2018 ರಲ್ಲಿ ಅಂತ್ಯಗೊಂಡ ದೊಡ್ಡದೊಡ್ಡ ತಂತ್ರಜ್ಞಾನ/ಗೆಡ್ಜೆಟ್ಸ್

|

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಿಜಿಟಲ್ ಜಗತ್ತಿನಲ್ಲಿ ಹಲವು ಗೆಡ್ಜೆಟ್ಸ್ ಮತ್ತು ತಂತ್ರಜ್ಞಾನಗಳು ಬಂದು ಹೋದವು. ಅದರಲ್ಲಿ ಕೆಲವು ಆಳ್ವಿಕೆ ನಡೆಸಿದವು, ಇನ್ನೂ ಕೆಲವು ಹೇಳಹೆಸರಿಲ್ಲದೆ ಹೊರಟುಹೋದವು. ಈ ವರ್ಷ ಅಂತ್ಯಗೊಂಡ ಕೆಲವು ಗೆಡ್ಜೆಟ್ಸ್ ಮತ್ತು ತಂತ್ರಜ್ಞಾನಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಗೂಗಲ್ ಇನ್ ಬಾಕ್ಸ್

ಗೂಗಲ್ ಇನ್ ಬಾಕ್ಸ್

ಗೂಗಲ್ ತನ್ನ ಇಮೇಲ್ ಆಪ್ ಇನ್ ಬಾಕ್ಸ್ ನ್ನು ಶಟ್ ಡೌನ್ ಮಾಡುವುದರ ಬಗ್ಗೆ ಪ್ರಕಟಿಸಿತು. 2014 ರಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು ಮತ್ತು 2019 ರ ಮಾರ್ಟ್ ನಲ್ಲಿ ಇದನ್ನು ಶಟ್ ಡೌನ್ ಮಾಡಲಾಯಿತು. ಕಂಪೆನಿಯು ಈ ಆಪ್ ನ್ನು ಪರೀಕ್ಷಾರ್ಥ ಫ್ಲ್ಯಾಟ್ ಫಾರ್ಮ್ ಆಗಿ ಜಿಮೇಲ್ ನಲ್ಲಿ ಕೆಲವು ಹೊಸ ಫೀಚರ್ ಗಳ ಪರಿಕ್ಷೆಗಾಗಿ ಬಿಡುಗಡೆಗೊಳಿಸಿತ್ತು. ನಂತರ ಇದನ್ನು ನಿಲ್ಲಿಸುವುದಕ್ಕೆ ಕಾರಣವೇನು ಎಂಬ ಬಗ್ಗೆ ಗೂಗಲ್ ಯಾವುದೇ ಸ್ಪಷ್ಟ ಕಾರಣವನ್ನೂ ಕೂಡ ನೀಡಿಲ್ಲ.

ಯಾಹೂ ಮೆಸೇಂಜರ್

ಯಾಹೂ ಮೆಸೇಂಜರ್

ಈ ವರ್ಷ ಮತ್ತೊಂದು ಶಟ್ ಡೌನ್ ನ್ನು ಕೂಡ ನಾವು ನೋಡಿದ್ದೇವೆ ಅದುವೇ ಯಾಹೂ ಮೆಸೇಂಜರ್. 1998 ರಲ್ಲಿ ಬಿಡುಗಡೆಗೊಂಡಿದ್ದ ಇದು 2018 ರ ಜುಲೈ ನಲ್ಲಿ ಅಂತ್ಯಗೊಂಡಿತು. 90 ದಶಕದ ಮಕ್ಕಳಿಗೆ ಇದು ಅತ್ಯುತ್ತಮ ವೆಬ್ ಅನುಭವವನ್ನು ನೀಡಿತ್ತು. ಆದರೆ ಇತ್ತೀಚೆಗಿನ ವಾಟ್ಸ್ ಆಪ್, ಫೇಸ್ ಬುಕ್, ಸ್ನ್ಯಾಪ್ ಚಾಟ್ ಮತ್ತು ಇನ್ಸ್ಟಾಗ್ರಾಂ ಜೊತೆಗೆ ಸ್ಪರ್ಧೆಯೊಡ್ಡಲು ಇದಕ್ಕೆ ಸಾಧ್ಯವಾಗಲಿಲ್ಲ.

ಗೂಗಲ್ URL ಶಾಟ್ನರ್

ಗೂಗಲ್ URL ಶಾಟ್ನರ್

2009 ರಲ್ಲಿ ಬಿಡುಗಡೆಗೊಂಡಿದ್ದ ಇದು ಫನ್ ಟೂಲ್ ಆಗಿತ್ತು. ಇದರ ಪರ್ಯಾಯವಾಗಿ Bitly ಮತ್ತು Ow.lyಯನ್ನು ಅಥವಾ ಫೈಯರ್ ಬೇಸ್ ಡೈನಾಮಿಕ್ ಲಿಂಕ್ ಗಳನ್ನು ಬಳಸುವಂತೆ ಸೂಚಿಸಲಾಯಿತು

ಫೇಸ್ ಬುಕ್ ಎಂ ಪರ್ಸನಲ್ ಅಸಿಸ್ಟೆಂಟ್

ಫೇಸ್ ಬುಕ್ ಎಂ ಪರ್ಸನಲ್ ಅಸಿಸ್ಟೆಂಟ್

ತನ್ನದೇ ಸ್ವಂತ ವರ್ಚುವಲ್ ಅಸಿಸ್ಟೆಂಟ್ ಎಂ ನ್ನು ಪರಿಚಯಿಸಿದ ಎರಡು ವರೆ ವರ್ಷದ ನಂತರ ಫೇಸ್ಬುಕ್ ಈ ಪ್ರೊಜೆಕ್ಟ್ ನ್ನು ಅಂತ್ಯಗೊಳಿಸಿತು. ಫೇಸ್ ಬುಕ್ ಮೆಸೇಂಜರ್ ನಲ್ಲಿ ಸುಮಾರು 2000 ಬಳಕೆದಾರರಿಗೆ ಇದು ಚಾಟ್ ಬಾಕ್ಸ್ ಫಾರ್ಮ್ ನಲ್ಲಿ ಲಿಮಿಟೆಡ್ ಆಗಿತ್ತು.ಇದು ಇವೆಂಟ್ ಗಳನ್ನು ಸೃಷ್ಟಿಸಲು, ಸ್ಟಿಕ್ಕರ್ ಗಳನ್ನು ಗಳುಹಿಸಲು ಮತ್ತು ಪಾವತಿ ಮತ್ತು ಇತರೆ ಹಲವು ಟಾಸ್ಕ್ ಗಳಿಗೆ ಅನುಕೂಲ ಮಾಡಿಕೊಡುತ್ತಿತ್ತು.

ಗೂಗಲ್ ಸ್ಪೇಸ್

ಗೂಗಲ್ ಸ್ಪೇಸ್

ಗ್ರೂಪ್ ಮೆಸೇಜಿಂಗ್ ಆಪ್ ಆಗಿದ್ದ ದೂದಲ್ ಸ್ಪೇಸ್ ನ್ನು ಕೂಡ ಗೂಗಲ್ ಈ ವರ್ಷ ಅಂತ್ಯಗೊಳಿಸಿತು.2016 ರಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿತ್ತು.

ಗೂಗಲ್ ಬ್ಲೋಬ್ ಎಮೋಜಿ

ಗೂಗಲ್ ಬ್ಲೋಬ್ ಎಮೋಜಿ

ಗೂಗಲ್ ಈ ಬಾರಿ ಹಲವು ಸೇವೆಗಳನ್ನು ನಿಲ್ಲಿಸುವುದರ ಬಗ್ಗೆ ಪ್ರಕಟಣೆ ನೀಡಿತ್ತು ಅದರಲ್ಲಿ ಮತ್ತೊಂದು ಪ್ರಸಿದ್ಧವಾಗಿರುವ ಸೇವೆ ಅಂದರೆ ಬ್ಲೋಬ್ ಎಮೋಜಿ.ವಿಶ್ವ ಎಮೋಜಿ ಡೇ ದಿನ ದಿನ ತನ್ನ ಕ್ಲಾಸಿಕ್ ಆಕೃತಿಯ ಎಮೋಜಿಗೆ ವಿದಾಯ ಹೇಳಲು ಕಂಪೆನಿ ನಿರ್ಧರಿಸಿದೆ. ಈ ಬಗ್ಗೆ ಕಂಪೆನಿಯು ತನ್ನ ಅಧಿಕೃತ ವೆಬ್ ಪೇಜ್ ನಲ್ಲಿ ಪ್ರಕಟಿಸಿದೆ.

ಫೇಸ್ ಬುಕ್ ಹಲೋ

ಫೇಸ್ ಬುಕ್ ಹಲೋ

2015 ರಲ್ಲಿ ಫೇಸ್ ಬುಕ್ ನಲ್ಲಿ ಹೆಲೋ ಆಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆಗೊಂಡಿತ್ತು. ಆದರೆ ಜುಲೈ 31 ರಂದು ಇದನ್ನು ಅಂತ್ಯಗೊಳಿಸಲಾಯಿತು. ಹೆಲೋ ಆಪ್ ಬಳಕೆದಾರರಿಗೆ ಫೇಸ್ಬುಕ್ ಮಾಹಿತಿಗಳನ್ನು ಕಾಂಟ್ಯಾತ್ಟ್ ಮಾಹಿತಿಗಳೊಂದಿಗೆ ಫೋನ್ ನಲ್ಲಿ ಕಂಬೈನ್ ಮಾಡುವುದಕ್ಕೆ ಅವಕಾಶ ನೀಡಿತ್ತು.

ಫೇಸ್ ಬುಕ್ ಮೂವ್ಸ್

ಫೇಸ್ ಬುಕ್ ಮೂವ್ಸ್

ಫೇಸ್ ಬುಕ್ ನಲ್ಲಿ ಈ ವರ್ಷ ಅಂತ್ಯಗೊಂಡ ಮತ್ತೊಂದು ಆಪ್ ಅಂದರೆ ಅದು ಮೂವ್ಸ್. 2014 ರಲ್ಲಿ ಫೇಸ್ ಬುಕ್ ಈ ಫಿಟ್ನೆಸ್ ಆಪ್ ನ್ನು ಖರೀದಿಸಿತ್ತು. ಇದರಲ್ಲಿ ಬಳಕೆದಾರರ ಪ್ರತಿದಿನದ ಆಕ್ಟಿವಿಟಿಗಳಾದ ವಾಕಿಂಗ್, ಸೈಕ್ಲಿಂಗ್, ರನ್ನಿಂಗ್ ಇತ್ಯಾದಿಗಳನ್ನು ದಾಖಲಿಸಲಾಗುತ್ತಿತ್ತು. ಜುಲೈ 31 ಕ್ಕೆ ಈ ಆಪ್ ನ್ನು ಅಂತ್ಯಗೊಳಿಸಲಾಯಿತು.

ಫೇಸ್ ಬುಕ್ ಅನೋನಿಮಸ್ ಟೀನ್ ಆಪ್

ಫೇಸ್ ಬುಕ್ ಅನೋನಿಮಸ್ ಟೀನ್ ಆಪ್

ಹೆಲೋ ಮತ್ತು ಮೂವ್ಸ್ ಆಪ್ ಗಳ ಜೊತೆಗೆ ಪ್ರಸಿದ್ದ ಸೋಷಿಯಲ್ ನೆಟ್ ವರ್ಕಿಂಗ್ ತಾಣವಾಗಿರುವ ಫೇಸ್ ಬುಕ್ ಮತ್ತೊಂದು ಆಪ್ ನ್ನು ಅಂತ್ಯಗೊಳಿಸಿದೆ ಅದುವೇ ಅನೋನಿಮಸ್ ಟೀನ್ ಆಪ್. 2017 ರಲ್ಲಿ ಫೇಸ್ ಬುಕ್ ಇದನ್ನು ಪರಿಚಯಿಸಿತ್ತು. ಯುಎಸ್ ನ ಹೈಸ್ಕೋಲ್ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿತ್ತು.

ಗೂಗಲ್+

ಗೂಗಲ್+

ಅಕ್ಟೋಬರ್ ನಲ್ಲಿ ಗೂಗಲ್ ಪ್ಲಸ್ ನ್ನು ಅಂತ್ಯಗೊಳಿಸುವ ಬಗ್ಗೆ ಗೂಗಲ್ ಪ್ರಕಟಣೆ ನೀಡಿದೆ. ಭದ್ರತಾ ವೈಫಲ್ಯ ನಡೆದ ಹಿನ್ನೆಲೆಯಲ್ಲಿ ಕಂಪೆನಿ ಈ ನಿರ್ಧಾರ ಕೈಗೊಂಡಿದೆ. ಸುಮಾರು 5,00,000 ಬಳಕೆದಾರರ ಅಕೌಂಟ್ ಮಾಹಿತಿಗಳನ್ನು ಕದಿಯಲಾಗಿತ್ತು. ಇದೊಂದೇ ಅಲ್ಲದೆ ಮತ್ತೊಂದು ಡಾಟಾ ಲೀಕ್ ಸಮಸ್ಯೆಯನ್ನು ಕೂಡ ಗೂಗಲ್ + ಎದುರಿಸಿತ್ತು. ಆದರೆ ಮುಂದಿನ 90 ದಿನಗಳ ವರೆಗೆ ಇದನ್ನು ಗೂಗಲ್ ಅಂತ್ಯಗೊಳಿಸುವುದಿಲ್ಲ.

ಗೂಗಲ್ Allo

ಗೂಗಲ್ Allo

ಗೂಗಲ್ ಇನ್ಸೆಂಟ್ ಮೆಸೇಜಿಂಗ್ ಆಪ್ ಅಲೋವನ್ನು ಕೂಡ ಅಂತ್ಯಗೊಳಿಸಿತು. 2016 ರಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿತ್ತು.ಮುಂದಿನ ಮಾರ್ಚ್ ವೇಳೆಗೆ ಆಪ್ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡುತ್ತದೆ.ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರು ಕೂಡ ಉತ್ತಮ ಮೆಸೇಜಿಂಗ್ ಅನುಭವವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಎಸ್ಎಂಎಸ್ ಫಂಕ್ಷನಾಲಿಟಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ.

ನಿಂಟೆಂಡೋಸ್ ಆಪ್ ಮಿಟೋ (Miitomo)

ನಿಂಟೆಂಡೋಸ್ ಆಪ್ ಮಿಟೋ (Miitomo)

ನಿಂಟೆಂಡೋ ಸೋಷಿಯಲ್ ನೆಟ್ವರ್ಕಿಂಗ್ ಮೊಬೈಲ್ ಆಪ್ ಮಿಟೋವನ್ನು 2016 ರ ಮಾರ್ಚ್ ನಲ್ಲಿ ಪರಿಚಯಿಸಿತ್ತು. ಟ್ಟೀಟರ್ ಮತ್ತು ಫೇಸ್ ಬುಕ್ ಸೇರಿದಂತೆ ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಬಳಕೆದಾರರಿಗೆ ಸಂವಹನ ನಡೆಸಲು ಇದು ನೆರವು ನೀಡುತ್ತಿತ್ತು. ಈ ವರ್ಷದ ಮೇ ತಿಂಗಳಲ್ಲಿ ಇದನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಯುಟ್ಯೂಬ್ ಗೇಮಿಂಗ್ ಆಪ್

ಯುಟ್ಯೂಬ್ ಗೇಮಿಂಗ್ ಆಪ್

20105 ರಲ್ಲಿ ಟೆಕ್ ಸಂಸ್ಥೆ ಗೂಗಲ್ ಯುಟ್ಯೂಬ್ ಗೇಮಿಂಗ್ ಆಪ್ ನ್ನು ಪರಿಚಯಿಸಿತ್ತು ಮತ್ತು ಮಾರ್ಚ್ 2019 ರಲ್ಲಿ ಇದನ್ನು ಅಂತ್ಯಗೊಳಿಸುವ ಬಗ್ಗೆ ಈಗಾಗಲೇ ಸಂಸ್ಥೆ ತಿಳಿಸಿದೆ.

ಆಂಡ್ರಾಯ್ಡ್ ನಿಯರ್ ಬೈ ನೋಟಿಫಿಕೇಷನ್

ಆಂಡ್ರಾಯ್ಡ್ ನಿಯರ್ ಬೈ ನೋಟಿಫಿಕೇಷನ್

ಆಂಡ್ರಾಯ್ಡ್ ನಿಯರ್ ಬೈ ನೋಟಿಫಿಕೇಷನ್ ವೈಶಿಷ್ಟ್ಯತೆಯು ಮೂರು ವರ್ಷದ ಹಿಂದೆ ಬಿಡುಗಡಗೊಳಿಸಲಾಗಿತ್ತು. ಆದರೆ ಕಂಪೆನಿಯು ಇದನ್ನು ಒಂದು ತಿಂಗಳ ಹಿಂದೆ ಅಂತ್ಯಗೊಳಿಸಲು ನಿರ್ಧರಿಸಲಾಯಿತು.

ಮೈಕ್ರೋಸಾಫ್ಟ್ ಸರ್ಫೇಸ್ ಪ್ಲಸ್ ಪ್ರೋಗ್ರಾಮ್

ಮೈಕ್ರೋಸಾಫ್ಟ್ ಸರ್ಫೇಸ್ ಪ್ಲಸ್ ಪ್ರೋಗ್ರಾಮ್

2017 ರಲ್ಲಿ ಮೈಕ್ರೋಸಾಫ್ಟ್ ಹೊಸ ಪ್ರೊಗ್ರಾಮ್ ಸರ್ಫೇಸ್ ಪ್ಲಸ್ ಪ್ರೋಗ್ರಾಮ್ ನ್ನು ಬಿಡುಗಡೆಗೊಳಿಸಿತು. ಇದು ಗ್ರಾಹಕರಿಗೆ ಸರ್ಫೇಸ್ ಡಿವೈಸ್ ನ್ನು ಖರೀದಿಸುವುದಕ್ಕೆ ಮತ್ತು ಪೇಮೆಂಟ್ ನ್ನು ಇನ್ಸ್ಟಾಲ್ ಮೆಂಟ್ ನಲ್ಲಿ ಪಾವತಿ ಮಾಡಲು ಅನುಕೂಲ ಮಾಡಿತು. 2018 ರ ಅಗಸ್ಟ್ ನಲ್ಲಿ ಇದನ್ನು ನಿಲ್ಲಿಸಲಾಯಿತು.

ಗೂಗಲ್ ಟ್ಯಾಂಗೋ

ಗೂಗಲ್ ಟ್ಯಾಂಗೋ

2018 ರಲ್ಲಿ ಗೂಗಲ್ ತನ್ನ ಪ್ರೊಜೆಕ್ಟ್ ಟ್ಯಾಂಗೋವನ್ನು ಶಟ್ ಡೌನ್ ಮಾಡುತ್ತದೆ ಎಂದು ತಿಳಿಸಿತ್ತು ಮತ್ತು ಮಾರ್ಚ್ 2018 ರಲ್ಲಿ ಇದನ್ನು ಅಂತ್ಯಗೊಳಿಸಲಾಯಿತು. ಗೂಗಲ್ ಟ್ಯಾಂಗೋ ಕಂಪೆನಿಯ ಮಹಳ ಮಹತ್ವದ ಪ್ಲಾನ್ ಆಗಿತ್ತು.

ಗೂಗಲ್ ಕ್ರೋಮ್ ಆಪ್ಸ್

ಗೂಗಲ್ ಕ್ರೋಮ್ ಆಪ್ಸ್

ಕಳೆದ ವರ್ಷದ ಡಿಸೆಂಬರ್ ನಲ್ಲಿ ಗೂಗಲ್ ತನ್ನ ಆಪ್ ಸೆಕ್ಷನ್ ಆಗಿರುವ ಕ್ರೋಮ್ ವೆಬ್ ಸ್ಟೋರ್ ನ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ವರ್ಷನ್ ನ್ನು ಅಂತ್ಯಗೊಳಿಸುತ್ತದೆ ಎಂದು ಪ್ರಕಟಿಸಿತ್ತು. 2018 ರ ಮೊದಲಾರ್ಧದಲ್ಲಿ ಇದನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿತ್ತು.

Best Mobiles in India

Read more about:
English summary
17 ‘biggest technologies/gadgets' that died in 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X