ನಿಮ್ಮ ಸಮಸ್ಯೆಗಳನ್ನು ಆಲಿಸಲು ಬರುತ್ತಿದೆ ಮಾನವೀಯ ರೋಬೋಟ್

|

ರೋಬೋಟ್ ಗಳು ಮನುಷ್ಯನಿಗೆ ಸಹಾಯ ಮಾಡುವ ಪರಿಕಲ್ಪನೆಗೆ ಸಾಕಾರ ರೂಪ ಸಿಕ್ಕಿ ಹಲವು ವರ್ಷಗಳೇ ಸಂದಿವೆ. ಆದರೂ ಆವಿಷ್ಕಾರಗಳು ಇನ್ನೂ ಬೇಕು ಮತ್ತೂ ಬೇಕು ಅನ್ನಿಸುತ್ತಿದೆ. ಇದೀಗ ಮತ್ತೊಂದು ರೋಬೋಟ್ ಮಾರುಕಟ್ಟೆಗೆ ಬಂದಿದೆ. ಅದು ಹೇಗಿದೆ ಎಂಬ ವಿವರ ಇಲ್ಲಿದೆ.

ಎಂಪಥೆಟಿಕ್ ರೋಬೋಟ್:

ಎಂಪಥೆಟಿಕ್ ರೋಬೋಟ್:

ಈ ರೋಬೋಟ್ ನ ಹೆಸರು ಫುರ್ ಹ್ಯಾಟ್. ಇದು ತನ್ನ ತಲೆಯನ್ನು ತಿರುಗಿಸುತ್ತದೆ. ನಗುತ್ತದೆ,ಫರಾನುಭೂತಿ ಮತ್ತು ನಮ್ಮ ಚರ್ಮದ ಉಷ್ಣತೆಯಂಯೆ ಇದರಲ್ಲೂ ಉಷ್ಣತೆಯನ್ನು ಹೊರಹಾಕುವ ಸಾಮರ್ಥ್ಯವಿದೆ. ನಾವು ಪ್ರಾಪಂಚಿಕವಾಗಿ ಹೆಚ್ಚು ತೆರೆದುಕೊಳ್ಳಲು ನಮಗೆ ನೆರವು ನೀಡುತ್ತದೆ.

ಈ ರೋಬೋಟ್ ಗೆ ಮೂರು ಆಯಾಮದ ಬಸ್ಟ್ ಜೊತೆಗೆ ಮಾನವನ ಮುಖದಂತಹ ಪ್ರೊಜೆಕ್ಷನ್ ನ್ನು ಇದು ಹೊಂದಿದೆ. ಇದರ ಪ್ರಮುಖ ಉದ್ದೇಶವೇನೆಂದರೆ ವಾಯ್ಸ್ ಅಸಿಸ್ಟೆಂಟ್ ಗಳಾದ ಸಿರಿ ಮತ್ತು ಅಲೆಕ್ಸಾ ಗಳೊಂದಿಗೆ ತಾನು ಮನುಷ್ಯರಂತೆ ಸಂವಹನ ನಡೆಸುವುವುದು ಮತ್ತು ನಾವು ಏನನ್ನು ಸೂಚಿಸಬೇಕು ಅಂದುಕೊಂಡಿದ್ದೀವೋ ಆ ಸೂಚ್ಯಂಕಗಳ ಮೇಲೊಂದು ಹಿಡಿತವನ್ನು ಸಾಧಿಸುವಿಕೆ ಇದರ ಉದ್ದೇಶವಾಗಿದೆ.

ನಿಷ್ಪಕ್ಷಪಾತ ಮತ್ತು ತೀರ್ಪು ಇಲ್ಲದೇ ಇರುವುದು:

ನಿಷ್ಪಕ್ಷಪಾತ ಮತ್ತು ತೀರ್ಪು ಇಲ್ಲದೇ ಇರುವುದು:

ಇದು ಮನುಷ್ಯ ಅಲ್ಲದೇ ಇರುವುದರಿಂದಾಗಿ ಹೆಚ್ಚು ನಿಖರವಾಗಿರುತ್ತದೆ ಮತ್ತು ಪಕ್ಷಪಾತದಿಂದ ಮುಕ್ತವಾಗಿರುತ್ತದೆ. ಈ ರೋಬೋಟ್ ಮನುಷ್ಯ ಹೆಚ್ಚು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವುದಕ್ಕೆ ನೆರವಾಗುತ್ತದೆ. ಇದರ ಸೃಷ್ಟಿಕರ್ತ ಹೇಳುವಂತೆ ಜನರು ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಸುಳ್ಳು ಹೇಳುತ್ತಿರುವ ಸಂದರ್ಬದಲ್ಲಿ ಇದು ವೈದ್ಯರಿಗೆ ಸತ್ಯಾಂಶ ತಿಳಿಸಲು ನೆರವಿಗೆ ಬರುತ್ತದೆಯಂತೆ.

ಅದೆಷ್ಟೋ ಸಂದರ್ಬದಲ್ಲಿ ಮನುಷ್ಯರು ಹೆಚ್ಚು ಮುಕ್ತವಾಗಿ ಮಾತನಾಡುತ್ತಾರೆ ಮತ್ತು ಯಾವುದೋ ಒಂದು ಸಮಸ್ಯೆಗೆ ಮನುಷ್ಯನಿಂದ ಪರಿಹಾರ ಸಿಗದೇ ಇರುವ ಸಂದರ್ಬದಲ್ಲಿ ಇದಕ್ಕೆ ರೋಬೋಟ್ ಇದ್ದಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅಂದುಕೊಳ್ಳುತ್ತಾರೆ. ನಾವು ಆ ಬಗ್ಗೆ ಸಂಶೋಧನೆ ನಡೆಸಿ ಇದನ್ನು ತಯಾರಿಸಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಫರ್ಹಾಟ್ ರೋಬೋಟಿಕ್ ನ ಮುಖ್ಯ ಕಾರ್ಯನಿರ್ವಾಹಕರಾದ ಸಮರ್ ಅಲ್ ಮೊಬಾಯೆದ್ .

ಈ ರೋಬೋಟ್ ನ ವ್ಯಕ್ತಿತ್ವವು ಅದರೊಂದಿಗೆ ಸಂವಾದ ನಡೆಸುವ ವ್ಯಕ್ತಿಯ ವ್ಯಕ್ತಿತ್ವದ ಪ್ರತಿಬಿಂಬವಾಗಿರುತ್ತದೆ ಮತ್ತು ಜನರು ತಾವೇ ತೀರ್ಪುಗಾರ ಎಂದು ಭಾವಿಸುವುದಿಲ್ಲ. ಹಾಗಾಗಿ ಇದು ಸಹಾಯಕವಾಗಿದೆ ಎಂದು ಹೇಳುತ್ತಾರೆ ಇದರ ಸೃಷ್ಟಿಕರ್ತ.

ಗೈಡಿಂಗ್ ಏಂಜೆಲ್( ಮಾರ್ಗದರ್ಶನದ ದೇವದೂತ) :

ಗೈಡಿಂಗ್ ಏಂಜೆಲ್( ಮಾರ್ಗದರ್ಶನದ ದೇವದೂತ) :

ಈ ರೋಬೋಟ್ ನ್ನು ಫ್ರ್ಯಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಬಹುಭಾಷೆಯ ಸಹಾಯಕ್ಕಾಗಿ ಬಳಸಲಾಗಿದೆ. ಇದು ಪ್ರಯಾಣಿಕರು ತಮ್ಮ ಮಾರ್ಗವನ್ನು ಕಂಡುಕೊಳ್ಳಲು ನೆರವು ನೀಡುತ್ತದೆ. ಅಷ್ಟೇ ಅಲ್ಲ ಗ್ರಾಹಕ ಸೇವಾ ತರಬೇತಿಯನ್ನು ಇದು ನೀಡುತ್ತದೆ. ಉದಾಹರಣೆಗೆ ಕಿರಿಕಿರಿ ಉಂಟುಮಾಡುವ ಗ್ರಾಹಕನನ್ನು ಕಂಟ್ರೋಲ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಮಾರ್ಗದರ್ಶಕನಂತೆ ಇದು ಕೆಲಸ ಮಾಡುತ್ತದೆ.

ವೈದ್ಯಕೀಯ ಸಲಹೆ:

ವೈದ್ಯಕೀಯ ಸಲಹೆ:

ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಾಗಿರುವ ಮರ್ಕ್ ಮತ್ತು ಫರ್ಹಾಟ್ ರೋಬೋಟಿಕ್ಸ್ ಬುಧವಾರ ಈ ರೋಬೋಟ್ ನ್ನು ಸ್ಟಾಕ್ಹೋಮ್ ನಲ್ಲಿ ಅನಾವರಣಗೊಳಿಸಿತು. ಈ ರೋಬೋಟ್ ಲೈಫ್ ಸ್ಟೈಲ್ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಕೇಳುತ್ತದೆ. ಮಧುಮೇಹ, ಮಧ್ಯಪಾನ, ಹೈಪೋಥೈರಾಯ್ಡಿಸಂಗೆ ಅಪಾಯ ಉಂಟಾಗುವುದನ್ನು ತಡೆಯುತ್ತದೆ. ಇದು ಇಂತಹ ರೋಗಿಗಳನ್ನು ಗುರುತಿಸಿ ನೀವು ರಕ್ತಪರೀಕ್ಷೆ ಮಾಡಿಸಬೇಕು ಮತ್ತು ವೈದ್ಯರ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯಬೇಕು ಎಂದು ತಿಳಿಸುತ್ತದೆ.

ಮನೋಭಾವಕ್ಕೆ ತಕ್ಕಂತೆ ಬಹು ವ್ಯಕ್ತಿತ್ವ:

ಮನೋಭಾವಕ್ಕೆ ತಕ್ಕಂತೆ ಬಹು ವ್ಯಕ್ತಿತ್ವ:

ಪ್ರತಿ ರೋಬೋಟ್ ಗೂ ಕೂಡ ತಾನು ಕೆಲಸ ಮಾಡುವ ಕೆಲಸಕ್ಕೆ ತಕ್ಕಂತಹ ವ್ಯಕ್ತಿತ್ವದ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ ಮೌಬೇಡ್ (Moubayed). ಫರ್ಹಾಟ್ ನ್ನು ನೀವು ಪುರುಷ ಅಥವಾ ಮಹಿಳೆ, ಮುದುಕ ಅಥವಾ ಮುದುಕಿ, ಬುದ್ಧಿವಂತಿಕೆಯ ಅಥವಾ ಗಂಭೀರ ಸ್ವಭಾವದ್ದು , ಯಾವುದು ಬೇಕಾದರೂ ಪರಿಗಣಿಸಿಕೊಳ್ಳಬಹುದು.

ರೋಬೋಟ್ ಗಳು ಹಲವು ರೀತಿಯ ಅಡೆತಡೆಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಮುಖವಾಗಿರುವುದು ಅಭಿವ್ಯಕ್ತಿಯ ವಿಚಾರ. ಇದಕ್ಕೆ ಬಹಳ ಮೃದುವಾಗಿದೆ, ಕಣ್ಣಿನ ಚಲನೆಯುಳ್ಳದ್ದಾಗಿದೆ, ತಲೆಯ ಚಲನೆಯುಳ್ಳ ದೇಹಾಕೃತಿ ಇದ್ದು ಉತ್ತಮ ಕೆಲಸಗಾರನಾಗಿದೆ ಎಂದು ಇದರ ತಯಾರಕ ಹೇಳುತ್ತಾರೆ.

Best Mobiles in India

Read more about:
English summary
Now a humane robot wants to hear your woes, see how

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X