ಇನ್ನು ಬೀದಿದೀಪಗಳ ಬದಲಾಗಿ ಬೀದಿಮರಗಳೇ ಬೆಳಕು ನೀಡಲಿವೆ!!

ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ತಜ್ಞರು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಫಲವಾಗಿ ಸಸ್ಯಗಳೂ ಬೆಳಕು ಚೆಲ್ಲಬಲ್ಲವು ಎಂಬುದು ದೃಡಪಟ್ಟಿದೆ.!!

|

ಬೀದಿದೀಪಗಳ ಬದಲಾಗಿ ಬೀದಿ ಬದಿಯ ಈ ಮರಗಳೇ ಬೆಳಕು ನೀಡುವ ಸಾಧನಗಳಾಗಿ ಬಳಕೆಯಾದರೆ ಹೇಗಿರುತ್ತದೆ? ಇದೇನು ತಮಾಷೆ ಎಂದುಕೊಳ್ಳಬೇಡಿ.! ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ತಜ್ಞರು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಫಲವಾಗಿ ಸಸ್ಯಗಳೂ ಬೆಳಕು ಚೆಲ್ಲಬಲ್ಲವು ಎಂಬುದು ದೃಡಪಟ್ಟಿದೆ.!!

ಹೌದು, ಸಸ್ಯದ ಎಲೆಗೆ ವಿಶೇಷ ನ್ಯಾನೊ ಪಾರ್ಟಿಕಲ್‌ಗಳನ್ನು ಸೇರಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದು, ಸಸ್ಯಗಳಲ್ಲಿ ಸಹಜವಾಗಿ ನಡೆಯುವ ಚಯಾಪಚಯ ಕ್ರಿಯೆಯಿಂದಾಗಿ (ಎನರ್ಜಿ ಮೆಟಬಾಲಿಸಂ) ಶಕ್ತಿ ಉತ್ಪಾದನೆಯಾಗಿ ಬೆಳಕು ಸೂಸುವ ತಂತ್ರಜ್ಞಾನವು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.!!

ಇನ್ನು ಬೀದಿದೀಪಗಳ ಬದಲಾಗಿ ಬೀದಿಮರಗಳೇ ಬೆಳಕು ನೀಡಲಿವೆ!!

ಬೆಳಗುವ ಸಸ್ಯವನ್ನು ಸೃಷ್ಟಿಸುವ ಸಲುವಾಗಿ 'ಲೂಸಿಫೆರೇಸ್' ಎಂಬ ಒಂದು ವಿಧದ ಕಿಣ್ವವನ್ನು ಸಂಶೋಧಕರ ತಂಡವು ಬೆಳಕನ್ನು ಉತ್ಪಾದಿಸುವ ಸಾಧನವಾಗಿ ಪರಿವರ್ತಿಸಿದ್ದು, ಸಸ್ಯಗಳ ಎಲೆಗಳಿಗೆ 10 ನ್ಯಾನೊಮೀಟರ್‌ ವ್ಯಾಸದ ಸಿಲಿಕಾ ನ್ಯಾನೊಪಾರ್ಟಿಕಲ್ ವಾಹಕಗಳಲ್ಲಿ ಇದನ್ನು ಅಳವಡಿಸಲಾಗದೆ.!!

ಇನ್ನು ಬೀದಿದೀಪಗಳ ಬದಲಾಗಿ ಬೀದಿಮರಗಳೇ ಬೆಳಕು ನೀಡಲಿವೆ!!

ಈ ಕಿಣ್ವವು 'ಲೂಸಿಫೆರಿನ್' ಎಂಬ ಸಣ್ಣ ಕಣವಾಗಿ ಕೆಲಸ ಮಾಡಿ ಸಸ್ಯಗಳ ಮೂಲಕ ಬೆಳಕು ಹೊರಹಾಕಲು ಸಹಾಯ ಮಾಡುತ್ತದೆ.ಸಾಗರದ ಕೆಲ ಜಾತಿಯ ಮೀನುಗಳು ಹಾಗೂ ಮಿಂಚು ಹುಳುಗಳು ಬೆಳಕನ್ನು ಹೊರಸೂಸುತ್ತವೆ. ಇದೇ ರೀತಿ ಜೀವರಾಸಾಯನಿಕ ವಿಧಾನದಲ್ಲಿ ಈ ಕಿಣ್ವವು ಬೆಳಕನ್ನು ಹೊರಸೂಸುಸುತ್ತದೆ ಎಂದು ಸಂಶೂಧಕರು ತಿಳಿಸಿದ್ದಾರೆ.!!

ಓದಿರಿ: ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!

Best Mobiles in India

English summary
Illumination from nanobionic plants might one day replace some electrical lighting.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X