ವೀಡಿಯೊದಲ್ಲಿನ ಬೆಕ್ಕನ್ನು ಮುದ್ದಾಡಲು ಹೊಸ ತಂತ್ರಜ್ಞಾನ; ಐಡಿವಿ!

By Suneel
|

ಟಿವಿಯಲ್ಲಿ ಕಾಣಿಸುವ ಯಾವುದೋ ಒಂದು ಮುದ್ದಿನ ಬೆಕ್ಕು, ನಾಯಿಗಳನ್ನು ಅವುಗಳ ಚಟುವಟಿಕೆ ನೋಡಿ ಮುದ್ದಾಡ ಬೇಕು ಅನಿಸುತ್ತೆ. ಹಾಗೆ ಒಮ್ಮೆ ಅದರ ತಲೆ ಮೇಲೆ ಪ್ರೀತಿಯಿಂದ ಒಂದು ಏಟು ಕೊಡಬೇಕು ಅನಿಸುತ್ತೆ. ಅದು ಸಾಧ್ಯನಾ? ಖಂಡಿತಾ ಇಲ್ಲ.

ಯೂಟ್ಯೂಬ್ ಓಪನ್‌ ಮಾಡಿ ಬೆಕ್ಕು, ಇತರೆ ಪ್ರಾಣಿಗಳ ಕ್ರೇಜಿ ವೀಡಿಯೊ ನೋಡುತ್ತಾ ಕುಳಿತರೆ ಸಮಯ ಕಳೆಯುವುದು ತಿಳಿಯಲ್ಲಾ, ಅವುಗಳ ಮುಗ್ಧ ಚಟುವಟಿಕೆಗಳನ್ನು ನೋಡುತ್ತ ಎಲ್ಲರೂ ಕಳೆದು ಹೋಗುತ್ತಾರೆ. ವೀಡಿಯೊ ನೋಡಿ ಅವುಗಳ ತಲೆ ನೇವರಿಸ ಬೇಕು ಅಂದು ಕೊಂಡ್ರೆ ಅದು ಸಾಧ್ಯವಾಗುವುದಿಲ್ಲ. ಈ ರೀತಿ ಸಾಧ್ಯವಿಲ್ಲ ಅಂತ ಎಷ್ಟು ದಿನ ತಾನೆ ಸುಮ್ಮನೆ ಇರೋದು. ಏನಾದ್ರು ಆಗ್ಲಿ ವೀಡಿಯೊದಲ್ಲಿ ನೋಡುವ ಪ್ರಾಣಿಗಳಿಗೆ ಅಲ್ಲೇ ಪ್ರೀತಿಯಿಂದ ಒಂದು ಏಟು ನೀಡಬೇಕು ಅಂತ ತೀರ್ಮಾನಿಸಿ ಉತ್ತರ ಕಂಡುಕೊಳ್ಳಲಾಗಿದೆ.

ಹೌದು, ಶೀಘ್ರದಲ್ಲಿ ನೀವು ವೀಡಿಯೊದಲ್ಲಿ ಕಾಣುವ ಯಾವುದೇ ವಸ್ತುಗಳನ್ನು ಟಚ್ ಮಾಡಬಹುದು. ವೀಡಿಯೊದಲ್ಲಿನ ಬೆಕ್ಕನ್ನು ಮುದ್ದಾಡ ಬೇಕೇ ಅದು ಸಹ ಶೀಘ್ರದಲ್ಲಿ ಸಾಧ್ಯವಾಗಲಿದೆ. ಎಂಐಟಿ ವಿಜ್ಞಾನಿಗಳು ಹೊಸ ಇಮೇಜಿಂಗ್ ತಂತ್ರವನ್ನು ಅಭಿವೃದ್ದಿಪಡಿಸುತ್ತಿದ್ದು, ವೀಡಿಯೊದಲ್ಲಿನ ವಸ್ತುಗಳನ್ನು ಟಚ್‌ ಮಾಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಲೈಫ್ ಟೈಮ್‌ ಕನ್ನಡಕದ ಬದಲು ಕಣ್ಣಿಗೆ ಸುರಕ್ಷೆ 'ಬಯೋನಿಕ್‌ ಲೆನ್ಸ್‌'ನಿಂದ!

ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ

ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ

ಸಾಂಪ್ರದಾಯಿಕ ಕ್ಯಾಮೆರಾಗಳು ಮತ್ತು ಕ್ರಮಾವಳಿಗಳನ್ನು ಬಳಸಿಕೊಂಡು ಅಭಿವೃದ್ದಿ ಪಡಿಸಲಾಗುತ್ತಿರುವ ತಂತ್ರವನ್ನು "ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ " ಎಂದು ಕರೆಯಲಾಗುತ್ತದೆ. ಸಣ್ಣದಾಗಿ ಕಾಣುವ, ಭಾಗಶಃ ಅಗೋಚರ ವೈಬ್ರೇಶನ್‌ ವಸ್ತುಗಳಿಂದ ಅನುಕರಣಿಯ ವೀಡಿಯೋ ರಚಿಸಲಾಗುತ್ತದೆ. ಈ ವೀಡಯೊದಲ್ಲಿ ಬಳಕೆದಾರರು ವಾಸ್ತವವಾಗಿ ವಸ್ತುಗಳನ್ನು ಟಚ್‌ ಮಾಡಿ ಸಂವಹನ ನಡೆಸಬಹುದು.

 ಹೊಸ ತಂತ್ರ

ಹೊಸ ತಂತ್ರ

"ಅಭಿವೃದ್ದಿಪಡಿಸಲಾಗುತ್ತಿರುವ ಹೊಸ ತಂತ್ರವು ವಸ್ತುಗಳ ಭೌತಿಕ ಚಟುವಟಿಕೆಗಳನ್ನು ಕ್ಯಾಪ್ಚರ್ ಮಾಡುವುದರ ಜೊತೆಗೆ ಅವುಗಳೊಂದಿಗೆ ವಾಸ್ತವವಾಗಿ ಸಂವಹನ ನಡೆಸಬಹುದು, ಆಟವಾಡಬಹುದು"ಎಂದು ಮೆಸ್ಸಾಚುಸೆಟ್‌ 'ಟೆಕ್ನಾಲಜಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಆರ್ಟಿಫೀಸಿಯಲ್‌ ಇಂಟೆಲಿಜೆನ್ಸ್ ಲ್ಯಾಬೋರೇಟರಿ'ಯ ಪಿಎಚ್‌ಡಿ ವಿದ್ಯಾರ್ಥಿ 'ಅಬೆ ಡೇವಿಸ್‌' ಹೇಳಿದ್ದಾರೆ.

ಅಬೆ ಡೇವಿಸ್

ಅಬೆ ಡೇವಿಸ್

'ವೀಡಿಯೊ ಪ್ರತಿಕ್ರಿಯೆ ತಯಾರಿಸುವುದರಿಂದ ಎಷ್ಟು ವಸ್ತುಗಳು ಉತ್ತರ ನೀಡುತ್ತವೆ ಎಂಬುದನ್ನು ಹೇಳಬಹುದು. ವೀಡಿಯೊಗಳೊಂದಿಗೆ ಸಮಯ ಕಳೆಯುವ ಹೊಸ ಮಾರ್ಗವನ್ನು ಅನ್ವೇಷಿಸಬಹುದು', ಎಂದು ಅಬೆ ಡೇವಿಸ್‌ ಹೇಳಿದ್ದಾರೆ.

ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ

ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ

'ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ' ಹಲವು ಉಪಯೋಗಗಳನ್ನು ಹೊಂದಿದ್ದು, ಸಿನಿಮಾ ತಯಾರಕರು ಹೊಸ ವಿವಿಧ ವಿಸುವಲ್‌ ಎಫೆಕ್ಟ್‌ಗಳಿಗೆ ಮತ್ತು ಸೌಂಡ್‌ಗಾಗಿ ಬಳಸಿಕೊಳ್ಳಬಹುದಾಗಿದೆಯಂತೆ.

ಫೋಕ್ಮನ್‌ ಗೋ ಉದಾಹರಣೆ

ವಾಸ್ತವವಾಗಿ ವಸ್ತುಗಳೊಂದಿಗೆ ಸಂವಹನ ನಡೆಸುವ ಹೊಸ ತಂತ್ರಕ್ಕೆ ಉದಾಹರಣೆಯಾಗಿ ಅಬೆ ಡೇವಿಸ್‌'ರವರು ಪೋಕ್ಮನ್‌ ಗೋ ಹೆಸರಿಸಿದ್ದಾರೆ. ಪೋಕ್ಮನ್‌ ಗೋ ಆಪ್‌ನಲ್ಲಿ ವಾಸ್ತವ ಪಾತ್ರವು ರಿಯಲ್‌ ವರ್ಲ್ಡ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ 'ಇಂಟೆರ್ಯಾಕ್ಟಿವ್‌ ಡೈನಾಮಿಕ್‌ ವೀಡಿಯೊ' ತಂತ್ರಜ್ಞಾನ ವಾಸ್ತವವಾಗಿ ಸಂವಹನ ನಡೆಸಲು ಅವಕಾಶ ಮಾಡಿಕೊಡುತ್ತದೆ.

3D ಮಾದರಿ

3D ಮಾದರಿ

3D ಮಾದರಿ ನಿರ್ಮಿಸುವ ಮೂಲಕ ವಸ್ತುವನ್ನು ಅನುಕರಿಸುವಂತೆ ಮಾಡುವುದು ಸಾಮಾನ್ಯವಾಗಿದೆ. ಅಲ್ಲದೇ ಇದು ಹೆಚ್ಚು ವೆಚ್ಚದಾಯಕ. ಅಲ್ಲದೇ 3D ಮಾದರಿಯ ಹೆಚ್ಚು ವಸ್ತುಗಳನ್ನು ನಿರ್ಮಿಸಲು ಅಸಾಧ್ಯವಾಗಿದೆ. ಆದ್ದರಿಂದ ಕ್ರಮಾವಳಿಗಳನ್ನು ವೀಡಿಯೊದಲ್ಲಿ ಅಸ್ತಿತ್ವಕ್ಕೆ ತರಲಾಗುತ್ತದೆ.

ಹೊಸ ತಂತ್ರಜ್ಞಾನ

ಹೊಸ ತಂತ್ರಜ್ಞಾನ

ಸಂಶೋಧನೆಯಲ್ಲಿ ತೋರಿಸಿದ ಪ್ರಕಾರ 5 ಸೆಕೆಂಡ್‌ಗಳ ವೀಡಿಯೊ ವಾಸ್ತವ ಕ್ರಮಾವಳಿಯ ಹೆಚ್ಚಿನ ಮಾಹಿತಿ ಹೊಂದಿದೆ. ವಸ್ತುಗಳನ್ನು ಅನುಕರಣೆ ಮಾಡುವಂತೆ ಮಾಡಲು ವೀಡಿಯೊ ಕ್ಲಿಪ್‌ 'ವೈಬ್ರೇಶನ್‌ ಮೋಡ್‌'ನಲ್ಲಿರುವುದನ್ನು ಟೀಮ್‌ ಪರಿಶೀಲನೆ ನಡೆಸುತ್ತದೆ. ಅಲ್ಲದೇ ವಿವಿಧ ಪ್ರಿಕ್ವೆನ್ಸಿಯಲ್ಲಿ ಪ್ರತಿ ಅನುಕರಣೆ ಆಧಾರಿತವಾಗಿ ಚಲನೆ ಇರುತ್ತದೆ. ವಿನ್ಯಾಸದ ಮಾದರಿಯಿಂದ ಸಂಶೋಧಕರು ವಸ್ತುವು ಹೇಗೆ ವಿವಿಧ ಸನ್ನಿವೇಶಗಳಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಹೇಳುತ್ತಾರೆ.

ಅಬೆ ಡೇವಿಸ್

ಅಬೆ ಡೇವಿಸ್

ಅಬೆ ಡೇವಿಸ್‌ ಮತ್ತು ಅವರ ಸಹದ್ಯೋಗಿಗಳು ಸರಳ ಮತ್ತು ಚತುರ ಮಾರ್ಗವನ್ನು ಡೈನಾಮಿಕ್‌ ಮಾಡೆಲ್‌ ಅನ್ನು ವಿಸ್ತರಿಸಲು ವೀಡಿಯೊದಲ್ಲಿ ಸಣ್ಣ ವೈಬ್ರೇಶನ್ ನೀಡಿದ್ದು, ಇಮೇಜ್‌ ಅನ್ನು ಆನಿಮೇಟ್‌ ಮಾಡುವುದು ಹೇಗೆ ಎಂದು ತಿಳಿಸಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಿಜ್ಞಾನಿಗಳಿಂದ ಸ್ಥೂಲಾಕಾಯ ಸಮಸ್ಯೆಗೆ ಅದ್ಭುತ ಪರಿಹಾರವಿಜ್ಞಾನಿಗಳಿಂದ ಸ್ಥೂಲಾಕಾಯ ಸಮಸ್ಯೆಗೆ ಅದ್ಭುತ ಪರಿಹಾರ

ಲೈಫ್ ಟೈಮ್‌ ಕನ್ನಡಕದ ಬದಲು ಕಣ್ಣಿಗೆ ಸುರಕ್ಷೆ 'ಬಯೋನಿಕ್‌ ಲೆನ್ಸ್‌'ನಿಂದ! ಲೈಫ್ ಟೈಮ್‌ ಕನ್ನಡಕದ ಬದಲು ಕಣ್ಣಿಗೆ ಸುರಕ್ಷೆ 'ಬಯೋನಿಕ್‌ ಲೆನ್ಸ್‌'ನಿಂದ!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Soon, you may 'touch' objects in videos! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X