Subscribe to Gizbot

ಚಂದ್ರನಲ್ಲಿ ನೀರು ಪತ್ತೆ ನಕ್ಷೆಗೆ ನೆರವಾಯ್ತು ನಮ್ಮ 'ಚಂದ್ರಯಾನ–1’!!

Written By:

ಭಾರತೀಯ ಬಾಹ್ಯಾಕಾಶ ಶಕ್ತಿ ಪ್ರಪಂಚಕ್ಕೆ ಹರಡುತ್ತಿದ್ದು, ಇದೀಗ ಭಾರತೀಯ ಬಾಹ್ಯಾಕಾಶ ನೌಕೆ 'ಚಂದ್ರಯಾನ-1' ನೀಡಿರುವ ಮಾಹಿತಿ ವಿಜ್ಞಾನಿಗಳಿಗೆ ವರವಾಗಿದೆ.!! ಹೌದು, 'ಚಂದ್ರಯಾನ-1' ನೀಡಿರುವ ಮಾಹಿತಿ ಸಹಾಯದಿಂದ ವಿಜ್ಞಾನಿಗಳು ಚಂದ್ರನ ಮೇಲೆ ನೀರಿನ ಅಂಶಗಳಿರುವ ಕುರಿತ ಮೊದಲ ಜಾಗತಿಕ ನಕಾಶೆಯನ್ನು ರಚಿಸಿದ್ದಾರೆ.!!

ಈ ಬಗ್ಗೆ 'ಸೈನ್ಸ್‌ ಅಡ್ವಾನ್ಸಸ್' ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದ್ದು, ಅಮೆರಿಕದ ಬ್ರೌನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ. ಚಂದ್ರನ ಮಣ್ಣಿನ ಒಂದು ಪರಮಾಣುವಿನಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಒಳಗೊಂಡಿದೆ ಎನ್ನುವ ಜಾಗತಿಕ ನಕಾಶೆ ಇದಾಗಿದೆ.!!

ಚಂದ್ರನಲ್ಲಿ ನೀರು ಪತ್ತೆ ನಕ್ಷೆಗೆ ನೆರವಾಯ್ತು ನಮ್ಮ 'ಚಂದ್ರಯಾನ–1’!!

ನಾಸಾನ ಮೂನ್ ಮಿನರಾಲಜಿ ಮ್ಯಾಪ್ ಮತ್ತು ಚಂದ್ರಯಾನ-1 ಮಾಹಿತಿಗಳನ್ನು ಈ ಮ್ಯಾಪ್ ತಯಾರಿಕೆಯಲ್ಲಿ ಬಳಸಲಾಗಿದೆ.! ಇದರಿಂದ ಭವಿಷ್ಯದಲ್ಲಿ ಚಂದ್ರಯಾನದ ಪ್ರಯೋಗಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅಧ್ಯಯನ ನಡೆಸಿರುವ ವಿಜ್ಞಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.!!

ಚಂದ್ರನಲ್ಲಿ ನೀರು ಪತ್ತೆ ನಕ್ಷೆಗೆ ನೆರವಾಯ್ತು ನಮ್ಮ 'ಚಂದ್ರಯಾನ–1’!!

''2009ರಲ್ಲೂ ನೀರು ಮತ್ತಿತರ ಅಂಶಗಳ ಕುರಿತು ಪತ್ತೆ ಮಾಡಲಾಗಿತ್ತು, ನಾವು ನಕ್ಷೆಯ ಮೂಲಕ ಎಲ್ಲಿ ನೀರಿನ ಪ್ರಮಾಣವನ್ನು ತೋರಿಸುವ ಪರಿಮಾಣಾತ್ಮಕ ನಕ್ಷೆಗಳನ್ನು ಹೊಂದಿದ್ದೇವೆ, ಗಗನಯಾತ್ರಿಗಳಿಗಾಗಿ ಕುಡಿಯುವ ನೀರು ಅಥವಾ ಇಂಧನವನ್ನು ಉತ್ಪತ್ತಿಮಾಡುವುದಕ್ಕಾಗಿ ಅದು ಉಪಯುಕ್ತವಾಗಬಹುದು ಎಂದು ವಿಜ್ಞಾನಿ ಮಿಲ್ಲಿಕೆನ್ ಹೇಳಿದ್ದಾರೆ.!!

ಚಂದ್ರನಲ್ಲಿ ನೀರು ಪತ್ತೆ ನಕ್ಷೆಗೆ ನೆರವಾಯ್ತು ನಮ್ಮ 'ಚಂದ್ರಯಾನ–1’!!

'ಚಂದ್ರನ ಮೇಲ್ಮೈಯಲ್ಲಿ ನೀರಿರುವ ಕುರುಹುಗಳು ಕೇವಲ ಧ್ರುವ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಎಲ್ಲೆಡೆ ಕಾಣಿಸುತ್ತಿವೆ' ಎಂದು ಈ ಬಗ್ಗೆ ಅಧ್ಯಯನ ನಡೆಸಿರುವ ಬ್ರೌನ್‌ ವಿಶ್ವವಿದ್ಯಾಲಯ ಅಧ್ಯಯನದ ಪ್ರಮುಖ ಲೇಖಕಿ ಶುಯಿ ಲಿ ತಿಳಿಸಿದ್ದಾರೆ.!!

ಓದಿರಿ: ಜಿಯೋಗೆ ಮತ್ತೊಂದು ವಿಶ್ವ ಕಿರೀಟ!..ಏನಂತ ಗೊತ್ತಾದ್ರೆ ಖುಷಿಪಡ್ತಿರಾ!!

English summary
going from wetter in the early morning and evening to nearly bone dry around lunar noon.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot