ಡ್ರಾಗನ್ ಬತ್ತಳಿಕೆ ಸೇರಿದೆ ಹೊಸದೊಂದು ರಾಕೆಟ್: ಬೆಂಕಿ ಇಲ್ಲದೇ ದಾಳಿ ಮಾಡುತ್ತೆ..!

|

ಹೊಸ ಟೆಕ್ನಾಲಜಿಗಳನ್ನು ಬಳಕೆ ಮಾಡಿಕೊಂಡು ತನ್ನ ಶಕ್ತಿಯನ್ನು ವೃದ್ಧಿಗೊಳ್ಳಿಸುತ್ತಿರುವ ನೆರೆಯ ಡ್ರಾಗನ್ ಚೀನಾ ಹೊಸ ಮಾದರಿಯ ರಾಕೆಟ್ ಅನ್ನು ನಿರ್ಮಿಸಿದ್ದು, ಇದಕ್ಕೆಕ ಚಲಿಸಲು ಯಾವುದೇ ರೀತಿಯ ಬೆಂಕಿಯ ಅಗತ್ಯತೆ ಇಲ್ಲ ಎನ್ನಲಾಗಿದೆ. ಎಲೆಕ್ಟ್ರೋ ಮ್ಯಾಗ್ನೇಟಿಕ್ ಶಕ್ತಿಯನ್ನು ಬಳಕೆ ಮಾಡಿಕೊಂಡು ಸಾಗಲಿದೆ ಎನ್ನಲಾಗಿದೆ. ಅಲ್ಲದೇ ಶತ್ರುವಿನ ಮೇಲೆ ನಿಖರವಾಗಿ ದಾಳಿಯನ್ನು ಮಾಡಲಿದೆ.

ಡ್ರಾಗನ್ ಬತ್ತಳಿಕೆ ಸೇರಿದೆ ಹೊಸದೊಂದು ರಾಕೆಟ್: ಬೆಂಕಿ ಇಲ್ಲದೇ ದಾಳಿ ಮಾಡುತ್ತೆ..!

ಸದ್ಯ ಯುದ್ದಕ್ಕೆ ಸನ್ನಧವಾಗಿರುವ ಚೀನಾ, ಮೂರನೇ ಮಹಾಯುದ್ದಕ್ಕೆ ಎಲ್ಲಾ ಮಾದರಿಯಲ್ಲಿಯೂ ತಯಾರಿಯನ್ನು ನಡೆಸಿದೆ. ಇದಕ್ಕಾಗಿಯೇ ತನ್ನ ಸಮರಾಸ್ತ್ರಗಳನ್ನು ರೆಡಿಮಾಡಿಕೊಂಡಿದ್ದು, ಅದರ ಒಂದು ಭಾಗವಾಗಿ ಎಲೆಕ್ಟ್ರೋ ಮ್ಯಾಗ್ನೇಟಿಕ್ ಶಕ್ತಿಯ ರಾಕೆಟ್‌ಗಳನ್ನು ನಿರ್ಮಾಣ ಮಾಡಿದೆ ಎನ್ನಲಾಗಿದೆ. ಅಲ್ಲದೇ ಇದಕ್ಕಾಗಿ ತನ್ನದೇ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದೆ.

ನೆರೆಯ ರಾಷ್ಟ್ರಗಳು ಟಾರ್ಗೆಟ್:

ನೆರೆಯ ರಾಷ್ಟ್ರಗಳು ಟಾರ್ಗೆಟ್:

ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳನ್ನು ಟಾರ್ಗೆಟ್ ಮಾಡಿರುವ ಚೀನಾ, ಎಲೆಕ್ಟ್ರೋ ಮ್ಯಾಗ್ನೇಟಿಕ್ ಶಕ್ತಿಯ ರಾಕೆಟ್‌ಗಳ ದೂರವನ್ನು 200 ಕಿ.ಮೀ ವ್ಯಾಪ್ತಿಯಲ್ಲಿ ಕರಾರುವಕ್ಕಾಗಿ ದಾಳಿ ಮಾಡುವಂತೆ ನಿರ್ಮಾಣವನ್ನು ಮಾಡಿದೆ. ಇದರಿಂದಾಗಿ ಯಾವುದೇ ತೊಂದರೆ ಇಲ್ಲದೇ ಶತ್ರುವನ್ನು ಹೊಡೆದು ಹಾಕಬಹುದಾಗಿದೆ.

ಎಲೆಕ್ಟ್ರೋ ಮ್ಯಾಗ್ನೇಟಿಕ್ ತರಂಗ:

ಎಲೆಕ್ಟ್ರೋ ಮ್ಯಾಗ್ನೇಟಿಕ್ ತರಂಗ:

ಎಲೆಕ್ಟ್ರೋ ಮ್ಯಾಗ್ನೇಟಿಕ್ ಶಕ್ತಿಯನ್ನು ಬಳೆಕೆ ಮಾಡಿಕೊಳ್ಳುವ ರಾಕೆಟ್‌ನಲ್ಲಿ ಮುಂದಕ್ಕೆ ಸಾಗಲು ಯಾವುದೇ ರೀತಿಯ ಬೆಂಕಿಯನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ ಬದಲಾಗಿ, ಎಲೆಕ್ಟ್ರೋ ಮ್ಯಾಗ್ನೇಟಿಕ್ ತರಂಗಾರಂತಗಳ ಸಹಾಯವನ್ನು ಪಡೆಯಲಾಗುತ್ತಿದೆ. ಇದರಿಂದಾಗಿ ಈ ರಾಕೆಟ್ ಸುಲಭವಾಗಿ ಚಲಿಸಲಿದೆ, ಯಾವುದೇ ಅಡೆತಡೆಗಳಿಲ್ಲದೆ.

ಗಡಿ ಕಾವಲಿಗೆ:

ಗಡಿ ಕಾವಲಿಗೆ:

ಈ ಎಲೆಕ್ಟ್ರೋ ಮ್ಯಾಗ್ನೇಟಿಕ್ ಶಕ್ತಿಯ ರಾಕೆಟ್‌ಗಳನ್ನು ಗಡಿಯಲ್ಲಿ ಕಾವಲಿಗೆ ನೇಮಿಸಲಿದೆ ಎನ್ನಲಾಗಿದೆ. ದೂರದಲ್ಲಿ ಕುಳಿತು ಟಾರ್ಗೆಟ್ ಸೆಟ್ ಮಾಡಿ ಬಿಟ್ಟರೆ ಶತ್ರುಗಳು ಕ್ಷಣ ಮಾತ್ರದಲ್ಲಿ ಫಿನಿಷ್ ಆಗಲಿದ್ದಾರೆ. ಇದರಿಂದಾಗಿ ಯೋಧರನ್ನು ಗಡಿಗೆ ಕಳುಹಿಸುವುದು ತಪ್ಪಲಿದೆ.

ಒಳ್ಳೆಯ ಬೆಳವಣಿಗೆಯಲ್ಲ:

ಒಳ್ಳೆಯ ಬೆಳವಣಿಗೆಯಲ್ಲ:

ದಿನೇ ದಿನೇ ತಂತ್ರಜ್ಞಾನದಿಂದಾಗಿ ದೊಡ್ಡ ಮಟ್ಟದಲ್ಲಿ ಯುದ್ದ ಸಾಮಾಗ್ರಿಗಳು ನಿರ್ಮಾಣವಾಗುತ್ತಿದೆ. ಇದರಿಂದಾಗಿ ಇಡೀ ಮನಕುಲವೇ ವಿನಾಶದ ಅಂಚಿಗೆ ಹೋಗುವುದು ಖಂಡಿತ, ಎಲ್ಲಾ ರಾಷ್ಟ್ರಗಳು ಯುದ್ದಕ್ಕೆ ನಿಂತರೆ ಭೂಮಿ 20 ನಿಮಿಷದಲ್ಲಿ ಛಿಂದಿಯಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಇದು ಒಳ್ಳೆಯದಲ್ಲ.

Best Mobiles in India

English summary
China could deploy new electromagnetic rocket. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X