ಬಾಹ್ಯಾಕಾಶಕ್ಕೆ ಕಾರು ಕಳಿಸಿ ವಿವಾದಕ್ಕೀಡಾದ ''ಎಲಾನ್ ಮಸ್ಕ್''!!

  ಅಮೆರಿಕದ ಖಾಸಗಿ ಸಂಸ್ಥೆ ಸ್ಪೇಸ್‌ಎಕ್ಸ್‌ ಉಡಾವಣೆ ಮಾಡಿರುವ ರಾಕೆಟ್‌ನಲ್ಲಿ ಉಪಕರಣವಾಗಿ ಬಳಸಿದ್ದ ಕಾರು ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಅವರ ಮೇಲೆ ವಿವಾದಕ್ಕೆ ಕಾರಣವಾಗಿದೆ.! ಇದೇ ಫೆಬ್ರುವರಿ 6ರಂದು ಪ್ರಾಯೋಗಿಕ ಉಡಾವಣೆ ಮಾಡಿದ್ದ ರಾಕೆಟ್‌ನಲ್ಲಿದ್ದ ಎಲಾನ್ ಮಸ್ಕ್ ಅವರ ಕೆಂಪು ಬಣ್ಣದ ವಿವಾದವನ್ನು ಉಂಟುಮಾಡಿದೆ.!!

  ಬಾಹ್ಯಾಕಾಶಕ್ಕೆ ಕಾರು ಕಳಿಸಿ ವಿವಾದಕ್ಕೀಡಾದ ''ಎಲಾನ್ ಮಸ್ಕ್''!!

  ಹೌದು, ಸ್ಪೇಸ್‌ಎಕ್ಸ್‌ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಬಾಹ್ಯಾಕಾಶಕ್ಕೆ ಕಳುಹಿಸಿರುವ ಕಾರು ಬೃಹತ್ ಪ್ರಮಾಣದ ಬ್ಯಾಕ್ಟೀರಿಯಾ ಕೊಂಡೊಯ್ದಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.! ಇದು ಎಲಾನ್‌ಮಸ್ಕ್ ಮೇಲೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಾಗಾದರೆ, ಏನಿದು ವರದಿ? ವಿವಾದ ಹುಟ್ಟುಹಾಕಿರುವುದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಏನಿದು ಎಲಾನ್ ಮಸ್ಕ್ ಕಾರು ವಿವಾದ?

  ಸ್ಪೇಸ್‌ಎಕ್ಸ್‌ ಉಡಾವಣೆ ಮಾಡಿರುವ ರಾಕೆಟ್‌ನಲ್ಲಿ ಉಪಕರಣವಾಗಿ ಬಳಸಿದ್ದ ಕಾರು ಬೃಹತ್ ಪ್ರಮಾಣದ ಬ್ಯಾಕ್ಟೀರಿಯಾ ಕೊಂಡೊಯ್ದಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ ಕಾರಿನ ಹೊರಭಾಗವನ್ನು ವಿಕಿರಣದಿಂದ ಸ್ವಚ್ಛಗೊಳಿಸಿದ್ದರೂ ಕಾರಿನ ಎಂಜಿನ್‌ ಮಾತ್ರ ಗಲೀಜಾಗಿಯೇ ಇತ್ತು ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.!!

  ಕಾರು ಗಲೀಜಾಗಿದ್ದು ವಿವಾದ!!

  ಇದೀಗ ಉಡಾವಣೆಗೊಂಡಿರುವ ಸ್ಪೇಸ್‌ಎಕ್ಸ್‌ ರಾಕೆಟ್ ಇತರ ಗ್ರಹಗಳಲ್ಲಿ ಇಳಿಯುವಂತೆ ರೂಪಿಸಲಾಗಿತ್ತು. ಹಾಗಾಗಿ ಅದು ಸೂಕ್ಷ್ಮಾಣುಜೀವಿ ಮುಕ್ತವಾಗಿದೆ. ಆದರೆ, ರಾಕೆಟ್‌ನಲ್ಲಿ ಕಳುಹಿಸಿಕೊಟ್ಟ ಕಾರನ್ನು ಬೇರೆ ಗ್ರಹಗಳಲ್ಲಿ ಇಳಿಸುವ ಯಾವ ಯೋಜನೆಗಳೂ ಸಂಸ್ಥೆಗೆ ಇರಲಿಲ್ಲ. ಹಾಗಾಗಿ ಅದನ್ನು ಸ್ವಚ್ಛಗೊಳಿಸಿರಲಿಲ್ಲ ಎಂದು ವಿಜ್ಞಾನಿಗಳು ಆರೋಪಿಸಿದ್ದಾರೆ.!!

  ವಿವಾದವಾಗುತ್ತಿರುವುದು ಏಕೆ?

  ಬಾಹ್ಯಾಕಾಶಕ್ಕೆ ತೆರಳಿರುವ ರಾಕೆಟ್‌ನಲ್ಲಿ ಬ್ಯಾಕ್ಟೀರಿಯಾ ಉಳಿದುಕೊಂಡಿರುವ ಸಾಧ್ಯತೆ ಹೆಚ್ಚಿದೆ. ರಾಕೆಟ್ ಅನ್ನು ಸ್ವಚ್ಛಗೊಳಿಸುವುದು ಮತ್ತು ಸೂಕ್ಷ್ಮಾಣುಜೀವಿ ಮುಕ್ತಗೊಳಿಸುವುದು ಎರಡೂ ಬೇರೆ ಬೇರೆ ಪ್ರಕ್ರಿಯೆಗಳು ಎಂದು ಪ್ಯುರುಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇ ಮೆಲೋಶ್ ಅವರು ತಿಳಿಸಿದ್ದಾರೆ.!

  ಬ್ಯಾಕ್ಟೀರಿಯಾ ಇದ್ದರೆ ಏನಾಗಲಿದೆ?

  ಒಂದು ವೇಳೆ ರಾಕೆಟ್‌ನಲ್ಲಿದ್ದ ಕಾರು ಅನ್ಯ ಗ್ರಹದಲ್ಲಿ ಏನಾದರೂ ಇಳಿದರೆ ಟೆಸ್ಲಾ ಕಾರಿನೊಳಗೆ ಇದ್ದ ಬ್ಯಾಕ್ಟೀರಿಯಾಗಳು ಆ ಗ್ರಹದ ವಾತಾವರಣದಲ್ಲಿ ಸೇರಿಕೊಳ್ಳುತ್ತವೆ. ಇದರಿಂದ ಈ ಮೊದಲು ಅಲ್ಲಿ ಇರಬಹುದಾದ ಜೀವವೈವಿಧ್ಯವನ್ನು ಕಲುಷಿತವಾಗುವ ಅಪಾಯವಿದೆ ಎಂದು ಮೆಲೋಶ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.!!

  ವಿಶ್ವದ ಮೊದಲ ಮೊಬೈಲ್ 5 ಜಿ ಚಿಪ್ಸೆಟ್ ಬಿಡುಗಡೆ! .. ಡೇಟಾ ಸ್ಪೀಡ್ ಎಷ್ಟು ಗೊತ್ತಾ?

  2020ರ ವೇಳೆಗೆ ಭಾರತ ದೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ 5ಜಿ ಸಂಪರ್ಕ ಪೂರೈಕೆ ಪ್ರಾರಂಭವಾಗಲಿದ್ದು, ಅದಕ್ಕೆ ಪೂರಕವಾಗಿ 5Gಯ ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ 'ಬಾಲಾಂಗ್ 5ಜಿ01 ಚಿಪ್‌' ಅನ್ನು ಚೀನಾದ ಪ್ರಖ್ಯಾತ ಮೊಬೈಲ್ ತಯಾರಿಕ ಸಂಸ್ಥೆ ಹುವಾವೇ ಸಿದ್ಧಪಡಿಸಿರುವುದಾಗಿ ಘೋಷಿಸಿದೆ.!!

  ಬಾಲಾಂಗ್ '5ಜಿ01 ಚಿಪ್‌' ಮುಂದಿನ ತಲೆಮಾರಿನ(5G) ಸಂಪರ್ಕ ವ್ಯವಸ್ಥೆಗೆ ‍ಪೂರಕವಾಗಿದ್ದು, ಮೊಬೈಲ್‌ ಹಾಗೂ ಇತರೆ ಸಂಪರ್ಕ ಸಾಧನಗಳಲ್ಲಿ 5ಜಿಗೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸುವುದಾಗಿ ಹುವಾವೇ ಸಂಸ್ಥೆ ಹೇಳಿದೆ. ಹಾಗಾದರೆ, ಹುವಾವೆ ಸಿದ್ದಪಡಿಸಿರುವ '5ಜಿ01 ಚಿಪ್‌' ತಂತ್ರಜ್ಞಾನ ಹೇಗಿದೆ? '5ಜಿ01 ಚಿಪ್‌' ಡೇಟಾ ಸ್ಪೀಡ್ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ಹುವಾವೇ ‘5ಜಿ01 ಚಿಪ್‌’ !!

  ಬಾರ್ಸಿಲೋನಾದಲ್ಲಿ ನಡೆದ 2018ನೇ ಸಾಲಿನ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹುವಾವೇ ಕಂಪೆನಿ ‘5ಜಿ01 ಚಿಪ್‌'ತಯಾರಿಸಿರುವುದಾಗಿ ಘೋಷಿಸಿಕೊಂಡಿದೆ. ಈ ಚಿಪ್‌ಸೆಟ್ 5Gಯ ಮುಂದಿನ ಪೀಳಿಗೆಯ ಸೆಲ್ಯುಲರ್ ನೆಟ್‌ವರ್ಕ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ತಿಳಿಸಿದೆ.!!

  ಹುವಾವೇಗೆ ಮೊದಲ ಯಶಸ್ಸು!!

  5ಜಿ ಚಿಪ್‌ ತಯಾರಿಕೆಯಲ್ಲಿ ಇಂಟೆಲ್‌, ಕ್ವಾಲ್‌ಕಾಮ್‌ ಹಾಗೂ ಹುವೈ ಕಂಪೆನಿಗಳ ನಡುವೆ ಏರ್ಪಟ್ಟಿರುವ ಪೈಪೋಟಿಯಲ್ಲಿ ಹುವಾವೇ ಸಂಸ್ಥೆ ಮೊದಲಯಶಸ್ಸನ್ನು ಗಳಿಸಿದೆ. ವಿಶ್ವ ಮಾರುಕಟ್ಟೆಗೆ 5G ಸಪೋರ್ಟೆಡ್ ಚಿಪ್‌ಸೆಟ್ ಒದಗಿಸುವಲ್ಲಿ ಮುಂಚೂಣಿಗೆ ಬರಬೇಕು ಎನ್ನುವ ಹುವಾವೆ ಆಸೆ ಕೈಗೂಡಿದೆ.!!

  ವಿಶ್ವದ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್?

  5Gಯ ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ ‘ಬಾಲಾಂಗ್ 5ಜಿ01 ಚಿಪ್‌' ವಿಶ್ವದ ಮೊದಲ 3GPP 5G ಕಮರ್ಶಿಯಲ್ ಚಿಪ್‌ಸೆಟ್ ಆಗಿದೆ. ಬಹುಬೇಗ ಗ್ರಾಹಕ ಸೇವೆಗೆ ಲಭ್ಯವಿರುವ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್ ಇದಾಗಿದೆ ಎಂದು ಹುವಾವೆ ಕಂಪೆನಿ ಹೇಳಿಕೊಂಡಿದೆ!!

  5G ಡೌನ್‌ಲೋಡ್ ವೇಗ ಎಷ್ಟು?

  ಹುವಾವೇ ಕಂಪೆನಿ 'ತಯಾರಿಸಿರುವ ‘5ಜಿ01 ಚಿಪ್‌ ಸೆಟ್ ಮೂಲಕ ಪ್ರತಿ ಸೆಕೆಂಡ್‌ಗೆ 2.3 ಜಿಬಿ ವೇಗದಲ್ಲಿ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯ ಎಂದು ಹುವಾವೇ ಕಂಪೆನಿ ಕಂಪೆನಿ ತಿಳಿಸಿದೆ. ಪ್ರಸ್ತುತ 4G ಗಿಂತ ಹಲವು ಪಟ್ಟು ಹೆಚ್ಚು ವೇಗದಲ್ಲಿ ಇಂಟರ್‌ನೆಟ್ ಬಳಕೆ ವೇಗ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.!!

  ಇಂಡಿಯಾದಲ್ಲಿ 5G ಲೋಕ?

  ಕೆಲವೇ ದಿನಗಳ ಹಿಂದಷ್ಟೆ ಭಾರತದಲ್ಲಿ 5G ತಂತ್ರಜ್ಞಾನದ ಯಶಸ್ವಿ ಪರೀಕ್ಷೆಯಲ್ಲಿ ಏರ್‌ಟೆಲ್ ಜತೆ ಭಾಗಿಯಾಗಿದ್ದ ಹುವಾವೆ ಕಂಪೆನಿ ಇದೀಗ ಯಶಸ್ವಿ 5G ಚಿಪ್ಸೆಟ್ ತಯಾರಿಸಿರುವುದು ಇಂಡಿಯಾದಲ್ಲಿ ಬಹುಬೇಗ 5G ಬರುವ ವಿಶ್ವಾಸವನ್ನು ಮೂಡಿಸಿದೆ. ಹುವಾವೆ ಮತ್ತು ಏರ್‌ಟೆಲ್ ಸೇರಿ ಭಾರತದಲ್ಲಿ 5G ಬಾಗಿಲನ್ನು ತೆರೆಯುವ ನಿರೀಕ್ಷೆ ಇದೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Nasa slams Elon Musk’s SpaceX for launching a Tesla car into the heavens. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more