ಸಾಮಾನ್ಯ ಸಂಗತಿಗಳಾಗಿದ್ದರೂ ಇವುಗಳಿನ್ನೂ ರಹಸ್ಯಮಯ

By Shwetha
|

ವಿಜ್ಞಾನ ಮತ್ತು ತಂತ್ರಜ್ಞಾನಗಳು ಇಂದು ಹೆಚ್ಚು ವೇಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದು ಇಲ್ಲಿ ನಡೆಯುವ ಕೆಲವೊಂದು ಕೌತುಕಗಳು ನಮ್ಮಲ್ಲಿ ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ಈ ರಹಸ್ಯಗಳನ್ನು ಬೇಧಿಸಲು ನಮ್ಮಲ್ಲಿ ಸಾಕಷ್ಟು ಪುರಾವೆಗಳು ಇಲ್ಲದೇ ಇದ್ದು ಈ ಕೌತುಕಗಳು ನಮ್ಮಲ್ಲಿ ದಿನದಿಂದ ದಿನಕ್ಕೆ ಆಶ್ಚರ್ಯವನ್ನು ಒಗ್ಗೂಡಿಸುತ್ತಿದೆ. ಅದಾಗ್ಯೂ ಇಂದಿನ ಲೇಖನದಲ್ಲಿ ಇಂತಹುದೇ ಸಾಕಷ್ಟು ವಿಜ್ಞಾನ ಕೌತುಕಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದು ಕೆಳಗಿನ ಸ್ಲೈಡರ್ ನೋಡಿ

ಪ್ರಾಣಿ ಪಕ್ಷಿಗಳ ವಲಸೆ

#1

ಪ್ರಾಣಿ ಪಕ್ಷಿಗಳು ಏಕೆ ವಲಸೆ ಹೋಗುತ್ತಿವೆ ಎಂಬುದು ಇನ್ನೂ ವಿಜ್ಞಾನ ಬಗೆಹರಿಸದೇ ಇರುವ ಪ್ರಶ್ನೆಯಾಗಿದೆ. ಅದರಲ್ಲೂ ನಿರ್ದಿಷ್ಟ ಋತುಮಾನದಲ್ಲಿ ಈ ವಲಸೆ ನಡೆಯುತ್ತದೆ ಯಾವುದೇ ಟ್ರ್ಯಾಕರ್ ಅಥವಾ ನ್ಯಾವಿಗೇಶನ್ ಸಿಗ್ನಲ್‌ಗಳಿಲ್ಲದೇ ಅವುಗಳು ಪ್ರಯಾಣಿಸುತ್ತವೆ.

ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಗಳು

#2

ಹೆಚ್ಚಾಗಿ ಎಲ್ಲಾ ಪ್ರಾಣಿಗಳಿಗೆ ಬದುಕಲು ಆಮ್ಲಜನಕದ ಅಗತ್ಯವಿದೆ. ಆದರೆ ಹೊಸದೊಂದು ಜೀವಿಯ ಅನ್ವೇಷಣೆಯನ್ನು ನಡೆಸಲಾಗಿದ್ದು ಇದಕ್ಕೆ ಬದುಕಲು ಆಮ್ಲಜನಕದ ಅವಶ್ಯಕತೆ ಇಲ್ಲ ಎಂದಾಗಿದೆ.

ಅಂತಃ ಪ್ರಜ್ಞೆ

#3

ಅಂತಃ ಪ್ರಜ್ಞೆ ಅಥವಾ ಸಿಕ್ಸ್ತ್ ಸೆನ್ಸ್ ಒಂದು ರಹಸ್ಯವಾಗಿದ್ದು ಇದನ್ನು ಬೇಧಿಸಲು ಯಾವುದೇ ಅಧ್ಯಯನಗಳನ್ನು ಇದುವರೆಗೆ ನಡೆಸಲಾಗಿಲ್ಲ.

ದೆವ್ವಗಳು

#4

ದೆವ್ವಗಳಿವೆ ಎಂಬುದಾಗಿ ನಂಬುವವರನ್ನೂ ನಂಬದವರನ್ನೂ ದಂಗುಬಡಿಸುವಂತಹ ಕಲ್ಪನೆಯಾಗಿದೆ. ದೆವ್ವವನ್ನು ನೋಡಿದವರು ಇದು ಇದೆ ಎಂಬುದಾಗಿ ಖಾತ್ರಿಪಡಿಸಿದ್ದರೆ ವಿಜ್ಞಾನವು ಇದು ಬರಿಯ ಕಲ್ಪನೆ ಎಂಬುದಾಗಿ ತಿಳಿಸುತ್ತದೆ.

ಏಲಿಯನ್‌ಗಳು ಮತ್ತು ಅವರ ಸ್ಥಾನ

#5

ಏಲಿಯನ್‌ಗಳ ಪಳೆಯುಳಿಕೆಗಳು ಇತ್ತೀಚಿನ ಸಂಶೋಧನೆಗಳಲ್ಲಿ ದೊರೆತಿದ್ದು ವಿಜ್ಞಾನಕ್ಕೆ ನಿಲುಕದ ಸಂಗತಿಯಾಗಿ ಇದು ಪರಿಣಮಿಸಿದೆ.

ಅಯಸ್ಕಾಂತ ಮತ್ತು ಅದರ ದಿಕ್ಕುಗಳು

#6

ಅಯಸ್ಕಾಂತವು ದಕ್ಷಿಣ ಮತ್ತು ಉತ್ತರ ಧ್ರುವಗಳನ್ನು ಹೊಂದಿದೆ. ಇದನ್ನು ಇನ್ನೂ ವಿಜ್ಞಾನವು ಬೇಧಿಸಿಲ್ಲ. ಅಯಸ್ಕಾಂತದ ಅತಿ ಸಣ್ಣ ಭಾಗವನ್ನು ನೀವು ವಿಭಾಗಿಸಿದರೂ, ಇದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊಂದಿದೆ.

ಆಕಳಿಕೆ

#7

ಬೇಸರ, ಬೋರ್ ಚಿಹ್ನೆಯಾಗಿರುವ ಆಕಳಿಕೆಯು ದೇಹದಲ್ಲಿ ಯಾವ ರೀತಿಯ ಪ್ರತಿಕ್ರಿಯೆಯನ್ನು ಇದು ಸಂಕೇತಿಸುತ್ತದೆ ಎಂಬುದು ಇನ್ನೂ ರಹಸ್ಯವಾಗಿದೆ.

ಪ್ಲಾಸೆಬೊ ಪರಿಣಾಮ#

#8

ಪ್ಲಾಸೆಬೊ ಪರಿಣಾಮಕ್ಕಿರುವ ನಂಬಿಕೆ ಎಂದರೆ ಕಾಯಿಲೆ ಇರುವ ದೇಹಕ್ಕೆ ಔಷಧ ನಿಷ್ಕ್ರಿಯವಾಗಿದ್ದರೂ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿರುವಂತಹದ್ದು. ಈ ಪರಿಣಾಮ ದೇಹದಲ್ಲಿ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಇನ್ನೂ ಪತ್ತೆಹಚ್ಚುತ್ತಿದ್ದಾರೆ.

ಬರ್ಮುಡಾ ಟ್ರಯಾಂಗಲ್ ರಹಸ್ಯ

#9

ಭೂಮಿಯ ಮೇಲಿರುವ ಹೆಚ್ಚು ರಹಸ್ಯಮಯ ಸ್ಥಳವಾಗಿ ಇದನ್ನು ಕರೆಯಲಾಗಿದೆ. ವಿಮಾನಗಳು ಮತ್ತು ಹಡಗುಗಳ ಹಠಾತ್ ಕಣ್ಮರೆ ಈ ಸ್ಥಳದಲ್ಲಿ ನಡೆಯುತ್ತಿದ್ದು ನಿಜಕ್ಕೂ ಇದು ಕೌತುಕಮಯವಾಗಿದೆ. ಈ ವಲಯಕ್ಕೆ ಈ ವಸ್ತುಗಳು ಬಂದೊಡನೆ ಅವುಗಳು ಕಣ್ಮರೆಯಾಗುತ್ತಿರುವುದು ಶೋಚನೀಯವಾಗಿದೆ.

ವಿಶ್ವದಲ್ಲಿ ಹೆಚ್ಚು ಇರುವವರು ಬಲಗೈಯಲ್ಲಿ ಬರೆಯುವವರು

#10

ಬರೆಯುವ ಸಂದರ್ಭದಲ್ಲಿ ನಮ್ಮ ಎಡಗೈಯಿಂತಲೂ ನಾವು ಬಲಗೈಯೆಗೇ ಏಕೆ ಮಹತ್ವವನ್ನು ನೀಡುತ್ತೇವೆ ಎಂಬುದು ಇನ್ನೂ ರಹಸ್ಯಮಯವಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇನ್ನೂ ದೊರೆತಿಲ್ಲ.

ಡೊಂಕಾದ ಅರಣ್ಯಗಳು

#11

ಪೋಲೆಂಡ್‌ನಲ್ಲಿರುವ ಈ ಡೊಂಕಾದ ಅರಣ್ಯಗಳ ರಹಸ್ಯವನ್ನು ಇದುವರೆಗೆ ಬೇಧಿಸಲಾಗಿಲ್ಲ. 400 ಕ್ಕಿಂತಲೂ ಹೆಚ್ಚಿನ ಪೈನ್ ಮರಗಳು ಡೊಂಕಾಗಿ ಬೆಳೆಯುತ್ತಿವೆ ಇದು ಹೆಚ್ಚು ರಹಸ್ಯಮಯವಾಗಿದೆ.

ಮನುಷ್ಯರಿಗಿಂತ ಹೆಚ್ಚಿನ ಜೀನ್ಸ್ ಅನ್ನು ಟೊಮೇಟೋ ಹೊಂದಿದೆ

#12

ಸಣ್ಣದಾಗಿ ಕಾಣುವ ಟೊಮೇಟೋವು ನಮ್ಮೆಲ್ಲರಿಗಿಂತಲೂ ಹೆಚ್ಚಿನ ಜೀನ್ಸ್ ಅನ್ನು ಹೊಂದಿದೆ. ನಿಜಕ್ಕೂ ಇದನ್ನು ನಂಬಲು ಸಾಧ್ಯವಿಲ್ಲ ಅಲ್ಲವೇ? ಇದು 31,760 ಜೀನ್ಸ್‌ಗಳನ್ನು ಒಳಗೊಂಡಿದ್ದು ನಾವು ಹೊಂದಿರುವ 7,000 ಜೀನ್ಸ್‌ಗಳಿಗಿಂತ ಇದು ಅತ್ಯಧಿಕ ಸಂಖ್ಯೆಯಲ್ಲಿದೆ.

ಕಪ್ಪು ಕುಳಿಯ ತಳಭಾಗ

#13

ಕಪ್ಪು ಕುಳಿ ಮತ್ತು ಅದರ ಸುತ್ತಲಿನ ಅಂಶಗಳತ್ತ ವಿಜ್ಞಾನಿಗಳು ಇನ್ನೂ ಸಂಶೋಧನೆಯನ್ನು ನಡೆಸುತ್ತಿದ್ದು ಇದಕ್ಕಿನ್ನೂ ಪರಿಹಾರ ದೊರೆತಿಲ್ಲ. ಈ ಕುಳಿಯೊಳಗೆ ಮನುಷ್ಯನೆಲ್ಲಾದರೂ ಬಿದ್ದಲ್ಲಿ ಏನು ಸಂಭವಿಸಬಹುದು? ಎಂಬುದನ್ನು ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲಾಗಿಲ್ಲ.

Most Read Articles
Best Mobiles in India

English summary
These happenings still have science scratching its head as there are no proper researched theories that identify causes and effects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more