Subscribe to Gizbot

ಚಂದ್ರನ ಮೇಲೆ ರೋವರ್ ಇಳಿಸಲಿದೆ ಬೆಂಗಳೂರಿನ ಟೀಮ್ ಇಂಡಸ್! ಇದು ಖಾಸಾಗಿ ಸ್ಪರ್ಧೆ!!

Written By:

ಚಂದ್ರನ ಮೇಲೆ ರೋವರ್ ಇಳಿಸುವ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಂಗಳೂರಿನ ಟೀಮ್ ಇಂಡಸ್ ಸಂಸ್ಥೆ ಫೈನಲ್ ಹಂತಕ್ಕೆ ಬಂದು ನಿಂತಿಗೆ. ಖಾಸಗಿ ಸಂಸ್ಥೆಗಳಿಗೆ ಏರ್ಪಡಿಸಿದ್ದ ಚಂದ್ರನ ಮೇಲೆ ರೋಬಾಟ್ ಇಳಿಸುವ ವಿಶ್ವದ 16 ದೇಶಗಳ ಖಾಸಾಗಿ ಸಂಸ್ಥೆಗಳಲ್ಲಿ ಟೀಂ ಇಂಡಸ್ ಕೂಡ ಒಂದಾಗಿದೆ.!!

ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆ ಕಳಿಸಿ, ಅದರ ನೆಲದ ಮೇಲೆ ರೋವರ್ ಇಳಿಸಿ ಅದು 500 ಮೀಟರ್‌ವರೆಗೆ ಚಲಿಸಿ ಮಾಹಿತಿ ರವಾನಿಸುವುದು ಈ ಸ್ಪರ್ಧೆಯ ಮುಖ್ಯ ನಿಯಮವಾಗಿದ್ದು, ಈಗ ಅಂತಿಮ ಸುತ್ತಿನಲ್ಲಿ ಅಮೆರಿಕದ ಎರಡು, ಹಾಗೂ ಫ್ರಾನ್ಸ್‌, ಜಪಾನ್‌ ಮತ್ತು ಭಾರತದ ತಲಾ ಒಂದು ಸಂಸ್ಥೆ ಉಳಿದುಕೊಂಡಿವೆ.!

ಕಳೆದ 6 ವರ್ಷಗಳಿಂದ ಚಂದ್ರನ ಮೇಲೆ ರೋಬಾಟ್ ಇಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಟೀಂ ಇಂಡಸ್ ಸಂಸ್ಥೆ ಈಗ ಕೊನೆಯ ಹಂತದ ಸಿದ್ಧತೆಗಳಲ್ಲಿ ತೊಡಗಿದೆ. ಹಾಗಾಗಿ, ಆರು ವರ್ಷಗಳಿಂದ ಟೀಂ ಇಂಡಸ್ ಸಂಸ್ಥೆಯ ರೋಚಕ ಕಥೆ ಏನು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖಾಸಗಿ ವಲಯ ಪ್ರಾಬಲ್ಯಕ್ಕೆ ಮಣೆ!!

ಖಾಸಗಿ ವಲಯ ಪ್ರಾಬಲ್ಯಕ್ಕೆ ಮಣೆ!!

ಬಾಹ್ಯಾಕಾಶದ ಬಹುತೇಕ ಎಲ್ಲಾ ಯೋಜನೆಗಳು ಸದ್ಯಕ್ಕೆ ಸರ್ಕಾರಿ ಸಂಸ್ಥೆಗಳ ನಿಯಂತ್ರಣ ಮತ್ತು ಉಸ್ತುವಾರಿಯಲ್ಲಿ ಇವೆ. ಹಾಗಾಗಿ, ಖಾಸಗಿ ಸಂಸ್ಥೆಗಳೂ ಸಹ ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಸಾಬೀತುಪಡಿಸಲು ಈ ಅವಕಾಶವನ್ನು ಕಲ್ಪಿಸಲಾಗಿದೆ.!!

ಟೀಂ ಇಂಡಸ್!!

ಟೀಂ ಇಂಡಸ್!!

85 ಯುವ ತಂತ್ರಜ್ಞರು ಮತ್ತು ಇಸ್ರೊದ 24 ನಿವೃತ್ತ ವಿಜ್ಞಾನಿಗಳು ಈ ಟೀ ಇಂಡಸ್ ಮೂಲಕ ಚಂದ್ರನ ಮೇಲೆ ರೋವರ್ ಇಳಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಸ್ರೊದ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರು ಈ ಯೋಜನೆಯ ಮುಖ್ಯ ಸಲಹೆಗಾರರಾಗಿದ್ದಾರೆ ಮತ್ತು ಶ್ರೀನಿವಾಸ್‌ ಹೆಗ್ಡೆ ಅವರು ಈ ಯೋಜನೆಯ ಮುಖ್ಯಸ್ಥರಾಗಿದ್ದಾರೆ.

ಮಾರೆ ಇಂಬ್ರಿಯಮ್

ಮಾರೆ ಇಂಬ್ರಿಯಮ್

ಇತ್ತೀಚಿಗೆ ಚೀನಾದ ನೌಕೆ ಚಂದ್ರನ ಮೇಲಿಳಿದ ಸ್ಥಳದಿಂದ 200 ಕಿ. ಮೀ ದೂರದಲ್ಲಿರುವ ಚಂದ್ರನ ‘ಮಾರೆ ಇಂಬ್ರಿಯಮ್' ಎಂಬ ಚಂದ್ರನ ಮೇಲಿರುವ ಸ್ಥಳದಲ್ಲಿ ಟೀಂ ಇಂಡಸ್ ತಯಾರಿಸುತ್ತಿರುವ ರೂಬಾಟ್ ಇಳಿಯಲಿದೆ.

ಕಾರ್ಯಾಚರಣೆ ವಿವರ

ಕಾರ್ಯಾಚರಣೆ ವಿವರ

ಪಿಎಸ್‌ಎಲ್‌ವಿ ಉಡಾವಣ ವಾಹಕದಲ್ಲಿ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ, ಉಡಾವಣೆಯಾಗುವ ರೂವರ್ ಭೂಮಿಗೆ ಎರಡು ಸುತ್ತು ಹಾಕಿ ಚಂದ್ರನತ್ತ ಪಯಣ ಬೆಳೆಸಲಿದೆ. ಚಂದ್ರನ ಕಕ್ಷೆಗೆ ತಲುಪಲು 3 ರಿಂದ ನಾಲ್ಕು ವಾರ ತೆಗೆದುಕೊಳ್ಳುತ್ತದೆ.!!

ವಿಶ್ವದ ಬಹುದೊಡ್ಡ ವನ್ನಾಕ್ರೈ ಸೈಬರ್ ಅಟ್ಯಾಕ್ ಹಿಂದಿರುವುದು ಯಾರು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Over the next few months, members of Team Indus, the Bengaluru-based startup that will send a privately funded spacecraft to the moon this year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot