ಕ್ಷಣ ಮಾತ್ರದಲ್ಲಿ ಸೇತುವೆ ನಿರ್ಮಿಸುವ ತಂತ್ರಜ್ಞಾನ: ಯೋಧರಿಗೆ ಸಲಾಮ್..!

|

ಯುದ್ದ ಸಂದರ್ಭದಲ್ಲಿ ನದಿದಾಟುವ ಪರಿಸ್ಥಿತಿಯಲ್ಲಿ ಯೋಧರು ಕ್ಷಣ ಮಾತ್ರದಲ್ಲಿ ಸೇತುವೆಯನ್ನು ನಿರ್ಮಿಸುತ್ತಾರೆ. ಕ್ಷಣ ಮಾತ್ರದಲ್ಲಿ ಸೇತುವೆ ನಿರ್ಮಿಸಿ ತಮ್ಮ ಯುದ್ದ ಸಾಮಾಗ್ರಿಗಳನ್ನು ಸಾಗಿಸುವ ಯೋಧರಿಗೆ ಆಧುನಿಕ ತಂತ್ರಜ್ಞಾನವು ನೆರವಾಗಲಿದೆ. ಈ ಹಿನ್ನಲೆಯಲ್ಲಿ ಯೋಧರು ಯಾವ ರೀತಿಯಲ್ಲಿ ಸೇತುವೆಯನ್ನು ನಿರ್ಮಿಸುತ್ತಾರೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಕ್ಷಣ ಮಾತ್ರದಲ್ಲಿ ಸೇತುವೆ ನಿರ್ಮಿಸುವ ತಂತ್ರಜ್ಞಾನ: ಯೋಧರಿಗೆ ಸಲಾಮ್..!

ರಸ್ತೆ ಮೇಲೆ ಓಡುವ ಮತ್ತು ನೀರಿನ ಮೇಲೆ ತೇಲುವ ಮಾದರಿಯಲ್ಲಿ ನಿರ್ಮಿಸಿರುವ ವಾಹನದಲ್ಲಿ ಮೊದಲಿಗೆ ಬರುವ ಯೋಧರು ಒಂದು ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಹರಿಯುವ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುವ ವಿಡಿಯೋವನ್ನು ನೀವು ನೋಡದರೆ ಯೋಧರ ಕಾರ್ಯವನ್ನು ಮೆಚ್ಚುಕೊಳ್ಳುವಿರಿ. ಯುದ್ದದ ಸಂದರ್ಭದಲ್ಲಿ ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವಿರಿ.

ಯೋಧರು ತಮ್ಮ ವಾಹನವನ್ನು ನದಿಗೆ ಇಳಿಸಿ ಒಂದಕ್ಕೊಂದು ಸೇರಿಸಿ, ತೇಲುವ ಸೇತುವೆಯೊಂದನ್ನು ನಿರ್ಮಿಸುತ್ತಾರೆ. ಇದರ ಮೇಲೆ ಸೇನಾ ವಾಹನಗಳು ನಿಧಾನವಾಗಿ ನದಿಯನ್ನು ದಾಟುತ್ತವೆ. ಎಲ್ಲಾ ವಾಹನಗಳು ಒಂದರ ಹಿಂದೆ ಒಂದು ಸಾಗಿದ ನಂತರದಲ್ಲಿ ಸೇತುವೆ ನಿರ್ಮಿಸಿದ ವಾಹನಗಳು ತಮ್ಮ ಸ್ಥಿತಿಗೆ ಮರಳಿ ಮತ್ತೆ ಮುಂದಿನ ಸ್ಥಳದಲ್ಲಿ ಸೇತುವೆಯನ್ನು ನಿರ್ಮಿಸಲು ಸಿದ್ದವಾಗಿ ಹೊರಡುತ್ತವೆ.

ಇಂತಹ ತಂತ್ರಜ್ಞಾನಗಳು ಹಾಗೂ ಯೋಧರ ಶ್ರಮ ಎರಡು ಸೇರಿದರೆ ಮಾತ್ರವೇ ಕಾರ್ಯವೊಂದು ಯಶಸ್ವಿಯಾಗಲಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ನೀವು ಒಮ್ಮೆ ನೋಡಿ..!

Best Mobiles in India

English summary
Troops Build Pontoon Bridge To Move Tanks Across River During. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X