ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು

By Gizbot Bureau
|

ಯಾರೂ ಕೂಡ ಯುದ್ಧ ಆಗಬೇಕು ಅಂತ ಬಯಸುವುದಿಲ್ಲ. ಶತ್ರುಗಳಿಂದ ಕಾಪಾಡಿಕೊಳ್ಳುವುದಕ್ಕೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಮಾತ್ರ ಪ್ರತಿ ದೇಶವೂ ಬಯಸುತ್ತದೆ. ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶವನ್ನು ಶಕ್ತಿಯುತ ರಾಷ್ಟ್ರವೆಂದು ಜನರು ಕರೆಯುತ್ತಾರೆ ನಿಜ ಮತ್ತು ಆ ಪಟ್ಟಿಯಲ್ಲಿ ಭಾರತದ ಮೇಲ್ದರ್ಜೆಯ ಸ್ಥಾನದಲ್ಲಿ ಇಲ್ಲದೇ ಇದ್ದರೂ ಕೂಡ ಕೆಳಮಟ್ಟದ ಸ್ಥಾನವನ್ನು ಹೊಂದಿಲ್ಲ. ನಮ್ಮ ದೇಶವೂ ಕೂಡ ಅಗತ್ಯ ಶಸ್ತ್ರಾಸ್ತ್ರಗಳಿಗಾಗಿ ಮತ್ತು ಅದರ ತರಬೇತಿಗಾಗಿ ಮಿಲಿಟರಿಗೆ ಹಣವನ್ನು ವ್ಯಯಿಸುತ್ತಿದೆ.

ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು

ಸದ್ಯ ಕಾರ್ಯಾಚರಣೆಯಲ್ಲಿರುವ ಫೈಟರ್ ಜೆಟ್ ಗಳು ಹಳತಾಗಿದೆ ಮತ್ತು ಅವುಗಳಿಗಾಗಿ ಭಾರತ ಸರ್ಕಾರವು ಇದೀಗ ಹಣವನ್ನು ವ್ಯಯಿಸುತ್ತಿದೆ.ಭಾರತವು ಮಿರಾಜ್ 2000 ಜೆಟ್ ನ್ನು ಬಳಕೆ ಮಾಡುವುದಕ್ಕೆ ಫ್ರೆಂಚ್ ಏರೋನಾಟಿಕ್ಸ್ ಜೊತೆಗೆ ಮತ್ತು ಮಿಲಿಟರಿ ಎಕ್ಸ್ ಪರ್ಟ್ ಡಸಾಲ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಕಾರ್ಗಿಲ್ ಯುದ್ಧದಲ್ಲಿ ಹಳೆಯ ಮಿರಾಜ್ ಕಾರ್ಯ ನಿರ್ವಹಿಸಿತ್ತು. ಆದರೆ ಇದೀಗ ಹೆಚ್ಚಿನವರಿಗೆ ಹೊಸ ಮಾಡೆಲ್ ಮಿರಾಜ್ 2000ದ ಬಗ್ಗೆ ತಿಳಿದಿಲ್ಲ. ನೀವು ತಿಳಿದಿರದ 10 ಅಂಶಗಳ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ ಮತ್ತು ಭಾರತವು ಈ ಫೈಟರ್ ಜೆಟ್ ಗಳ ಮೂಲಕ ಬಲಿಷ್ಟವಾಗಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ.

ಮಲ್ಟಿ ರೋಲ್ ನಿಭಾಯಿಸಬಲ್ಲ ಸಾಮರ್ಥ್ಯವಿರುವ ಫೈಟರ್ ಜೆಟ್

ಮಲ್ಟಿ ರೋಲ್ ನಿಭಾಯಿಸಬಲ್ಲ ಸಾಮರ್ಥ್ಯವಿರುವ ಫೈಟರ್ ಜೆಟ್

ಯುದ್ಧಗಳು ಮತ್ತು ಘರ್ಷಣೆಗಳು ಯಾವಾಗ ಆರಂಭವಾಗುತ್ತದೆ ಹೇಳಲು ಸಾಧ್ಯವಿಲ್ಲ. ಶತ್ರುಗಳ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಕ್ಕೆ ನಮ್ಮಲ್ಲಿ ಶಸ್ತ್ರಾಸ್ತ್ರಗಳ ಅಗತ್ಯತೆ ಇರುತ್ತದೆ. ಆ ನಿಟ್ಟಿನಲ್ಲಿ ಮಲ್ಟಿ ರೋಲ್ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಈ ಫೈಟರ್ ಜೆಟ್ ಹೊಂದಿದೆ. ಗಾಳಿಯಲ್ಲಿ ಶತ್ರುಗಳ ಜೊತೆಗೆ ಹೋರಾಡುವುದಕ್ಕೆ ಬೇಕಾಗುವ ಎಲ್ಲಾ ಅಗತ್ಯ ಅಂಶಗಳು ಇದರಲ್ಲಿದೆ. ಯುದ್ಧದ ಸಂದರ್ಬದಲ್ಲಿ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುವುದಕ್ಕೆ ಇದು ನೆರವಾಗುತ್ತದೆ.

ಅವಳಿ ಎಂಜಿನ್ ಗಳ ಅವಲಂಬನೆ

ಅವಳಿ ಎಂಜಿನ್ ಗಳ ಅವಲಂಬನೆ

ಸಿಂಗಲ್ ಎಂಜಿನ್ ಗಳ ಬಳಕೆಯು ಸಾಕಷ್ಟು ಬಾರಿ ವೈಫಲ್ಯತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಮತ್ತು ಪೈಲಟ್ ಗೆ ಇದು ಸಮಸ್ಯೆಯಾಗುವ ಸಾಧ್ಯತೆ ಇದೆ. ಮಿರಾಜ್ 2000 ನಲ್ಲಿ ಅವಳಿ ಎಂಜಿನ್ ವ್ಯವಸ್ಥೆ ಇದೆ. ಒಂದು ಎಂಜಿನ್ ಫೈಲ್ ಆದರೆ ಮಿಷನ್ ಫೈಲ್ ಆಗುವುದಿಲ್ಲ. ಪ್ಲೇನ್ ಮತ್ತು ಪೈಲಟ್ ನ್ನು ಕಳೆದುಕೊಳ್ಳುವ ಸಾಧ್ಯತೆ ಬಹಳ ಕಡಿಮೆ

ಗರಿಷ್ಟ ವೇಗ 2,000 km/hr

ಗರಿಷ್ಟ ವೇಗ 2,000 km/hr

ಮಿರಾಜ್ 2000 ದ ಗರಿಷ್ಟ ವೇಗ 2,000 km ಅಥವಾ 1243 mph. ಈ ಪ್ಲೇನಿನ ವೇಗವು ನಿಜಕ್ಕೂ ಗಮನಾರ್ಹ ಸಂಗತಿಯಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಹೇಗೆ ವರ್ತಿಸಬೇಕು ಮತ್ತು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಪೈಲಟ್ ಗಳಿಗೆ ಟ್ರೈನಿಂಗ್ ನೀಡುವುದಕ್ಕಾಗಿ ಭಾರತವು ಸಾಕಷ್ಟು ಹಣ ವೆಚ್ಚ ಮಾಡಿದೆ. ಇವುಗಳನ್ನು ಯು.ಎಸ್ ಏರ್ ಫೋರ್ಸ್ ಗೆ ಅಥವಾ ಇಸ್ರೆಲ್ ಏರ್ ಫೋರ್ಸ್ ಗೆ ಹೋಲಿಸುವುದಕ್ಕೆ ಸಾಧ್ಯವಿದೆಯೇ? ಖಂಡಿತ ಇಲ್ಲ. ಆದರೆ ಸಾಮರ್ಥ್ಯವಿಲ್ಲದೇ ಇರುವವು ಅಲ್ಲ ಅಷ್ಟೇ.

ಸ್ಪೆಕ್ಟ್ರಾ ಸಿಸ್ಟಮ್

ಸ್ಪೆಕ್ಟ್ರಾ ಸಿಸ್ಟಮ್

ಸ್ಪೆಕ್ಟ್ರಾ ಸಿಸ್ಟಮ್ ನ್ನು ಡೆಸಾಲ್ಟ್ ಅಭಿವೃದ್ಧಿ ಪಡಿಸಿದೆ ಮತ್ತು ಸಂಪೂರ್ಣ ಎಲೆಕ್ಟ್ರಾನಿಕ್ ಸೆಕ್ಯುರಿಟಿ ವ್ಯವಸ್ಥೆಯನ್ನು ಇದು ಹೊಂದಿದೆ. ಒಂದು ವೇಳೆ ಶತ್ರು ಪಡೆ ಪ್ಲೇನಿನ ಸಿಗ್ನಲ್ ನ್ನು ಕ್ಯಾಚ್ ಮಾಡಿದರೆ ಮತ್ತು ಗಾಳಿಯಲ್ಲಿ ಟ್ರಾನ್ ಮಿಟ್ ಮಾಡಿದರೆ ಸ್ಪೆಕ್ಟ್ರಾ ಸಿಸ್ಟಮ್ ಪಿಕ್ ಅಪ್ ಆಗತ್ತದೆ ಮತ್ತು ತಿರುಗಿ ಶತ್ರು ಪಡೆಗಳ ರ್ಯಾಡರ್ ಗೆ ಗೊಂದಲ ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ಸಣ್ಣ ರನ್ ವೇಗಳಲ್ಲೂ ಕಾರ್ಯ

ಸಣ್ಣ ರನ್ ವೇಗಳಲ್ಲೂ ಕಾರ್ಯ

ಇಂತಹ ಪ್ಲೇನ್ ಗಳನ್ನು ಆಯ್ಕೆ ಮಾಡುವಾಗ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ ರನ್ ವೇ ಕಂಪ್ಯಾಟೆಬ್ಲಿಟಿ. ಕೆಲವು ಪ್ಲೇನ್ ಗಳು ದೊಡ್ಡ ರನ್ ವೇಯನ್ನು ಬಯಸುತ್ತವೆ. ಟೇಕ್ ಆಫ್ ಆಗಲು ಮತ್ತು ಲ್ಯಾಂಡ್ ಆಗುವುದಕ್ಕಾಗಿ ಇದರ ಅಗತ್ಯವಿರುತ್ತದೆ. ಆದರೆ ಮಿರಾಜ್ 2000 ಗೆ ದೊಡ್ಡ ರನ್ ವೇ ಅಗತ್ಯವಿಲ್ಲ ಕೇವಲ 400 ಮೀಟರ್ ಅಥವಾ ಅದಕ್ಕಿಂತ ಕಡಿಮೆಯ ರನ್ ವೇ ಸಾಕಾಗುತ್ತದೆ.

ದುಬಾರಿ ಮೊತ್ತದ ಪ್ಲೇನಿನ ಭಾಗವೇ ಸೆಕ್ಯುರಿಟಿ ವ್ಯವಸ್ಥೆ

ದುಬಾರಿ ಮೊತ್ತದ ಪ್ಲೇನಿನ ಭಾಗವೇ ಸೆಕ್ಯುರಿಟಿ ವ್ಯವಸ್ಥೆ

ಸ್ಪೆಕ್ಟ್ರಾ ಸಿಸ್ಟಮ್ ಹೆಚ್ಚು ಫಂಕ್ಷನಲ್ ಮತ್ತು ಸಂಪೂರ್ಣ ಅಟೋಮೆಟೆಡ್ ಆಗಿದೆ ಮತ್ತು ಇದರ ಬೆಲೆಯೂ ಅಧಿಕ. ಪ್ಲೇನಿನ ಒಟ್ಟು ಮೊತ್ತದ ಶೇಕಡಾ 30 ರಷ್ಟು ಬೆಲೆ ಸ್ಪೇನಿನ ಸ್ಪೆಕ್ಟ್ರಾ ಸಿಸ್ಟಮ್ ಗಾಗಿ ವ್ಯಯಿಸಲಾಗಿದೆ. ಅಂದರೆ ಪ್ರತಿಯೊಂದು ಭಾಗವೂ ಕೂಡ ಅಷ್ಟು ಬೆಲೆಬಾಳುವುದಾಗಿದೆ.

ಶಾರ್ಟ್ ಸ್ಕ್ಯಾನಿಂಗ್ ರೇಂಜ್

ಶಾರ್ಟ್ ಸ್ಕ್ಯಾನಿಂಗ್ ರೇಂಜ್

ಮಿರಾಜ್ 2000ದ ಪ್ರಮುಖ ಕಾಳಜಿ ಎಂದರೆ ಕಡಿಮೆ ಸ್ಕ್ಯಾನಿಂಗ್ ರೇಂಜ್ ಇರುವುದು. ಅಂದರೆ ಕೇವಲ 145 ಕಿಲೋಮೀಟರ್ ಸ್ಕ್ಯಾನಿಂಗ್ ರೇಂಜ್ ನ್ನು ಇದು ಹೊಂದಿದೆ. ಇತರೆ ಫೈಟರ್ ಜೆಟ್ ಗಳಿಗೆ ಹೋಲಿಸಿದರೆ ಇದರ ಪ್ರಮಾಣ ಕಡಿಮೆ ಆಗಿರುತ್ತದೆ. ಆದರೆ ಇದರಲ್ಲೂ ಧನಾತ್ಮಕ ಅಂಶಗಳಿವೆ. ಇದರ ರ್ಯಾಡರ್ ಗೆ ಒಂದು ಅಥವಾ ಅದಕ್ಕಿಂತ ಹೆಚ್ಚು ಟಾರ್ಗೆಟ್ ಗಳನ್ನು ನಿರಂತರವಾಗಿ ಶತ್ರುಗಳ ಮೇಲೆ ಹಾಕುವುದಕ್ಕೆ ಅವಕಾಶವಿರುತ್ತದೆ.

ವಾಯ್ಸ್ ರೆಕಗ್ನಿಷನ್

ವಾಯ್ಸ್ ರೆಕಗ್ನಿಷನ್

ಮಿರಾಜ್ ನಲ್ಲಿರುವ ವಾಯ್ಸ್ ರೆಕಗ್ನಿಷನ್ ಸಿಸ್ಟಮ್ ಬೆಲೆಕಟ್ಟಲು ಸಾಧ್ಯವಿಲ್ಲದಂತಹ ಅಧ್ಬುತ ಫೀಚರ್ ಆಗಿದೆ. ಯಾವಾಗ ನೀವು 2,000 mph ಗೆ ತೆರಳುತ್ತೀರೋ ಆ ನಿಮ್ಮ ಕೈಗಳಿಗೆ ಯಾಂತ್ರಿಕ ವ್ಯವಸ್ಥೆಯಲ್ಲಿ ಬಹಳ ಮಹತ್ವರಿತ್ತದೆ. ವಾಯ್ಸ್ ಕಮಾಂಡ್ ಗಳ ಮೂಲಕವೂ ಕೂಡ ನೀವು ಇದನ್ನು ಕಂಟ್ರೋಲ್ ಮಾಡಬಹುದು. ಆರ್ಟ್ ವಾಯ್ಸ್ ರೆಕಗ್ನಿಷನ್ ಸಾಫ್ಟ್ ವೇರ್ ಇದರಲ್ಲಿದೆ.

ಸಂಪೂರ್ಣ ಲೋಡ್ ಆಗಿರುತ್ತದೆ

ಸಂಪೂರ್ಣ ಲೋಡ್ ಆಗಿರುತ್ತದೆ

ಈ ಪ್ಲೇನ್ ತೂಕವಾಗಿಯೂ ಇರಬಹುದು ಅಥವಾ ತೂಕವಿಲ್ಲದೆಯೂ ಇರಬಹುದು.ಯಾವ ಇದು ಸಂಪೂರ್ಣ ಲೋಡ್ ಆಗಿರುತ್ತದೆಯೋ ಆಗ ಇದು 30 mm ರಾಕೆಟ್ಸ್ ನ್ನು ಹೊತ್ತೊಯ್ಯುತ್ತದೆ. ಹಲವು ವಿಭಿನ್ನ ರೀತಿಯ ಮಿಸೈಲ್ಸ್, ಮತ್ತು ಲೇಸರ್ ಮಿರ್ಮಿತ ಬಾಂಬ್ ಗಳನ್ನು ಹೊತ್ತೊಯ್ಯುತ್ತದೆ. ಪರಿಣಾಮಕಾರಿಯಾಗಿ ಗರಿಷ್ಟ ಮಟ್ಟದಲ್ಲಿ ಡ್ಯಾಮೇಜ್ ಮಾಡುವ ಸಾಮರ್ಥ್ಯ ಇದಕ್ಕಿದೆ. ಇದೇ ಕಾರಣಕ್ಕೆ ಭಾರತದ ಫೈಟರ್ ಜೆಟ್ ಗ್ರೇಟ್ ಅನ್ನಿಸುತ್ತದೆ.

ಮುಂದಿನ ಆರ್ಡರ್ ಗಳು ಭಾರತದಲ್ಲೇ ತಯಾರಿಯಾಗುತ್ತದೆ

ಮುಂದಿನ ಆರ್ಡರ್ ಗಳು ಭಾರತದಲ್ಲೇ ತಯಾರಿಯಾಗುತ್ತದೆ

ಜೆಟ್ ಫ್ಲೈಟ್ ನ್ನು ಕೇವಲ ಭಾರತ ಅಪ್ ಡೇಟ್ ಮಾತ್ರ ಮಾಡಿಲ್ಲ ಬದಲಾಗಿ ಡಸಾಲ್ಟ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಭಾರತ ಮುಂದಾಗಿದ್ದು ಮುಂದಿನ ಅಂದರೆ ಭವಿಷ್ಯದ ಎಲ್ಲಾ ಆರ್ಡರ್ ಗಳು ಭಾರತದಲ್ಲೇ ತಯಾರಿಸುವುದಕ್ಕೆ ಹೇಳಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಇದು ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.

Best Mobiles in India

Read more about:
English summary
10 Things You Didn’t Know About the Dassault Mirage 2000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X