Subscribe to Gizbot

ಮಾನವನ ಮನಸು ಅರಿಯುವ ತಂತ್ರಜ್ಞಾನ ಅಭಿವೃದ್ದಿಪಡಿಸಿದ್ದಾರೆ ವಿಜ್ಞಾನಿಗಳು!!

Written By:

ತಂತ್ರಜ್ಞಾನ ಏನನ್ನೂ ಬೇಕಾದರೂ ಮೀರಿಸಬಲ್ಲದೆ ಎನ್ನುವ ಪ್ರಶ್ನೆಯೊಂದನ್ನು ನೂತನ ಸಂಶೋಧನೆಯೊಂದು ಹುಟ್ಟುಹಾಕಿದೆ.! ಮಾನವನ ಮಿದುಳಿನ ತರಂಗಗಳನ್ನು ಬಳಸಿ ವ್ಯಕ್ತಿಯ ಯೋಚನೆಗೆ ಅನುಸಾರವಾಗಿ ಚಿತ್ರ ಸೃಷ್ಟಿಸುವ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ.!!

ಹೌದು, ಕೆನೆಡಾ ದೇಶದ ಟೊರಾಂಟೊ ಸ್ಕಾರ್‌ಬರೊ ವಿಶ್ವವಿದ್ಯಾಲಯದ ಡ್ಯಾನ್ ನೆಮ್ರಡೊವ್ ಎಂಬ ವಿಜ್ಞಾನಿ ಮಾನವನ ಮಿದುಳಿನ ತರಂಗಗಳನ್ನು ಬಳಸಿ ವ್ಯಕ್ತಿಯ ಯೋಚನೆಗೆ ಅನುಸಾರವಾಗಿ ಚಿತ್ರ ಸೃಷ್ಟಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ್ದಾರೆ ಎಂದು 'ಇ ನ್ಯೂರೊ' ನಿಯತಕಾಲಿಕೆ ಪ್ರಕಟಿಸಿದೆ.!!

ಮಾನವನ ಮನಸು ಅರಿಯುವ ತಂತ್ರಜ್ಞಾನ ಅಭಿವೃದ್ದಿಪಡಿಸಿದ್ದಾರೆ ವಿಜ್ಞಾನಿಗಳು!!

ಇಂತಹದೊಂದು ತಂತ್ರಜ್ಞಾನವನ್ನು ಕಂಡುಹಿಡಿಯಲು ಭಾರೀ ವರ್ಷಗಳಿಂದ ಪ್ರಯತ್ನ ಪಡುತ್ತಿದ್ದ ವಿಜ್ಷಾನಿಗಳಿಗೆ ಇದು ಸಂತೋಷದ ವಿಷಯವಾಗಿದೆ. ಹಾಗಾದರೆ, ಏನಿದು ಶಾಕಿಂಗ್ ಸಂಶೋಧನೆ? ಭವಿಷ್ಯದಲ್ಲಿ ಈ ಸಂಶೋಧನೆ ಉಪಯೋಗವೇನು? ತಂತ್ರಜ್ಞಾನ ಏನನ್ನೂ ಬೇಕಾದರೂ ಮೀರಿಸಬಲ್ಲದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ನೂತನ ಸಂಶೋಧನೆ?

ಏನಿದು ನೂತನ ಸಂಶೋಧನೆ?

ಮಾನವನ ಮಿದುಳಿನ ತರಂಗಗಳನ್ನು ಬಳಸಿ ವ್ಯಕ್ತಿಯ ಯೋಚನೆಗೆ ಅನುಸಾರವಾಗಿ ಚಿತ್ರ ಸೃಷ್ಟಿಸುವ ಹೊಸ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನವು ವ್ಯಕ್ತಿಯ ಯೋಚನೆ ಮತ್ತು ಮಿದುಳಿನ ತರಂಗಗಳನ್ನು ವಿಶ್ಲೇಷಿಸಿ, ವ್ಯಕ್ತಿಯ ಮನಸಿನಲ್ಲಿ ಸುಳಿಯುವ ಚಿತ್ರಗಳನ್ನು ಡಿಜಿಟಲ್‌ ರೂಪದಲ್ಲಿ ಪುನರ್‌ಸೃಷ್ಟಿ ಮಾಡುತ್ತದೆ.!!

ಮನಸನ್ನು ಅರಿಯುವುದು ಹೇಗೆ?

ಮನಸನ್ನು ಅರಿಯುವುದು ಹೇಗೆ?

ಮಿದುಳಿನ ತರಂಗಗಳನ್ನು ವಿಶ್ಲೇಷಿಸಿ, ವ್ಯಕ್ತಿಯ ಮನಸಿನಲ್ಲಿ ಸುಳಿಯುವ ಚಿತ್ರಗಳನ್ನು ಎಲೆಕ್ಟ್ರೊಎನ್‌ಸೆಫ್ಯಾಲೊಗ್ರಫಿ (ಇಇಜಿ) ಸಾಧನದ ದತ್ತಾಂಶ ಬಳಸಿ, ಡಿಜಿಟಲ್‌ ರೂಪದಲ್ಲಿ ಪುನರ್‌ಸೃಷ್ಟಿ ಮಾಡುತ್ತದೆ. ಆ ಮೂಲಕ ವ್ಯಕ್ತಿಯ ಮನಸಿನಲ್ಲಿ ಏನಾಗುತ್ತಿದೆ ಎಂಬುದರ ನೇರ ಪ್ರಾತ್ಯಕ್ಷಿಕೆ ಪಡೆಯಬಹುದು' ಎಂದು ನೆಮ್ರಡೊವ್ ತಿಳಿಸಿದ್ದಾರೆ.

ಅಧ್ಯಯನ ನಡೆದದ್ದು ಹೇಗೆ?

ಅಧ್ಯಯನ ನಡೆದದ್ದು ಹೇಗೆ?

ಮನಸು ಅರಿಯುವ ತಂತ್ರಜ್ಞಾನದ ಭಾಗವಾಗಿ ಪ್ರಯೋಗದಲ್ಲಿ ಭಾಗವಹಿಸಿದ್ದವರಿಗೆ ಇಇಜಿ ಸಾಧನ ಅಳವಡಿಸಿ ವಿವಿಧ ಮುಖಗಳ ಚಿತ್ರಗಳನ್ನು ತೋರಿಸಲಾಗಿದೆ. ನಂತರ ಅವರ ಮಿದುಳಿನಲ್ಲಿ ಆದ ಬದಲಾವಣೆ, ಪ್ರತಿಕ್ರಿಯೆ, ತರಂಗಗಳನ್ನು ಅಲ್ಗಾರಿದಮ್‌ ಆಧಾರಿತ ತಂತ್ರ ಬಳಸಿ ಅಧ್ಯಯನ ಮಾಡಲಾಗಿದೆ.!!

ಅಧ್ಯಯನದ ಪಲಿತಾಂಶವೇನು?

ಅಧ್ಯಯನದ ಪಲಿತಾಂಶವೇನು?

ಮನಸು ಅರಿಯುವ ಪ್ರಯೋಗದಲ್ಲಿ ಭಾಗವಹಿಸಿದ್ದವರಿಗೆ ಇಇಜಿ ಸಾಧನ ಅಳವಡಿಸಿ ವಿವಿಧ ಮುಖಗಳ ಚಿತ್ರಗಳನ್ನು ತೋರಿಸಲಾಗಿತ್ತು. ನಂತರ ಅವರ ಮಿದುಳಿನಲ್ಲಿ ಆದ ಬದಲಾವಣೆ, ಪ್ರತಿಕ್ರಿಯೆ, ತರಂಗಗಳನ್ನು ಅಲ್ಗಾರಿದಮ್‌ ಆಧಾರಿತ ತಂತ್ರ ಬಳಸಿ ಆಯಾ ಮುಖದ ಚಿತ್ರಗಳನ್ನು ಪುನರ್‌ ಸೃಷ್ಟಿಸಲಾಗಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಸಂಶೋಧನೆ ಉಪಯೋಗವೇನು?

ಸಂಶೋಧನೆ ಉಪಯೋಗವೇನು?

ಮನಸು ಅರಿಯುವ ತಂತ್ರಜ್ಞಾನ ಯಶಸ್ವಿಯಾದರೆ ಈ ತಂತ್ರಜ್ಞಾನದಿಂದ ಕಲ್ಪನೆ, ನೆನಪು, ಯೋಚನೆಗಳ ಅಧ್ಯಯನಕ್ಕೆ ಹೆಚ್ಚು ನೆರವಾಗಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಕ್ಷೇತ್ರ, ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಇಂತಹ ತಂತ್ರಜ್ಞಾನದ ಅವಶ್ಯಕತೆ ಕೂಡ ಹೆಚ್ಚಿದೆ.!!

ಓದಿರಿ:ನೋಕಿಯಾದ ಮೊದಲ 'ಆಂಡ್ರಾಯ್ಡ್ ಗೊ' ಸ್ಮಾರ್ಟ್‌ಫೋನ್ "ನೋಕಿಯಾ 1" ರಿಲೀಸ್!!..ಬೆಲೆ ಎಷ್ಟು ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Dan Nemrodov (left) and Professor Adrian Nestor (left) have developed a technique that can harness brain waves gathered by data. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot