Subscribe to Gizbot

ಸ್ಟೀಫನ್‌ ಹಾಕಿಂಗ್ ಯಾರು?.ಅವರ ಕೆಲವು ಪ್ರಸಿದ್ಧ ಹೇಳಿಕೆಗಳಲ್ಲಿಯೇ ತಿಳಿಯಿರಿ!!

Written By:

ಸರ್‌ ಐಸಾಕ್ ನ್ಯೂಟನ್‌ ಮತ್ತು ಅಲ್ಬರ್ಟ್‌ ಐನ್‌ಸ್ಟೀನ್ ನಂತರ ಜಗತ್ತು ಕಂಡ ಅತ್ಯಂತ ಅಸಾಮಾನ್ಯ ವಿಜ್ಞಾನಿ ಎಂದುಪರಿಗಣಿಸಲಾಗಿದ್ದ ಸ್ಟೀಫನ್‌ ಹಾಕಿಂಗ್ ಅವರ ಕಾಲಘಟ್ಟ ಮುಗಿದಿದೆ.! ಐದು ದಶಕಗಳ ಕಾಲ ತಮ್ಮನ್ನು ಕಾಡುತ್ತಿದ್ದ ನರರೋಗದ ವಿರುದ್ಧ ಹಾಕಿಂಗ್ ನಡೆಸಿದ್ದ ಹೋರಾಟ ನೆನ್ನೆಯೇ ಕೊನೆಯಾಗಿದೆ.!!

ಬ್ರಹ್ಮಾಂಡದ ಉಗಮ, ಕಪ್ಪುರಂಧ್ರ ಸಿದ್ಧಾಂತ ಮತ್ತು ಬಿಗ್‌ ಬ್ಯಾಂಗ್ ಥಿಯರಿಗಳಿಂದ ಶತಮಾನದ ವಿಜ್ಞಾನಿ ಎಂದು ಕರೆಸಿಕೊಂಡ ಮತ್ತು ದೈಹಿಕ ನ್ಯೂನತೆಯ ನಡುವೆಯೂ ಅಸಾಮಾನ್ಯ ಜ್ಞಾನದಿಂದ ಜಗದ್ವಿಖ್ಯಾತರಾಗಿದ್ದ ಖಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್ ಕೇಂಬ್ರಿಡ್ಜ್‌ ನಗರದಲ್ಲಿ ತಮ್ಮ ನಿವಾಸದಲ್ಲಿ ಬುಧವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.!!

ಸ್ಟೀಫನ್‌ ಹಾಕಿಂಗ್ ಯಾರು?.ಅವರ ಕೆಲವು ಪ್ರಸಿದ್ಧ ಹೇಳಿಕೆಗಳಲ್ಲಿಯೇ ತಿಳಿಯಿರಿ!!

ಸಂಶೋಧನೆ, ಆವಿಷ್ಕಾರಗಳ ಹೊರತಾಗಿಯೂ ಸ್ಟೀಫನ್‌ ಹಾಕಿಂಗ್ ಅವರ ಹಾಸ್ಯಪ್ರಜ್ಞೆ ಮತ್ತು ಅವರ ಹೇಳಿಕೆಗಳು ಅವರನ್ನು ಈ ಪರಿ ಬೆಳೆಯುವಂತೆ ಮಾಡಿದವು ಎನ್ನಲಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಟೀಫನ್‌ ಹಾಕಿಂಗ್ ಅವರ ಕೆಲವು ಆಯ್ದ ಪ್ರಸಿದ್ಧ ಹೇಳಿಕೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮಿ ಮತ್ತು ಮನಕುಲ!!

ಭೂಮಿ ಮತ್ತು ಮನಕುಲ!!

ಈ ಭೂಮಿ ಮತ್ತು ಮನಕುಲ ಸದಾ ಜಾಗತಿಕ ತಾಪಮಾನ, ಅಣ್ವಸ್ತ್ರಗಳು, ಕೃತಕ ಬುದ್ಧಿಮತ್ತೆ, ಅಪಾಯಕಾರಿ ರೋಗಾಣುವಿನಂತಹ ಆತಂಕಗಳನ್ನು ಎದುರಿಸುತ್ತಲೇ ಬದುಕುತ್ತಿವೆ!

ಸಾವಿನ ಬಗ್ಗೆ ಸ್ಟೀಫನ್‌!!

ಸಾವಿನ ಬಗ್ಗೆ ಸ್ಟೀಫನ್‌!!

ನಾನು ಸಾವಿನ ಬಗ್ಗೆ ಹೆದರುವುದಿಲ್ಲ, ಆದರೆ ನಾನು ಸಾಯುವದಕ್ಕೂ ಸಹ ಇಚ್ಚಿಸುವುದಿಲ್ಲ. ಅದಕ್ಕೂ ಮೊದಲು ನಾನು ಮಾಡಲು ಬಯಸುತ್ತೇನೆ.!!

ಬ್ರಹ್ಮಾಂಡದ ಬಗ್ಗೆ ಸ್ಟೀಫನ್‌!!

ಬ್ರಹ್ಮಾಂಡದ ಬಗ್ಗೆ ಸ್ಟೀಫನ್‌!!

ನನ್ನ ಗುರಿ ತುಂಬಾ ಸರಳವಾಗಿದೆ. ನಾನು ಬ್ರಹ್ಮಾಂಡವನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಅಷ್ಟೇ. ಬ್ರಹ್ಮಾಂಡ ಏಕೆ ಮತ್ತು ಹೇಗೆ ಉಗಮವಾಗಿದೆ ಎಂದು ನಾನು ತಿಳಿದುಕೊಳ್ಳಬೇಕಿದೆ.!!

ಕೃತಕ ಬುದ್ಧಿಮತ್ತೆ!!

ಕೃತಕ ಬುದ್ಧಿಮತ್ತೆ!!

ಪುರಾತನ ಕಾಲದ ಕೃತಕ ಬುದ್ಧಿಮತ್ತೆಯಿಂದಲೇ ನಾವು ಅಸ್ತಿತ್ವ ಕಂಡುಕೊಂಡಿದ್ದೇವೆ. ಆದರೆ, ಹೊಸ ಕೃತಕ ಬುದ್ಧಿಮತ್ತೆಯು ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗಲಿದೆ

ರೋಗವೇ ಬೋನಸ್!!

ರೋಗವೇ ಬೋನಸ್!!

21ನೇ ವರ್ಷದಲ್ಲಿ ರೋಗ ಕಾಡಲು ಆರಂಭಿಸಿದಾಗ ನನ್ನ ಎಲ್ಲ ನಿರೀಕ್ಷೆಗಳು ಪಾತಾಳಕ್ಕೆ ಕುಸಿದವು. ಅಲ್ಲಿಂದ ಮುಂದೆ ದೊರೆತಿದ್ದೆಲ್ಲ ಬೋನಸ್ !!

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಬಾಹ್ಯಾಕಾಶ!!

ಬಾಹ್ಯಾಕಾಶ!!

ಬಾಹ್ಯಾಕಾಶ ಪ್ರವೇಶಿಸದಿದ್ದರೆ ಮಾನವ ಕುಲಕ್ಕೆ ಭವಿಷ್ಯ ಇಲ್ಲ.!!

ಓದಿರಿ:ಅಲಿಬಾಬ ಸೃಷ್ಟಿಕರ್ತ "ಜಾಕ್ ಮಾ" ಜೀವನವೇ ಒಂದು ರೋಚಕ ಕಥೆ.!!

ಓದಿರಿ:5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
“I’m not afraid of death, but I’m in no hurry to die. I have so much I want to do first.” to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot