Subscribe to Gizbot

ಅನ್ಯಗ್ರಹ ಜೀವಿ ಇರುವಿಕೆಗೆ ಪುಷ್ಟಿ!..ನಾಸಾ ವಿಜ್ಞಾನಿಗಳಿಗೆ ಸಿಕ್ಕಿದೆ ಪುರಾವೆ!!

Written By:

ಇದೇ ಮೊದಲ ಸಾರಿ ಅಚ್ಚರಿ ಎನ್ನುವ ಹಾಗೆ ವಿಜ್ಞಾನಿಗಳೇ ಊಹಿಸದ ರೀತಿಯಲ್ಲಿ ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿಗಳು ಪತ್ತೆಯಾಗಿವೆ.! ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಗಗನಯಾನಿಗಳು ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿಗಳನ್ನು ಪತ್ತೆ ಹಚ್ಚಿರುವ ಸುದ್ದಿ ಇದೀಗ ವೈರಲ್ ಆಗಿದೆ.!!

ಅನ್ಯಗ್ರಹ ಜೀವಿ ಇರುವಿಕೆಗೆ ಪುಷ್ಟಿ!..ನಾಸಾ ವಿಜ್ಞಾನಿಗಳಿಗೆ ಸಿಕ್ಕಿದೆ ಪುರಾವೆ!!

ಪತ್ತೆಯಾಗಿರುವ ಸೂಕ್ಷ್ಮಜೀವಿಯಲ್ಲಿರುವ ಡಿಎನ್‌ಎ ಅನ್ನು ಆ ಜೀವಿಯಿಂದ ಮೊದಲಿಗೆ ಪ್ರತ್ಯೇಕಿಸಸಲಾಗಿದ್ದು, ನಂತರ ಡಿಎನ್‌ಎ ಅನ್ನು ಹಿಗ್ಗಿಸಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.!! ಇದರಿಂದ ಅನ್ಯಗ್ರಹದ‌ಲ್ಲಿ ಇರಬಹುದಾದ ಡಿಎನ್‌ಎ ಆಧರಿತ ಜೀವಿಗಳ ಅನ್ವೇಷಣೆ ಹಾಗೂ ಸಂಶೋಧನೆಗೂ ನೆರವಾಗಲಿದೆ ಎಂದು ಹೇಳಲಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮಿಗೆ ತರಲು ಸಾಧ್ಯವಾಗಿಲ್ಲ!!

ಭೂಮಿಗೆ ತರಲು ಸಾಧ್ಯವಾಗಿಲ್ಲ!!

ಪತ್ತೆಯಾಗಿರುವ ಸೂಕ್ಷ್ಮ ಜೀವಿಗಳನ್ನು ಒಂದು ವಾರದ ಬಳಿಕ ಜೀವಕೋಶಗಳನ್ನು ಪ್ರತ್ಯೇಕಿಸಿ ಕಿರಿದಾದ ಟ್ಯೂಬ್‌ಗಳಿಗೆ ಅವನ್ನು ವರ್ಗಾಯಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.!! ಆದರೆ, ಹೆಚ್ಚಿನ ಸಂಶೋಧನೆಗಾಗಿ ಅವುಗಳ ಮಾದರಿಯನ್ನು ಭೂಮಿಗೆ ತರಲು ಸಾಧ್ಯವಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ಬಾಹ್ಯಾಕಾಶ ಪ್ರಯೋಗಾಲಯದಲ್ಲೇ ಮೊದಲು!!

ಬಾಹ್ಯಾಕಾಶ ಪ್ರಯೋಗಾಲಯದಲ್ಲೇ ಮೊದಲು!!

ಸೂಕ್ಷ್ಮ ಜೀವಿಗಳ ಮಾದರಿಯನ್ನು ಸಂಗ್ರಹಿಸಿ ನಾಸಾ ಗಗನಯಾತ್ರಿ ಪೆಗ್ಗಿ ವ್ಯಾಟ್ಸನ್ ಅವರು ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಈ ಪ್ರಯೋಗ ನಡೆಸುತ್ತಿದ್ದಾರೆ. ನಾಸಾದ ಸೂಕ್ಷ್ಮಜೀವಿಶಾಸ್ತ್ರಜ್ಞೆ ಸರಾ ವಲ್ಲಾಸ್ ಹಾಗೂ ಅವರ ತಂಡವು ಅಮೆರಿಕದಿಂದ ಪೆಗ್ಗಿ ವ್ಯಾಟ್ಸನ್ ಅವರಿಗೆ ಮಾರ್ಗದರ್ಶನ ನೀಡುತ್ತಿದೆ.!!

ಅನ್ಯಗ್ರಹ ಜೀವಿಗೆ ಪುಷ್ಟಿ!!

ಅನ್ಯಗ್ರಹ ಜೀವಿಗೆ ಪುಷ್ಟಿ!!

ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿಗಳು ಪತ್ತೆಯಾಗಿರುವುದು ಅನ್ಯಗ್ರಹದ‌ಲ್ಲಿ ಇರಬಹುದಾದ ಡಿಎನ್‌ಎ ಆಧರಿತ ಜೀವಿಗಳ ಅನ್ವೇಷಣೆ ಹಾಗೂ ಸಂಶೋಧನೆಗೆ ನೆರವಾಗಲಿದೆ ಎಂದು ಹೇಳಲಾಗಿದೆ. ಬಾಹ್ಯಾಕಾಶದಲ್ಲಿನ ವಾತವಾರಣದಲ್ಲಿರುವ ಸೂಕ್ಷ್ಮ ಜೀವಿಗಳು ಅನ್ಯಗ್ರಹ ಜೀವಿಗಳ ಬಗ್ಗೆ ಪುಷ್ಟಿ ನೀಡುತ್ತಿವೆ.!!

How to save WhatsApp Status other than taking screenshots!! Kannada
ಅಧ್ಯಯನ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.!!

ಅಧ್ಯಯನ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.!!

ಸೂಕ್ಷ್ಮಜೀವಿಯಲ್ಲಿರುವ ಡಿಎನ್‌ಎ ಅನ್ನು ಆ ಜೀವಿಯಿಂದ ಪ್ರತ್ಯೇಕಿಸಸಲಾಗಿದ್ದು, ಈ ಬಗ್ಗೆ ಹೆಚ್ಚು ಅಧ್ಯಯನ ನಡೆಯುತ್ತಿದೆ.! ಯಾವುದೇ ಸೂಕ್ಷ್ಮಾಣು ಜೀವಿಗಳು ಬದುಕಲು ಯಾವುದೇ ಮೂಲಭೂತ ಅವಶ್ಯಕತೆಗಳು ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ ಈ ಸೂಕ್ಷ್ಮಜೀವಿಯ ಸಂರಚನೆಯ ಅಧ್ಯಯನ ಫಲಿತಾಂಶ ವಿಜ್ಞಾನಿಗಳಿಗೆ ದೊಡ್ಡ ಹೆಜ್ಜೆಯಾಗಲಿದೆ.!!

ಓದಿರಿ:ಗ್ಯಾಜೆಟ್ ಗ್ರಾಹಕರಿಗೆ ಮಾರಕವಾಯ್ತು ಕೇಂದ್ರ ಸರ್ಕಾರದ ಹೊಸ ನಿರ್ಧಾರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Wheresoe'er humans roam, there you will also find microbes. It's just a fact of life - we contaminate everything we touch.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot