ನಿರ್ಲಕ್ಷ್ಯದ ಫೇಸ್‌ಬುಕ್ ಪೋಸ್ಟ್‌ಗಳಿಂದ ಜೈಲು ಸೇರಿದವರು ಈ 25 ಜನ..!

By GizBot Bureau

  ಫೇಸ್ಬುಕ್ ನಲ್ಲಿ ಏನು ಬೇಕಾದರೂ ಹಂಚಿಕೊಳ್ಳಬಹುದು, ಅನಿಸಿದ್ದೆಲ್ಲವನ್ನು ಹೇಳುವ ಹಕ್ಕು ನಿಮಗಿದೆ ಎಂದು ನೀವೇನಾದರೂ ಭಾವಿಸಿದ್ದರೆ ಅದು ಖಂಡಿತ ತಪ್ಪು. ಮುಂದೆ ನೀವು ಓದಲಿರುವ ನಿರ್ಲಕ್ಷದಿಂದ,ಅವಿವೇಕದಿಂದ ಫೇಸ್ಬುಕ್ಗೆ ಪೋಸ್ಟ್ ಮಾಡಿರುವ 25 ವಿಷಯಗಳು ಹೇಗೆ ತೊಂದರೆಗೆ ಗುರಿ ಮಾಡುವುದೆಂದು ನಿಮಗೇ ಮನವರಿಕೆ ಮಾಡಿಸುತ್ತದೆ. ಅದರಲ್ಲೂ ಕಾನೂನಿನ ಕಣ್ಣಿನಲ್ಲಿ ಹೇಗೆ ಅಪರಾಧಿಗಳಾಗುತ್ತಾರೆ ಎಂಬುದನ್ನು ನೀವೇ ನೋಡಿ.

  ನಿರ್ಲಕ್ಷ್ಯದ ಫೇಸ್‌ಬುಕ್ ಪೋಸ್ಟ್‌ಗಳಿಂದ ಜೈಲು ಸೇರಿದವರು ಈ 25 ಜನ..!

  ಆದುದರಿಂದ, ನೀವು ಫೇಸ್ ಬುಕ್ ಪೇಜಿನಲ್ಲಿ ಏನಾದರೂ ಪೋಸ್ಟ್ ಮಾಡುವ ಮುನ್ನ ಎರಡು ಬಾರಿ ಯೋಚಿಸಿ ಬಹಳ ಎಚ್ಚರಿಕೆಯಿಂದ ಪೋಸ್ಟ್ ಮಾಡಿ ಇಲ್ಲದಿದ್ದಲ್ಲಿ ನಿರ್ಲಕ್ಷದಿಂದ ಫೇಸ್ ಬುಕ್ ಗೆ ಪೇಸ್ಟ್ ಮಾಡಿದ ಈ 25 ಜನಗಳು ಹೇಗೆ ಕಾನೂನಿನಿಂದ ತೊಂದರೆಗೊಳಗಾದರೊ ಹಾಗೆಯೇ ನೀವೂ ತೊಂದರೆಗೆ ಸಿಕ್ಕಿ ಕೈ-ಕೈ ಹಿಸುಕಿಕೊಂಡು ಹಲುಬುವುದು ಖಂಡಿತ.

  25. ಬಾಂಗ್ ಹಿಡಿದಿರುವ ಮಗು

  ಒಂದು ಎಳೆ ಮಗುವು ಬಾಂಗ್ ನಿಂದ ಧೂಮಪಾನವನ್ನು ಮಾಡುತ್ತಿರುವ ಫೋಟೋವನ್ನು ಫೇಸ್ಬುಕ್ ಗೆ ಪೋಸ್ಟ್ ಮಾಡಿದ್ದಕ್ಕಾಗಿ 19 ವರ್ಷದ ತಾಯಿಯನ್ನು ಬಂಧಿಸಲಾಯಿತು. ಆ ಫೋಟೋವನ್ನು ಹಾಸ್ಯಕ್ಕಾಗಿ ಮಾತ್ರ ತೆಗೆದಿದ್ದು ಎಂದು ತಾಯಿ ಎಷ್ಟೇ ಹೇಳಿದರೂ ಅದನ್ನು ಪರಿಗಣಿಸದೆ, ಅವಳು ಕಾನೂನುಬಾಹಿರವಾದ ಡ್ರಗ್ಸ್ ಉಪಕರಣಗಳನ್ನು ಹೊಂದಿದ್ದಾಳೆ ಹೀಗಾಗಿ ಅವಳು ಮೊದಲ ದರ್ಜೆಯ ಅಪರಾಧವೆಸಗಿದ್ದಾಳೆ ಎಂಬ ನಿರ್ಧಾರಕ್ಕೆ ಬರಲಾಯಿತು. ಹಿಂದೆ ಮುಂದೆ ಯೋಚಿಸದೆ ಪೋಸ್ಟ್ ಮಾಡಿದ ಒಂದು ಫೋಟೋದಿಂದ ಆ ತಾಯಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಯಿತು.

  24.ಫೇಸ್ಬುಕ್ ಪೋ ಕಿಂಗ್ ಆದೇಶವನ್ನು ಉಲ್ಲಂಘಿಸಿದವರು

  ಶಾನನ್ ಡಿ ಜಾಕ್ಸನ್ ಎಂಬಾಕೆ ಅವಳ ವಿರುದ್ಧ ರಕ್ಷಣೆ ಕ್ರಮದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವಳನ್ನು ಬಂಧಿಸಿದ್ದರು. "ಫೇಸ್ಬುಕ್ ನಲ್ಲಿ ಪೋ ಕಿಂಗ್ ಆದೇಶವನ್ನು ಜಾಕ್ಸನ್ ನಿರಾಕರಿಸಿದ್ದಳು" ಎಂದು ಹೇಳುವ ಓರ್ವ ನಿರ್ದಿಷ್ಟ ಮಹಿಳೆಯನ್ನು ಸಂಪರ್ಕಿಸ ಬಾರದೆಂದು ಜಾಕ್ಸನ್ ಗೆ ಆದೇಶದ ನಿಯಮಗಳಡಿಯಲ್ಲಿ ನಿಷೇಧಾಜ್ಞೆ ಯಾಗಿತ್ತು.

  23. ಫೇಸ್ಬುಕ್ ಸಂದೇಶದಿಂದ ಸಿಕ್ಕಿ ಬಿದ್ದ ಮೃತ ಉಡುಗಿಯ ತಂದೆ ಮತ್ತು ಅವನ ಗೆಳತಿ

  ಮೇ 14ರಂದು ಜೆನೆಸಿಸ್ ಸಿಮ್ಸ್ ಮೃತದೇಹವು ಖಾಲಿ ಇದ್ದ ಕೊಲೊರೆಡೊ ಮನೆಯ ನೆಲಮಾಳಿಗೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಕ್ಕಿತ್ತು. ಉಡುಗಿಯ ತಂದೆ ಹನಿಫ್ ಸಿಮ್ಸ್ ಮತ್ತು ಅವನ ಗೆಳತಿ ಮಾನಿಕ್ ಲಿಂಚ್ ಮಾಡಿದ ಒಳ್ಳೆಯ ಕೆಲಸವೇನೆಂದರೆ ಈ ಸಂದೇಶವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು. ಇದರಿಂದ ಪೊಲೀಸರಿಗೆ ತುಂಬಾ ಸಹಾಯವಾಗಿ ಅವರನ್ನು ಪತ್ತೆ ಮಾಡಲು ಸಾಧ್ಯವಾಯಿತು. ಆ ಸಂದೇಶದ ಪ್ರಕಾರ ಪ್ರಜ್ಞೆ ತಪ್ಪಿದ್ದ ಜೆನಿಸಿಸ್ ನನ್ನು ವರಿಗೆ ಬಾತ್ ರೂಮ್ ನಲ್ಲಿ ಸಿಕ್ಕಿದ್ದಾರೆ.

  22. ಫೇಸ್ ಬುಕ್ ಪೇಜ್ ಗುರಿ ಗೊಳಗಾದ ಲೆಬನಾನ್ನ ಅಧ್ಯಕ್ಷ

  ಲೆಬನಾನ್ನ ಅಹ್ಮದ್ ಶುಮನ್, ನೈಮ್ ಹಾನ್ನಾ, ಆಂಟೊನಿ ರಾಮಿಯಾ ಮತ್ತು ಶೆಬೆಲ್ ಕ್ಸಾಬ್ ಅವರು ಫೇಸ್ಬುಕ್ ಪುಟವನ್ನು ರಚಿಸಿ, ನಂತರ ಲೆಬನಾನಿನ ಅಧ್ಯಕ್ಷ ಮೈಕೆಲ್ ಸ್ಲೀಮಾನ್ನನ್ನು ಟೀಕಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು "ಅಪನಿಂದೆ ಸುಳ್ಳುಸುದ್ದಿ ಮತ್ತು ಮಾನನಷ್ಟ" ದ ವಿರುದ್ಧ ದೇಶದ ಕಟ್ಟುನಿಟ್ಟಿನ ನಿಯಮಗಳ ಕಾರಣದಿಂದಾಗಿ, "ನಾವು ಅಧ್ಯಕ್ಷರಾಗಿ ಆಷಾಡಭೂತಿ ಗಳನ್ನು ಬಯಸುವುದಿಲ್ಲ" ಎಂಬ ಶೀರ್ಷಿಕೆಯ ಪುಟವು ವಾಕ್ ಸ್ವಾತಂತ್ರ್ಯದ "ನಿಬಂಧನೆಗಳ ಚೌಕಟ್ಟಿನಿಂದ" ಹೊರಗೆ ಕಂಡುಬಂತು.

  21. ಫೇಸ್ಬುಕ್ ನಲ್ಲಿ 30 ಕ್ಕೂ ಹೆಚ್ಚು ಗಂಡಸರನ್ನು ಸೆಕ್ಸ್ ಗಾಗಿ ಬೆದರಿಸಿದ ಹದಿಹರೆಯ

  ಆಂಥೋನಿ ಸ್ಟ್ಯಾಂಕ್ಲ್ ಎಂಬುವವನು ಉಡುಗಿಯ ವೇಷ ಧರಿಸಿ ಮೂವತ್ತಕ್ಕೂ ಹೆಚ್ಚು ಪುರುಷ ಸಹಪಾಠಿಗಳಿಗೆ ನಗ್ನ ಚಿತ್ರಗಳನ್ನು ಕಳಿಸುವಂತೆ ಮೋಸಗೊಳಿಸಿದ್ದಾನೆ. ನಂತರ ಆ ಫೋಟೋಗಳನ್ನು ಬಳಸಿಕೊಂಡು ಸೆಕ್ಸ್ ಗಾಗಿ ಅವರಿಗೆಲ್ಲ ಬೆದರಿಕೆ ಹಾಕಿದ್ದಾನೆ. ಸ್ಟ್ಯಾಂಕ್ಲ್ ಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

  20. ಉಡು ಪ್ರಾಣಿಯನ್ನು ಉಂಡಿದ್ದ ಕ್ಕಾಗಿ ಬಂದಿಯಾದ ಜೋಡಿಗಳು

  ಅಪರೂಪದ ಪ್ರಾಣಿಯಾದ 'ಉಡು' ವನ್ನು ಸೆರೆಹಿಡಿಯುವುದು, ಅಡಿಗೆ ಮಾಡುವುದು ಮತ್ತು ಸೇವಿಸುವುದನ್ನು ತೋರಿಸುತ್ತಿರುವ ಫೇಸ್ಬುಕ್ ಫೋಟೋಗಳನ್ನು ಪೋಸ್ಟ್ ಮಾಡಿದ ಅಮೇರಿಕಾದ ಜೋಡಿಯನ್ನು ಬಹಮಿಯಾನ್ ಅಧಿಕಾರಿಗಳು ಬಂಧಿಸಿದ್ದಾರೆ ವನ್ಯ ವೃಕ್ಷ ಜಂತು ಜಾಲದ (wild fauna and flora)ಅಪಾಯದಂಚಿನಲ್ಲಿರುವ ಗುಂಪುಗಳಲ್ಲಿ ವಿದೇಶಿ ವ್ಯಾಪಾರದ ರೀತಿನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ ಜೋಡಿಯನ್ನು ತಪ್ಪಿತಸ್ಥರೆಂದು ತೀರ್ಮಾನಿಸಲಾಯಿತು.

  19. ಮಗನ ಫೇಸ್ ಬುಕ್ ಪೇಜ್ ಅನ್ನು ಉಲ್ಲಂಘಿಸಿದ ತಾಯಿ

  ಅರ್ನನ್ಸಾಸ್ನ ನ್ಯೂ ಡೆನಿಸ್ ತನ್ನ ಮಗನ ಫೇಸ್ ಬುಕ್ ಪುಟದಲ್ಲಿ ಉದ್ರೇಕಕಾರಿ ಯಾದ ಪೋಸ್ಟ್ ಮಾಡಿದ್ದಕ್ಕಾಗಿ ಕಿರುಕುಳದ ಅಪರಾಧದ ಮೇಲೆ ಸೆರೆಯಾಳಾಗಬೇಕಾಗಿ ಬಂತು. ಮಗನ ಜೊತೆ ನಡೆದ ವಾದದ ನಂತರ ಬೇಸತ್ತ ತಾಯಿ ಏನೋ ತಪ್ಪಾಗಿ ಹಲವಾರು ಪೋಸ್ಟ್ಗಳನ್ನು ಹುಡುಗನ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡುತ್ತಾಳೆ. ಅಂತಹ ಒಂದು ಪೋಸ್ಟ್ ನಲ್ಲಿ "ಇಂತಹ ಮಗನನ್ನು ಹೆತ್ತಿರುವುದೇ ನಾನು ಮಾಡಿರುವ ಏಕೈಕ ತಪ್ಪು" ಎಂದು ಹೇಳಿರುತ್ತಾಳೆ. ಈ ತಪ್ಪಿಗಾಗಿ ನ್ಯಾಯಾಧೀಶರು ಅವಳಿಗೆ ಉತ್ತಮ ಪಾಲಕರು ಆಗುವುದು ಹೇಗೆ? ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಎಂಬ ತರಗತಿಗಳಿಗೆ ಹೋಗಿ ತರಬೇತಿ ಪಡೆಯಬೇಕೆಂದು ಆದೇಶ ಹೊರಡಿಸುತ್ತಾರೆ. ಅಷ್ಟೇ ಅಲ್ಲದೆ, ಆಕೆ $435 ದಂಡವನ್ನು ಪಾವತಿಸಬೇಕಾಗುತ್ತದೆ.

  18. ನಕಲಿ ಪ್ರೊಫೈಲ್ ಹೊಂದಿದ್ದಕ್ಕಾಗಿ ಜೈಲು ಸೇರಿದ ಮೌರ್ಟಾಡ

  ಮೊರೊಕ್ಕೊ ನಿವಾಸಿಯಾದ ಫೌಡ್ ಮೌರ್ಟಾಡಾ ಮೊರಾಕನ್ ರಾಜನ ಸಹೋದರ ರಾಜಕುಮಾರ ಮೌಲೆ ರಚಿಡ್ ನಾನೇ ಎಂದು ತನ್ನನ್ನು ಗುರುತಿಸಿಕೊಂಡು ಫೇಸ್ಬುಕ್ ಪ್ರೊಫೈಲ್ ಅನ್ನು ರಚಿಸಿದ. ಪರಿಣಾಮವಾಗಿ, ಮೌರ್ಟಾಡ ನನ್ನು "ಖಳನಾಯಕ ಕೆಲಸ" ಮತ್ತು "ಗುರುತಿನ ವಂಚನೆ" ಮಾಡಿದ್ದಕ್ಕಾಗಿ ಮೂರು ವರ್ಷಗಳ ಜೈಲಿನಲ್ಲಿ ಬಂಧಿಸಲಾಯಿತು.

  17. ಫೇಸ್ಬುಕ್ನಲ್ಲಿ ಪೊಲೀಸರನ್ನು ಅಣಕಿಸಿ ಬಂದಿಯಾದ ದೇಶಭ್ರಷ್ಟ

  ಕಳ್ಳತನ ಮಾಡಿ ಬಂಧನಕ್ಕೊಳಗಾಗಿದ್ದ ದರೋಡೆಕೋರ ಕ್ರೇಗ್ "ಲೇಜಿ" ಲಿಂಚ್ ಸೆರೆಮನೆಯಿಂದ ಹೊರ ಬಂದ ಮೇಲೆ, ಲಿಂಚ್ ಸ್ವತಃ ಪೋಲಿಸ್ ಮೇಲೆ ಅಪಹಾಸ್ಯ ಮಾಡಿರುವ ಫೋಟೋಗಳನ್ನು ಪೋಸ್ಟ್ ಮಾಡಲು ಆರಂಭಿಸಿದನು. ಲಿಂಚ್ ಅವರ ಫೇಸ್ಬುಕ್ ಪ್ರೊಫೈಲ್ 40,000 ಸ್ನೇಹಿತರನ್ನು ಸೆಳೆಯಿತು ಆದರೆ ಪೊಲೀಸರನ್ನು ನೇರವಾಗಿ ಅವನನ್ನು ಹಿಡಿಯಲು ದಾರಿ ಮಾಡಿಕೊಟ್ಟಿತು.

  16. ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ವರನ್ನು ಆರೋಪಿಸಿದ ಫೇಸಬುಕ್ ಫೋಟೋಗಳು

  ಗ್ರಾಹಕನೊಬ್ಬ ನಿಂದ ಮೋಸಹೋದ ಬೊಟಿಕ್ ಮಾಲೀಕರು ಸ್ಟೇಸಿ ಪ್ರೈಸ್ ಅಂಗಡಿಯಲ್ಲಿ ಕದಿಯುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಅಂತಹವರ ಫೋಟೋಗಳನ್ನು ಫೇಸ್ಬುಕ್ಗೆ ಪೋಸ್ಟ್ ಮಾಡುತ್ತಿದ್ದರು. ಅಂತಹ ಫೋಟೋ ಒಂದರಲ್ಲಿ ಶಂಕಿತನೊಬ್ಬ ಕಳುವಾದ ವಸ್ತುವನ್ನು ಹಿಡಿದುಕೊಂಡಿರುವುದೂ ಪೋಸ್ಟ್ ಆಗಿತ್ತು. ಇದರಿಂದಾಗಿ ಪೊಲೀಸರು ಆ ಕಳ್ಳ ವಿದ್ಯಾರ್ಥಿಗಳನ್ನು ಬಂಧಿಸಿದರು ಮತ್ತು ಪ್ರಿನ್ಸ್ ಬೊಟೀಕ್ ನಿಂದ ಕದ್ದಿದ್ದ ಕ್ಕಾಗಿ ಕನಿಷ್ಟ $ 200 ದಂಡ ವಿಧಿಸಿದರು.

  15. ಫೇಸ್ ಬುಕ್ ಮೂಲಕ ಪತ್ತೆಯಾದ ದರೋಡೆ ಮತ್ತು ಕೊಲೆ ಶಂಕಿತ

  ಫೇಸ್ಬುಕ್ ನಿಂದ ಇನ್ನೊಂದು ಸಹಾಯವಾದ ವಿಷಯವೇನೆಂದರೆ , ಫಿಲಿಪಿನೋ ಪೊಲೀಸರು ಮೂರು ಸಶಸ್ತ್ರ ದರೋಡೆಗಳ ಸರಣಿಯಲ್ಲಿ ಒಂಬತ್ತು ಜನರನ್ನು ಕೊಲೆ ಮಾಡಿರಬಹುದೆಂದು ಮಾರ್ಕ್ ಡಿಜನ್ರನ್ನು ಬಂಧಿಸಿದ್ದಾರೆ. ಫೇಸ್ಬುಕ್ ನಲ್ಲಿ ಡೈಝನ್ನ ಫೋಟೋಗಳನ್ನು ಪ್ರತ್ಯಕ್ಷ ಸಾಕ್ಷಿ ಗಳಿಗೆ ತೋರಿಸಲಾಯಿತು. ಅವರು ಡೈಸನ್ರನ್ನು ಕೊಲೆ ಮಾಡಿ ಓಡಿಹೋದವನು ಇವನೇ ಎಂದು ಗುರುತಿಸಿದರು.

  14. ಕುಟಿಲ ದೇಶಭ್ರಷ್ಟ ನ ಸೆರೆ

  ಬ್ಯಾಂಕನ್ನು ವಂಚಿಸಿದ್ದ ಮೋಸಗಾರ ಪ್ಯುಗಿಟಿವ್ ಮ್ಯಾಕ್ಸಿ ಸೊಪೋ ಪೊಲೀಸರಿಗೆ ಸಿಗಬಾರದೆಂದು ಬಂಧನದಿಂದ ತಪ್ಪಿಸಿಕೊಳ್ಳಲು ಮೆಕ್ಸಿಕೊಕ್ಕೆ ಪಲಾಯನ ಮಾಡಿದ. ಆದಾಗ್ಯೂ, ಅವನು ನಾನು "ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ " ಎಂದು ಬಡಾಯಿಕೊಚ್ಚಿಕೊಳ್ಳುವ ಪೋಸ್ಟ್ ಗಳನ್ನು ಫೇಸ್ಬುಕ್ನಲ್ಲಿ ಹಾಕಲು ಪ್ರಾರಂಭಿಸಿದನು ಮತ್ತು ಮಾಜಿ ಯು.ಎಸ್. ಜಸ್ಟೀಸ್ ಡಿಪಾರ್ಟ್ಮೆಂಟ್ ಅಧಿಕೃತ (ಸ್ಮಾರ್ಟ್ ಮೂವ್) ಸಹ ಇವನಿಗೆ ಸ್ನೇಹಿತರಾಗಿದ್ದರು, ಅವರು ಅಧಿಕಾರಿಗಳು ಸೊಪೋ ಅವನ ವಿಳಾಸವನ್ನು ಪತ್ತೆಹಚ್ಚಲು ಮತ್ತು ಅವನನ್ನು ಬಂಧಿಸಲು ಸಹಾಯ ಮಾಡಿದರು.

  13. ಫೇಸ್ಬುಕ್ ಸಂಭಾಷಣೆ ಮೂಲಕ ಸಿಕ್ಕಿಬಿದ್ದ "ಸ್ಕಾರ್ಫೇಸ್"

  ಮಾಫಿಯಾ ಹಿಟ್ಮ್ಯಾನ್ ಪಾಸ್ಕ್ವಾಲ್ ಮ್ಯಾನ್ಫ್ರೆಡಿ, ಅಲಿಯಾಸ್ "ಸ್ಕಾರ್ಫೇಸ್" ಪೊಲೀಸ್ ಕೈಗೆ ಸಿಕ್ಕಿಬಿದ್ದನು,ಇದು ಸಾಧ್ಯವಾದದ್ದು ಫೇಸ್ ಬುಕ್ ನಿಂದ. ಮ್ಯಾನ್ಫ್ರೆಡಿ ಆಗಾಗ್ಗೆ ಫೇಸ್ಬುಕ್ಗೆ ಲಾಗ್ ಇನ್ ಆಗಿದ್ದಾನೆ, ಅವನ ಈ ಫೇಸ್ಬುಕ್ ಚಟುವಟಿಕೆ ಪೊಲೀಸ್ ಅವನ ಇಂಟರ್ನೆಟ್ ಕೀಲಿಯಿಂದ ಸಿಗ್ನಲ್ ಪತ್ತೆಹಚ್ಚಲು ಮತ್ತು ಅವನು ಅಡಗಿಕೊಂಡಿರುವ ಜಾಗವನ್ನು ಪತ್ತೆ ಮಾಡಲು ಸಾಧ್ಯವಾಯಿತು.

  12. ಜೈಲಿಗೆ ಕಳಿಸಿದ ಫೇಸ್ಬುಕ್ನ ರೋಮ್ಯಾಂಟಿಕ್ ಕಚ್ಚಾಟ

  ಇಂಡೋನೇಷಿಯನ್ ಹದಿಹರೆಯದ ಫರಾಹ್ ನೂರ್ ಅರಾಫಾರನ್ನು ಅವರು "ಪ್ರೀತಿಸುತ್ತಿದ್ದ ಪ್ರಸ್ತುತ ವೈರಿಯಾಗಿರುವ " ಫೆಲ್ಲಿ ಫಂಡಿನಿ ಅವರನ್ನು ಫೇಸ್ಬುಕ್ ಮೂಲಕ ಅವಮಾನಿಸಿದ್ದ ಕ್ಕಾಗಿ 75 ದಿನಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅರಾಫಹ್ ಫಂಡಿನಿ ಯನ್ನು ನಾಯಿ ಮತ್ತು ಹಂದಿ ಎಂದು ಕರೆದಿದ್ದಾರೆ. ಅವಳನ್ನು ದಪ್ಪಗಿದ್ದಾಳೆ ಮತ್ತು ಸ್ವೇಚ್ಛಾಚಾರ ಮಾಡುತ್ತಾಳೆಂದೂ ಆರೋಪಿಸಿದನು. ನ್ಯಾಯಾಧೀಶರು ಅರಾಫಾನನ್ನು ಮಾನನಷ್ಟ ಅಪರಾಧದ ಮೇಲೆ ಅಪರಾಧಿ ಎಂದು ತೀರ್ಮಾನಿಸಿದರು.

  11. ಫೇಸ್ಬುಕ್ ಫೋಟೋದಿಂದ ಸಿಕ್ಕಿಬಿದ್ದ ಚಿಕ್ಕವಯಸ್ಸಿನಲ್ಲೇ ಕುಡಿಯುತ್ತಿದ್ದ ವಿದ್ಯಾರ್ಥಿ

  ಆಡಮ್ ಬಾಯೆರ್, 19 ರ ವಯಸ್ಸಿನಲ್ಲಿ, ಆಕರ್ಷಕ ಹುಡುಗಿಯಿಂದ ಬಂದ ಫೇಸ್ಬುಕ್ ಸ್ನೇಹ ಕೋರಿಕೆಯನ್ನು,ಅವಳು ಅಪರಿಚಿತರಾಗಿದ್ದರೂ ಸಹ ಸ್ವೀಕರಿಸಿದರು. ಬಾಯೆರ್ ಬೀರ್ ಬಾಟಲ್ ಹಿಡಿದುಕೊಂಡಿರುವ ಫೋಟೋಗಳನ್ನು ಆ ಹುಡುಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದಳು. ಇದರಿಂದ, ಬಾಯೆರ್ ಚಿಕ್ಕ ವಯಸ್ಸಿನಲ್ಲಿ ಕುಡಿಯುತ್ತಿದ್ದಾನೆಂದೂ, ಇವನು ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಎಂದು ಪರಿಗಣಿಸಲಾಯಿತು.

  10. 13 ವಯಸ್ಸಿನ ಮಗಳನ್ನು ಫೇಸ್ಬುಕ್ ನಲ್ಲಿ ಸೆಕ್ಸ್ ಗಾಗಿ ಕರೆದ ತಂದೆ

  39 ರ ಹರೆಯದ ಜಾನ್ ಫೋರ್ಹ್ಯಾಂಡ್ 13 ವರ್ಷ ವಯಸ್ಸಿನ ಮಗಳಿಗೆ ಫೇಸ್ಬುಕ್ ಮೂಲಕ ಸೆಕ್ಸ್ ಮಾಡಲು ಕೋರಿದ್ದಾನೆ ಎನ್ನುತ್ತಾರೆ ಪೊಲೀಸ್. ತಂದೆ ಎಂಬ ಪದಕ್ಕೇ ಕಳಂಕ ವಾಗಿದ್ದ ಫೋರ್ಹ್ಯಾಂಡ್ ಸೆಕ್ಸ್ ಮಾಡಲು ಭೇಟಿಯಾಗು ಎಂದು ತನ್ನ ಸ್ವಂತ ಮಗಳನ್ನೇ ಕರೆದಿದ್ದಾನೆ. ಆ ಹುಡುಗಿ ಈ ವಿಷಯವನ್ನು ತನ್ನ ತಾಯಿಗೆ ತಿಳಿಸುತ್ತಾಳೆ. ತಾಯಿ ಇದನ್ನು ಪೊಲೀಸರಿಗೆ ತಿಳಿಸುತ್ತಾಳೆ. ಭೇಟಿ ಮಾಡಲು ಮೊದಲೇ ನಿರ್ಧರಿಸಿದ್ದ ಸ್ಥಳದಲ್ಲಿ ಜಾನ್ ಫೋರ್ಹ್ಯಾಂಡ್ ಬಂದಾಗ ರಾಜ್ಯ ಚೈಲ್ಡ್ ಪ್ರಿಡೇಟರ್ ಯುನಿಟ್ ಮತ್ತು ಎಫ್ರಾಟಾ ಪೊಲೀಸರು ಫೋರ್ಹ್ಯಾಂಡ್ನನ್ನು ಬಂಧಿಸಿದರು.

  9. ಫೇಸ್ ಬುಕ್ ನಿಂದ ಬಂದಿಯಾದ ಗ್ಯಾಂಗ್

  ಪೋಲಿಸ್ ಪ್ರಕಾರ, ಇವಾನ್ ಪಡಿಲ್ಲಾ ಗ್ಯಾಂಗ್ ಸದಸ್ಯರ ಫೇಸ್ಬುಕ್ ಪ್ರೊಫೈಲ್ ಪೋಲಿಸರಿಗೆ ಡ್ರಗ್ಸ್ ನ ಚಟ ಪೂರೈಸಿಕೊಳ್ಳಲು ಶ್ರೀಮಂತರನ್ನು ದರೋಡೆ ಮಾಡುತ್ತಿದ್ದ ಡೌಲಿನ ಯುವಕ ಮತ್ತು ಯುವತಿಯರ ಗ್ಯಾಂಗನ್ನು ಹಿಡಿಯಲು ಸುಳಿವು ನೀಡಿದೆ.

  8. ಕಾಣೆಯಾಗಿದ್ದ ಮಕ್ಕಳನ್ನು ಹದಿನೈದು ವರ್ಷಗಳ ನಂತರ ಕಂಡು ಕೊಂಡ ತಾಯಿ

  15 ವರ್ಷಗಳ ನಂತರ, ಪ್ರಿನ್ಸ್ ಸಾಗಾ ಎಂಬ ತಾಯಿ ಅಪಹರಣ ಗೊಳ್ಳಲಾದ ತನ್ನ ಮಕ್ಕಳೊಂದಿಗೆ ಫೇಸ್ಬುಕ್ನಲ್ಲಿ ಮರು ಸಂಪರ್ಕಿಸಿದಳು. ಸಾಗಾಳ ಮಗ ಮತ್ತು ಮಗಳ ತಂದೆ ಫೌಸ್ಟಿನೊ ಉಟ್ರೆರಾ , 1995 ರಲ್ಲಿ ಅವರ ಕ್ಯಾಲಿಫೋರ್ನಿಯಾ ಮನೆಯಿಂದ ಮಕ್ಕಳನ್ನು ಕರೆದೊಯ್ದಿದ್ದರು. ಆರಂಭದಲ್ಲಿ ತನ್ನ ಮಗಳನ್ನು ಫೇಸ್ಬುಕ್ ಮೂಲಕ ಸಂಪರ್ಕಿಸಿದ ನಂತರ, ಸಾಗಾ ಪೊಲೀಸರಿಗೆ ಈ ಮಾಹಿತಿಯನ್ನು ಕೊಟ್ಟಿದ್ದಾರೆ. ಫೇಸ್ಬುಕ್ ನಿಂದ ಆ ಹುಡುಗಿಯನ್ನು ಪತ್ತೆಹಚ್ಚಿ ಸೆಂಟ್ರಲ್ ಫ್ಲೋರಿಡಾಕ್ಕೆ ಕರೆದುಕೊಂಡು ಬರಲು ಮತ್ತು ಫೌಸ್ಟಿನೊ ಉಟ್ರೆರಾ ಅವರನ್ನು ಬಂಧಿಸಲು ಅನುಕೂಲವಾಯಿತು.

  7. ಫೇಸ್ ಬುಕ್ ನಿಂದ ಸಿಕ್ಕಿಬಿದ್ದ ಅಪರಾಧಿ

  18 ವಯಸ್ಸಿನ ಪೌಲಾ ಆಶರ್ , ನಾಲ್ಕು ಹದಿಹರೆಯದವರ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರೊಂದಕ್ಕೆ ಡಿಕ್ಕಿ ಹೊಡೆದದ್ದೂ ಅಲ್ಲದೆ ಕುಡಿದು ವಾಹನ ಚಲಾಯಿಸುತ್ತಿದ್ದರು ಮತ್ತು ಅಲ್ಲಿಂದ ಕಳಚಿಕೊಂಡು ಓಡಿಹೋಗಿದ್ದರು. ನಂತರ ಅದರ ಬಗ್ಗೆ ಫೇಸ್ಬುಕ್ ನಲ್ಲಿ ತಮಾಷೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಅವರನ್ನು ಜೈಲಿಗೆ ಕಳುಹಿಸಲಾಯಿತು ಕಾರಿನಲ್ಲಿರುವ ಹದಿಹರೆಯದವರ ಪೋಷಕರು ಆಶರ್ ಅವರ ಸಂದೇಶವನ್ನು ನೋಡಿ, ಪೋಸ್ಟ್ ಅನ್ನು ತೆಗೆದುಹಾಕಲು ಸ್ಥಳೀಯ ನ್ಯಾಯಾಧೀಶರನ್ನು ಕೇಳಿದರು. ಆದರೆ ಆಶರ್ ನಿರಾಕರಿಸಿದರು. ಇದಕ್ಕಾಗಿ ಅವರಿಗೆ ಎರಡು ದಿನಗಳ ಜೈಲು ಶಿಕ್ಷೆ ವಿಧಿಸಲಾಯಿತು.

  6. "ಕ್ಯಾಚ್ ಮಿ ಇಫ್ ಯು ಕ್ಯಾನ್"

  ವಿಕ್ಟರ್ ಬರ್ಗೋಸ್, ಪೊಲೀಸರು ಹಿಡಿಯಲು ಯತ್ನಿಸುತ್ತಿದ್ದ ಮೊಸ್ಟ್ ವಾಂಟೆಡ್ ಪಟ್ಟಿಯಲ್ಲಿನ ಅಪರಾಧಿ. ಫೇಸ್ಬುಕ್ ಕ್ಯಾನ್"ಕ್ಯಾಚ್ ಮಿ ಇಫ್ ಯು ಕ್ಯಾನ್! ನಾನು ಬ್ರೂಕ್ಲಿನ್ನಲ್ಲಿದ್ದೇನೆ " ಎಂದು ಪೊಲೀಸರಿಗೆ ಸವಾಲೊಡ್ಡಿದ್ದಾರೆ ಪೊಲೀಸರು ಬಿಟ್ಟಾರಾ!! ಬ್ರೂಕ್ಲಿನ್ಗೆ ಹೋಗಿ ಅವನನ್ನು ಹಿಡಿದರು.

  5. ಪ್ಲಾಂಕಿಂಗ್ ಮಾಡುತ್ತಿದ್ದ ದುಷ್ಕರ್ಮಿ

  ದಕ್ಷಿಣ ಆಸ್ಟ್ರೇಲಿಯಾದ ರಾಜ್ಯದಲ್ಲಿನ ಗ್ಲ್ಯಾಡ್ಸ್ಟೋನ್ನ, 20 ವಯಸ್ಸಿನ ನೇಟ್ ಷಾ,ತನ್ನ ಫೇಸ್ ಬುಕ್ ನಲ್ಲಿ ಪೊಲೀಸ್ ಸಿಬ್ಬಂದಿಗಳ ಕ್ರೂಸ್ ಮೇಲೆ ಪ್ಲಾಂಕಿಂಗ್ ಮಾಡುತ್ತಿರುವ ಹುಡುಗಾಟದ ಭಂಗಿಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದನು. ಇದನ್ನು ಸ್ಥಳೀಯ ಪೊಲೀಸರು ನೋಡಿ ಪೋಲೀಸರ ಸ್ವತ್ತಿನಲ್ಲಿ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ಕಾನೂನನ್ನು ಉಲ್ಲಂಘಿಸಿ ದನೆಂದು ಅವನಿಗೆ ನೋಟೀಸನ್ನು ಹೊರಡಿಸಿದರು.

  4. ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಅವಿವೇಕಿ

  ಈ ಸೊಗಸಾದ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಎರಡು ಬಾರಿ ಚಾಲಕನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ನೆಂದು ಜಾಕೋಬ್ ಕಾಕ್ಸ್-ಬ್ರೌನ್ ಮೇಲೆ ಆರೋಪ ಹೊರಿಸಲಾಯಿತು . ದುರದೃಷ್ಟವಶಾತ್, ಫೇಸ್ಬುಕ್ ಪೋಸ್ಟ್ ಗಳಿಂದ ಅವನು ಮಾದಕವಸ್ತುಗಳ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂಬುದನ್ನು ರುಜುವಾತು ಮಾಡಲು ಸಾಕಷ್ಟು ಸಾಕ್ಷಾಧಾರಗಳು ಸಿಗಲಿಲ್ಲ.

  3. ವ್ಯಂಗ್ಯಾತ್ಮಕ ಫೇಸ್ಬುಕ್ ಕಮೆಂಟನ್ನು ಮಾಡಿದ್ದಕ್ಕಾಗಿ ಜೈಲು ಸೇರಿದ ಜಸ್ಟಿನ್

  19ರ ಜಸ್ಟಿನ್ ಕಾರ್ಟರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಒಂದು ವ್ಯಂಗ್ಯದ ಪುರಾವೆ ಇಲ್ಲದ ಹೇಳಿಕೆಯನ್ನು ಅಣಕಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಫೆಬ್ರವರಿ 2013 ರಿಂದ ಜೈಲಿನಲ್ಲಿ ಇದ್ದಾರೆ. ಅವರ ಅನಿಸಿಕೆಯ ಆ ಹೇಳಿಕೆ ಹೀಗಿದೆ : " ಇಮಾ ಶಿಶುವಿಹಾರದ ಮಕ್ಕಳನ್ನು ಶೂಟ್ ಮಾಡುವುದು / ಮುಗ್ಧ ಮಕ್ಕಳ ರಕ್ತ ಕೋಡಿ ಹರಿಯುವುದನ್ನು ನೋಡಿ,ಬಡಿಯುತ್ತಿರುವ ಶಿಶುವಿನ ಹೃದಯವೊಂದನ್ನು ತಿನ್ನುವುದು". "ಅವರು ಮತ್ತು ಅವರ ಕುಟುಂಬ ಫೇಸ್ಬುಕ್ ಸಂದೇಶಗಳು ಕೇವಲ ವ್ಯಂಗ್ಯೋಕ್ತಿಯಷ್ಟೇ ಎಂದು ಎಷ್ಟೇ ಹೇಳಿದರೂ ಪ್ರಸ್ತುತ ಅವರು ವಿಚಾರಣೆಗಾಗಿ ಸುತ್ತೋದು, ತೀರ್ಪಿಗಾಗಿ ಕಾಯುತ್ತಿರುವುದೇ ಆಗಿಬಿಟ್ಟಿದೆ.

  2. ಕಾಣೆಯಾದ ಮಕ್ಕಳ ಬಗ್ಗೆ ಫೇಸ್ ಬುಕ್ಕಲ್ಲಿ ಅಸ್ವಸ್ಥ ತಮಾಷೆಗಳನ್ನು ಮಾಡಿದ ಮ್ಯಾಥ್ಯೂ ವುಡ್ಸ್

  ಇಂಗ್ಲೆಂಡಿನ ಹದಿಹರೆಯದ ಮ್ಯಾಥ್ಯೂ ವುಡ್ಸ್, ಕಾಣೆಯಾಗಿದ್ದ ಏಪ್ರಿಲ್ ಜೋನ್ಸ್(5), ಮತ್ತು ಮ್ಯಾಡೆಲೀನ್ ಮೆಕ್ಯಾನ್(4) ರ ಬಗ್ಗೆ ಹಲವಾರು ಅಸಮರ್ಪಕ ಕಾಮೆಂಟ್ಗಳನ್ನು ಮಾಡಿದ ನಂತರ ಮೂರು ತಿಂಗಳು ಜೈಲು ಶಿಕ್ಷೆಗೆ ಒಳಗಾದರು. ವುಡ್ಸ್ ಫೇಸ್ಬುಕ್ನ ಸಂದೇಶಗಳಲ್ಲಿ ಈ ಕೆಳಗಿನವುಗಳು ಸೇರಿವೆ: "ನನಗೆ ಬೆಳಿಗ್ಗೆ ಎಚ್ಚರವಾದಾಗ ಇಬ್ಬರು ಸುಂದರವಾದ ಬಾಲಕಿಯರ ಜೊತೆ ಒಂದು ಟ್ರಾನ್ಸಿಟ್ ವ್ಯಾನ್ ನ ಹಿಂಭಾಗದಲ್ಲಿದೆ. ಏಪ್ರಿಲ್ ನನ್ನು ನಿರಾಶದಾಯಕ ಸ್ಥಳದಲ್ಲಿ ಕಂಡುಕೊಂಡೆ ಮತ್ತು "ಅಂತಹ ಮನಸ್ಸಿನವರು ಮಗುವನ್ನು ಅಪಹರಿಸದೆ ಬಿಟ್ಟಾರಾ?"

  1. ಗಲಭೆಯನ್ನು ಪ್ರೋತ್ಸಾಹಿಸಿದ್ದಕ್ಕೆ 4 ವರ್ಷ ಜೈಲು ಶಿಕ್ಷೆ ಅನುಭವಿಸಿದವರು

  ಇಂಗ್ಲೆಂಡ್ನಲ್ಲಿ ಗಲಭೆ ನಡೆಸಲು ಮತ್ತು ಪ್ರೋತ್ಸಾಹಿಸಲು ಫೇಸ್ಬುಕ್ ಅನ್ನು ಬಳಸಿಕೊಂಡಿದ್ದರ ಪರಿಣಾಮವಾಗಿ ಜೋರ್ಡಾನ್ ಬ್ಲ್ಯಾಕ್ಶಾವ್(20) ಮತ್ತು ಪೆರ್ರಿ ಸಟ್ಕ್ಲಿಫ್-ಕೀನನ್(22) ಇಬ್ಬರಿಗೂ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. "ಸ್ಮಾಷ್ ಡೌನ್ ಇನ್ ನಾರ್ತ್ವಿಚ್ ಟೌನ್" ಫೇಸ್ಬುಕ್ ಈವೆಂಟ್ ಅನ್ನು ಬ್ಲ್ಯಾಕ್ಶಾವ್ ರಚಿಸಿದರು ಮತ್ತು ಸುಟ್ಕ್ಲಿಫ್-ಕೀನನ್ ಅವರು "ದಿ ವಾರಿಂಗ್ಟನ್ ರಾಯಿಟ್ಸ್ಗಾಗಿ" ಪುಟವನ್ನು ರಚಿಸಿದರು.

  ಇದೆಲ್ಲಾ ಓದಿದ ಮೇಲೆ ನಿಮ್ಮ ಅನಿಸಿಕೆ ಏನು ? ಇವರೆಲ್ಲಾ ಎಂಥ ಅವಿವೇಕಿಗಳು, ಮೂರ್ಖರು ಎಂದು ಯೋಚಿಸುತ್ತಿದ್ದೀರಾ ? ಹೌದು. ವಿವೇಚಿಸದೆ ಮನಸ್ಸಿಗೆ ಬಂದಿದ್ದೆಲ್ಲವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದರೆ ಹೀಗೆ ಆಗೋದು. ವಿಶೇಷವಾಗಿ ಹೇಳಬೇಕಾಗೇನಿಲ್ಲ, ಇದನ್ನು ಓದಿದ ನೀವೆಲ್ಲರೂ ಇನ್ಮುಂದೆ ಫೇಸ್ಬುಕ್ ನಲ್ಲಿ ಏನು ಪೋಸ್ಟ್ ಮಾಡಬೇಕಾದರೂ ಸರಿ-ತಪ್ಪುಗಳನ್ನು ಪರಿಶೀಲಿಸಿಯೇ ಮಾಡುತ್ತೀರಾ. ಅಲ್ಲವೇ.

  English summary
  25 Dumb Facebook Posts That Got People In Trouble With The Law. To know more this visit kannada.gibot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more