ಕಾರ್ಟೊಸ್ಯಾಟ್ 2 ಉಪಗ್ರಹ ಯಶಸ್ವಿ ಉಡಾವಣೆ..ಭಾರತಕ್ಕೆ ಮತ್ತೊಂದು ಗರಿ!!

Written By:

ಇಂದು ಬೆಳಗ್ಗೆ 9.20 ರಲ್ಲಿ ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಕಾರ್ಟೊಸ್ಯಾಟ್ 2 ಸರಣಿಯ ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿದೆ. ಈ ಮೂಲಕ ಅಂತರಿಕ್ಷದಲ್ಲಿ ಭಾರತಕ್ಕೆ ಮತ್ತೊಂದು ಗರಿಸೇರಿದೆ.!!

ಕಾರ್ಟೊಸ್ಯಾಟ್ 2 ಸರಣಿಯ 712 ಕೆ.ಜಿಯ ಭೂ ವೀಕ್ಷಣಾ ಉಪಗ್ರಹ ಹಾಗೂ 30 ಸಣ್ಣ ಉಪಗ್ರಹಗಳು ಸೇರಿದಂತೆ ಎಲ್ಲಾ ಉಪಗ್ರಹಗಳನ್ನು ಸರಿಯಾದ ರೀತಿಯಲ್ಲಿ ಕಕ್ಷೆಗೆ ಸೇರಿಸುವಲ್ಲಿ ಇಸ್ರೊ ಯಶಸ್ವಿಯಾಗಿದೆ. ಹಾಗಾದರೆ, ಕಾರ್ಟೊಸ್ಯಾಟ್ 2 ಉಪಗ್ರಹ ಉಡಾವಣೆಯ ಉದ್ದೇಶವೇನು? ವಿಶೇಷತೆಗಳು ಯಾವುವು ಎಂಬುದನ್ನು ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಉಪಗ್ರಹಗಳು ಮಾತ್ರ ಭಾರತದ್ದು!!

ಎರಡು ಉಪಗ್ರಹಗಳು ಮಾತ್ರ ಭಾರತದ್ದು!!

ಯಶಸ್ವಿಯಾಗಿ ಕಕ್ಷೆ ಸೇರಿರುವ 31 ಉಪಗ್ರಹಗಳಲ್ಲಿ ಕೇವಲ ಎರಡು ಉಪಗ್ರಹಗಳು ಮಾತ್ರ ಭಾರತದ್ದು. 712 ಕೆ.ಜಿಯ ಕಾರ್ಟೊಸ್ಯಾಟ್-2 ಒಂದು ದೊಡ್ಡ ಮತ್ತು ಒಂದು ಸಣ್ಣ ಉಪಗ್ರಹಗಳ ಜತೆಗೆ 14 ದೇಶಗಳ 29 ಉಪಗ್ರಹಗಳನ್ನೂ ಇಸ್ರೊ ಕಕ್ಷೆಗೆ ಸೇರಿಸಿದೆ.!! ಜರ್ಮನಿ, ಫ್ರಾನ್ಸ್‌, ಅಮೆರಿಕ ಮತ್ತು ಬ್ರಿಟನ್‌ ಸೇರಿದಂತೆ ಹಲವು ದೇಶಗಳ 29 ಉಪಗ್ರಹಗಳು ಇದರಲ್ಲಿತ್ತು.!!

ಕಾರ್ಟೊಸ್ಯಾಟ್ 2 ಉಪಗ್ರಹದ ಉಪಯೋಗ

ಕಾರ್ಟೊಸ್ಯಾಟ್ 2 ಉಪಗ್ರಹದ ಉಪಯೋಗ

ಕರಾವಳಿ ಪ್ರದೇಶಗಳ ಭೂ ಗುರುತಿಸುವಿಕೆ, ಭೂಮಿ ಬಳಕೆಯಲ್ಲಿನ ಪರಿವರ್ತನೆ ಗುರುತಿಸುವಿಕೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಗಳಿಗೆ 712 ಕೆ.ಜಿಯ ಕಾರ್ಟೊಸ್ಯಾಟ್-2 ಭೂ ವೀಕ್ಷಣಾ ಉಪಗ್ರಹ ಬಳಕೆಯಾಗಲಿದ್ದು, ದೂರ ಸಂವೇದಿ ಉಪಗ್ರಹವಾಗಿ ಕಾರ್ಯನಿರ್ವಹಣೆ ನೀಡಲಿದೆ.!!

ಸೂರ್ಯನ ಬೆಳಕು ಸದಾ ಬೀಳುವ ಕಕ್ಷೆ

ಸೂರ್ಯನ ಬೆಳಕು ಸದಾ ಬೀಳುವ ಕಕ್ಷೆ

ಸದಾ ಒಂದೇ ರೀತಿಯಲ್ಲಿ ಸೂರ್ಯನ ಬೆಳಕು ಬೀಳುವ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸಲಾಗಿದ್ದು, ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ಕಳುಹಿಸುವ ರೀತಿಯಲ್ಲಿ ಉಪಗ್ರಹದ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗಿದೆ.! ಭೂಮಿಯಿಂದ 505ಕಿ.ಮೀ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸಲಾಗಿದೆ.!!

ಪಿಎಸ್ಎಲ್‌ವಿಯ 40ನೆ ಉಡಾವಣೆ!!

ಪಿಎಸ್ಎಲ್‌ವಿಯ 40ನೆ ಉಡಾವಣೆ!!

ಯಶಸ್ವಿಯಾಗಿ ಕಕ್ಷೆ ಸೇರಿರುವ ಕಾರ್ಟೊಸ್ಯಾಟ್ 2 ಉಡಾವಣೆಯೂ ಉಡಾವಣಾ ವಾಹಕ ಎಸ್ಎಲ್‌ವಿಯ 40ನೆ ಉಡಾವಣೆಯಾಹಗಿದ್ದು ಈ ಉಡಾವಣೆಯ ಮತ್ತೊಂದು ಮೈಲಿಗಲ್ಲಾಗಿದೆ.!!

ಓದಿರಿ:ಒಂದೇ ದಿನದಲ್ಲಿ ಪಾನ್‌ಕಾರ್ಡ್‌ ಪಡೆಯಲು ಬರುತ್ತಿದೆ 'ಆಪ್'!! ಯಾವುದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
In yet another masterful demonstration of its space prowess. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot