Home
Scitech

ಭೂಮಿ ಬಿಟ್ಟು ಇತರೆ ಗ್ರಹಗಳಲ್ಲಿ ಸೂರ್ಯ ಹೇಗೆ ಕಾಣಿಸುತ್ತಾನೆ ಗೊತ್ತಾ?

ವಿಜ್ಞಾನದ ಪ್ರಪಂಚದಲ್ಲಿ ಹುಟ್ಟುವ ಪ್ರಶ್ನೆಗಳು ಮತ್ತು ಯೋಚನೆಗಳು ಇನ್ನೆಲ್ಲಿಯೂ ಹುಟ್ಟುವುದಿಲ್ಲ ಎನ್ನುವುದಕ್ಕೆ ವಿಜ್ಞಾನ ಪ್ರಪಂಚದ ಅನಂತತೆಯೇ ಕಾರಣ ಎನ್ನಬಹುದು.!!

ವಿಜ್ಞಾನದ ಪ್ರಪಂಚದಲ್ಲಿ ಹುಟ್ಟುವ ಪ್ರಶ್ನೆಗಳು ಮತ್ತು ಯೋಚನೆಗಳು ಇನ್ನೆಲ್ಲಿಯೂ ಹುಟ್ಟುವುದಿಲ್ಲ ಎನ್ನುವುದಕ್ಕೆ ವಿಜ್ಞಾನ ಪ್ರಪಂಚದ ಅನಂತತೆಯೇ ಕಾರಣ ಎನ್ನಬಹುದು. ಎಲ್ಲರಿಗೂ ಕೌತುಕವಾಗಿರುವ, ಬಿಡಿಸಲು ಒಗಟಾಗಿರುವ ಈ ವಿಜ್ಞಾನ ಪ್ರಪಂಚವು ಮಾನವ ಬಿಡಿಸಿದಷ್ಟು ತೆರೆದುಕೊಳ್ಳುವ ಪುಸ್ತಕವಿದ್ದಂತೆ.

ಈ ವಿಜ್ಞಾನ ಪುಸ್ತಕದಲ್ಲಿ ಮಾನವ ಪ್ರತಿದಿನವೂ ಒಂದೊಂದು ಹಾಳೆಯನ್ನು ತೆರೆಯುತ್ತಿದ್ದಾನೆ. ಹಾಳೆಗಳನ್ನು ತೆರೆದಷ್ಟು ಮತ್ತಷ್ಟು ಕುತೋಹಲಗಳು ಉಂಟಾಗುತ್ತವೆ. ಅವುಗಳಲ್ಲಿ ಒಂದು ಸೂರ್ಯೋದಯ. ಭೂಮಿಯ ಮೇಲೆ ಸೂರ್ಯೋದಯವನ್ನು ನೀವು ನೋಡಿದ್ದೀರಾ ಆದರೆ, ಇತರೆ ಗ್ರಹಗಳಿಂದ ಸೂರ್ಯ ಹೇಗೆ ಕಾಣಿಸುತ್ತದೆ ಗೊತ್ತಾ.?

ಭೂಮಿ ಬಿಟ್ಟು ಇತರೆ ಗ್ರಹಗಳಲ್ಲಿ ಸೂರ್ಯ ಹೇಗೆ ಕಾಣಿಸುತ್ತಾನೆ ಗೊತ್ತಾ?

ಹೌದು, ಭೂಮಿ ಬಿಟ್ಟು ಇತರೆ ಗ್ರಹಗಳಿಂದ ಸೂರ್ಯ ಹೇಗೆ ಕಾಣಿಸುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮಂಗಳ, ಬುಧ ಮತ್ತು ಶುಕ್ರಗ್ರಹಗಳ ಬಗ್ಗೆ ವಿಜ್ಞಾನಿಗಳು ಖಚಿತವಾಗಿ ಹೇಳಿದ್ದಾರೆ. ಹಾಗಾದರೆ, ಇತರೆ ಗ್ರಹಗಳಲ್ಲಿ ಸೂರ್ಯ ಹೇಗೆ ಕಾಣಿಸುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

1. ಬುಧ ಗ್ರಹ

1. ಬುಧ ಗ್ರಹ

ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿರುವ ಬುಧ ಗ್ರಹದಲ್ಲಿ ಸೂರ್ಯೋನನ್ನು ಭೂಮಿಯಲ್ಲಿ ಕಾಣಿಸುವುದಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಕಾಶಮಾನವಾಗಿ ನಾವು ಕಾಣಬಹುದು. ಪ್ರಕಾಶಮಾನವಾಗಿ ಮಾತ್ರವಲ್ಲದೇ ಭೂಮಿಗಿಂತ ಮೂರುಪಟ್ಟು ದೊಡ್ಡದಾಗಿಯೂ ಕಾಣುತ್ತಾನೆ.

2. ಶುಕ್ರ ಗ್ರಹ

2. ಶುಕ್ರ ಗ್ರಹ

ಭೂಮಿಗಿಂತಲೂ ಸೂರ್ಯನಿಗೆ ಹತ್ತಿರವಾಗಿರುವ ಮತ್ತೊಂದು ಗ್ರಹ ಶುಕ್ರದಲ್ಲಿ ಸೂರ್ಯ ಪ್ರಕಾಶಮಾನವಾಗಿರುವುದಿಲ್ಲ. ಸೂರ್ಯ ಮತ್ತು ಶುಕ್ರಗಳ ನಡುವೆ ಅನಿಲಗಳ ದಟ್ಟವಾದ ಮೋಡ ಇರುವುದರಿಂದ ಶುಕ್ರದಿಂದ ಸೂರ್ಯ ಪ್ರಕಾಶಮಾನವಾಗಿ ಕಾಣುವುದಿಲ್ಲ.

3. ಮಂಗಳ ಗ್ರಹ

3. ಮಂಗಳ ಗ್ರಹ

ಸೂರ್ಯ ಮತ್ತು ಮಂಗಳ ಗ್ರಹಗಳ ನಡುವೆ ಸುಮಾರು 230 ದಶಲಕ್ಷ ಕಿಲೋಮೀಟರ್ ದೂರವಿದೆ. ಜತೆಗೆ ಮಂಗಳನಲ್ಲಿ ಹೆಚ್ಚು ಧೂಳಿನ ಅಸ್ತಿತ್ವ ಇರುವುದರಿಂದ ಮಂಗಳದಿಂದ ಸೂರ್ಯನ ಗೋಚರತೆ ಅಸ್ಪಷ್ಟತೆಯಿಂದ ಕಾಣುತ್ತದೆ.

4. ಗುರು ಗ್ರಹ

4. ಗುರು ಗ್ರಹ

ನಮ್ಮ ಸೌರವ್ಯೂಹದ ಅತಿ ದೊಡ್ಡ ಗ್ರಹವಾದ ಗುರು ಗ್ರಹದ ಮೂಲಕ ಸೂರ್ಯ ಬಹಳ ಸುಂದರವಾಗಿ ಕಾಣುತ್ತಾನಂತೆ. ಸೂರ್ಯನಿಂದ ಬಹಳ ದೂರದಲ್ಲಿ ಗುರುಗ್ರಹವಿದ್ದರೂ ಕೂಡ ಅಲ್ಲಿನ ವಾತವರಣದಿಂದ ಸೂರ್ಯ ತಂಪಾಗಿ ಮತ್ತು ಸುಂದರವಾಗಿ ಕಾಣುತ್ತಾನೆ.

5. ಶನಿ ಗ್ರಹ

5. ಶನಿ ಗ್ರಹ

ಶನಿ ಗ್ರಹದಿಂದ ಕೂಡ ಸೂರ್ಯ ಅದ್ಭುತವಾಗಿ ಕಾಣುತ್ತಾನಂತೆ. ಶನಿಯ ವಾಯುಮಂಡಲದ ಪದರದಲ್ಲಿ ನೀರು ಮತ್ತು ಕೆಲವು ಅನಿಲಗಳ ಉಪಸ್ಥಿತಿಯಿಂದಾಗಿ ಸೂರ್ಯ ವಿಸ್ಮಯಕರವಾಗಿ ಕಾಣುತ್ತಾನಂತೆ. ಸೂರ್ಯನ ಕಿರಣಗಳು ಅಲ್ಲಿನ ವಾತಾವರಣಕ್ಕೆ ಅನೇಕ ಸೂರ್ಯಗಳ ಭ್ರಮೆಯನ್ನು ಉಂಟುಮಾಡುತ್ತದೆ.

6. ಏರಿಯಲ್, ಯುರೇನಸ್

6. ಏರಿಯಲ್, ಯುರೇನಸ್

ಏರಿಯಲ್ ಯುರೇನಸ್ ಗ್ರಹದ ಒಂದು ಚಂದ್ರನಾಗಿದ್ದು, ಇದು ಸೂರ್ಯನಿಂದ 2.8 ಶತಕೋಟಿ ಕಿಲೋಮೀಟರ್ ದೂರದಲ್ಲಿದೆ. ಏರಿಯಲ್‌ ಉಪಗ್ರಹದಿಂದ ಸೂರ್ಯ ಒಂದು ಸಣ್ಣ ನಕ್ಷತ್ರದಂತೆ ನಮಗೆ ಕಾಣುತ್ತಾನಂತೆ.

7. ಟ್ರಿಟಾನ್, ನೆಪ್ಚೂನ್

7. ಟ್ರಿಟಾನ್, ನೆಪ್ಚೂನ್

ನಾವು ಸೌರವ್ಯೂಹದಲ್ಲಿ ಮತ್ತಷ್ಟು ದೂರಕ್ಕೆ ಚಲಿಸಿದಾಗ ನೆಪ್ಚೂನ್ ಗ್ರಹದ ಅತಿದೊಡ್ಡ ಚಂದ್ರನ ಟ್ರೈಟಾನ್ ಅನ್ನು ತಲುಪುತ್ತೇವೆ. ಟೈಟಾನ್‌ ವಾತಾವರಣದಲ್ಲಿಯೂ ಧೂಳು ಇರುವುದರಿಂದ ಸೂರ್ಯನು ಟ್ರೈಟಾನ್‌ನಿಂದ ಅಸ್ಪಷ್ಟ ಸಣ್ಣ ಸಕ್ಷತ್ರದಂತೆ ಕಾಣುತ್ತಾನೆ.

8.ಫ್ಲೊಟೊ

8.ಫ್ಲೊಟೊ

ವಿಜ್ಞಾನಿಗಳು ಫ್ಲೊಟೊವನ್ನು ಒಂದು ಗ್ರಹವೆಂದು ಪರಿಗಣಿಸುವುದಿಲ್ಲ. ಆದರೂ, ಸೂರ್ಯನಿಂದ 6 ಶತಕೋಟಿ ಕಿಲೋಮೀಟರ್ ದೂರದಲ್ಲಿರುವ ಫ್ಲೊಟೊ ಗ್ರಹದಿಂದ ಸೂರ್ಯಪ್ರಕಾಶಮಾನವಾದ ಚಂದ್ರನಂತೆ ಕಾಣುತ್ತಾನಂತೆ.

Best Mobiles in India

English summary
A guy Ron Miller has worked hard for years so that you can know how sunrise look like from other planets. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+