ಗೂಗಲ್‌ನ ಹೊಸ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಚಾಟಿಂಗ್ ವ್ಯವಸ್ಥೆ ಹೇಗೆ ಬದಲಾಗುತ್ತದೆ ಗೊತ್ತಾ!?

ಭವಿಷ್ಯದ ತಂತ್ರಜ್ಞಾನವನ್ನು ಈಗಲೇ ಊಹಿಸಿ ಅಭಿವೃದ್ದಿ ಮಾಡುವ ಕಲೆ ಗೂಗಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಿಗಳಿಗೆ ಮಾತ್ರ ಇದೆಯೇ ಎಂಬ ಪ್ರಶ್ನೆ ತಂತ್ರಜ್ಞಾನ ಪ್ರಪಂಚದಲ್ಲಿ ಹರಿದಾಡುತ್ತಿರುತ್ತದೆ.

|

ಭವಿಷ್ಯದ ತಂತ್ರಜ್ಞಾನವನ್ನು ಈಗಲೇ ಊಹಿಸಿ ಅಭಿವೃದ್ದಿ ಮಾಡುವ ಕಲೆ ಗೂಗಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಿಗಳಿಗೆ ಮಾತ್ರ ಇದೆಯೇ ಎಂಬ ಪ್ರಶ್ನೆ ತಂತ್ರಜ್ಞಾನ ಪ್ರಪಂಚದಲ್ಲಿ ಹರಿದಾಡುತ್ತಿರುತ್ತದೆ. ಅದಕ್ಕೆ ಪೂರಕವಾಗಿ ಗೂಗಲ್ ಅಭಿವೃದ್ದಿಪಡಿಸುವ ತಂತ್ರಜ್ಞಾನಗಳು ಕೂಡ ನಾವು ಯೋಚಿಸುವುದಕ್ಕಿಂತ ಹಲವು ಪಟ್ಟು ಮುಂದಿದೆ.!!

ಈಗಾಗಲೇ ಆನ್‌ಲೈನ್ ಪ್ರಪಂಚದ ದಿಗ್ಗಜನಾಗಿರುವ ಗೂಗಲ್ ಇದೀಗ ಕೃತಕ ಬುದ್ದಿಮತ್ತೆಯನ್ನು ತನ್ನ ಎಲ್ಲ ಸೇವೆಗಳಲ್ಲಿಯೂ ಅಳವಡಿಸಲು ಮುಂದಾಗಿದ್ದು, ಇ-ಮೇಲ್‌ಗೆ ಉತ್ತರ ನೀಡುವುದು ಕಷ್ಟ ಎನ್ನುವವರಿಗೆ ಸ್ನೇಹಿತರ ಜತೆ ಚಾಟ್ ಮಾಡುತ್ತಾ ಸುಸ್ತಾದವರಿಗೆ. 'ರಿಪ್ಲೈ' ಎಂಬ ಹೆಸರಿನ ಹೊಸ ಕಾರ್ಯವಿಧಾನ ತರಲು ಮುಂದಾಗಿದೆ.!!

ಭವಿಷ್ಯದಲ್ಲಿ ಚಾಟಿಂಗ್ ವ್ಯವಸ್ಥೆ ಹೇಗೆ ಬದಲಾಗುತ್ತದೆ ಗೊತ್ತಾ!?

ಹೌದು, ಈ ಬಗ್ಗೆ 'ದಿ ಗಾರ್ಡಿಯನ್ ಪತ್ರಿಕೆ' ವರದಿ ಮಾಡಿದ್ದು, ಭವಿಷ್ಯದಲ್ಲಿ ಚಾಟಿಂಗ್ ವ್ಯವಸ್ಥೆ ಹೀಗೂ ಬದಲಾಗಬಹುದೇ ಎಂಬ ಅನುಮಾನ ಕೂಡ ನಿಮಗೆ ಕಾಡಬಹುದು.! ಹಾಗಾದರೆ, ಏನಿದು 'ರಿಪ್ಲೈ' ಎಂಬ ಹೆಸರಿನ ಹೊಸ ಕಾರ್ಯವಿಧಾನ? ಇದರಿಂದ ಭವಿಷ್ಯದಲ್ಲಿ ಚಾಟಿಂಗ್ ವ್ಯವಸ್ಥೆ ಹೇಗೆ ಬದಲಾಗಬಹುದು ಎಂಬುದನ್ನು ಮುಂದೆ ತಿಳಿಯಿರಿ.!!

ಏನಿದು ‘ರಿಪ್ಲೈ’ ಕಾರ್ಯವಿಧಾನ!!

ಏನಿದು ‘ರಿಪ್ಲೈ’ ಕಾರ್ಯವಿಧಾನ!!

ಇ-ಮೇಲ್‌ಗಳಿಗೆ ರಿಫ್ಲೈ ಮಾಡಲು ಮರೆತರೆ, ಮೊಬೈಲ್‌ನಲ್ಲಿ ಸಂದೇಶ ಟೈಪ್ ಮಾಡುವುದು ಕಷ್ಟ ಎನ್ನುವವರಿಗೆ, ಚಾಟ್ ಮಾಡುತ್ತಾ ಸುಸ್ತಾಯಿತು ಎಂದಾದರೆ ಇದಕ್ಕೆ ‘ರಿಪ್ಲೈ' ಎಂಬ ಹೆಸರಿನ ಹೊಸ ಕಾರ್ಯವಿಧಾನ ಸಹಾಯ ಮಾಡಬಲ್ಲದು.! ಕೃತಕ ಬುದ್ಧಿಮತ್ತೆ (AI)ಯಿಂದ ಕಾರ್ಯ ನಿರ್ವಹಿಸುವ ಈ ಕಾರ್ಯವಿಧಾನವನ್ನು ನಿರ್ಮಿಸುವ ಕಾರ್ಯವನ್ನು ಗೂಗಲ್ ಆರಂಭಿಸಿದೆ.

ಚಾಟಿಂಗ್‌ಗಾಗಿ ಕೃತಕ ಬುದ್ಧಿಮತ್ತೆ!!

ಚಾಟಿಂಗ್‌ಗಾಗಿ ಕೃತಕ ಬುದ್ಧಿಮತ್ತೆ!!

ನಮ್ಮ ಇನ್‌ಬಾಕ್ಸ್‌ಗೆ ಬಂದಂತಹ ಸಂದೇಶಗಳಿಗೆ ಹೇಗೆ ಉತ್ತರ ನೀಡಬೇಕೆಂದು ಸೂಚಿಸುವ ತಂತ್ರಜ್ಞಾನವನ್ನು ಗೂಗಲ್ ಈಗಾಗಲೇ ಜನರಿಗೆ ನೀಡಿದೆ. ಹಾಗೆಯೇ, ಇದೇ ತಂತ್ರಜ್ಞಾನದೊಂದಿಗೆ ಕೃತಕ ಬುದ್ಧಿಮತ್ತೆ ಸೇರಿದರೆ ಯಾವ ರೀತಿ ಸಂದೇಶಗಳಿಗೆ ಮರು ಉತ್ತರ ಕೊಡಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.!!

ಎಲ್ಲಾ ಚಾಟಿಂಗ್ ಫ್ಲಾಟ್‌ಫಾರ್ಮ್‌

ಎಲ್ಲಾ ಚಾಟಿಂಗ್ ಫ್ಲಾಟ್‌ಫಾರ್ಮ್‌

ಗೂಗಲ್‍ ಆಪ್‍ಗಳಾದ ಜಿ-ಮೇಲ್, ಹ್ಯಾಂಗ್ ಔಟ್, ಗೂಗಲ್ ಅಲೋ, ವಾಟ್ಸ್ಆಪ್, ಫೇಸ್‌ಬುಕ್, ಸ್ಕೈಪ್ ನಂತಹ ಎಲ್ಲಾ ಚಾಟಿಂಗ್ ಫ್ಲಾಟ್‌ಫಾರ್ಮ್‌ಗಳಲ್ಲಿಯೂ ಸಂದೇಶಗಳಿಗೆ ಮರು ಉತ್ತರಿಸಲು ‘ರಿಪ್ಲೈ' ಕೃತಕ ಬುದ್ದಿಮತ್ತೆಯನ್ನು ತರಲಾಗುತ್ತಿದೆ. ಹಾಗಾಗಿ, ಎಲ್ಲಾ ಚಾಟಿಂಗ್ ಫ್ಲಾಟ್‌ಫಾರ್ಮ್‌ಗಳಲ್ಲಿಯೂ ರಿಪ್ಲೈ' ಕಾರ್ಯವನ್ನು ನಿರೀಕ್ಷಿಸಬಹುದಾಗಿದೆ.!!

ರಿಪ್ಲೈ ಕಾರ್ಯ ಹೇಗಿರುತ್ತದೆ ಗೊತ್ತಾ?

ರಿಪ್ಲೈ ಕಾರ್ಯ ಹೇಗಿರುತ್ತದೆ ಗೊತ್ತಾ?

ನೀವು ಮನೆಗೆ ತಲುಪಲು ಎಷ್ಟು ಹೊತ್ತಾಗುತ್ತದೆ ಎಂದು ಚಾಟ್ ಮೂಲಕ ಯಾರಾದರೂ ನಿಮ್ಮನ್ನು ಕೇಳಿದರೆ, ನಿಮ್ಮ ಲೊಕೇಷನ್, ನೀವು ಸಂಚರಿಸುತ್ತಿರುವ ಮಾರ್ಗ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಅದಕ್ಕೆ ತಕ್ಕಂತೆ ಉತ್ತರಗಳನ್ನು ನೀಡುವ ಕೃತಕಬುದ್ದಿಮತ್ತೆ ತಂತ್ರಜ್ಞಾನವನ್ನು ‘ರಿಪ್ಲೈ' ಹೊಂದಿರಲಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ತೊಂದರೆ ಕೊಡಬೇಡಿ ಎನ್ನುತ್ತದೆ.!!

ತೊಂದರೆ ಕೊಡಬೇಡಿ ಎನ್ನುತ್ತದೆ.!!

ಒಂದು ವೇಳೆ ನಿಮಗೆ ಚಾಟ್ ಮಾಡಲು ಇಷ್ಟವಿಲ್ಲ ಅಥವಾ ಕೆಲವು ಹೊತ್ತು ನೀವು ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತೀರಿ ಎಂದಾದರೆ ಅದನ್ನೂ ಮುಂಚಿತವಾಗಿ ನಿಮ್ಮ ಗೆಳೆಯರಿಗೆ ತಿಳಿಸಿ, ತೊಂದರೆ ಕೊಡಬೇಡಿ ಎಂದು ಈ ರೋಬೊ ಹೇಳುತ್ತದೆ.ಒಂದು ವೇಳೆ ನಿಮಗೆ ಸಂದೇಶ ಕಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನೂ ಈ ರೋಬೊ ಇನ್ನೊಬ್ಬರಿಗೆ ತಿಳಿಸುತ್ತದೆ.

Best Mobiles in India

English summary
Google's artificial intelligence are staggering. The phantoms within Google Photos can organize your pictures. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X