ಅಮೆರಿಕ, ಜಪಾನ್‌ ಜೊತೆಗೆ ಭಾರತಕ್ಕೆ ಬರಲಿದೆ 5G ತಂತ್ರಜ್ಞಾನ!..ಬೆಂಗಳೂರಿಗೆ ಮೊದಲು!!

ಇಡೀ ವಿಶ್ವಕ್ಕೆ 2ಜಿ ಪರಿಚಯಗೊಂಡು ಎರಡು ದಶಕಗಳು ಕಳೆದ ನಂತರ ಭಾರತಕ್ಕೆ ಬಂದರೆ, 3ಜಿ ಬಳಕೆಗೆ ಬಂದು ಒಂದು ದಶಕ ಕಳೆದ ನಂತರ ಭಾರತಕ್ಕೆ ಬಂತು. 4ಜಿ ಸೇವೆ ಬರಲು ಕೇವಲ 5 ವರ್ಷಗಳು ಸಾಕಾಯ್ತು.!!

|

ಮೊಬೈಲ್ ತಂತ್ರಜ್ಞಾನ ಎಷ್ಟೆಲ್ಲಾ ಬೆಳವಣಿಗೆ ಹೊಂದುತ್ತಿದ್ದರೂ ಸಹ ಆ ತಂತ್ರಜ್ಞಾನ ಭಾರತಕ್ಕೆ ಕಾಲಿಡಲು 5 ರಿಂದ 10 ವಷಗಳೇ ಬೇಕು ಎನ್ನುವ ಮಾತಿದೆ. ಇದು ಇಲ್ಲಿಯವರೆಗೂ ಖಾತ್ರಿ ಕೂಡ ಆಗಿದೆ.!! ಆದರೆ, ನಿಮಗೆ ಗೊತ್ತಾ 5G ತಂತ್ರಜ್ಞಾನ ಮಾತ್ರ ವಿಶ್ವದ ಜೊತೆಗೆ ಭಾರತದಲ್ಲಿಯೂ ಕಾಲಿಡಲಿದೆ.!!

ಇಡೀ ವಿಶ್ವಕ್ಕೆ 2ಜಿ ಪರಿಚಯಗೊಂಡು ಎರಡು ದಶಕಗಳು ಕಳೆದ ನಂತರ ಭಾರತಕ್ಕೆ ಬಂದರೆ, 3ಜಿ ಬಳಕೆಗೆ ಬಂದು ಒಂದು ದಶಕ ಕಳೆದ ನಂತರ ಭಾರತಕ್ಕೆ ಬಂತು. 4ಜಿ ಸೇವೆ ಬರಲು ಕೇವಲ 5 ವರ್ಷಗಳು ಸಾಕಾಯ್ತು. ಆದರೆ, 5ಜಿ ಸೇವೆ ಮಾತ್ರ ಅಮೆರಿಕ, ಯೂರೋಪ್‌, ಜಪಾನ್‌ನಲ್ಲಿ ಬಳಕೆಗೆ ಬರುವ ಸಂದರ್ಭದಲ್ಲೇ ದೇಶದಲ್ಲೂ ಬಳಕೆಗೆ ಬರಲಿದೆ.!!

ಹಾಗಾದರೆ, 5ಜಿ ತಂತ್ರಜ್ಞಾನ ಮಾತ್ರ ಅಮೆರಿಕ,ಯೂರೋಪ್, ಜಪಾನ್‌ನಲ್ಲಿ ಬಳಕೆಗೆ ಬರುವ ಸಂದರ್ಭದಲ್ಲೇ ದೇಶದಲ್ಲಿಯೂ ಬಳಕೆಗೆ ಬರಲು ಕಾರಣವೇನು? 5ಜಿ ತಂತ್ರಜ್ಞಾನ ಪ್ರಪಂಚಕ್ಕೆ ಕಾಲಿಡುವುದು ಯಾವಾಗ? ಭಾರತದಲ್ಲಿ ಮೊದಲು ಪ್ರಾರಂಭವಾಗುವುದು ಎಲ್ಲಿ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

2020ರ ವೇಳೆಗೆ ವಿಶ್ವದಲ್ಲಿ 5ಜಿ!!

2020ರ ವೇಳೆಗೆ ವಿಶ್ವದಲ್ಲಿ 5ಜಿ!!

ವಿಶ್ದದಲ್ಲಿಯೇ 5G ತಂತ್ರಜ್ಞಾನ ಈಗಿನ್ನೂ ಕಣ್ಣು ಬಿಡುತ್ತಿರುವ ಈ ತಂತ್ರಜ್ಞಾನವಾದರೂ ಸಹ 2020ರ ವೇಳೆಗೆ ವಿಶ್ವದಲ್ಲಿ 5ಜಿ ಕಾಲಿಡಲಿದೆ ಎಂದು ಮೊಬೈಲ್‌ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದು, ಇದೇ ಸಮಯದಲ್ಲಿ ಭಾರತ ಕೂಡ 5G ತಂತ್ರಜ್ಞಾನವನ್ನು ಹೊಂದಲಿದೆ ಎಂದು ಹೇಳಿದ್ದಾರೆ.!!

2020ಕ್ಕೆ ಭಾರತಕ್ಕೆ 5ಜಿ ತಂತ್ರಜ್ಞಾನ!!

2020ಕ್ಕೆ ಭಾರತಕ್ಕೆ 5ಜಿ ತಂತ್ರಜ್ಞಾನ!!

ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್‌ ಮಾರುಕಟ್ಟೆ. ಹೀಗಾಗಿ 5ಜಿ ತಂತ್ರಜ್ಞಾನ ಭಾರತಕ್ಕೆ ಬರುವ ಕಾಲ ದೂರವಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಂತ್ರಜ್ಞಾನ ಹೇಗೆ ಅಭಿವೃದ್ದಿಯಾಗುತ್ತಿದೆಯೋ ಅಷ್ಟೆ ವೇಗದಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ಬರಲಿದೆ ಎನ್ನುತ್ತಾರೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌.!!

ಕೇಂದ್ರ ಸರ್ಕಾರದ ರೂಪುರೇಷೆ!!

ಕೇಂದ್ರ ಸರ್ಕಾರದ ರೂಪುರೇಷೆ!!

ದೇಶದಲ್ಲಿ 2020ರ ವೇಳೆಗೆ 5ಜಿ ತಂತ್ರಜ್ಞಾನದ ಅನಾವರಣಕ್ಕೆ ಅಗತ್ಯವಿರುವ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಇದಕ್ಕಾಗಿ 500 ಕೋಟಿ ಮೂಲನಿಧಿ ಮೀಸಲಿಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.!!

ಬೆಂಗಳೂರಿನಲ್ಲಿ ಫಸ್ಟ್!?

ಬೆಂಗಳೂರಿನಲ್ಲಿ ಫಸ್ಟ್!?

ಜಿಯೋ 4Gಯನ್ನು ಆಕ್ರಮಿಸಿಕೊಂಡಿರುವುದನ್ನು ಮನಗಂಡಿರುವ ಏರ್‌ಟೆಲ್ ಮೊಬೈಲ್ ತರಂಗಾಂತರ ದಕ್ಷತೆ ಹೆಚ್ಚಿಸುವ ‘ಮ್ಯಾಸಿವ್‌ ಎಂಐಎಂಒ' ತಂತ್ರಜ್ಞಾನ ಬಳಸಿಕೊಂಡು 5ಜಿ ಸೇವೆ ಜಾರಿಗೆ ತರಲು ಮುಂದಾಗಿದೆ. ಮೊದಲು 4G ಸೇವೆಯನ್ನು ನೀಡಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದೆ.

BSNL ತರುವ ಸೂಚನೆ ಇದೆ.!!

BSNL ತರುವ ಸೂಚನೆ ಇದೆ.!!

2018ರ ಅಂತ್ಯದ ವೇಳಗೆ ದೇಶದೆಲ್ಲೆಡೆ 5ಜಿ ಪ್ರಾಯೋಗಿಕ ಸೇವೆ ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ.! ಸದ್ಯ ದೇಶದಲ್ಲೇ ಅತಿದೊಡ್ಡ ಆಪ್ಟಿಕಲ್‌ ಪೈಬರ್‌ ನೆಟ್‌ವರ್ಕ್‌ ಜಾಲವನ್ನು ಬಿಎಸ್‌ಎನ್‌ಎಲ್‌ ಹೊಂದಿದ್ದು, BSNL ಕೂಡ ಮೊದಲು 5G ತರುವ ಸೂಚನೆ ಇದೆ.!!

ಹೆಸರೇ ಹೊಂದಿಲ್ಲದ ಕಂಪೆನಿ ಇದೀಗ ಭಾರತದ ನಂಬರ್ 1 ಟೆಲಿಕಾಂ!..ಏರ್‌ಟೆಲ್, ಜಿಯೋ ಕಂಗಾಲು!!ಹೆಸರೇ ಹೊಂದಿಲ್ಲದ ಕಂಪೆನಿ ಇದೀಗ ಭಾರತದ ನಂಬರ್ 1 ಟೆಲಿಕಾಂ!..ಏರ್‌ಟೆಲ್, ಜಿಯೋ ಕಂಗಾಲು!!

Best Mobiles in India

English summary
5G will most probably be available in India by 2022.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X