ಫೇಸ್‌ಬುಕ್ ಬಗ್ಗೆ ನಂಬಲು ಕಷ್ಟವಾದರೂ ನೀವು ಒಪ್ಪಲೇಬೇಕಾದ ಸಂಗತಿ ಇದು!!

ದಿನಂಪ್ರತಿ ಮಾನಸಿಕ ನೆಮ್ಮದಿಯೇ ಇಲ್ಲದೇ ಕೊರಗುವ ನಾವು ಅದಕ್ಕೆ ಕಾರಣ ಏನು ಎಂದು ಹುಡುಕಲು ಮುಂದಾಗಿಲ್ಲ.!!

|

ಫೇಸ್‌ಬುಕ್ ಬಳಸುತ್ತಿರುವ ಬಹುತೇಕ ಎಲ್ಲರಿಗೂ, ಅವರ ಜೀವನದ ಅವಿಭಾಜ್ಯ ಅಂಗವಾಗಿ ಫೇಸ್‌ಬುಕ್ ಬದಲಾಗಿಹೋಗಿದೆ!! ಪ್ರತಿದಿನವೂ ತಮ್ಮ ಅಪ್‌ಡೇಟ್ಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರಿಂದ ಎಲ್ಲರಿಗೂ ಫೇಸ್‌ಬುಕ್ ಅಂದರೆ ಏನೋ ಒಂದು ಪ್ರೀತಿ.

ಹೌದು, ಇಂದು ಎಲ್ಲ ಯುವಜನತೆ ಫೆಸ್‌ಬುಕ್‌ನಲ್ಲಿ ಬಂಧಿಯಾಗಿದ್ದಾರೆ. ಹಾಗಾಗಿಯೇ, ತಂತ್ರಜ್ಞಾನ ಮತ್ತು ಯಾಂತ್ರಿಕತೆಯು ಹಲವು ಕೊಡುಗೆಗಳನ್ನು ಬಳಸುತ್ತಿರುವ ನಾವು ಅದರಿಂದ ನಮಗೆ ಆಗುತ್ತಿರುವ ಸಣ್ಣ ಸಣ್ಣ ನಷ್ಟವನ್ನು ಪರಿಗಣಿಸುತ್ತಿಲ್ಲ. ಮಾನವೀಯ ಮೌಲ್ಯಗಳು ನಮ್ಮಿಂದ ಎಷ್ಟು ದೂರ ಹೋಗಿವೆ ಎಂಬುದನ್ನು ತಿಳಿಯಲು ಮುಂದಾಗಿಲ್ಲ.

ದಿನಂಪ್ರತಿ ಮಾನಸಿಕ ನೆಮ್ಮದಿಯೇ ಇಲ್ಲದೇ ಕೊರಗುವ ನಾವು ಅದಕ್ಕೆ ಕಾರಣ ಏನು ಎಂದು ಹುಡುಕಲು ಮುಂದಾಗಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಿಂದ ಆಗುತ್ತಿರುವ ತೊಂದರೆಗಳೇನು? ಫೇಸ್‌ಬುಕ್‌ನಿಂದ ನಮಗೆ ಹೇಗೆ ಮಾರಕ? ನಾವು ಮಾಡಬೇಕಾದ ಕಾರ್ಯಗಳೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ನೊ ಒನ್ ಫ್ರೆಂಡ್ಸ್ ಇನ್‌ ರಿಯಾಲಿಟಿ!!

ನೊ ಒನ್ ಫ್ರೆಂಡ್ಸ್ ಇನ್‌ ರಿಯಾಲಿಟಿ!!

ಸೋ ಮೆನಿ ಫ್ರೆಂಡ್ಸ್ ಇನ್‌ ಫೇಸ್‌ಬುಕ್‌ ಬಟ್ ನೊ ಒನ್ ಫ್ರೆಂಡ್ಸ್ ಇನ್‌ ರಿಯಾಲಿಟಿ' ಎನ್ನುವ ಮಾತು ನಿಜ!! ಸಾವಿರಾರು ಮೈಲಿ ದೂರದಲ್ಲಿ ಇರುವವರನ್ನು ಗೆಳೆಯರನ್ನಾಗಿಸಿಕೊಳ್ಳುವ ಇಂದಿನ ಯುವಜನತೆ ಪಕ್ಕದಲ್ಲಿರುವ ತಂದೆತಾಯಿಯ ಸ್ನೇಹ, ಪ್ರೀತಿ, ವಿಶ್ವಾಸವನ್ನೇ ಪಡೆಯುವುದನ್ನೆ ಮರೆಯುತ್ತಿದ್ದಾರೆ.!!

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಬದಲಾಗುತ್ತಿರುವ ಸೆಲ್ಫಿ ಜಗತ್ತು!!

ಬದಲಾಗುತ್ತಿರುವ ಸೆಲ್ಫಿ ಜಗತ್ತು!!

ಫೆಸ್‌ಬುಕ್ ಕಾಲದಲ್ಲಿ ಯುವಜನತೆ ಸೆಲ್ಫಿಯ ಗೀಳಿಗೆ ಬಿದ್ದಿದ್ದಾರೆ.ದಿನಕ್ಕೆ ಒಂದಾದರೂ ಸೆಲ್ಫಿ ತೆಗೆದು ಫೇಸ್‌ಬುಕ್‌ಗೆ ಹಾಕದಿದ್ದರೆ ಅವರಿಗೆ ಸಮಾದಾನವೇ ಇರುವುದಿಲ್ಲ.!! ಅಂತವರು ಎಲ್ಲೆಡೇಯೂ ಸೆಲ್ಫಿ ಸೆಲ್ಫಿ ಎಂದು ಫೋಸ್‌ ನೀಡುತ್ತಿರುತ್ತಾರೆ. ಪ್ರೀತಿಯಿಂದ ಮಾತನಾಡದವರ ಜೊತೆ ಸೆಲ್ಫಿ ತೆಗೆದು "ಮಿಸ್‌ ಯು' ಎನ್ನುತ್ತಾರೆ.!!

ಫೇಸ್‌ಬುಕ್‌ನಿಂದ ನೆಮ್ಮದಿಯ ಕೊರತೆ

ಫೇಸ್‌ಬುಕ್‌ನಿಂದ ನೆಮ್ಮದಿಯ ಕೊರತೆ

ಇಂದು ಫೇಸ್‌ಬುಕ್‌ ಬಳಸದ ಜನರೇ ಇಲ್ಲ. ಹಾಗಾಗಿ, ನೀವು ನಂಬಲು ಕಷ್ಟವಾದರೂ ನೀವು ಒಪ್ಪಲೇಬೇಕಾದ ಸಂಗತಿ ಎಂದರೆ ಇದು.!! ಹೌದು, ಫೇಸ್‌ಬುಕ್‌ ಬಳಕೆ ಮಾಡುವವರೆಲ್ಲಾ ಒಂದು ರೀತಿಯಾಗಿ ತಮ್ಮ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಮುಂಖಾಂತಹ ಸಂತೋಷವನ್ನು ಹಂಚಿಕೊಳ್ಳುವುದರ ಬದಲು ಮನಸ್ಸನ್ನು ಹಾಳುಮಾಡುವ ವಿಚಾರಗಳನ್ನು ಹೆಚ್ಚು ತಲುಪುತ್ತಾರೆ ಎಂದು ವರದಿ ಹೇಳಿದೆ.!!

ಅಜ್ಞಾನಕ್ಕೆ ತುತ್ತಾಗುತ್ತಿದ್ದಾರೆ.!!

ಅಜ್ಞಾನಕ್ಕೆ ತುತ್ತಾಗುತ್ತಿದ್ದಾರೆ.!!

ಯುವಜನತೆಗೆ ಫೇಸ್‌ಬುಕ್ ಮೂಲಕ ಎಲ್ಲವೂ ಮುಚ್ಚುಮರೆ ಇಲ್ಲದೆ ಸಿಗುತ್ತಲಿದೆ. ಇದರಿಂದ ಅವರ ಮನೋಭಾವದಲ್ಲಿ ಸಾವಿರಾರು ಕೆಟ್ಟ ಆಲೋಚನೆಗಳು ಮೂಡತ್ತಿವೆ.!! ಯಾರೋ ಒಬ್ಬ ಬರೆದ ಸುಳ್ಳುಸುದ್ದಿ ಅವರ ಮನವನ್ನು ಕಲಕಿಬಿಡುತ್ತದೆ.!! ತಮ್ಮ ನಂಬಿಕೆಗಳಿಗೆ ಪೂರಕವಾದ ವಿಷಯಗಳಿಗಷ್ಟೆ ಅವರು ಬೆಲೆ ನೀಡುತ್ತಾರೆ.!!

ಎಕ್ಸಾಮ್ ಶಾರ್ಟ್‌ಫಾರ್ಮ್ ಭಾಷೆ!!

ಎಕ್ಸಾಮ್ ಶಾರ್ಟ್‌ಫಾರ್ಮ್ ಭಾಷೆ!!

ನಿಮಗೆ ಗೊತ್ತಾ? ವರದಿಯೊಂದರ ಪ್ರಕಾರ ಹೆಚ್ಚು ಹೆಚ್ಚು ಎಲ್ಲರೂ ಟಚ್ ಆಂಡ್‌ ಟೈಪ್‌ಗೆ ಮಾರುಹೋಗಿದ್ದಾರೆ. ಇನ್ನು ಚಾಟಿಂಗ್ ಮಾಡುವಾಗಂತಲೂ ಭಾಷೆಯನ್ನು ಕಟ್‌ ಮಾಡಿ ಬಳಕೆ ಮಾಡುತ್ತಾರೆ.!! ಹಾಗಾಗಿಯೇ, ಕಾಲೇಜು ಎಕ್ಸಾಮ್‌ಗಳಲ್ಲಿಯೂ how r u?, wt abt u? ಭಾಷೆಯೂ ಬಳಕೆಗೆ ಬಂದಿದೆ.!!

ಮಾರ್ಕ್ಸ್‌ಕಾರ್ಡ್‌ಗಿಂತ ಫೇಸ್‌ಬುಕ್ ಲೈಕ್‌ಗೆ ಹೆಚ್ಚು ಬೆಲೆ!!

ಮಾರ್ಕ್ಸ್‌ಕಾರ್ಡ್‌ಗಿಂತ ಫೇಸ್‌ಬುಕ್ ಲೈಕ್‌ಗೆ ಹೆಚ್ಚು ಬೆಲೆ!!

ಫೇಸ್‌ಬುಕ್‌ನಲ್ಲಿ ಒಂದು ಫೋಟೊ ಹಾಕಿದ ತಕ್ಷಣವೇ ಇಂದಿನವರಿಗೆ ನೂರಾರು ಲೈಕ್‌ ಬರಬೇಕು, ನೂರಾರು ಕಾಮೆಂಟ್‌ ಬರಬೇಕು. ಇಲ್ಲವಾದರೆ ಅವರಿಗೆ ನೆಮ್ಮದಿಯೇ ಇರುವುದಿಲ್ಲ.!! ಆದರೆ, ಮಾರ್ಕ್ಸ್‌ಕಾರ್ಡ್‌ನಲ್ಲಿ ಸೊನ್ನೆ ಸುತ್ತಿದರೂ ಅವರಿಗೇನು ಪಶ್ಚಾತಾಪವಿಲ್ಲಾ!!

ಬದಲಾಗಬೇಕಿದೆ.!!

ಬದಲಾಗಬೇಕಿದೆ.!!

ಫೇಸ್‌ಬುಕ್ ನಮ್ಮ ಜೀವನದಲ್ಲಿ ನಮಗೆ ದೊರೆತಿರುವ ಒಂದು ಭಾಗವಷ್ಟೆ! ಹಾಗಾಗಿ, ಫೇಸ್‌ಬುಕ್ ಪ್ರಪಂಚದಿಂದ ಹೊರಬಂದು ವಾಸ್ತವ ಪ್ರಪಂಚದಲ್ಲಿ ಬದುಕಿ.!! ಮನಸ್ಸನ್ನು ಕೆಡಿಸಿಕೊಂಡು ಸಮಾಜದ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳುಮಾಡಿಕೊಂಡರೆ, ನಿಮ್ಮನ್ನು ಬಿಟ್ಟು ಯಾರಿಗೂ ನಷ್ಟವಿಲ್ಲಾ!! ಏನಂತಿರಾ?

<strong>ಜಿಎಸ್‌ಟಿ ಎಫೆಕ್ಟ್..ಮೊಬೈಲ್ ಮಾರಾಟದಲ್ಲಿ ಭಾರಿ ಇಳಿಕೆ!.ಚೀನಾ ಕಂಪೆನಿಗಳು ಕಂಗಾಲು!!</strong>ಜಿಎಸ್‌ಟಿ ಎಫೆಕ್ಟ್..ಮೊಬೈಲ್ ಮಾರಾಟದಲ್ಲಿ ಭಾರಿ ಇಳಿಕೆ!.ಚೀನಾ ಕಂಪೆನಿಗಳು ಕಂಗಾಲು!!

Best Mobiles in India

English summary
You might think it's this awesome, free resource to keep you connected to your friends and family, but it's slowly breaking you.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X