Subscribe to Gizbot

ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!

Written By:

ಪ್ರತಿಯೊಬ್ಬರ ಜೀವನದಲ್ಲಿಯೂ ಅವರೆ ಗಮನಿಸದಷ್ಟು ಬದಲಾವಣೆ ಮಾಡಿರುವ ವಿಜ್ಞಾನವು ಇಂದು ದಿನ ಬಳಕೆಯ ವಸ್ತುಗಳಿಂದ ಹಿಡಿದು ಉನ್ನತ ತಂತ್ರಜ್ಞಾನದವರೆಗೆ ಸಾಗಿದೆ. ವಿಜ್ಞಾನದ ನೆರವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಈಗ ಜೀವನವೇ ವಿಜ್ಞಾನ!!

ಇನ್ನು ವಿಶ್ವ ವಿಜ್ಞಾನ ಲೋಕಕ್ಕೆ ಭಾರತೀಯರ ಕೊಡುಗೆ ಏನು ಎಂದು ಪ್ರಶ್ನಿಸಿದರೆ ಎಲ್ಲರಿಗೂ ಥಟ್ಟನೆ ನೆನಪಾಗುವುದು 'ಸೊನ್ನೆ' ಎಂದು ಮಾತ್ರ! ಇಡೀ ವಿಶ್ವಕ್ಕೆ ಭಾರತೀಯರು ಸೊನ್ನೆಯನ್ನು ನೀಡಿರುವುದು ಅದ್ಬುತವೇ ಸರಿ. ಆದರೆ, ಸೊನ್ನೆಯೊಂದನ್ನು ಬಿಟ್ಟು ಭಾರತೀಯರು ವಿಶ್ವಕ್ಕೆ ನೀಡಿರುವ ಕೊಡುಗೆಗಳನ್ನು ನೆನಪಿಸಿಕೊಳ್ಳದೇ ಇರುವುದು ಮಾತ್ರ ದುರಂತ.!!

ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!

ಹಾಗೆಯೇ ವಿಜ್ಞಾನಿಗಳು ಎಂದರೆ ಐನ್‌ಸ್ಟೀನ್, ಐಸಾಕ್ ನ್ಯೂಟನ್ ಮತ್ತು ಸ್ಟೀಫನ್ ಹಾಕಿಂಗ್ ಎಂದು ಹೇಳುತ್ತಾರೆ ಹೊರತು ಭಾರತದ ಯಾವೊರ್ವ ಸಾಧಕ ವಿಜ್ಞಾನಿಯನ್ನು ಸಹ ನೆನೆಸಿಕೊಳ್ಳುವುದಿಲ್ಲ.! ಹಾಗಾಗಿ, ಭಾರತ ಕಂಡಂತಹ ಅಸಾಮಾನ್ಯ 7 ಜನ ಭಾರತೀಯ ವಿಜ್ಞಾನಿಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ ಎಂಬುದಕ್ಕೆ ಇಂದಿನ ಲೇಖನ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿ.ವಿ. ರಾಮನ್!!

ಸಿ.ವಿ. ರಾಮನ್!!

ವಿಶ್ವದ ಭೌತ ವಿಜ್ಞಾನಕ್ಕೆ ಭಾರೀ ಕೊಡುಗೆಯನ್ನು ನೀಡಿದ ಸಿ.ವಿ. ರಾಮನ್ ಅವರು 1888 ನವೆಂಬರ್ 7ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದರು. 1930ರಲ್ಲಿ . ಇವರು ಆವಿಷ್ಕರಿಸಿದ ರಾಮನ್ ಪರಿಣಾಮಗಳಿಗೆ ಭೌತಶಾಸ್ತ್ರ ವಿಭಾಗದಲ್ಲಿ 'ನೊಬೆಲ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1970 ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮೃತಪಟ್ಟರು.

ಸರ್.ಎಂ ವಿಶ್ವೇಶ್ವರಯ್ಯ!!

ಸರ್.ಎಂ ವಿಶ್ವೇಶ್ವರಯ್ಯ!!

1860ರಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದ ಕರ್ನಾಟಕದ ಸುಪುತ್ರ ಸರ್.ಎಂ ವಿಶ್ವೇಶ್ವರಯ್ಯನವರು ವಿಶ್ವದ ಪ್ರಖ್ಯಾತ ಇಂಜಿನಿಯರ್‌ಗಳಲ್ಲಿ ಒಬ್ಬರು ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕರ್ನಾಟಕದಲ್ಲಿ ಕೆಆರ್ಎಸ್ ನಿರ್ಮಿಸಿದ ಇವರು ದೇಶದಲ್ಲಿ ಕಾಲುವೆ ನೀರಾವರಿ ವ್ಯವಸ್ಥೆ ನಿರ್ಮಾಣದಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಏಪ್ರಿಲ್ 14 1962ರಲ್ಲಿ ಈ ಭಾರತ ರತ್ನ ತನ್ನ ಸೇವೆಯನ್ನು ನಿಲ್ಲಿಸಿತು.!!

ಎಸ್.ಚಂದ್ರಶೇಖರ್!!

ಎಸ್.ಚಂದ್ರಶೇಖರ್!!

ಕಪ್ಪುಕುಳಿಗಳ ಗಣಿತ ಸಿದ್ದಾಂತಕ್ಕಾಗಿ 1983ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಎಸ್.ಚಂದ್ರಶೇಖರ್ ಅವರು 1910 ಅಕ್ಟೋಬರ್ 19ರಂದು ಬ್ರಿಟಿಷ್ ಇಂಡಿಯಾದ ಆಳ್ವಿಕೆಯ ಲಾಹೋನ್‌ನಲ್ಲಿ ಜನಿಸಿದರು. ಕುಬ್ಜ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗೂ ಪ್ರಬಂಧಗಳನ್ನು ನೀಡಿದ ಇವರು ರಲ್ಲಿ ಚಿಕಾಗೋದಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ಮೃತಪಟ್ಟರು.

ಹೋಮಿ ಜೆ ಬಾಬಾ!!

ಹೋಮಿ ಜೆ ಬಾಬಾ!!

ಭಾರತದ ಮೊದಲ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜೆ ಬಾಬಾ ಅವರು 1909 ಅಕ್ಟೋಬರ್ 30 ರಂದು ಮುಂಬೈನಲ್ಲಿ ಜನಿಸಿದರು. ದೇಶದ ಪರಮಾಣು ಶಕ್ತಿಯ ಪಿತಾಮಹ ಎಂದೇ ಖ್ಯಾತರಾಗಿದ್ದ ಹೋಮಿ ಜೆ ಬಾಬಾ ಅವರು 1966 ಜನವರಿ 24ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟರು.

ಶ್ರೀನಿವಾಸನ್ ರಾಮಾನುಜಂ!!

ಶ್ರೀನಿವಾಸನ್ ರಾಮಾನುಜಂ!!

ಡಿಸೆಂಬರ್ 22, 1887 ನೇ ವರ್ಷ ತಮಿಳುನಾಡಿನಲ್ಲಿ ಭಾರತದ ಗಣಿತಶಾಸ್ತ್ರದ ಅದ್ಭುತ ಪ್ರತಿಭೆ ಶ್ರೀನಿವಾಸನ್ ರಾಮಾನುಜಂ ಅವರ ಜನನವಾಯಿತು. ಇಡೀ ವಿಶ್ವಕ್ಕೆ ಗಣೀತ ವಿಶ್ಲೇಷಣೆ, ಸಂಖ್ಯೆ ಸಿದ್ಧಾಂತ, ಅನಂತ ಸರಣಿ, ಮತ್ತು ಮುಂದುವರಿದ ಭಿನ್ನರಾಶಿಗಳ ಬಗ್ಗೆ ಹೆಚ್ಚಿನ ಕೊಡುಗೆ ನೀಡಿದ ಇವರು ಕೇವಲ 32ನೇ ವಯಸ್ಸಿಗೆ ವಿಧಿವಶವಾದರು.!!

ಜಗದೀಶ್ ಚಂದ್ರ ಬೋಸ್

ಜಗದೀಶ್ ಚಂದ್ರ ಬೋಸ್

ಸಸ್ಯಗಳಿಗೂ ಜೀವವಿದೆ ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟವರು ಅಸಾಮಾನ್ಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು. ನವೆಂಬರ್ 30 1858 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದ ಬೋಸ್ ಅವರು ಭೌತವಿಜ್ಞಾನ, ಜೀವಶಾಸ್ತ್ರ, ಸಸ್ಯಶಾಸ್ತ್ರಗಳ ಬಗ್ಗೆ ತಿಳಿದಿದ್ದರು. ವಿಶ್ವದ ಹಲವು ಖ್ಯಾತ ವಿಜ್ಞಾನಿಗಳೊಂದಿಗೆ ಇವರು ಸಂಪರ್ಕ ಹೊಂದಿದ್ದರು.

ಎ.ಪಿ.ಜೆ. ಅಬ್ದುಲ್ ಕಲಾಂ

ಎ.ಪಿ.ಜೆ. ಅಬ್ದುಲ್ ಕಲಾಂ

ಭಾರತದ ಮಾಜಿ ರಾಷ್ಟ್ರಪತಿಗಳಾದ ಕಲಾಂ ಅವರು ಭಾರತದ ಅಣು ವಿಜ್ಞಾನದ ಪ್ರಗತಿಯಲ್ಲಿ ಅಪಾರ ಸಾಧನೆ ಮಾಡಿದರು. ತಮಿಳುನಾಡಿನ ರಾಮೇಶ್ವರಂನಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಬಾಹ್ಯಕಾಶ ವಿಜ್ಞಾನದಲ್ಲಿ ಖ್ಯಾತನಾಮರಾಗಿದ್ದರು. ಭಾರತ ರತ್ನ ಪ್ರಶಸ್ತಿ ಪಡೆದ ಇವರು ಜುಲೈ 25, 2015ರಂದು ಮೃತರಾದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Science is an important part of our everyday life, even more so than we notice. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot