'ಅಸ್ಗಾರ್ಡಿಯಾ’ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದಿದೆ!..ಆದರಿದು ಭೂಮಿ ಮೇಲಿಲ್ಲ!!

ತಂತ್ರಜ್ಞಾನ ಪ್ರಪಂಚದ ವಿಶೇಷ ಸುದ್ದಿಯೊಂದು ದೇಶದ ಪ್ರಮುಖ ಪತ್ರಿಕೆ ಮತ್ತಿ ಟಿವಿ ಚಾನೆಲ್‌ಗಳಿಂದ ಮರೆಯಾಗಿಯೇ ಉಳಿದಿದೆ.!!

|

ಕೆಲವೊಂದು ಸುದ್ದಿಗಳನ್ನು ನಂಬಲೂ ಸಾಧ್ಯವಾಗದಿದ್ದರೂ ನಾವು ನಂಬಲೇಬೇಕು. ಏಕೆಂದರೆ ಆ ಸುದ್ದಿಗಳು ವಿಜ್ಞಾನ ಪ್ರಪಂಚದಿಂದ ಬಂದಿರುತ್ತವೆ.! ಅಂತಹದೇ ಒಂದು ತಂತ್ರಜ್ಞಾನ ಪ್ರಪಂಚದ ವಿಶೇಷ ಸುದ್ದಿಯೊಂದು ದೇಶದ ಪ್ರಮುಖ ಪತ್ರಿಕೆ ಮತ್ತಿ ಟಿವಿ ಚಾನೆಲ್‌ಗಳಿಂದ ಮರೆಯಾಗಿಯೇ ಉಳಿದಿದೆ.!!

ಕೇವಲ 15 ದಿವಸಗಳ ಹಿಂದಷ್ಟೆ 'ಅಸ್ಗಾರ್ಡಿಯಾ' ಹೆಸರಿನ ಹೊಸ ದೇಶವೊಂದು ಅಸ್ತಿತ್ವಕ್ಕೆ ಬಂದಿದೆ. ಆದರೆ ಇಡೀ ಭೂಮಿಯ ನಕಾಶೆಯಲ್ಲಿ ಎಲ್ಲಿಯೂ ಮತ್ತು ಎಂದೂ ಈ ದೇಶ ನಿಮಗೆ ಕಾಣಿಸುವುದಿಲ್ಲ. ಏಕೆಂದರೆ ಭೂಮಿಯ ಆಚಿನ ಮೊದಲ ರಾಷ್ಟ್ರ ಅದು.! ಹೌದು, ಇದು ಬಾಹ್ಯಾಕಾಶದ ಮೊದಲ ದೇಶ!!

'ಅಸ್ಗಾರ್ಡಿಯಾ’ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದಿದೆ!..ಆದರಿದು ಭೂಮಿ ಮೇಲಿಲ್ಲ!!

ಒಂದು ಪುಟ್ಟ ಬಾಹ್ಯಾಕಾಶ ನೌಕೆಯ ರೂಪದಲ್ಲಿ ಬಾಹ್ಯಾಕಾಶ ಕಕ್ಷೆಗೆ ಸೇರಿರುವ ವಿಶ್ವದ ಮೊದಲ ಬಾಹ್ಯಾಕಾಶ ರಾಷ್ಟ್ರ 'ಅಸ್ಗಾರ್ಡಿಯಾ' ಎಂಬುದು ಬಹುತೇಕರಿಗೆ ತಿಳಿಯದಿರಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವದ ಮೊದಲ ಬಾಹ್ಯಾಕಾಶ ರಾಷ್ಟ್ರ 'ಅಸ್ಗಾರ್ಡಿಯಾ' ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯಿರಿ.!!

ಅಸ್ಗಾರ್ಡಿಯಾ ದೇಶ!!

ಅಸ್ಗಾರ್ಡಿಯಾ ದೇಶ!!

ಅಸ್ಗಾರ್ಡಿಯಾ ಎಂದರೆ ದೇವನಗರ ಎಂಬ ಅರ್ಥ ನಮಗೆ ಸಿಗುತ್ತದೆ. ಜರ್ಮನಿಯ ನೋರ್ಸ್ ಪುರಾಣದ ಪ್ರಕಾರ ದೇವತೆಗಳು ವಾಸಿಸುವ ನಗರಕ್ಕೆ ‘ಅಸ್ಗಾರ್ಡಿಯಾ' ಎಂಬ ಹೆಸರಿತ್ತು. ಆ ಕಾಲ್ಪನಿಕ ನಗರವೇ ಈಗ ಅರೆವಾಸ್ತವದ ಒಂದು ದೇಶ ಎನಿಸಿದೆ.! ಅದು ಕೂಡ ಮೊದಲ ಬಾಹ್ಯಾಕಾಶ ದೇಶವಾಗಿದೆ.!!

ದೇಶದ ರಚನೆ ಹೇಗಿದೆ!?

ದೇಶದ ರಚನೆ ಹೇಗಿದೆ!?

ಸ್ವತಂತ್ರ ದೇಶ ಎನ್ನಿಸಬೇಕಿದ್ದರೆ ಅದಕ್ಕೊಂದು ಸರ್ಕಾರ ಇರಬೇಕು; ಸಂವಿಧಾನ ಇರಬೇಕು; ಒಂದು ನಿಗದಿತ ಸ್ಥಳ, ಧ್ವಜ, ಲಾಂಛನ, ರಾಷ್ಟ್ರಗೀತೆ ಮತ್ತು ನಾಣ್ಯವೂ
ಇರಬೇಕು ಅಲ್ಲವೇ? ಈ ಎಲ್ಲ ಅಂಶಗಳೂ ‘ಅಸ್ಗಾರ್ಡಿಯಾ' ದೇಶದಲ್ಲಿ ಇರಲಿವೆ ಎಂದರೆ ನೀವು ನಂಬಲೇಬೇಕು.!!

 ‘ರಾಷ್ಟ್ರಪಿತ’ ಕೂಡ ಇದ್ದಾರೆ.!!

‘ರಾಷ್ಟ್ರಪಿತ’ ಕೂಡ ಇದ್ದಾರೆ.!!

ಬಾಹ್ಯಾಕಾಶದ ಮೊದಲ ದೇಶ ಅಸ್ಗಾರ್ಡಿಯಾ ಅರೆವಾಸ್ತವ ಎಂದರೂ ನಂಬಲೂ ಸಾಧ್ಯವಿಲ್ಲ. ಏಕೆಂದರೆ ಈ ಬಾಹ್ಯದೇಶ ‘ರಾಷ್ಟ್ರಪಿತ'ನನ್ನು ಹೊಂದಿದೆ. ಸೋವಿಯತ್ ಸಂಘದ ಅಝರ್ ಬೈಜಾನ್‌ನಲ್ಲಿ ರಾಕೆಟ್ ತಂತ್ರಜ್ಞಾನಿ ಡಾ. ಐಗೊರ್ ಅಶುರ್ಬೇಲಿ ಇದರ ರಾಷ್ಟ್ರಪಿತರಾಗಿದ್ದಾರೆ. ಇವರು ವಿಶ್ವಸಂಸ್ಥೆಯ ಯುನೆಸ್ಕೊ ಘಟಕದ ಬಾಹ್ಯಾಕಾಶ ವಿಜ್ಞಾನಿಯೂ ಹೌದು.!!

ನಾಗರಿಕರಾಗಲು ನೋಂದಣಿ!!

ನಾಗರಿಕರಾಗಲು ನೋಂದಣಿ!!

ಕೇವಲ 15 ದಿವಸಗಳ ಹಿಂದಷ್ಟೆ ನೋಂದಣಿಯಾಗಿರುವ ಈ ದೇಶದ ಪೌರತ್ವ ಪಡೆಯಲು ವಿವಿಧ ದೇಶಗಳ ಸುಮಾರು ಒಂದೂವರೆ ಲಕ್ಷ ಜನರು ನೋಂದಣಿ ಮಾಡಿಸಿದ್ದಾರೆ.!! ನಮ್ಮ ಭಾತೀಯರೇನು ಕಮ್ಮಿ ಇಲ್ಲ.! ಏಕೆಂದರೆ, ಭಾರತದ ಏಳು ಸಾವಿರ ಜನ ಅಸ್ಗಾರ್ಡಿಯಾ ದೇಶದ ನಾಗರಿಕರಾಗಲು ಅರ್ಜಿ ಸಲ್ಲಿಸಿದ್ದಾರೆ.!!

ಹೊಸ ದೇಶದ ಮೊದಲ ಆದ್ಯತೆ!!

ಹೊಸ ದೇಶದ ಮೊದಲ ಆದ್ಯತೆ!!

ಜನಾಂಗೀಯ ದ್ವೇಷ, ಬಡತನ, ಧಾರ್ಮಿಕ ದ್ವೇಷ, ಶಸ್ತ್ರಾಸ್ತ್ರ ಪೈಪೋಟಿ ಹೀಗೆ ಸಾವಿರಾರು ತೊಂದರೆಗೂ ಭೂಮಿಯನ್ನು ಆವರಿಸಿವೆ. ಇವೆಲ್ಲವುಗಳಿಂದ ದೂರವಾಗಿ, ಶಾಂತಿ, ಸಹಬಾಳ್ವೆ ಮತ್ತು ನೆಮ್ಮದಿಯ ದೇಶವೊಂದನ್ನು ಕಟ್ಟಿಕೊಳ್ಳುವ ಬಯಕೆ ಅಸ್ಗಾರ್ಡಿಯಾಗೆ ಇದೆ. ಆದರೆ ಭೂಮಿಯನ್ನು ಬಿಟ್ಟು ಓಡುವುದು ತಮ್ಮ ಉದ್ದೇಶ ಅಲ್ಲವೆಂದು ಅಸ್ಗಾರ್ಡಿಯಾ ವಕ್ತಾರರು ನಿಚ್ಚಳವಾಗಿ ಹೇಳಿದ್ದಾರೆ.!!

ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!

Best Mobiles in India

English summary
If you're getting tired of Earth with all its breathable air and gravity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X