ಇಯಾನ್ ಮಾಸ್ಕ್ ಸ್ಪೇಸ್ X ಗೆ ಸೆಡ್ಡು ಹೊಡೆಯಲಿದೆ ಇಸ್ರೋ..! ಇನ್ನೊಂದೇ ಹೆಜ್ಜೆ ಹಾರಲು..!

|

ಬಾಹ್ಯಾಕಾಶದ ಬಗ್ಗೆ ಎಲ್ಲಾ ದೇಶಗಳು ಸಾಕಷ್ಟು ತಲೆ ಕಡಿಸಿಕೊಂಡಿವೆ. ಇದೇ ಮಾದರಿಯಲ್ಲಿ ಖಾಸಗಿ ಒಡೆತನಕ್ಕೇ ಸೇರಿರುವ ಇಯಾನ್ ಮಾಸ್ಕ್ ನೇತೃತ್ವದ ಸ್ಪೇಸ್ X ಸಹ ಬಾಹ್ಯಾಕಾಶದಲ್ಲಿ ಸಾಕಷ್ಟು ಹೊಸ ಪ್ರಯತ್ನಗಳಿಗೆ ಮುಂದಾಗಿದೆ. ಇದೇ ಮಾದರಿಯಲ್ಲಿ ಭಾರತ ಸಹಾ ಬಾಹ್ಯಾಕಾಶ ವಿಭಾಗದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಖಾಸಗಿ ಕಂಪನಿಯೊಂದು ಮಾಡಿದ ಪ್ರಯತ್ನವನ್ನು ಇಸ್ರೋ ಸಹ ಮಾಡಲಿದೆ ಎನ್ನಲಾಗಿದೆ.

ಇಯಾನ್ ಮಾಸ್ಕ್ ಸ್ಪೇಸ್ X ಗೆ ಸೆಡ್ಡು ಹೊಡೆಯಲಿದೆ ಇಸ್ರೋ..!

ಈಗಾಗಲೇ ನಾಸಾಕ್ಕೆ ಸೆಡ್ಡು ಹೊಡೆದಿರುವ ಇಯಾನ್ ಮಾಸ್ಕ್ ಮಾಲೀಕತ್ವದ ಸ್ಪೇಸ್X, ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು, ಫಾಲ್ಕನ್ ಹೆವಿ ರಾಕೆಟ್ ಅನ್ನು ಯಶಸ್ವಿಯಾಗಿ ಹಾರಿಸಿದ್ದಲ್ಲದೇ, ಉಡಾವಣಾ ವಾಹನವನ್ನು ಮತ್ತೇ ಬಳಕೆ ಮಾಡಿಕೊಳ್ಳಲು ಸುರಕ್ಷಿತವಾಗಿ ವಾಪಸ್ಸು ಕರೆಸಿಕೊಂಡಿತ್ತು. ಈ ಹಿನ್ನಲೆ ಇಸ್ರೋ ಸಹ, ಸ್ಪೇಸ್X ಮಾದರಿಯಲ್ಲಿ ತನ್ನ ಉಡಾವಣಾ ವಾಹನವನ್ನು ಮರುಬಳಕೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ.

ಇಸ್ರೋ ಪರಿಚಯ:

ಇಸ್ರೋ ಪರಿಚಯ:

ಸರಕಾರಿ ಒಡೆತನಕ್ಕೆ ಸೇರಿರುವ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಝೇಶನ್, ಭಾರತ ಸರಕಾರದ ಅಂಗ ಸಂಸ್ಥೆಯಾಗಿದೆ, 1969ರಲ್ಲಿ ಕಾರ್ಯಚರಣೆಯನ್ನು ಆರಂಭಿಸಿದ್ದು. ವಾರ್ಷಿಕ 8936 ಬಜೆಟ್ ಅನ್ನು ಹೊಂದಿದೆ ಎನ್ನಲಾಗಿದೆ.

ಸ್ಪೇಸ್ X ಪರಿಚಯ:

ಸ್ಪೇಸ್ X ಪರಿಚಯ:

ಖಾಸಗಿ ಮಾಲೀಕತ್ವದ ಸ್ಪೇಸ್ Xನ CEO ಆಗಿ ಇಯಾನ್ ಮಾಸ್ಕ್ ಕಾರ್ಯನಿರ್ವಹಿಸುತ್ತಿದ್ದು, ಇದು 2002ರಲ್ಲಿ ಕಾರ್ಯರಂಭವನ್ನು ಮಾಡಿದೆ. ಒಟ್ಟು ರೂ.13.035 ಕೋಟಿ ಬಂಡವಾಳವನ್ನು ಹೊಂದಿದೆ ಎನ್ನಲಾಗಿದೆ.

ಇಸ್ರೋ ಸಾಧನೆ:

ಇಸ್ರೋ ಸಾಧನೆ:

ಇಸ್ರೋ ಇದುವರೆಗೂ 66 ಲಾಂಚ್ ಗಳನ್ನು ಮಾಡಿದ್ದು, 96 ಸ್ಪೆಸ್‌ ಕಾಫ್ಟ್‌ಗಳನ್ನು ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಸ್ಪೇಸ್ X 51 ಲಾಂಚ್ ಗಳನ್ನು ಮಾಡಿದೆ ಎನ್ನಲಾಗಿದೆ.

ಇಸ್ರೋ ಸಾಗುತ್ತಿರುವ ಹಾದಿ:

ಇಸ್ರೋ ಸಾಗುತ್ತಿರುವ ಹಾದಿ:

ಈಗಾಗಲೇ ಹಲವು ಹೊಸತನಗಳಿಗೆ ಸಾಕ್ಷಿಯಾಗಿರುವ ಇಸ್ರೋ, ರೀಯೂಸ್ ಮಾಡುವಂತಹ ಉಡಾವಣಾ ವಾಹನವನ್ನು ಅಭಿವೃದ್ಧಿ ಮಾಡಲು ಮುಂದಾಗಿದೆ. ಆದರೆ ಸ್ಪೇಸ್ X ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಶೀಘ್ರವೇ ಇಸ್ರೋ ಈ ಕಾರ್ಯದಲ್ಲಿ ಸಾಧುವಾಗಲಿದೆ.

ಇಸ್ರೋ ಬೆಸ್ಟ್:

ಇಸ್ರೋ ಬೆಸ್ಟ್:

ಇಸ್ರೋ ಖ್ಯಾತಿಯನ್ನು ಇಡೀ ಜಗತ್ತಿಗೆ ಸಾರಿದ ಪ್ರಯತ್ನ ಎಂದರೆ 'ಮಂಗಳಾಯಾನ'. ಮಂಗಳ ಅಂಗಳಕ್ಕೆ ಸ್ಯಾಟಿಲೈಟ್ ತಲುಪಿಸಿದ ಇಸ್ರೋ ಇದಕ್ಕಾಗಿ ಖರ್ಚು ಮಾಡಿದ್ದು, ಕೇವಲ ರೂ.450 ಕೋಟಿ ಮಾತ್ರವೇ. ಇಷ್ಟು ಕಡಿಮೆ ವೆಚ್ಚದಲ್ಲಿ ಈ ಮಟ್ಟದ ಸಾಧನೆ ಮಾಡಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

ಸ್ಪೇಸ್ X ಬೆಸ್ಟ್:

ಸ್ಪೇಸ್ X ಬೆಸ್ಟ್:

ಖಾಸಗಿ ಮಾಲೀಕತ್ವದಲ್ಲಿ ನಡೆಯುತ್ತಿರುವ ಮೊದಲ ಪ್ರಯತ್ನ ಇದಾಗಿದ್ದು, ಬಾಹ್ಯಾಕಾಶ ಯಾನದಲ್ಲಿಯೇ ಮೊದಲ ಬಾರಿಗೆ ಯೂಸ್ ಮಾಡುವಂತಹ ಉಡಾವಣಾ ವಾಹನವನ್ನು ಅಭಿವೃದ್ಧಿಗೊಳಿಸಿದ್ದು, ಅಲ್ಲದೇ ಅದನ್ನು ಯಶಸ್ವಿಯಾಗಿ ಪ್ರಯೋಗ ಸಹ ನಡೆಸಿದೆ ಎನ್ನಲಾಗಿದೆ. ಈ ಮಾದರಿಯನ್ನು ಇಸ್ರೋ ಪಾಲಿಸಲು ಯೋಜನೆ ಸಿದ್ಧಪಡಿಸಿದೆ.

ಸ್ಪೇಸ್ X  ಸಾಗುತ್ತಿರುವ ಹಾದಿ

ಸ್ಪೇಸ್ X ಸಾಗುತ್ತಿರುವ ಹಾದಿ

ಈಗಾಗಲೇ ಮಂಗಳಕ್ಕೆ ಮಾನವನನ್ನು ಕಳುಹಿಸಲು ಯೋಜನೆಯನ್ನು ರೂಪಿಸಿರುವ ಸ್ಪೇಸ್ X, ಇದಕ್ಕಾಗಿ ಇಸ್ರೋ ಮಾದರಿಯಲ್ಲಿ ರೂ.400 ಕೋಟಿಯ ಬಜೆಟ್ ನಲ್ಲಿ ಸಾಧಿಸುವುದು ಹೇಗೆ ಎಂಬುದರ ಕುರಿತು ಯೋಜನೆಯನ್ನು ಸಿದ್ಧ ಪಡಿಸುತ್ತಿದೆ ಎನ್ನಲಾಗಿದೆ.

Best Mobiles in India

English summary
SpaceX or ISRO, Who’s Winning the Race to Space?. to know more visit kannada.gixbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X