ಬಾಹ್ಯಾಕಾಶಕ್ಕೆ ಹಾರಿದ ಫೆಡರ್‌ ರೋಬೋಟ್‌..! ವಿಪತ್ತು ನಿರ್ವಹಣೆಗೆ ಸಹಾಯಕ..!

By Gizbot Bureau
|

ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರತಿದಿನವು ಒಂದಲ್ಲ ಒಂದು ಸಂಶೋಧನೆ ನಡೆಯುತ್ತಲೆ ಇರುತ್ತದೆ. ಅಮೆರಿಕದ ಬಾಹ್ಯಾಕಾಶ ಸ್ಪರ್ಧಿ ಎಂದೇ ಕರೆಯುವ ರಷ್ಯಾ ಬಾಹ್ಯಾಕಾಶ ಸಂಸ್ಥೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮಾನವ ಗಾತ್ರದ ಹ್ಯೂಮನಾಯ್ಡ್ ರೋಬೋಟ್‌ನ್ನು ಹೊತ್ತ ಮಾನವರಹಿತ ರಾಕೆಟ್‌ನ್ನು ರಷ್ಯಾ ಗುರುವಾರ ನಭಕ್ಕೆ ಜಿಗಿಸಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳಿಗೆ ಸಹಾಯ ಮಾಡಲು 10 ದಿನಗಳ ಕಾಲದ ಕಲಿಕೆಯನ್ನು ಈ ರೋಬೋಟ್‌ಗೆ ನೀಡಲಾಗಿದ್ದು, ಸ್ಕೈಬಾಟ್ ಎಫ್ 850 ಎಂಬ ಗುರುತಿನ ಸಂಖ್ಯೆಯ ರೋಬೋಟ್‌ಗೆ ಫೆಡರ್ ಎಂದು ಹೆಸರಿಟ್ಟಿದ್ದು, ರಷ್ಯಾದಿಂದ ಬಾಹ್ಯಾಕಾಶಕ್ಕೆ ಮೊದಲ ಬಾರಿ ಕಳುಹಿಸಲ್ಪಟ್ಟಿದೆ.

ಸೆ.7 ರವರೆಗೆ ಕಾರ್ಯನಿರ್ವಹಣೆ

ಸೆ.7 ರವರೆಗೆ ಕಾರ್ಯನಿರ್ವಹಣೆ

ಆಗಸ್ಟ್‌ 22, ಮಾಸ್ಕೋ ಸಮಯ ಬೆಳಿಗ್ಗೆ 6.38ಕ್ಕೆ ಕಜಕಿಸ್ತಾನದಲ್ಲಿರುವ ರಷ್ಯಾದ ಬೈಕೊನೊರ್ ಕಾಸ್ಮೋಡ್ರೋಮ್‌ನಿಂದ ಫೆಡರ್‌ ರೋಬೋಟ್‌ ಹೊತ್ತ ಸೂಯೋಜ್‌ ರಾಕೆಟ್‌ ಉಡಾವಣೆಯಾಗಿದೆ. ಬಾಹ್ಯಾಕಾಶ ಕೇಂದ್ರದಲ್ಲಿ ಶನಿವಾರ ಇಳಿಯಲಿರುವ ರೋಬೋಟ್‌ ಸೆಪ್ಟೆಂಬರ್ 7 ರವರೆಗೆ ಕಾರ್ಯನಿರ್ವಹಿಸಲಿದೆ. ಸುಯೋಜ್‌ ಉಡಾವಣಾ ನೌಕೆಯನ್ನು ಸಾಮಾನ್ಯವಾಗಿ ಇಂತ ಪ್ರವಾಸಗಳಲ್ಲಿ ಬಳಸಲಾಗುತ್ತದೆ. ಆದರೆ, ಯಾವುದೇ ತುರ್ತು ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷಿಸಲು ಯಾವುದೇ ಮಾನವರು ನೌಕೆಯಲ್ಲಿ ಪ್ರಯಾಣಿಸುವುದಿಲ್ಲ. ಗಗನಯಾತ್ರಿಗಳ ಬದಲಿಗೆ ವಿಶೇಷವಾಗಿ ಹೊಂದಿಕೊಂಡ ಪೈಲಟ್‌ನ ಆಸನದಲ್ಲಿ ಫೆಡರ್ ಕುಳಿತುಕೊಳ್ಳುತ್ತದೆ.

180 ಸೆಂ.ಮೀ ಎತ್ತರ

180 ಸೆಂ.ಮೀ ಎತ್ತರ

ಬೆಳ್ಳಿ ವರ್ಣ ಹೊಂದಿರುವ ಮಾನವರೂಪದ ರೋಬೋಟ್‌ ಒಂದು ಮೀಟರ್ 80 ಸೆಂಟಿ ಮೀಟರ್ ಎತ್ತರ ಹೊಂದಿದ್ದು, 160 ಕೆ.ಜಿ ಗಾತ್ರ ಹೊಂದಿದೆ. ಫೆಡರ್‌ನ ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ವಿವರಿಸಿರುವಂತೆ ನೀರಿನ ಬಾಟಲಿ ತೆರೆಯುವಂತಹ ಹೊಸ ಕೌಶಲ್ಯಗಳನ್ನು ಕಲಿಯುತ್ತದೆ ಎನ್ನಲಾಗಿದ್ದು, ಕಡಿಮೆ ಗುರುತ್ವಾಕರ್ಷಣೆಯಲ್ಲಿ ಹಸ್ತಚಾಲಿತ ಕೌಶಲ್ಯಗಳನ್ನು ಪ್ರಯತ್ನಿಸುತ್ತದೆ.

ಕೌಶಲಗಳ ಕಲಿಕೆ

ಕೌಶಲಗಳ ಕಲಿಕೆ

ಫೆಡರ್ ವಿದ್ಯುತ್ ಕೇಬಲ್‌ಗಳನ್ನು ಜೋಡಿಸುವುದು ಮತ್ತು ಕಿತ್ತು ಹಾಕುವುದು, ಅಗ್ನಿಶಾಮುಕಕ್ಕೆ ಸ್ಕ್ರೂಡ್ರೈವರ್ ಮತ್ತು ಸ್ಪ್ಯಾನರ್‌ನಂತ ಗುಣಮಟ್ಟದ ವಸ್ತುಗಳನ್ನು ಬಳಸುವುಂತಹ ಕೌಶಲಗಳನ್ನು ಕಲಿಯುತ್ತದೆ ಎಂದು ರಷ್ಯಾದ ಬಾಹ್ಯಾಕಾಶ ಏಜೆನ್ಸಿಯ ನಿರೀಕ್ಷಿತ ಕಾರ್ಯಕ್ರಮಗಳು ಮತ್ತು ವಿಜ್ಞಾನ ನಿರ್ದೇಶಕ ಅಲೆಕ್ಸಾಂಡರ್ ಬ್ಲೋಶೆಂಕೊ ಹೇಳಿದ್ದಾರೆ. ಮಾನವನ ಚಲನೆಯನ್ನು ನಕಲಿಸುವ ಫೆಡರ್‌, ಗಗನಯಾತ್ರಿಗಳಿಗೆ ಅಥವಾ ಭೂಮಿಯ ಮೇಲಿನ ಜನರು ಅಪಾಯದಲ್ಲಿ ಸಿಲುಕಿರುವಾಗ ಸಹಾಯ ಮಾಡುವ ಕೌಶಲ ಹೊಂದಿದೆ.

ವಿಪತ್ತು ನಿರ್ವಹಣೆ

ವಿಪತ್ತು ನಿರ್ವಹಣೆ

ಹೆಚ್ಚಿನ ವಿಕಿರಣ ವಾತಾವರಣದಲ್ಲಿ ಕೆಲಸ ಮಾಡಲು, ಗಣಿಗಾರಿಕೆಗಳಲ್ಲಿನ ಅಪಾಯಕಾರಿ ವಿಪತ್ತು ಕಾರ್ಯಾಚರಣೆಗೆ ಫೆಡರ್ ಉಪಯೋಗಕ್ಕೆ ಬರಲಿದೆ ಎಂಬುದು ತಜ್ಞರ ವಾದವಾಗಿದೆ. ಕಳೆದ ತಿಂಗಳು ಐಎಸ್‌ಎಸ್‌ಗೆ ಸೇರ್ಪಡೆಯಾದ ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಸ್ಕವರ್ಟ್‌ಸೊವ್ ಅವರ ಮೇಲ್ವಿಚಾರಣೆಯಲ್ಲಿ ರೋಬೋಟ್ ಕಾರ್ಯಗಳನ್ನು ನಿರ್ವಹಿಸಲಿದೆ.

ಇದೇ ಮೊದಲಲ್ಲ

ಇದೇ ಮೊದಲಲ್ಲ

ಬಾಹ್ಯಾಕಾಶಕ್ಕೆ ರೋಬೋಟ್‌ ಹೋಗಿರುವುದು ಇದೇ ಮೊದಲಲ್ಲ. 2011 ರಲ್ಲಿ, ನಾಸಾ ಜನರಲ್ ಮೋಟಾರ್ಸ್‌ನೊಂದಿಗೆ ಅಭಿವೃದ್ಧಿಪಡಿಸಿದ ಹುಮನಾಯ್ಡ್ ರೋಬೋಟ್ 'ರೋಬೋನಾಟ್ 2' ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. 2013 ರಲ್ಲಿ, ಜಪಾನಿನ ಮೊದಲ ಐಎಸ್ಎಸ್‌ ಬಾಹ್ಯಾಕಾಶ ಕಮಾಂಡರ್ ಜೊತೆಗೆ ಕಿರೊಬೊ ಎಂಬ ಸಣ್ಣ ರೋಬೋಟ್‌ನ್ನು ಜಪಾನ್‌ ಕಳುಹಿಸಿತ್ತು. ಈ ರೋಬೋಟ್‌ನ್ನು ಟೊಯೋಟಾದೊಂದಿಗೆ ಅಭಿವೃದ್ಧಿಪಡಿಸಲಾಗಿತ್ತು.

Best Mobiles in India

Read more about:
English summary
Russia Sends Humanoid Robot, The Fedor For The First Time To The International Space Station.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X