈರಸ್‌ ಸಾಂಕ್ರಾಮಿಕ ವ್ಯಾಪಕವಾಗಿ ಹರಡದಂತೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದು ಅಗತ್ಯವಾಗಿದ್ದು, ಮನೆಯಲ್ಲಿ ಇದ್ದು ಬೇಸರ ಕಳೆಯಲು ಅನೇಕರು ಅನೇಕ ಹಾದಿ ಕಂಡುಕೊಂಡಿದ್ದಾರೆ. ಕೆಲವರು ತಮ್ಮಿಷ್ಟದ ಹವ್ಯಾಸದಲ್ಲಿ ತೊಡಗಿದ್ದರೇ, ಇನ್ನು ಕೆಲವರು ಮನರಂಜನೆಯ ತಾಣಗಳ ವೀಕ್ಷಣೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗೆಯೇ ಬಹುತೇಕರು ನೀಲಿಚಿತ್ರಗಳ ವೀಕ್ಷಣೆಗೆ ಮೋರೆ ಹೋಗಿದ್ದಾರೆ ಎಂದರೇ ನೀವು ಅಚ್ಚರಿಪಡಬೇಕಿಲ್ಲ.

ಭಾರತದಲ್ಲಿ ಲಾಕ್‌ಡೌನ್

ಹೌದು, ಸದ್ಯ ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ನೀಲಿಚಿತ್ರ ವೀಕ್ಷಣೆಯ ಅಂಕಿ-ಅಂಶಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಫೋರ್ನ್‌ಹಬ್‌ ತಾಣ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮಾರ್ಚ್ 24 ರಿಂದ ಮಾರ್ಚ್ 27ರ ವರೆಗಿನ ಅವಧಿಯಲ್ಲಿ ನೀಲಿಚಿತ್ರ ವೀಕ್ಷಣೆಯಲ್ಲಿ ಶೇ.95%ನಷ್ಟು ಹೆಚ್ಚಳ ಆಗಿದೆ. ಅಚ್ಚರಿ ಎಂದರೇ ಲಾಕ್‌ಡೌನ್ ಜಾರಿಯಾದ ಮೊದಲ ದಿನವೇ ಶೇ.55%ರಷ್ಟು ಏರಿಕೆ ಕಂಡುಬಂದಿದೆ.

ನೀಲಿಚಿತ್ರಗಳ ವೀಕ್ಷಣೆ

ಮಾರ್ಚ್ 27ರ ಬಳಿಕ ನೀಲಿಚಿತ್ರಗಳ ವೀಕ್ಷಣೆಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಏಪ್ರಿಲ್ 1 ರಂದು ನೀಲಿಚಿತ್ರ ವೀಕ್ಷಣೆಯ ಪ್ರಮಾಣ ಶೇ.64% ಆಗಿತ್ತು. ಭಾರತದಲ್ಲಿ ಅಷ್ಟೇ ನೀಲಿಚಿತ್ರ ವೀಕ್ಷಣೆಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ. ಬದಲಾಗಿ ಅಮೆರಿಕ, ಇಂಗ್ಲೆಂಡ್, ಸ್ಪೇನ್, ಇಟಲಿ ಮತ್ತು ರಷ್ಯಾ ದೇಶಗಳಲ್ಲಿಯೂ ಸಹ ನೀಲಿಚಿತ್ರಗಳ ವೀಕ್ಷಣೆಯ ಪ್ರಮಾಣ ಗಣನೀಯವಾಗಿ ಏರಿಕೆ ಆಗಿದೆ.

ಭಾರತದಲ್ಲಿ ಪೋರ್ನ್‌ಹಬ್

ಭಾರತದಲ್ಲಿ ಪೋರ್ನ್‌ಹಬ್ ಸೇರಿದಂತೆ ಕೆಲವು ವಯಸ್ಕರ ಮನರಂಜನಾ ಪೋರ್ಟಲ್‌ಗಳನ್ನು ನಿಷೇಧಿಸಲಾಗಿದೆ. ಅದಾಗ್ಯೂ ಬಳಕೆದಾರರು ಅಂತಹ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳ (VPNs) ಇತರ ಆನ್‌ಲೈನ್ ಮಾರ್ಗಗಳ ಮೂಲಕ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಫೋರ್ನ್‌ಹಬ್ ತಾಣವು ಒಂದು ತಿಂಗಳ ಉಚಿತ ಪ್ರೀಮಿಯಂ ಚಂದಾದಾರಿಕೆಯ ಕೊಡುಗೆಯನ್ನು ನೀಡಿತ್ತು. ಇದೀಗ ಈ ಉಚಿತ ಪೋರ್ನ್‌ಹಬ್ ಪ್ರೀಮಿಯಂ ಅನ್ನು ಏಪ್ರಿಲ್ 23 ರವರೆಗೆ ವಿಶ್ವಾದ್ಯಂತ ವಿಸ್ತರಿಸಲು ನಿರ್ಧರಿಸಿದೆ.

 ವೀಕ್ಷಣೆ ಪ್ರಮಾಣ

ನೀಲಿಚಿತ್ರ ವೀಕ್ಷಣೆ ಪ್ರಮಾಣ ಹೆಚ್ಚಾಗಲು ಲಾಕ್‌ಡೌನ್‌ ಸಮಯದಲ್ಲಿ ಪೋರ್ನ್‌ಹಬ್‌ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತ ಮಾಡಿರುವುದು ಕಾರಣ ಎಂದು ಹೇಳಲಾಗಿದೆ. ಹಾಗೆಯೇ ಕೊರೊನಾ ವೈರಾಣು ಎಫೆಕ್ಟ್‌ನಿಂದಾಗಿ ಈ ಫೋರ್ನ್‌ಹಬ್ ತಾಣವು ನೀಲಿಚಿತ್ ವಿಡಿಯೋ ಪ್ಲಾಟ್‌ಫಾರ್ಮ್ ಉದ್ಯಮದಲ್ಲಿ ಕೆಲಸ ಮಾಡುವ ನಟರಿಗೆ ನೆರವು ನೀಡುತ್ತಿದೆ. ಈ ಮಹಾಮಾರಿ ಚೀನಾ, ಇಟಲಿ, ಅಮೆರಿಕಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ನಲುಗಿಸಿದೆ.

Best Mobiles in India

Read more about:
English summary
According to data released by Pornhub last week, the site recorded the peak in growth in traffic for the month at 95 percent on March 27.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X