2018 ರಲ್ಲಿ ಆಘಾತಗಳ ಮೇಲೆ ಆಘಾತ ಎದುರಿಸಿದ ಫೇಸ್ ಬುಕ್

|

ಫೇಸ್ ಬುಕ್. ಅತ್ಯಂತ ಪ್ರಸಿದ್ಧ ಸಾಮಾಜಿಕ ಜಾಲತಾಣ. ಅದೆಷ್ಟೋ ಮಿಲಿಯನ್ ಗಟ್ಟಲೆ ಬಳಕೆದಾರರು ಇದ್ದಾರೆ. ಆದರೆ ಫೇಸ್ ಬುಕ್ ಗೆ 2018 ಅಷ್ಟೇನು ಸುಖಕರವಾಗಿರಲಿಲ್ಲ. 2018 ರ ಮಾರ್ಚ್ ನಿಂದಲೇ ಫೇಸ್ ಬುಕ್ ಸಂಸ್ಥೆಗೆ ಸಮಸ್ಯೆಗಳು ಆರಂಭವಾಗಿದ್ದವು. ಆದಾದ ಮೇಲೆ ಒಂದಾದ ಮೇಲೊಂದರಂತೆ ಫೇಸ್ ಬುಕ್ ಗೆ ಆಘಾತಗಳು ಎದುರಾಯಿತು. ಹಾಗಾದ್ರೆ ಯಾಕೆ 2018 ಫೇಸ್ ಬುಕ್ ಪಾಲಿಕೆ ಕೆಟ್ಟ ವರ್ಷವಾಯಿತು ಎಂಬ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳಿದೆ.

87 ಮಿಲಿಯನ್ ಬಳಕೆದಾರರ ಡಾಟಾ ದುರ್ಬಳಕೆ:

87 ಮಿಲಿಯನ್ ಬಳಕೆದಾರರ ಡಾಟಾ ದುರ್ಬಳಕೆ:

ಮಾರ್ಚ್ ನಲ್ಲಿ ಕೇಂಬ್ರಿಡ್ಜ್ ಅನಲೆಟಿಕಾ ಯುಕೆ ಮೂಲದ ಕನ್ಸಲ್ಟೆನ್ಸಿ ಫೇಸ್ ಬುಕ್ ನ ಮಿಲಿಯನ್ ಗಟ್ಟಲೆ ಬಳಕೆದಾರರ ಡಾಟಾವನ್ನು ದುರ್ಬಳಕೆ ಮಾಡಿತ್ತು ಎಂದು ವರದಿಯಾಗಿತ್ತು. ಇದು 2016 ರ ಯುಎಸ್ ನ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರಲು ಈ ಡಾಟಾವನ್ನು ಬಳಸಲಾಯಿತು ಎಂದು ಹೇಳಲಾಗಿದೆ.

50 ಮಿಲಿಯನ್ ಬಳಕೆದಾರರ ಡಾಟಾ ಹ್ಯಾಕ್ :

50 ಮಿಲಿಯನ್ ಬಳಕೆದಾರರ ಡಾಟಾ ಹ್ಯಾಕ್ :

ಕ್ಯಾಂಬ್ರಿಡ್ಜ್ ಅನಲೆಟಿಕಾದ ಸ್ಕ್ಯಾಂಡಲ್ ನ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಆಘಾತ ಫೇಸ್ ಬುಕ್ ಗೆ ಕಾದಿತ್ತು.ಸೆಪ್ಟೆಂಬರ್ ನಲ್ಲಿ ಫೇಸ್ ಬುಕ್ "View as" ಫೀಚರ್ ನ ಸಹಾಯದಿಂದ ಹ್ಯಾಕರ್ ಗಳು ಸುಮಾರು ಮಿಲಿಯನ್ ಗಟ್ಟಲೆ ಬಳಕೆದಾರರ ಡಾಟಾವನ್ನು ಹ್ಯಾಕ್ ಮಾಡಿದ್ದರು ಎಂಬುದು ಬಹಿರಂಗವಾಯ್ತು.

ಇಮೇಲ್ ಬಹಿರಂಗ:

ಇಮೇಲ್ ಬಹಿರಂಗ:

ಬಳಕೆದಾರರ ಡಾಟಾ ಬಗ್ಗೆ ಜಾಗೃತೆ ಇಲ್ಲದಿರುವ ಬಗೆಗಿನ ಹಳೆಯ ಇಮೇಲ್ ಮತ್ತು ಡಾಕ್ಯುಮೆಂಟ್ ಗಳು ಬಹಿರಂಗವಾಯ್ತು.ಯುಕೆ ಪಾರ್ಲಿಮೆಂಟರಿ ಕಮಿಟಿಯಲ್ಲಿ ಫೇಸ್ ಬುಕ್ ಎಕ್ಸಿಕ್ಯೂಟೀವ್ ನಡುವೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಿತು. ಫೇಸ್ ಬುಕ್ ತಿಳಿಸಿದಂತೆ ಬಳಕೆದಾರರ ಡಾಟಾಕ್ಕೆ ಅಷ್ಟೇನು ಪ್ರಾಮುಖ್ಯತೆ ಇಲ್ಲ ಎಂದು ಅದರಲ್ಲಿ ನಮೂದಿಸಿರುವುದು ತಿಳಿದಿತ್ತು.

6.3 ಮಿಲಿಯನ್ ಬಳಕೆದಾರರ ಫೋಟೋ ಲೀಕ್ ಆಯ್ತು

6.3 ಮಿಲಿಯನ್ ಬಳಕೆದಾರರ ಫೋಟೋ ಲೀಕ್ ಆಯ್ತು

ಇತ್ತೀಚೆಗಿನ ಸ್ಕ್ಯಾಂಡಲ್ ಎಂದರೆ ಫೇಸ್ ಬುಕ್ 6.8 ಬಳಕೆದಾರರ ಫೋಟೋಗಳು ಡೆವಲಪರ್ ಗಳಿಗೆ ಲೀಕ್ ಆಗಿರುವುದು ದೊಡ್ಡ ದೋಷವಾಗಿತ್ತು. ಆಘಾತಕಾರಿ ವಿಚಾರವೇನೆಂದರೆ ಡೆವಲಪರ್ ಗಳು ಫೋಟೋವನ್ನು ಬಳಕೆದಾರರು ಪೋಸ್ಟ್ ಮಾಡದೇ ಇದ್ದರೂ ಕೂಡ ನೋಡಲು ಸಾಧ್ಯವಾಗುತ್ತಿತ್ತು.

ಮಾರ್ಕ್ ಜ್ಯೂಕ್ ಬರ್ಗ್ ಅವರ ವಯಕ್ತಿಕ ಸಂಪತ್ತಿನ ಕುಸಿತ

ಮಾರ್ಕ್ ಜ್ಯೂಕ್ ಬರ್ಗ್ ಅವರ ವಯಕ್ತಿಕ ಸಂಪತ್ತಿನ ಕುಸಿತ

2018 ಆರಂಭವಾದಾಗ ಜ್ಯೂಕ್ ಬರ್ಗ್ ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದರು. 2018 ರ ನವೆಂಬರ್ ಸಮೀಪಿಸುತ್ತಿದ್ದಂತ ಜ್ಯೂಕ್ ಬರ್ಗ್ 6 ಸ್ಥಾನಕ್ಕೆ ಕುಸಿದಿದ್ದರು. ಅವರ ಆರ್ಥಿಕ ಸಂಪತ್ತು 17 ಬಿಲಿಯನ್ ಡಾಲರ್ ನಷ್ಟು ಕುಸಿತವಾಗಿತ್ತು.

ಜನರು ಕಂಪೆನಿಯಿಂದ ಹೊರಬಂದಂತೆ ಸಿಬ್ಬಂದಿಯ ಬದಲಾವಣೆಗಳು :

ಜನರು ಕಂಪೆನಿಯಿಂದ ಹೊರಬಂದಂತೆ ಸಿಬ್ಬಂದಿಯ ಬದಲಾವಣೆಗಳು :

ಫೇಸ್ ಬುಕ್ ನಿಂದ ಹೊರ ಬಂದ ಇಬ್ಬರು ಪ್ರಮುಖ ವ್ಯಕ್ತಿಗಳೆಂದರೆ ವಾಟ್ಸ್ ಆಪ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ಜಾನ್ ಕೋಮ್ ಮತ್ತು ಇನ್ಸ್ಟಾಗ್ರಾಂನ ಸಹಸಂಸ್ಥಾಪಕ ಕೆವಿನ್ ಸಿಸ್ಟ್ರೋಮ್.

#DeleteFacebook ಒಂದು ಸಾಮಾನ್ಯ ಟ್ರೆಂಡ್:

#DeleteFacebook ಒಂದು ಸಾಮಾನ್ಯ ಟ್ರೆಂಡ್:

ಹಲವಾರು ಸ್ಕ್ಯಾಂಡಲ್ ಮತ್ತು ಕಾಂಟ್ರವರ್ಸಿಗಳ ಕಾರಣದಿಂದಾಗಿ ಹಲವಾರು ಜನರು ಫೇಸ್ ಬುಕ್ ನಿಂದ ಹೊರಬಂದರು. ವಾಟ್ಸ್ ಆಪ್ ನ ಮತ್ತೊಬ್ಬ ಸಹ-ಸಂಸ್ಥಾಪಕರಾಗಿರುವ ಬ್ರಿಯಾನ್ ಆಕ್ಟನ್ ಅವರು ಬಳಕೆದಾರರು ಫೇಸ್ ಬುಕ್ ಅಕೌಂಟ್ ನ್ನು ಡಿಲೀಟ್ ಮಾಡಬೇಕು ಎಂದು ಟ್ವೀಟ್ ಮಾಡಿದ್ದರು.

ಮಿಲಿಯನ್ ಡಾಲರ್ ದಂಡ:

ಮಿಲಿಯನ್ ಡಾಲರ್ ದಂಡ:

ಬಳಕೆದಾರರ ಡಾಟಾವನ್ನು ರಕ್ಷಿಸದೇ ಇದ್ದುದ್ದಕ್ಕೆ ಮಿಲಿಯನ್ ಡಾಲರ್ ನಷ್ಟು ದಂಡವನ್ನು ಫೇಸ್ ಬುಕ್ ಗೆ ವಿಧಿಸಲಾಯಿತು. ಇಟಲಿ ಅದರಲ್ಲಿ ಒಂದು ದೇಶವಾಗಿದ್ದು 11.7 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿದೆ. ಕಂಪೆನಿಯು ಬಳಕೆದಾರರ ಡಾಟಾವನ್ನು ರಕ್ಷಿಸದೇ ಇದ್ದುದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ವರ್ಷವೆಲ್ಲ ಮುಗಿಯದ ಕ್ಷಮೆಯಾಚನೆ:

ವರ್ಷವೆಲ್ಲ ಮುಗಿಯದ ಕ್ಷಮೆಯಾಚನೆ:

ಮಾರ್ಕ್ ಜ್ಯೂಕ್ ಬರ್ಗ್ ಮತ್ತು ಇದರ ಹಿರಿಯ ಅಧಿಕಾರಿಗಳು ಎಲ್ಲಾ ಸ್ಕ್ಯಾಂಡಲ್ ಗಳಿಗಾಗಿ ಕ್ಷಮೆಯಾಚಿಸುತ್ತಲೇ ಇದ್ದರು. ಅವರು ಕ್ಷಮೆಯಾಚನೆಯ ಪ್ರವಾಸದಲ್ಲಿರುವಂತೆ ಭಾಸವಾಗುತ್ತಿತ್ತು. ಯಾಕೆಂದರೆ ಈ ವರ್ಷವೆಲ್ಲ ಒಂದಾದಂ ಮೇಲೆ ಒಂದು ಸ್ಕ್ಯಾಂಡಲ್ ಗಳಿಗಾಗಿ ಅವರು ಕ್ಷಮೆಯಾಚಿಸುವಂತಾಗಿತ್ತು. ಕ್ಷಮೆಯಾಚನೆಯ ಪರ್ವ ಮುಗಿಯದ ಕಥೆ ಎಂದು ಭಾಸವಾಗುವಂತಿತ್ತು.

Best Mobiles in India

Read more about:
English summary
Accounts hacked, photos leaked and 7 other ways in 2018 was the 'worst' year for Facebook

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X