Subscribe to Gizbot

ಮೊದಲಬಾರಿ ಇಸ್ರೋ-ನಾಸಾ ನಿರ್ಮಿಸುತ್ತಿರುವ ಉಪಗ್ರಹದ ವಿಶೇಷತೆಗಳು ಹಲವು!!

Written By:

ಕೆಲವೇ ಕೆಲವು ವರ್ಷಗಳ ಹಿಂದೆ, ಮುಂದುವರೆದ ದೇಶಗಳಿಗೆ ಭಾರತ ಎಂದರೆ ಲೆಕ್ಕಕ್ಕಿರಲಿಲ್ಲ. ಒಂದು ಕ್ಷಿಪಣಿ ಅಭಿವೈದ್ಧಿಪಡಿಸಲು ಸಹ ಇತರ ದೇಶಗಳ ಬಳಿ ತಂತ್ರಜ್ಞಾನಕ್ಕೆ ಸಹಾಯ ಕೇಳುತ್ತಿದ್ದ ಭಾರತವನ್ನು, ಒಮ್ಮೆಲೆ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನೋಡಿದ ಸಾಧನೆ ಇಸ್ರೋಗೆ ಸಲ್ಲುತ್ತದೆ.!!

ಹೌದು, ಅದು 1992 ರ ಸಮಯ ಭಾರತವನ್ನು ಅತ್ಯಾಧುನಿಕ ಕ್ಷಿಪಣಿ ಅಭಿವೃದ್ಧಿಪಡಿಸುವುದರಿಂದ ತಡೆಯಲು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾಸಾಗೆ ನಿರ್ಬಂಧ ವಿಧಿಸಿದ್ದರು. ಅಲ್ಲದೇ ರಷ್ಯಾ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳದಿರುವಂತೆ ಮಾಡುವುದರಲ್ಲಿಯೂ ಯಶಸ್ವಿಯಾಗಿದ್ದರು.

ಆದರೆ, ಎರಡು ದಶಕಗಳ ನಂತರ ಪರಿಸ್ಥಿತಿ ಬದಲಾಗಿದ್ದು ಮಹತ್ವದ ಯೋಜನೆಯೊಂದಕ್ಕೆ ವಿಶ್ವದ ಎರಡು ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಾದ ನಾಸಾ ಹಾಗೂ ಇಸ್ರೋ ಕೈಜೋಡಿಸಿವೆ.!! ಹಾಗಾದರೆ, ಆ ಯೋಜನೆ ಯಾವುದು? ಏನು ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತ್ಯಾಧುನಿಕ ಉಪಗ್ರಹವನ್ನು ನಿರ್ಮಿಸಲು ಸಜ್ಜು!!

ಅತ್ಯಾಧುನಿಕ ಉಪಗ್ರಹವನ್ನು ನಿರ್ಮಿಸಲು ಸಜ್ಜು!!

ಅಮೆರಿಕಾ-ಭಾರತದ ಸಹಭಾಗಿತ್ವದಲ್ಲಿ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎನ್ಐಎಸ್ಎಆರ್) ಉಪಗ್ರಹ ತಯಾರಾಗಲಿದ್ದು, ಭೂಮಿಯ ಮೇಲೆ ನಿಗಾವಹಿಸಲು ಹಿಂದೆಂದಿಗಿಂತಲೂ ಅತ್ಯಾಧುನಿಕ ಉಪಗ್ರಹವನ್ನು ನಿರ್ಮಿಸಲು ನಾಸಾ ಹಾಗೂ ಇಸ್ರೋ ಮುಂದಾಗಿವೆ.

1.5 ಬಿಲಿಯನ್ ಡಾಲರ್ ವೆಚ್ಚ

1.5 ಬಿಲಿಯನ್ ಡಾಲರ್ ವೆಚ್ಚ

ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ ವಿಶ್ವದ ಅತ್ಯಂತ ದುಬಾರಿ ವೆಚ್ಚದ ಅರ್ತ್ ಇಮೇಜಿಂಗ್ ಉಪಗ್ರಹವಾಗಲಿದೆ ಎನ್ನಲಾಗಿದ್ದು, ಈ ಅತ್ಯಾಧುನಿಕ ಉಪಗ್ರಹ ನಿರ್ಮಿಸಲು ಸುಮಾರು 1.5 ಬಿಲಿಯನ್ ಡಾಲರ್ ವೆಚ್ಚವಾಗುತ್ತಿದೆ.!!

ಮೊದಲ ಯೋಜನೆ!!

ಮೊದಲ ಯೋಜನೆ!!

ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎನ್ಐಎಸ್ಎಆರ್) ಉಪಗ್ರಹ ತಯಾರಿಕೆ, ನಾಸಾ ಹಾಗೂ ಇಸ್ರೋದ ಸಹಭಾಗಿತ್ವದಲ್ಲಿ ತಯಾರಾಗುತ್ತಿರುವ ಮೊದಲ ಯೋಜನೆಯಾಗಿದ್ದು ಎರಡು ಫ್ರೀಕ್ವೆನ್ಸಿ ರಾಡಾರ್ ಹೊಂದಿದೆ ಎಂದು ವಿಜ್ಞಾನಿ ಪೌಲ್ ಎ ರೋಸನ್ ಹೇಳಿದ್ದಾರೆ.

ಎನ್ಐಎಸ್ಎಆರ್ ಉಪಗ್ರಹ ಉಡಾವಣೆ ಯಾವಾಗ?

ಎನ್ಐಎಸ್ಎಆರ್ ಉಪಗ್ರಹ ಉಡಾವಣೆ ಯಾವಾಗ?

ಎನ್ಐಎಸ್ಎಆರ್ ಉಪಗ್ರಹ 2021 ರಲ್ಲಿ ಭಾರತದಿಂದ ಉಡಾವಣೆಯಾಗಲಿದ್ದು, ಭಾರತ-ಅಮೆರಿಕಾ ಮೈತ್ರಿಯಲ್ಲಿ ಹೊಸ ಅಧ್ಯಾಯವೊಂದು ಈ ಉಪಗ್ರಹದಿಂದ ಕಾರ್ಯಾರಂಭವಾಘಲಿದೆ. ಮತ್ತೆ ಇಸ್ರೋ ಘನತೆ ವಿಶ್ವದಲ್ಲಿ ಕೇಳಿಸುತ್ತದೆ.!!

ಓದಿರಿ: ಬೆಂಗಳೂರಿನಲ್ಲಿ ತಯಾರಾದ ಆಪಲ್ ಐಫೋನ್ ಮಾರಾಟ ಆರಂಭ!! ಬೆಲೆ ಎಷ್ಟು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
NASA-ISRO Synthetic Aperture Radar satellite could possibly be the world's most expensive Earth imaging satellite.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot