ಏಲಿಯನ್‌ಗಳನ್ನು ಸಂಪರ್ಕಿಸಲು ಕಾಯಬೇಕು 1,500 ವರ್ಷ

By Shwetha
|

ನಾವು ಇದುವರೆಗೂ ಏಲಿಯನ್‌ಗಳಿಂದ ಯಾವುದೇ ಧ್ವನಿಗಳನ್ನು ಕೇಳಿಸಿಕೊಂಡಿಲ್ಲ. ಹೀಗೆಯೇ ಇನ್ನೊಂದು 1,500 ವರ್ಷಗಳವರೆಗೆ ಅವರಿಂದ ಯಾವುದೇ ಶಬ್ಧಗಳನ್ನು ನಾವು ಕೇಳುವುದಿಲ್ಲ ಎಂಬುದಾಗಿ ಹೊಸ ಸಂಶೋಧನೆಯೊಂದು ತಿಳಿಸಿದೆ.

ಖಗೋಳಶಾಸ್ತ್ರಜ್ಞ ಇವಾನ್ ಸೊಲೊಮಿನಡ್ಸ್ ಹೇಳುವಂತೆ ನಮ್ಮ ರೇಡಿಯೊ ಪ್ರಸರಣವನ್ನು ಮಿಲ್ಕಿ ವೇ ಯ ಅರ್ಧದಷ್ಟನ್ನು ಕ್ರಮಿಸಿದೆ ಎಂದಾಗಿದ್ದು ಇದರಿಂದ ನಾವುಗಳು ಏಲಿಯನ್‌ಗಳನ್ನು ಸಂಪರ್ಕಿಸುವ ಸಾಧ್ಯತೆ ಹೆಚ್ಚಿದೆ ಎಂದಾಗಿದೆ. ಆದರೆ ಇದು ಇನ್ನೂ ಕಾರ್ಯಗತಗೊಳ್ಳಲು 1,500 ವರ್ಷಗಳವರೆಗೆ ಕಾಯಬೇಕು ಎಂಬುದಾಗಿದೆ.

ಓದಿರಿ: ಮಾನವರೇ ಇಲ್ಲದ ಭೂಮಿ ಒಮ್ಮೆ ಊಹಿಸಿ ನೋಡಿ!!!

ಮಿಲ್ಕಿ ವೇ ಯನ್ನು ರೇಡಿಯೊ ಪ್ರಸರಣಗಳು ಅರ್ಧದಷ್ಟು ಕ್ರಮಿಸಿದ್ದರೂ ಅನ್ಯಗ್ರಹ ಜೀವಿಗಳೊಂದಿಗೆ ನಮಗೆ ಸಂವಾದವನ್ನು ನಡೆಸಲಾಗಿಲ್ಲ. ನಮಗೆ ಅವುಗಳೊಂದಿಗೆ ಇದುವರೆಗೂ ಸಂವಹನ ನಡೆಸಲಾಗಿಲ್ಲ ಎಂಬುದಾಗಿ ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

#1

#1

ಇದುವರೆಗೆ ಏಲಿಯನ್ ಮಾದರಿಯ ಸ್ವರೂಪಗಳು ವಿಜ್ಞಾನಿಗಳ ಕಣ್ಣಿಗೆ ಬಿದ್ದಿಲ್ಲ. ಭೂಮಿಯಂತಿರುವ ಹೆಚ್ಚಿನ ಗ್ರಹಗಳು ಭೂಮಿಯಲ್ಲಿದ್ದು, ಇದುವರೆಗೆ ಏಲಿಯನ್ ಮಾದರಿಗಳನ್ನು ನಾವು ಕಂಡಿಲ್ಲ.

#2

#2

ಅವರ ಲೆಕ್ಕಾಚಾರದ ಪ್ರಕಾರ ಗ್ಯಾಲಕ್ಸಿಯ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಂಡಾಗ, ಮಿಲ್ಕಿ ವೇ ನಲ್ಲಿ 210 ಬುದ್ಧಿವಂತ ನಾಗರೀಕತೆಗಳು ಇರುವುದಾಗಿ ತಿಳಿಸಿದ್ದಾರೆ.

#3

#3

ರೇಡಿಯೊ ವಿಕಿರಣಗಳನ್ನು ಅಭಿವೃದ್ಧಿಪಡಿಸಿದವರಲ್ಲಿ ಮನುಷ್ಯರು ಮೊದಲನೆಯವರಾಗಿದ್ದು, ಇದನ್ನು ಪತ್ತೆಹಚ್ಚುವ ಇನ್ನೊಬ್ಬರಿಗಾಗಿ ನಾವು ಕಾಯಬೇಕಾಗಿದೆ.

#4

#4

ನಾವು ಅವುಗಳ ಶಬ್ಧವನ್ನು ಯಾವಾಗ ಬೇಕಾದರೂ ಕೇಳಿಸಿಕೊಳ್ಳಬಹುದು, ಆದರೆ ಇದಕ್ಕೀಗ 1,500 ವರ್ಷಗಳವರೆಗೆ ಕಾಯಬೇಕು ಎಂಬುದು ಖಗೋಳಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.

#5

#5

ಅದಕ್ಕಾಗಿ ನಾವುಗಳು ಅವಿರತವಾಗಿ ಕಾಯಬೇಕಾಗಿದೆ. ಕಾಯುವುದನ್ನು ನಾವು ಮಾಡದೇ ಇದ್ದರೆ ನಾವು ಸಿಗ್ನಲ್‌ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

#6

#6

ಬಾಹ್ಯಾಕಾಶದಲ್ಲಿ ಅವುಗಳು ಸಂಚರಿಸಿದಾಗ ರೇಡಿಯೊ ಪ್ರಸರಣಗಳು ಕುಸಿಯಲು ಆರಂಭಿಸುತ್ತವೆ. ಇದರಿಂದ ನಮ್ಮ ಪ್ರಸರಣಗಳನ್ನು ಅವು ಸಂಧಿಸುತ್ತಿವೆ ಎಂದಾಗಿದೆ.

#7

#7

ಏಲಿಯನ್‌ಗಳು ನಮ್ಮನ್ನು ಸಂಪರ್ಕಿಸಬಹುದಾದ ಹಲವಾರು ವಿಧಗಳಿದ್ದು ರೇಡಿಯೊ ಪ್ರಸರಣಗಳು ಮಾತ್ರವೇ ಅವುಗಳ ಆಯ್ಕೆಯಾಗಿರುವುದಿಲ್ಲ.

#8

#8

ಏಲಿಯನ್‌ಗಳು ಸಂದೇಶಗಳನ್ನು ಆವರ್ತನೆ ರೂಪದಲ್ಲಿ ಪ್ರಸಾರ ಮಾಡಬಹುದಾಗಿದ್ದು ನಮ್ಮ ಪ್ರಸ್ತುತ ತಂತ್ರಜ್ಞಾನದ ಮೂಲಕ ಅವುಗಳನ್ನು ಪತ್ತೆಹಚ್ಚುವ ಸಾಧ್ಯತೆ ಇಲ್ಲದೆ ಕೂಡ ಇರಬಹುದು.

#9

#9

ಹೀಗಾಗಿ ಸಂಶೋಧಕರುವ 1,500 ವರ್ಷಗಳ ಗಡುವನ್ನು ಇದಕ್ಕಾಗಿ ವಿಧಿಸಿದ್ದಾರೆ.

Best Mobiles in India

English summary
The fact that we haven't heard from aliens yet isn't so surprising. In fact, we shouldn't expect to hear from them for another 1,500 years, according to new research.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X