ಅನ್ಯಗ್ರಹ ಜೀವಿಗಳಿಂದ ಸಿಗ್ನಲ್!..ಸ್ಪಷ್ಟಪಡಿಸಿದ್ದರು ಪ್ರಸಿದ್ದ ವಿಜ್ಞಾನಿ!

ಮನುಷ್ಯನ ಯೋಚನಾ ಶಕ್ತಿ ಮತ್ತು ಅವನ ಕುತೋಹಲಕಾರಿ ವಿಚಾರದಿಂದಲೇ ಹುಟ್ಟಿದ 'ಏಲಿಯನ್'( ಅನ್ಯಗ್ರಹ ಜೀವಿ) ಎಂಬ ಪದಕ್ಕೆ ಮಿತಿಯೇ ಇಲ್ಲ ಎನ್ನಬಹುದು.

|

ಮಾನವನ ಊಹೆಗೂ ಸಿಲುಕದಷ್ಟು ಇರುವ ಈ ಅನಂತ ವಿಶ್ವದಲ್ಲಿ ಭೂಮಿಯದ್ದೇ ರೀತಿಯ ಇನ್ನೊಂದು ಭೂಮಿ ಇರಲು ಸಾಧ್ಯವಿದೆ. ಹಾಗಾಗಿ, ಮನುಷ್ಯನ ಯೋಚನಾ ಶಕ್ತಿ ಮತ್ತು ಅವನ ಕುತೋಹಲಕಾರಿ ವಿಚಾರದಿಂದಲೇ ಹುಟ್ಟಿದ 'ಏಲಿಯನ್'( ಅನ್ಯಗ್ರಹ ಜೀವಿ) ಎಂಬ ಪದಕ್ಕೆ ಮಿತಿಯೇ ಇಲ್ಲ ಎನ್ನಬಹುದು. ಈ ತಂತ್ರಜ್ಞಾನ ಅಭಿವೃಧ್ದಿ ಹೊಂದಿದಂತೆ ಈ ಏಲಿಯನ್‌ಗಳ ಹುಡುಕಾಟ ಕೂಡ ಹೆಚ್ಚಾಗುತ್ತದೆ.

ಸೂರ್ಯನಂತೆಯೇ ಇರುವ ಸಾವಿರಾರು ನಕ್ಷತ್ರಗಳ ಭೂ ವಾತಾವರಣ ಇದ್ದೇ ಇರುತ್ತದೆ ಎಂಬುದು ಜನಸಾಮಾನ್ಯರ ನಂಬಿಕೆಯಷ್ಟೇ ಅಲ್ಲ. ಈ ಅಖಂಡ ವಿಶ್ವದಲ್ಲಿ ಮತ್ತೊಂದು ಭೂಮಿ ಇದ್ದೇ ಇರುತ್ತದೆ ಎಂದು ಬಹುತೇಕ ಎಲ್ಲಾ ವಿಜ್ಞಾನಿಗಳ ನಂಬಿಕೆ ಕೂಡ ಆಗಿದೆ. ಮತ್ತು ಈ ನಂಬಿಕೆ ನೀರೆರೆಯುವಂತಹ ಸುದ್ದಿಯೂ ಸಿಕ್ಕಿದೆ. ಅನ್ಯಗ್ರಹ ಜೀವಿಗಳ ಬೇಟೆಯಲ್ಲಿ ಸಣ್ಣದೊಂದು ಸುಳುಹು ಸಿಕ್ಕಿದೆ.

ಅನ್ಯಗ್ರಹ ಜೀವಿಗಳಿಂದ ಸಿಗ್ನಲ್!..ಸ್ಪಷ್ಟಪಡಿಸಿದ್ದರು ಪ್ರಸಿದ್ದ ವಿಜ್ಞಾನಿ!

ಹೌದು, ಜಗತ್ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ಸ್ಥಾಪಿಸಿರುವ 'ಬ್ರೇಕ್ ತ್ರೂ ಲಿಸನ್‌ ಪ್ರಾಜೆಕ್ಟ್' ಮೂರು ಬಿಲಿಯನ್‌ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ 15 ನಿಗೂಢ ರೇಡಿಯೊ ಸಿಗ್ನಲ್‌ಗಳನ್ನು ಗ್ರಹಿಸಿ ದಾಖಲಿಸಿದೆ. ಹಾಗಾದರೆ, ಆ ವರದಿ ಏನು? ಇದರಿಂದ ಏಲಿಯನ್‌ ವಿಷಯಕ್ಕೆ ಜೀವ ಬಂದಿದ್ದೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ರೇಡಿಯೋ ಸಂದೇಶ

ಏನಿದು ರೇಡಿಯೋ ಸಂದೇಶ

ಅನಂತ ಪ್ರದೇಶಗಳಿಗೆ ಭೂಮಿಯಿಂದ ಸಂದೇಶಗಳನ್ನು ಕಳುಹಿಸಲು ವಿಜ್ಞಾನಿಗಳು ಈ ರೇಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಈ ರೇಡಿಯೋ ಸಂದೇಶಗಳು ಅನಂತ ಪ್ರದೇಶಗಳ ವರೆಗೂ ತಲುಪುವ ಸಾಮರ್ಥ್ಯ ಹೊಂದಿದ್ದು, ಇವುಗಳಿಗೆ ಬುದ್ದಿವಂತ ಏಲಿಯನ್‌ಗಳು ಏನಾದರೂ ಇದ್ದರೆ ಪ್ರತಿಕ್ರಿಯೆ ನೀಡುತ್ತವೆ ಎಂಬುದು ವಿಜ್ಞಾನಿಗಳ ಆಶಯ.

ರೇಡಿಯೊ ಸಿಗ್ನಲ್‌ಗಳನ್ನು ಗ್ರಹಿಸಿದೆ!

ರೇಡಿಯೊ ಸಿಗ್ನಲ್‌ಗಳನ್ನು ಗ್ರಹಿಸಿದೆ!

ಸ್ಟೀಫನ್ ಹಾಕಿಂಗ್ ಅವರು ಸ್ಥಾಪಿಸಿರುವ 'ಬ್ರೇಕ್ ತ್ರೂ ಲಿಸನ್' ಮೂರು ಬಿಲಿಯನ್‌ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ 15 ನಿಗೂಢ ರೇಡಿಯೊ ಸಿಗ್ನಲ್‌ಗಳನ್ನು ಕೇವಲ ಐದುಗಂಟೆಗಳ ಅವಧಿಯಲ್ಲಿ ಗ್ರಹಿಸಿ ದಾಖಲಿಸಿದೆ. ಇವುಗಳು ಅತಿಸೂಕ್ಷ ಸಂದೇಶಗಳಾಗಿದ್ದು, ಅನ್ಯಗ್ರಹ ಜೀವಿಗಳ ಬಗ್ಗೆ ಕುತೋಹಲ ಗರಿಗೆದರಿದೆ.

ಸಂದೇಶಗಳು ಸ್ವೀಕೃತವಾಗಿದ್ದೆಲ್ಲಿ?

ಸಂದೇಶಗಳು ಸ್ವೀಕೃತವಾಗಿದ್ದೆಲ್ಲಿ?

ಆಗಸ್ಟ್ 26ರಂದು ಶನಿವಾರ ಪಶ್ಚಿಮ ವರ್ಜೀನಿಯಾದಲ್ಲಿರುವ ಗ್ರೀನ್ ಬ್ಯಾಂಕ್ ಟೆಲಿಸ್ಕೋಪ್‌ನಲ್ಲಿ ರೇಡಿಯೋ ಸಂದೇಶಗಳು ಸ್ವೀಕೃತವಾಗಿದೆ, ಮೂರು ಬಿಲಿಯನ್‌ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ 15 ನಿಗೂಢ ರೇಡಿಯೊ ಸಿಗ್ನಲ್‌ಗಳನ್ನು ಗ್ರೀನ್ ಪೀಕ್‌ ಟೆಲಿಸ್ಕೋಪ್ ಗ್ರಹಿಸಿ ದಾಖಲಿಸಿದೆ.

ಸ್ಟೀಫನ್ ಹಾಕಿಂಗ್ ಹೇಳಿದ್ದರು.

ಸ್ಟೀಫನ್ ಹಾಕಿಂಗ್ ಹೇಳಿದ್ದರು.

ಇತ್ತೀಚಿಗಷ್ಟೇ ಇಹಲೋಕ ತ್ಯಜಿಸಿದಜಗತ್ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅನ್ಯಗ್ರಹ ಜೀವಿಗಳಿಂದಲೇ ಈ ಸಂದೇಶಗಳು ಬರುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದರು. ವಿಶ್ವದ ಇನ್ನೊಂದೆಡೆ ನಮ್ಮಂತೆಯೇ ಏಲಿಯನ್ ಹುಡುಕಾಟ ನಡೆಯುತ್ತಿದೆ. ಅದರ ಮೂಲಕವೇ ರೇಡಿಯೊ ಸಿಗ್ನಲ್‌ ಬರುತ್ತಿರುವುದು ಎಂದು ಹೇಳಿದ್ದರು.

ಏಲಿಯನ್ ಮಹಾಸಂಬಂಧ?

ಏಲಿಯನ್ ಮಹಾಸಂಬಂಧ?

ಜಗತ್‌ಪ್ರಸಿದ್ದ ವಿಜ್ಞಾನಿಗಳು ಸೇರಿದಂತೆ ಎಲ್ಲರೂ ಅನ್ಯಗ್ರಹ ಜೀವಿಗಳು ಇರಬಹುದು ಎಂಬ ಆಶಯದಲ್ಲಿಯೇ ಇದ್ದಾರೆ. ಸಂಪರ್ಕಕ್ಕೆ ಸಿಗುವ ಏಲಿಯನ್‌ಗಳು ಸಿನಿಮಾದಲ್ಲಿ ಊಹಿಸಿದಂತೆಯೇ ಇರಬಹುದು ಅಥವಾ ಇನ್ನಾವ ರೀತಿಯಲ್ಲಿಯೋ ಇರಬಹುದು.ಒಟ್ಟಿನಲ್ಲಿ ಏಲಿಯನ್‌ಗಳನ್ನು ಮನುಷ್ಯರು ತಲುಪಿದರೆ ಅದೊಂದು ಮಹಾಸಂಬಂಧವಾಗಲಿದೆ.

</a></strong><a class=ಕ್ಷಣಾರ್ಧದಲ್ಲಿ ಭಾರತದೆಲ್ಲೆಡೇ ವೈರಲ್ ಆದ ಗೂಗಲ್ ಹೊಸ ಸೇವೆ!! ಯಾವುದು ಗೊತ್ತಾ?" title="ಕ್ಷಣಾರ್ಧದಲ್ಲಿ ಭಾರತದೆಲ್ಲೆಡೇ ವೈರಲ್ ಆದ ಗೂಗಲ್ ಹೊಸ ಸೇವೆ!! ಯಾವುದು ಗೊತ್ತಾ?" loading="lazy" width="100" height="56" />ಕ್ಷಣಾರ್ಧದಲ್ಲಿ ಭಾರತದೆಲ್ಲೆಡೇ ವೈರಲ್ ಆದ ಗೂಗಲ್ ಹೊಸ ಸೇವೆ!! ಯಾವುದು ಗೊತ್ತಾ?

Best Mobiles in India

English summary
In the early hours of Saturday morning, researchers searching the Universe for signs of alien life detected 15 explosive radio signals in the space of just five hours.to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X