Subscribe to Gizbot

ಹಕ್ಕಿಗಳಿಗೇಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ ಗೊತ್ತಾ?!..ಸ್ವಷ್ಟ ಉತ್ತರ ಇಲ್ಲಿದೆ!!

Written By:

ನಾವು ಮಕ್ಕಳಾಗಿದ್ದ ಸಮಯದಲ್ಲಿ ನಮಗೆ ಕುತೋಹಲ ಮೂಡಿಸುತ್ತಿದ್ದ ಪ್ರಶ್ನೆಯೊಂದಕ್ಕೆ ಈಗಲೂ ಸರಿಯಾದ ಉತ್ತರ ಪಡೆಯಲು ಆಗಿಲ್ಲ ಎನ್ನುವ ಪ್ರಶ್ನೆಯೊಂದಿದೆ.!! ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿರುತ್ತವೆ. ಅದರೂ ಅವುಗಳಿಗೆ ಶಾಕ್ ಏಕೆ ತಗಲುವುದಿಲ್ಲ ಎಂಬುದಕ್ಕೆ ಈಗಲೂ ಹಲವರಿಗೆ ಸ್ವಷ್ಟ ಉತ್ತರ ಸಿಕ್ಕಿಲ್ಲ.!!

ನಿಮಗೆ ಗೊತ್ತಾ? ಈಗಲೂ ಬಹುತೇಕ ಜನರು ಹಕ್ಕಿಗಳ ಪಾದಗಳಲ್ಲಿ ವಿದ್ಯುತ್ ಪ್ರವಹಿಸದಂತಹ ಕವಚವಿದೆ. ಈ ವಿಶೇಷತೆಯಿಂದಲೇ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿದ್ದರೂ ಸಹ ಅವುಗಳಿಗೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ ಎಂದು ಅಂದುಕೊಂಡಿದ್ದಾರೆ. ಆದರೆ, ಹಕ್ಕಿಗಳ ಕಾಲುಗಳಲ್ಲಿ ಅಂತಹ ಯಾವುದೇ ವಿಶೇಷತೆಗಳಿಲ್ಲ.!!

ಹಕ್ಕಿಗಳಿಗೇಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ ಗೊತ್ತಾ?!..ಸ್ವಷ್ಟ ಉತ್ತರ!!

ಹಾಗಾದರೆ, ಸಾವಿರ ಸಾವಿರ ವೋಲ್ಟ್ ಶಕ್ತಿಯ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿದ್ದರೂ ಅವುಗಳಿಗೇಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ? ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುವುದು ಏಕೆ? ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯಲು ಕಾರಣವೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿದ್ಯುನ್ಮಾನ ಶಾಸ್ತ್ರ ತಿಳಿಯಬೇಕು!!

ವಿದ್ಯುನ್ಮಾನ ಶಾಸ್ತ್ರ ತಿಳಿಯಬೇಕು!!

ವಿದ್ಯುನ್ಮಾನ ಶಾಸ್ತ್ರದ ಒಂದು ಸರಳ ತತ್ತ್ವ ''ವಿದ್ಯುತ್ ಪ್ರವಹಿಸುವಾಗ ಕಡಿಮೆ ರೋಧವಿರುವ ಮಾರ್ಗವನ್ನು ಅನುಸರಿಸುತ್ತದೆ" ಎಂಬುದು.! ಈ ತತ್ವದ ಪ್ರಕಾರ, ವಿದ್ಯುತ್ ಪ್ರವಹಿಸುತ್ತಿರುವ ತಂತಿಯ ಮೇಲೆ ಹೆಚ್ಚು ರೋಧವಿರುವ ವಸ್ತುವಿದ್ದರೆ ವಿದ್ಯುದಂಶಗಳು ತಂತಿಯ ಮೂಲಕವೇ ಪ್ರವಹಿಸಲು ಇಷ್ಟಪಡುತ್ತವೆ ಎಂಬುದನ್ನು ತಿಳಿಯಬೇಕು.!!

ಹಾಗಾದರೆ,ಹಕ್ಕಿಗಳಿಗೇಕೆ ಶಾಕ್ ಏಕೆ ತಗಲುವುದಿಲ್ಲ?

ಹಾಗಾದರೆ,ಹಕ್ಕಿಗಳಿಗೇಕೆ ಶಾಕ್ ಏಕೆ ತಗಲುವುದಿಲ್ಲ?

ವಿದ್ಯುತ್ ತಂತಿಗಳನ್ನು ಬಹುತೇಕ ತಾಮ್ರದಲ್ಲಿಯೇ ನಿರ್ಮಿಸಿರುತ್ತಾರೆ. ತಾಮ್ರ ಒಳ್ಳೆಯ ವಿದ್ಯುತ್ ವಾಹಕವಾಗಿರುವಷ್ಟು ಹಕ್ಕಿಯ ದೇಹ ವಿದ್ಯುತ್ ವಾಹಕವಲ್ಲ. ಹಾಗಾಗಿ, ಹಕ್ಕಿಯ ದೇಹ ವಿದ್ಯುದಂಶಗಳನ್ನು ತನ್ನ ಮೂಲಕ ಹರಿಯಗೊವಿದ್ಯುತ್ ಪ್ರವಾಹಕ್ಕೆ ರೋಧ ಒಡ್ಡುತ್ತದೆ. ಹಾಗಾಗಿ, ಹಕ್ಕಿಗಳಿಗೆ ಶಾಕ್ ಹೊಡೆಯುವುದಿಲ್ಲ.!!

ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುವುದು ಏಕೆ?

ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುವುದು ಏಕೆ?

ಒಂದು ತಂತಿಯ ಮೇಲೆ ಕುಳಿತ ಹಕ್ಕಿಯ ರೆಕ್ಕೆ ಅಕಸ್ಮಾತ್ ಇನ್ನೊಂದು ತಂತಿಗೆ ತಗುಲಿತೆಂದರೆ ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುತ್ತವೆ. ಇಲ್ಲಿ ಪ್ರಮುಖ ವಿಷಯವೇನೆಂದರೆ, ಎರಡೂ ತಂತಿಗಳ ನಡುವೆ ವೋಲ್ಟೇಜ್ ವ್ಯತ್ಯಾಸವಿದ್ದಾಗ ಒಂದು ತಂತಿಯಿಂದ ಇನ್ನೊಂದು ತಂತಿಗೆ ವಿದ್ಯುತ್ ಹಕ್ಕಿಗಳ ದೇಹದಿಂದ ಹರಿದು ಅವು ಸಾವನಪ್ಪುತ್ತವೆ.!!

ಮನುಷ್ಯರಿಗೂ ಹಕ್ಕಿಗಳಿಗೂ ಭಾರೀ ವ್ಯತ್ಯಾಸವಿದೆ.!!

ಮನುಷ್ಯರಿಗೂ ಹಕ್ಕಿಗಳಿಗೂ ಭಾರೀ ವ್ಯತ್ಯಾಸವಿದೆ.!!

ವಿದ್ಯುತ್ ತಂತಿಯ ಮೇಲೆ ಕುಳಿತ ಹಕ್ಕಿಗಳಿಗೂ ಮತ್ತು ವಿದ್ಯುತ್ ತಂತಿಯ ಸಂಪರ್ಕದಲ್ಲಿ ಬರುವ ಮನುಷ್ಯರಿಗೂ ಒಂದು ಬಹಳ ಮುಖ್ಯವಾದ ವ್ಯತ್ಯಾಸವಿದೆ. ವಿದ್ಯುತ್ ತಂತಿಯ ಸಂಪರ್ಕಕ್ಕೆ ಬರುವ ಮನುಷ್ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯ ಸಂಪರ್ಕದಲ್ಲಿರುವುದರಿಂದ ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯುತ್ತದೆ.!!

How to Sharing a Mobile Data Connection with Your PC (KANNADA)
ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯಲು ಕಾರಣ?

ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯಲು ಕಾರಣ?

ಮೊದಲೇ ಹೇಳಿದಂತೆ ಮನುಷ್ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯ ಸಂಪರ್ಕದಲ್ಲಿರುತ್ತಾನೆ. ಇಲ್ಲಿ ಭೂಮಿಯ ವೋಲ್ಟೇಜ್ ಅನ್ನು ಸೊನ್ನೆ ಎಂದು ಪರಿಗಣಿಸಲಾಗಿದೆ.! ಹಾಗಾಗಿ, ಕಡಿಮೆ ಪ್ರಮಾಣದ ವಿದ್ಯುತ್ ಆದರೂ ಭೂಮಿಗಿಂತ ವೋಲ್ಟೇಜ್ ಹೆಚ್ಚಿರುವುದರಿಂದ ತಂತಿ ಮತ್ತು ಭೂಮಿಯ ನಡುವೆ ಮನುಷ್ಯನಲ್ಲಿ ವಿದ್ಯುತ್ ಹರಿದು ಸಾಯುತ್ತಾನೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Their cells and tissues do not offer electrons an easier route than the copper wire they're already traveling along. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot