ತಂತ್ರಜ್ಞಾನದ ಮೂಲಕ ಏನೆಲ್ಲಾ ಬದಲಾವಣೆ ಎಂಬುವುದಕ್ಕೆ ಇಂದಿನ ಆಧುನಿಕ ಯುಗವೇ ಸಾಕ್ಷಿ.! ಮೊಬೈಲ್‌ನಿಂದ ಹಿಡಿದು ಮಂಗಳಯಾನದವರೆಗೂ ಮಾನವನ ಎಲ್ಲಾ ಸೃಷ್ಟಿಗಳು ಅದ್ಬುತವೇ.! ಹಾಗಾಗಿ, ಅಸಾಧ್ಯ ಎನಿಸಿದ್ದನ್ನೂ ಸಾಧ್ಯ ಮಾಡಲು ಪ್ರಯತ್ನಿಸುವ ಮಾನವನ ಆಸಕ್ತಿ ಮತ್ತು ಸಾಧನೆಗೆ ಕೊನೆಯೇ ಇಲ್ಲ ಎನ್ನಬಹುದು!!

ಸೃಷ್ಟಿಗೆ ಪ್ರತಿಸೃಷ್ಟಿ ಮಾಡುವ ಕೆಲಸದಲ್ಲಿ ಸದಾ ಮಗ್ನನಾಗಿರುವ ಮಾನವ, ತನ್ನ ಜೀವನದಲ್ಲಿ ಬದಲಾವಣೆ ತರುವಂತಹ ಭವಿಷ್ಯದ ತಂತ್ರಜ್ಞಾನಗಳ ಕುರಿತು ಸಾಕಷ್ಟು ಅವಿಷ್ಕಾರ ಮಾಡುತ್ತಿರುತ್ತಾನೆ. ಈಗಲೂ ಅಂತಹ ಅವಿಷ್ಕಾರಗಳು ನಡೆಯುತ್ತಿದ್ದು, ಪ್ರಮುಖ ಬದಲಾವಣೆ ತರುವಂತಹ ತಂತ್ರಜ್ಞಾನಗಳ ಕುರಿತು ಇಂದಿನ ಲೇಖನದಲ್ಲಿ ತಿಳಿಯಿರಿ.!!
ಮನುಷ್ಯನಿಗೆ ರೆಕ್ಕೆ ಬಂದರೆ?!
ಆಗಸದಲ್ಲಿ ಹಾರಾಡಲು ವಿಮಾನಗಳನ್ನು ಕಂಡುಕೊಂಡಿರುವ ಮಾನವ ಈಗ ಎರಡು ರೆಕ್ಕೆಗಳ ಬಗ್ಗೆ ಚಿಂತಿಸುತ್ತಿದ್ದಾನೆ. ‘ಜೆಟ್‌ಪ್ಯಾಕ್ ಎಚ್ 202' ಎಂಬ ಹೈಡ್ರೊಜನ್ ಪೆರಾಕ್ಸೈಡ್ ತುಂಬಿದ ಎರಡು ಸಿಲಿಂಡರ್‌ಗಳನ್ನು ಹೊಂದಿರುವ ಬ್ಯಾಕ್‌ಪಾಕ್ ಅನ್ನು ಬೆನ್ನಿಗೆ ಕಟ್ಟಿಕೊಂಡು 123 ಕಿ.ಮೀ ವೇಗದಲ್ಲಿ ಮಾನವ ಹಾರಲಿದ್ದಾನೆ,!!
ಸಹಜವಾದ ಕೃತಕ ಅಂಗಾಂಗಗಳು!!
ಸಹಜ ಅಂಗಾಂಗಗಳಂತೆ ಕೃತಕ ಅಂಗಾಂಗಗಳೂ ಕೆಲಸ ಮಾಡಲು ನೆರವಾಗುವ ತಂತ್ರಜ್ಞಾನವನ್ನು ಬ್ರಿಟನ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹಾಪ್ಟಿಕ್ ಪ್ರೊಸ್ಥಟಿಕ್ ಎಂಬ ಈ ತಂತ್ರಜ್ಞಾನ ಹದ ನಾಡಿ ವ್ಯವಸ್ಥೆಯೊಂದಿಗೆ ಜೋಡಣೆಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಅಗತ್ಯವಾದ ಎಲಕ್ಟ್ರೊಕೋಡ್ ವ್ಯವಸ್ಥೆಯನ್ನು ಮುಂಗೈನ ಒಳಗೆ 20 ಕಡೆ ಮೂರು ನರಗಳೊಂದಿಗೆ ಜೋಡಿಸಿ ಸಹಜವಾಗಿ ಕೆಲಸ ಮಾಡುವಂತೆ ಮಾಡುತ್ತಾರೆ.!!
ಐರನ್ ಮ್ಯಾನ್ ಸೂಟ್!!
ಅಪಾಯದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಐರನ್ ಮ್ಯಾನ್ ಮಾಡಿದರೆ ಎಂಬ ಆಲೋಚನೆಯಲ್ಲೀ ಹೊಳೆದದ್ದೇ ಐರನ್ ಮ್ಯಾನ್ ಸೂಟ್.!! ಕೆಲವು ವರ್ಷಗಳಿಂದ ಅಮೆರಿಕ ಸೇನೆ ಈ ಸೂಟ್ ತಯಾರಿಸಲು ಪ್ರಯೋಗಗಳನ್ನು ನಡೆಸುತ್ತಿದೆ. ಕಡಿಮೆ ತೂಕದಿಂದ ಕೂಡಿರುವ ಈ ಸೂಟ್ ಇಡಿ ದೇಹವನ್ನು ಮುಚ್ಚಿ ರಕ್ಷಣೆ ನೀಡಲಿದೆ.!!
ನೆಲ ಸ್ಪರ್ಶಿಸದ ಬೈಕ್!
ಇದ್ದ ಸ್ಥಳದಿಂದಲೇ ಹಾರುವ ಸಾಮರ್ಥ್ಯವಿರುವ ನೆಕ್ಟ್ಸ್ ಜನರೇಷನ್ ‘ಹೋವರ್ ಬೈಕ್' ಭವಿಷ್ಯದಲ್ಲಿ ಜನರ ಬಳಕೆಗೆ ಸಿಗಲಿದೆ. ಎರ್-ಎಕ್ಸ್ ನಿಂದ ಇದು ಸಾಧ್ಯವಾಗಲಿದ್ದು, ನೆಲದಿಂದ 12 ಅಡಿ ಎತ್ತರದಲ್ಲಿ ಗಂಟೆಗೆ 72 ಕಿ.ಮೀ ವೇಗದಲ್ಲಿ ಓಡಿಸಬಹುದಾದ ಈ ಬೈಕ್ ಅನ್ನು ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.!!
ವ್ಯತ್ಯಾಸವಿರದ ರೋಬಾಟ್!!
ಈಗಾಗಲೇ ಮನುಷ್ಯನಂತೆ ಅನುಕರಣೆ ಮಾಡುವ ರೋಬಾಟ್‌ಗಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಮನುಷ್ಯನಿಗೂ ಹಾಗೂ ಮಷಿನ್‌ಗೂ ವ್ಯತ್ಯಾಸವಿರದ ರೋಬಾಟ್ ತಯಾರಿಕೆಯಲ್ಲಿ ಸಂಶೋಧಕರಿದ್ದಾರೆ. ಮಾನವನಿಗಿಂತ ಹೆಚ್ಚು ಬುದ್ದಿಶಾಲಿ ರೋಬಾಟ್‌ಗಳು ಮನುಷ್ಯನನ್ನೇ ಮಿರಿಸಲಿವೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.