ಶಾಕಿಂಗ್ ನ್ಯೂಸ್!!..ಚಂದ್ರನ ಮೇಲೆ ನೀರಿದೆ ಎಂದು ಭಾರತದ ಸಹಾಯದಿಂದ 'ನಾಸಾ' ಸ್ಪಷ್ಟನೆ!!

ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ಒ ಡಾಟಾ ವಿಶ್ಲೇಷಣೆ ಮೂಲಕ ನಾಸಾ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ನಾಸಾ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

|

ಚಂದ್ರನ ಮೇಲ್ಮೈಯಾದ್ಯಂತ ನೀರಿದೆ. ಆದರೆ, ಚಂದ್ರನ ಮೇಲ್ಮೈನಲ್ಲಿರುವ ನೀರಿನ ಅಂಶವನ್ನು ಸುಲಭವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವಾದರೂ ಒಟ್ಟಾರೆ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೆ ಬಿಡುಗಡೆ ಮಾಡಿದೆ.!!

ಹೌದು, ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ಒ ಡಾಟಾ ವಿಶ್ಲೇಷಣೆ ಮೂಲಕ ನಾಸಾ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ನಾಸಾ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಚಂದ್ರನಲ್ಲಿ ನೀರಿನ ಅಂಶಗಳಿರುವುದರ ಬಗ್ಗೆ ಈ ಹಿಂದಿನ ವಾದಗಳನ್ನು ಅಲ್ಲಗಳೆಯುವಂತಹ ಸಂಶೋಧನೆ ಇದು ಎಂದು ವಿಜ್ಞಾನಿಗಳು ತಿಳಸಿದ್ದಾರೆ

ಚಂದ್ರನ ಮೇಲೆ ನೀರಿದೆ ಎಂದು ಭಾರತದ ಸಹಾಯದಿಂದ 'ನಾಸಾ' ಸ್ಪಷ್ಟನೆ!!

ಕೆಲವೇ ದಿನಗಳ ಅಂತರದಲ್ಲಿ ಚಂದ್ರನ ಮೇಲೆ ನೀರಿರಬಹುದಾದ ಎರಡು ವಿಶ್ಲೇಷಣೆಗಳು ನಾಸಾ ವಿಜ್ಞಾನಿಗಳಿಂದ ಪ್ರಕಟವಾಗಿದ್ದು, ಈ ಮೊದಲು ಚಂದ್ರನ ಮೇಲಿನ ಪರ್ಸೀವರೆನ್ಸ್ ವ್ಯಾಲಿ ಜಾಗ ಅತ್ಯಂತ ನಿಗೂಢವಾಗಿದೆ ಎಂದು ಹೇಳಲಾಗಿತ್ತು. ಹಾಗಾದರೆ, ಎರಡೂ ವರದಿಗಳಲ್ಲಿಯೂ ಚಂದ್ರನ ಮೇಲೆ ನೀರು ಇದೆ ಎಂದು ಹೇಳಲು ಕಾರಣಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಚಂದ್ರನ ಮೇಲ್ಮೈಯಾದ್ಯಂತ ನೀರು!!

ಚಂದ್ರನ ಮೇಲ್ಮೈಯಾದ್ಯಂತ ನೀರು!!

ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಕಳಿಸಲಾಗಿದ್ದ ನಾಸಾದ ಎಲ್ಆರ್ ಉಪಕರಣದಿಂದ ಚಂದ್ರನ ಮೇಲ್ಮೈಯಾದ್ಯಂತ ನೀರು ಇರುವ ಅಂಶವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಚಂದ್ರಯಾನ-1 ಕ್ಕೆ ಬಳಸಿಕೊಳ್ಳಲಾಗಿದ್ದ ಚಂದ್ರನ ಖನಿಜ ಮಾಪಕದಿಂದ ಪಡೆಯಲಾಗಿದ್ದ ಡಾಟಾದ ಸಹಾಯದಿಂದ ಹೊಸ ಮಾಹಿತಿಯೊಂದು ಲಭ್ಯವಾಗಿದೆ.!!

ನಿಖರವಾಗಿದೆ  ಮಾಹಿತಿ!!

ನಿಖರವಾಗಿದೆ ಮಾಹಿತಿ!!

ಚಂದ್ರನಲ್ಲಿ ನೀರಿನ ಅಂಶಗಳಿರುವುದರ ಬಗ್ಗೆ ಈ ಹಿಂದಿನ ವಾದಗಳನ್ನು ಅಲ್ಲಗಳೆಯುವಂತಹ ಹೊಸ ಮಾಹಿತಿ ಇದಾಗಿದೆ ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಕೆಲವೇ ದಿನಗಳ ಹಿಂದಷ್ಟೆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನೀರಿರುವ ಸೂಚನೆ ಲಭಿಸಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಚಂದ್ರನ ಮೇಲ್ಮೈಯಾದ್ಯಂತ ನೀರಿದೆ ಎಂದು ಹೇಳಲಾಗಿದೆ.!!

ಕೆಲವೇ ದಿನಗಳಲ್ಲಿ ಎರಡು ವರದಿ!!

ಕೆಲವೇ ದಿನಗಳಲ್ಲಿ ಎರಡು ವರದಿ!!

ನಾಸಾದ ಎಲ್ಆರ್ ಉಪಕರಣದ ವರದಿ ಹಾಗೂ ಚಂದ್ರಯಾನ-1 ಖನಿಜ ಮಾಪಕದಿಂದ ಪಡೆಯಲಾದ ಮಾಹಿತಿಯಿಂದ ನೀರಿರುವ ಸೂಚನೆ ಸ್ಪಷ್ಟವಾಗಿದೆ ಎಂದು ಇದೀಗ ಹೇಳಲಾಗಿದೆ. ಆದರೆ, ಹಾಗೆಯೇ ಕೆಲವೇ ದಿನಗಳ ಹಿಂದಷ್ಟೆ ಚಂದ್ರನ ಮೇಲಿ ಪರ್ಸೀವರೆನ್ಸ್ ವ್ಯಾಲಿ ಎಂಬ ಪ್ರದೇಶ ನಿಗೂಢವಾಗಿದೆ ಎಂದು ಹೇಳಲಾಗಿತ್ತು.!!

ಪರ್ಸೀವರೆನ್ಸ್ ವ್ಯಾಲಿ

ಪರ್ಸೀವರೆನ್ಸ್ ವ್ಯಾಲಿ

ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಮಂಗಳ ಗ್ರಹದ 'ಪರ್ಸೀವರೆನ್ಸ್ ವ್ಯಾಲಿ' ಜಾಗದಲ್ಲಿ ಕಾಣಲಾಗಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ನಾಸಾ ವಿಜ್ಞಾನಿಗಳು ಈ ಮೊದಲು ಹೇಳಿದ್ದರು.!!

How To Link Aadhaar With EPF Account Without Login (KANNADA)
ನೀರಿನ ಮೂಲವನ್ನು ಕಂಡುಕೊಳ್ಳಬೇಕು!!

ನೀರಿನ ಮೂಲವನ್ನು ಕಂಡುಕೊಳ್ಳಬೇಕು!!

ಚಂದ್ರನ ಮೇಲೆ ನೀರಿರುವುದನ್ನು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಸಿದ್ದಾರೆ. ಈ ಹೊಸ ಸಂಶೋಧನೆ ಚಂದ್ರನಲ್ಲಿ ನೀರಿನ ಮೂಲವನ್ನು ಕಂಡುಕೊಳ್ಳಲು ಹಾಗೂ ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಿದೆ ಎಂದು ನಾಸಾ ವಿಜ್ಞಾನಿಗಳಿಂದ ತಿಳಿಸಿದ್ದಾರೆ.!!

ಪಿಎಫ್ ಖಾತೆಗೆ 'ಆಧಾರ್' ಜೋಡಣೆಗೆ ಚಾಲನೆ!!..ಈ ಒಂದೇ ಆಪ್‌ನಲ್ಲಿ ಮಾತ್ರ ಸೇವೆ!!ಪಿಎಫ್ ಖಾತೆಗೆ 'ಆಧಾರ್' ಜೋಡಣೆಗೆ ಚಾಲನೆ!!..ಈ ಒಂದೇ ಆಪ್‌ನಲ್ಲಿ ಮಾತ್ರ ಸೇವೆ!!

Best Mobiles in India

English summary
The water appears to be present day and night, though it's not necessarily easily accessible, said Nasa in a statement.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X