Subscribe to Gizbot

ಸಂಶೋಧಕರಿಂದ ವಾಸಿಸಲು ಯೋಗ್ಯವಾದ ಗ್ರಹ ಪತ್ತೆ: 'Kepler 62f'

Written By:

ಭೂಮಿಯಿಂದ 1,200 ಜ್ಯೋತಿರ್ವರ್ಷಗಳ ದೂರದಲ್ಲಿರುವ ಗ್ರಹವೊಂದು ವಾಸಿಸಲು ಯೋಗ್ಯವಾದ ವಾತಾವರಣ ಹೊಂದಿದೆ ಎಂಬುದನ್ನು ಲಾಸ್‌ ಏಂಜೆಲ್ಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ವರದಿ ಮಾಡಿದೆ. ಹಲವು ವರ್ಷಗಳಿಂದ ಮಂಗಳ ಗ್ರಹ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸಲು ಹಲವಾರು ಸಂಶೋಧನೆಗಳನ್ನು ಕೈಗೊಂಡರು ಸಹ ಮಾನವರು ಜೀವಿಸಲು ಯೋಗ್ಯವಾದ ವಾತಾವರಣ ಎರಡರಲ್ಲೂ ಪತ್ತೆಯಾಗಿರಲಿಲ್ಲ. ಆದರೆ ಕ್ಯಾಲಿಫೋರ್ನಿಯಾ ಸಂಶೋಧಕರ ತಂಡ ಹೇಳಿರುವ ಈ ಗ್ರಹ ವಾಸಿಸಲು ಯೋಗ್ಯವಾದ ದ್ರವ ನೀರನ್ನು ಹೊಂದಿದೆ. ವಿಶೇಷ ಅಂದ್ರೆ ಭೂಮಿಗಿಂತ ಶೇಕಡ 40 ರಷ್ಟು ವಿಶಾಲವಾದ ಗ್ರಹ ಇದಾಗಿದೆ. ಅಂದಹಾಗೆ ಈ ಗ್ರಹದ ಹೆಸರೇನು, ಗಾತ್ರ, ವಿಶೇಷತೆ, ಗ್ರಹದಲ್ಲಿ ಏನೇನಿದೆ ಎಂಬ ಮಾಹಿತಿಯನ್ನು ತಿಳಿಯಲು ಲೇಖನದ ಸ್ಲೈಡರ್‌ ಓದಿರಿ.

22 ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಲಾಂಚ್‌ ಮಾಡಲಿರುವ ಇಸ್ರೊ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಸಿಸಲು ಯೋಗ್ಯವಾದ ಗ್ರಹ ಪತ್ತೆ

1

ಭೂಮಿಯಿಂದ 1200 ಜ್ಯೋತಿರ್ವರ್ಷಗಳ ದೂರವಿರುವ ಗ್ರಹವೊಂದು ವಾಸಿಸಲು ಯೋಗ್ಯವಾದ ದ್ರವ ನೀರನ್ನು ಹೊಂದಿದೆ ಎಂದು ಲಾಸ್‌ ಏಂಜಲ್ಸ್‌ನ 'ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ" ಸಂಶೋಧಕರು ವರದಿ ಮಾಡಿದ್ದಾರೆ.
ಚಿತ್ರ ಕೃಪೆ: ವಿಕಿಪಿಡಿಯಾ

ಕೆಪ್ಲರ್-62ಎಫ್‌ (Kepler-62f)

2

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳಿರುವ ವಾಸಿಸಲು ಯೋಗ್ಯವಾದ ಗ್ರಹದ ಹೆಸರು "ಕೆಪ್ಲರ್-62ಎಫ್‌ (Kepler-62f)". ಲೈರಾ ನಕ್ಷತ್ರ ಪುಂಜ ಸಮೂಹದ ದಿಕ್ಕಿನಲ್ಲಿ 'ಕೆಪ್ಲರ್-62ಎಫ್' ಭೂಮಿಗಿಂತ ಶೇಕಡ 40 ರಷ್ಟು ವಿಶಾಲವಾಗಿದೆ ಎನ್ನಲಾಗಿದೆ. ಈ ಗ್ರಹದಲ್ಲಿ ಪ್ರಸ್ತುತ ಸಕ್ರಿಯ ಜೀವನವು ಸಹ ಇರಬಹುದು ಎಂದು ಹೇಳಲಾಗಿದೆ.
ಚಿತ್ರ ಕೃಪೆ: clarksvilleonline.com

ಕೆಪ್ಲರ್-62ಎಫ್

3

"ಭೂಮಿಗಿಂತ ಶೇಕಡ 40 ರಷ್ಟು ವಿಶಾಲವಾಗಿರುವ 'ಕೆಪ್ಲರ್-62ಎಫ್' ಭೂಮಿಯ ಗಾತ್ರದಲ್ಲಿದೆ. ಬಂಡೆಕಲ್ಲುಗಳನ್ನು ಮತ್ತು ಸಾಗರಗಳನ್ನು ಸಹ ಹೊಂದಿರುವ ಸಾಧ್ಯತೆ ಇದೆ" ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಮತ್ತು ಖಗೋಳ ಭೌತಶಾಸ್ತ್ರಜ್ಞರಾದ 'ಓಮವಾ ಶೀಲ್ಡ್ಸ್‌ ಹೇಳಿದ್ದಾರೆ.
ಚಿತ್ರ ಕೃಪೆ: nasa.gov

ನಾಸಾ ಕೆಪ್ಲರ್‌ ಮಿಷನ್

4

ನಾಸಾ ಕೆಪ್ಲರ್‌ ಮಿಷನ್‌ 2013 ರಲ್ಲಿ ಪತ್ತೆಹಚ್ಚಿದ ಗ್ರಹಗಳ ಸಮೂಹದಲ್ಲಿ "ಕೆಪ್ಲರ್-62ಎಫ್‌ (Kepler-62f)" ಇತ್ತು. ಆಗಲೇ ಇದನ್ನು 'Kepler-62f' ಎಂದು ಗುರುತಿಸಲಾಯಿತು. ನಕ್ಷತ್ರದ ಕಕ್ಷೆಯಲ್ಲಿ ಸುತ್ತುತಿದ್ದ ಇತರೆ 5 ಗ್ರಹಗಳಿಗಿಂತ 'ಕೆಪ್ಲರ್-62ಎಫ್' ಸೂರ್ಯನಿಗಿಂತ ಚಿಕ್ಕದಾಗಿ ಮತ್ತು ಸೂರ್ಯನಿಗಿಂತ ತಂಪಾಗಿದ್ದ ಗ್ರಹ ಎಂದು ಸಂಶೋಧಕರು ಹೇಳಿದ್ದಾರೆ.

ನಾಸಾ ಕೆಪ್ಲರ್ ಮಿಷನ್‌

5

ನಾಸಾ ಕೆಪ್ಲರ್ ಮಿಷನ್‌ 'ಕೆಪ್ಲರ್-62ಎಫ್' ನ ಸಂಯೋಜನೆ, ವಾತಾವರಣ ಮತ್ತು ಕಕ್ಷೆಯ ಆಕಾರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಸಂಶೋಧಕರ ತಂಡ

6

ಸಂಶೋಧಕರ ತಂಡ 'ಕೆಪ್ಲರ್-62ಎಫ್' ಜೀವನಾಧಾರ ಇರಬಹುದಾ ಎಂಬ ಸಂಭವನೀಯ ಅಂಶಗಳ ಆಧಾರವನ್ನು ತಿಳಿಯಲು ಪ್ರಯತ್ನಿಸಿದಾಗ ಹಲವು ವಾತಾವರಣ ಸಂಯೋಜನೆ ಇರುವುದನ್ನು ತಿಳಿಯಲಾಗಿದ್ದು, ಬೆಚ್ಚಗಿನ ವಾತಾವರಣಕ್ಕೆ ತಕ್ಕನಾದ ಮೇಲ್ಮೈ ದ್ರವ ನೀರನ್ನು ಹೊಂದಿದೆ. ಆದ್ದರಿಂದ 'ಕೆಪ್ಲರ್-62ಎಫ್' ಜೀವಿಸಲು ಸಕ್ರಿಯವಾದ ಗ್ರಹ ಎಂದು ಸಂಶೋಧನೆಯ ಪ್ರಮುಖ ಲೇಖಕ 'ಶೀಲ್ಡ್ಸ್‌' ರವರು ಹೇಳಿದ್ದಾರೆ.

ಭೂಮಿ

7

ಭೂಮಿಯ ಮೇಲೆ ಕಾರ್ಬನ್‌ ಡೈ ಆಕ್ಸೈಡ್‌ 0.04 ಶೇಕಡ ವಾತಾವರಣ ಉಂಟುಮಾಡುತ್ತದೆ. 'ಕೆಪ್ಲರ್-62ಎಫ್' ಸೂರ್ಯನಿಂದ ಭೂಮಿಗಿಂತ ದೂರವಿದ್ದು ಬೆಚ್ಚಗಿನ ವಾತಾವರಣ ಸೃಷ್ಟಿಸಲು ಕೃತಕ ಕಾರ್ಬನ್‌ ಡೈ ಆಕ್ಸೈಡ್ ಅನ್ನು ಬೇಡುತ್ತದೆ.

ಸಂಶೋಧಕರ ತಂಡ

8

'ಕೆಪ್ಲರ್-62ಎಫ್' ಬಗೆಗಿನ ಸಂಶೋಧಕರ ತಂಡ ಅಲ್ಲಿ ವಾಸಿಸಲು ಯೋಗ್ಯವಾದ 'ಕಾರ್ಬನ್‌ ಡೈ ಆಕ್ಸೈಡ್‌'ಅನ್ನು ಹೇಗೆ ವಿವಿಧ ರೀತಿಯಲ್ಲಿ ಉಂಟು ಮಾಡಬಹುದು ಎಂದು ಕಂಪ್ಯೂಟರ್‌ ಮಾದರಿಗಳನ್ನು ಸೃಷ್ಟಿಸಿದೆಯಂತೆ. ವರ್ಷಪೂರ್ಣ ಗ್ರಹದಲ್ಲಿ ಜೀವಿಸಬಹುದಾದ ವಾತಾವರಣ ಇದ್ದು ಭೂಮಿಗಿಂತ 3-5 ಪಟ್ಟು ಕಾರ್ಬನ್‌ ಸಂಯೋಜನೆ ಅವಶ್ಯಕತೆ ಮಾತ್ರ ಇದೆ ಎಂದು ಶೀಲ್ಟ್ಸ್‌ ಹೇಳಿದ್ದಾರೆ.

 HNbody

9

ವಿಜ್ಞಾನಿಗಳು 'ಕೆಪ್ಲರ್-62ಎಫ್' ನಕ್ಷತ್ರದ ಪರಿಧಿಯಲ್ಲಿ ಸುತ್ತುವ ಆಧಾರದಲ್ಲಿ ಅದರ ಗಾತ್ರವನ್ನು ಕಂಪ್ಯೂಟರ್‌ ಮಾಡೆಲ್‌ " HNbody" ಮೂಲಕ ಲೆಕ್ಕಚಾರ ಹಾಕಿದ್ದಾರೆ. ಈ ಸಂಶೋಧನೆಯು ಆನ್‌ಲೈನ್‌ ನಿಯತಕಾಲಿಕೆ "Astrobiology"ಯಲ್ಲಿ ಪ್ರಕಟಗೊಂಡಿದೆ.

ಓಮವಾ ಶೀಲ್ಡ್ಸ್ ಹೇಳಿದ್ದೇನು?

10

ಭೂಮಿಗೆ ಹತ್ತಿರ ವಿರುವ ಮತ್ತು ಸೂರ್ಯನಿಂದ ದೂರವಿರುವ ಇತರೆ ಗ್ರಹಗಳು ಜೀವಿಸಲು ಯೋಗ್ಯವೇ ಎಂದು ತಿಳಿಯಲು ಸಹ 'HNbody' ತಂತ್ರಜ್ಞಾನ ಉಪಯೋಗಿಸಬಹುದು ಎಂದು ಶೀಲ್ಡ್ಸ್‌ ಹೇಳಿದ್ದಾರೆ. 2,300 ಗ್ರಹಗಳು ಸೂರ್ಯನ ಕಕ್ಷೆಯಿಂದ ದೂರದಲ್ಲಿವೆ ಎಂದು ಖಚಿತವಾಗಿದ್ದು, ಕೇವಲ ಕೆಲವು ಡಜನ್‌ ಗ್ರಹಗಳು ಮಾತ್ರ ವಾಸಯೋಗ್ಯ ವಲಯದಲ್ಲಿ ಕಾಣಸಿಕೊಂಡಿವೆ ಎಂದು ಹೇಳಿದ್ದಾರೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ವಿಜ್ಞಾನ ಕ್ಷೇತ್ರದಲ್ಲಿನ 15 ಭಯಾನಕ ಪ್ರಯೋಗಗಳು

22 ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಲಾಂಚ್‌ ಮಾಡಲಿರುವ ಇಸ್ರೊ

ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳ ತನಿಖೆ: ಚೀನಾ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
1,200 Light Years Away, This Planet May Have Active Life.Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot