Subscribe to Gizbot

ನೀವು ಭೂಮಿಯ ಮಧ್ಯಭಾಗದಿಂದ ದಾಟಲು ಎಷ್ಟು ಸಮಯ ಬೇಕು?.ದಾಟಿದರೆ ಏನಾಗಬಹುದು!!?

Written By:

ಭೂಮಿ ಗುಂಡಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಒಬ್ಬ ಮನುಷ್ಯ ಒಂದು ಸ್ಥಳದಿಂದ ಒಂದೇ ದಿಕ್ಕಿನಲ್ಲಿ ನೇರವಾಗಿ ಹೋದರೆ ಭೂಮಿಯನ್ನು ಸುತ್ತಿ ಮತ್ತೆ ಅದೇ ಸ್ಥಳಕೆ ಬಂದುನಿಲ್ಲುತ್ತಾನೆ.!! ಅವುಗಳಿಗೆ ಸೇರಿದ ಒಂದು ಪ್ರಶ್ನೆ ನೀವು ಭೂಮಿಯ ಕೇಂದ್ರದ ಮೂಲಕ ರಂಧ್ರವನ್ನು ಕೊರೆದು ಅದರ ಮೂಲಕ ಹಾದು ಹೋದರೆ ಏನಾಗಬಹುದು!!?

ಹೌದು, ಸೈದ್ಧಾಂತಿಕ ಭೌತಶಾಸ್ತ್ರದ ವಿನೋದದ ಒಂದು ಭಾಗವೇ ಈ ಪ್ರಶ್ನೆ. (ನೀವು ನನ್ನನ್ನು ಕೇಳಿದರೆ, ಸೈದ್ಧಾಂತಿಕ ಭೌತಶಾಸ್ತ್ರದ ಅತ್ಯುತ್ತಮ ಭಾಗ)!!. ಅಸಂಬದ್ಧ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸುವ ಮತ್ತು ಸಾಮಾನ್ಯವಾಗಿ ಸಮಾನವಾಗಿ ಅಸಂಬದ್ಧ ಉತ್ತರಗಳನ್ನು ಪಡೆಯುವ ಈ ವಿಷಯಗಳು ಪಕ್ಕಾ ನಿಜವೂ ಹೌದು! ಹಾಗಾಗಿ, ಭೂಮಿಯ ಕೇಂದ್ರದ ಮೂಲಕ ರಂಧ್ರವನ್ನು ಕೊರೆದು ಅದರ ಮೂಲಕ ಹಾದು ಹೋದರೆ ಏನಾಗಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮಿ ರಂಧ್ರ ಕೊರೆದು ಹೋಗಲು ಸಾಧ್ಯವೇ?

ಭೂಮಿ ರಂಧ್ರ ಕೊರೆದು ಹೋಗಲು ಸಾಧ್ಯವೇ?

ನಿಸ್ಸಂಶಯವಾಗಿ, ಯಾರೂ ಕೂಡ ಭೂಮಿಯ ಕೇಂದ್ರದ ಮೂಲಕ ರಂಧ್ರವನ್ನು ಕೊರೆದು ಅದರ ಮೂಲಕ ಹಾದು ಹೋಗಲು ಸಾಧ್ಯವಿಲ್ಲಾ.!! ಆದರೆ, ಭೌತಶಾಸ್ತ್ರದ ಪ್ರಕಾರ ಅದನ್ನು ಲೆಕ್ಕಾಚಾರ ಮಾಡಿ ನೋಡಬಹುದು.! ಕೇವಲ ವಿಜ್ಞಾನದ ಸಲುವಾಗಿ. ಸೈದ್ಧಾಂತಿಕವಾಗಿ, ಏನು ಸಂಭವಿಸುತ್ತದೆ ಎಂಬುದನ್ನು ತಿಳಿಯಬಹುದು.!?

ಭೂಮಿ ರಂಧ್ರ ಕೊರೆದು ಹೋಗಲು ಸಾಧ್ಯವಿಲ್ಲಾ ಏಕೆ?

ಭೂಮಿ ರಂಧ್ರ ಕೊರೆದು ಹೋಗಲು ಸಾಧ್ಯವಿಲ್ಲಾ ಏಕೆ?

ಭೂಮಿಯ ಕೇಂದ್ರದ ಮೂಲಕ ನೀವು ರಂಧ್ರವನ್ನು ಕೊರೆಯಲು ಸಾಧ್ಯವಿಲ್ಲ.! ಭೂಮಿಯ ಒಳಭಾಗದಲ್ಲಿ ಸೂರ್ಯನಿಗಿಂತಲೂ ಹೆಚ್ಚು ಶಾಖ ಬಿಡುಗಡೆಯಾಗುವುದರಿಮದ ಅಲ್ಲವೂ ಸುಟ್ಟು ಹೋಗುತ್ತವೆ.!! ಭೂಮಿಯ ಮೇಲಿರುವ ಪ್ರಸ್ತುತ ಯಾವ ವಸ್ತುವು ಆ ಶಾಖವನ್ನು ತಡೆಯಲು ಸಾಧ್ಯವೇ ಇಲ್ಲ.!!

ಭೂಮಿ ಒಳಗಿನ ಶಾಖ ಎಷ್ಟಿರುತ್ತದೆ?

ಭೂಮಿ ಒಳಗಿನ ಶಾಖ ಎಷ್ಟಿರುತ್ತದೆ?

ಭೂಮಿಯ ಮೂಲವು ದ್ರವ ಲೋಹವಾಗಿದ್ದು, ತಾಪಮಾನವು 9700 ° F (5400 ° C) ಗಿಂತ ಹೆಚ್ಚಿದೆ ಎಂದು ವಿಜ್ಞಾನ ಹೇಳುತ್ತದೆ.!! ಇದು ಸೂರ್ಯನ ಮೇಲಿನ ಶಾಖಕ್ಕಿಂತ ಬಹಳಷ್ಟು ಹೆಚ್ಚಿದೆ ಎನ್ನಬಹುದು.!! ನಿಮಗೆ ಗೊತ್ತಾ 7.5 ಕಿಲೋಮೀಟರ್ ಆಳದಲ್ಲಿಯೇ 350 ° F (ಸುಮಾರು 170 ° C) ಮೀರಿದ ತಾಪಮಾನವಿದೆ.!!

ಈವರೆಗೂ ಎಷ್ಟು ಆಳಕ್ಕೆ ಭೂಮಿ ಕೊರೆಯಲಾಗಿದೆ.!!

ಈವರೆಗೂ ಎಷ್ಟು ಆಳಕ್ಕೆ ಭೂಮಿ ಕೊರೆಯಲಾಗಿದೆ.!!

ಇಲ್ಲಿಯವರೆಗೆ ಭೂಮಿಯ ಆಳವಾದ ಕೊರೆತ ಎಂದರೆ ಕೋಲಾ ಸೂಪರ್ಡಿಪ್ ಬೋರೆಹೋಲ್.! 1970 ರ ದಶಕದಲ್ಲಿ ಡ್ರಿಲ್ಲಿಂಗ್ ಪ್ರಾರಂಭಿಸಿ 20 ವರ್ಷಗಳ ನಂತರ 20,262 ಮೀಟರ್‌ ಆಳವನ್ನು ಕೊರೆಯಲಾಗಿತ್ತು. ಅಂದರೆ ಕೇವಲ 12 ಕಿ.ಮೀ ಆಳವನ್ನು ಕೊರೆದಿದ್ದರು.!! ಇದು ಭೂಮಿಯ ವ್ಯಾಸಕ್ಕೆ ಹೋಲಿಸಿದಾಗ ಒಂದು ಕೂದಲಿನ ಅಗಲವೂ ಅಲ್ಲ.!!!

ಭೂಮಿಯ ವ್ಯಾಸ ಎಷ್ಟು?!

ಭೂಮಿಯ ವ್ಯಾಸ ಎಷ್ಟು?!

ಭೂಮಿಯ ವ್ಯಾಸ ಸುಮಾರು 6,400 ಕಿಲೋಮೀಟರ್‌ಗಳು ಎಂದು ಭೌತಶಾಸ್ರದ ಮೂಲಕ ಲೆಕ್ಕಹಾಕಿದ್ದಾರೆ.!!6,400 ಕಿಲೋಮೀಟರ್‌ ಉದ್ದದ ರಂದ್ರ ಕೊರೆದರೆ ಮಾತ್ರ ಅದರ ಮೂಲಕ ಭೂಮಿಯ ಮಧ್ಯಭಾಗಕ್ಕೆ ಹೋಗಬಹುದು.!!

ಒಂದುವೇಳೆ ಶಾಖ ತಡೆಯುವ ಕೊಳವೆ ನೀಡಿದರೆ.?

ಒಂದುವೇಳೆ ಶಾಖ ತಡೆಯುವ ಕೊಳವೆ ನೀಡಿದರೆ.?

ಇದಕ್ಕೂ ಹೆಚ್ಚಿನ ಯೋಚನೆ ನಿಮ್ಮಲ್ಲಿ ಬಂದಿದ್ದರೆ, ಶಾಖ ತಡೆಯುವ ಕೊಳವೆಯನ್ನು ನೀಡಿದ, ಮತ್ತು ಆಕ್ಸಿಜನ್ ನೀಡಿದರೆ ಆ ರಂಧ್ರದ ಮೂಲಕ ಹೊರಬರಲು ಸಾಧ್ಯವೇ?!! ಖಂಡಿತವಾಗಿಯೂ ಸಾಧ್ಯವಿಲ್ಲಾ!! ಕೊಳವೆಗಳನ್ನು ಅಭಿವೃದ್ಧಿಪಡಿಸಿದರೆ ಗುರುತ್ವಾಕರ್ಷಣೆ ನಿಮ್ಮನ್ನು ಹೊರಬರಲು ಬಿಡುವುದಿಲ್ಲ.!!

ಒಂದುವೇಳೆ ದಾಟಿ ಬಂದರು ಬೇಕಾದ ಸಮಯವೆಷ್ಟು?

ಒಂದುವೇಳೆ ದಾಟಿ ಬಂದರು ಬೇಕಾದ ಸಮಯವೆಷ್ಟು?

ಭೌತಶಾಸ್ತ್ರದ ಪ್ರಕಾರ ನೀವು ಈ ಎಲ್ಲಾ ಅಡಚಣೆಗಳನ್ನು ಜಯಿಸಲು ಸಮರ್ಥರಾಗಿದ್ದೀರಾ ಎಂದರೆ?!. ನೀವು ಭೂಮಿಯ ಒಂದೆಡೆಯಿಂದ ಮತ್ತೊಂದೆಡೆಗೆ ದಾಟಲು 42 ನಿಮಿಷ ಹಾಗೂ 12 ಸೆಕೆಂಡ್‌ಗಳು ಬೇಕಾಗುತ್ತದೆ ಅಷ್ಟೆ.!! ಎಷ್ಟು ಕುತೂಹಲಕಾರಿಯಾಗಿದೆ ಅಲ್ಲವೇ ಈ ವಿಷಯ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Part of the fun of theoretical physics.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot