ಫೇಸ್ಬುಕ್ ತಂದಿದೆ ಲೈವ್ ಸ್ಟ್ರೀಮಿಂಗ್ ವಿಆರ್ ಗೆ ಆಕ್ಯುಲಸ್ ರಿಫ್ಟ್ ನೊಂದಿಗೆ

ಫೇಸ್‍ಬುಕ್‍ನ ಹೊಸ ಆಪ್ "ಫೇಸ್‍ಬುಕ್ ಸ್ಪೇಸಸ್" ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಿ "ಆಕ್ಯಲಸ್ ರಿಫ್ಟ್" ವಿಆರ್ ಹೆಡ್‍ಸೆಟ್‍ಗೆ.

By Tejaswini P G
|

ಫೇಸ್‍ಬುಕ್ ತರುತ್ತಿದೆ ನಿಮ್ಮನ್ನು ನಿಮ್ಮವರೊಂದಿಗೆ ಇನ್ನೂ ಹತ್ತಿರ.ಈಗ ನೀವು ನಿಮ್ಮವರೊಂದಿಗೆ ಹಂಚಿಕೊಳ್ಳಬಹುದು ನಿಮ್ಮ ಲೈವ್ ವೀಡಿಯೋಗಳನ್ನು ವರ್ಚ್ಯುವಲ್ ರಿಯಾಲಿಟಿನಲ್ಲಿ , "ಫೇಸ್‍ಬುಕ್ ಸ್ಪೇಸಸ್" ವರ್ಚ್ಯುವಲ್ ರಿಯಾಲಿಟಿ ಆಪ್‍ನಿಂದ.

ಫೇಸ್ಬುಕ್ ತಂದಿದೆ ಲೈವ್ ಸ್ಟ್ರೀಮಿಂಗ್ ವಿಆರ್ ಗೆ ಆಕ್ಯುಲಸ್ ರಿಫ್ಟ್ ನೊಂದಿಗೆ

ಏಪ್ರಿಲ್‍ನಲ್ಲಿ ಬಿಡುಗಡೆಯಾದ "ಫೇಸ್‍ಬುಕ್ ಸ್ಪೇಸಸ್" , ಫೇಸ್‍ಬುಕ್ ಕಂಪೆನಿಯ ಮೊದಲ ವರ್ಚ್ಯುವಲ್ ರಿಯಾಲಿಟಿ(VR) ಆಪ್ ಆಗಿದೆ. ಫೇಸ್‍ಬುಕ್ ಇಂಕ್.ನ ಭಾಗವಾದ ಆಕ್ಯಲಸ್ VR ತಯಾರಿಸಿರುವ "ಆಕ್ಯಲಸ್ ರಿಫ್ಟ್" ಹೆಡ್‍ಸೆಟ್‍ಗಾಗಿ ಈ ಆಪ್‍ಅನ್ನು ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಕಂಡ ಫೇಸ್‍ಬುಕ್ ಬ್ಲಾಗ್‍ಪೋಸ್ಟ್ ಒಂದರ ಅನುಸಾರ, ಜನರು ವರ್ಚ್ಯುವಲ್ ಪ್ಲೇಗ್ರೌಂಡ್‍ನಲ್ಲಿ ಇತರ ಆಕ್ಯಲಸ್ ರಿಫ್ಟ್ ಬಳಕೆದಾರರೊಂದಿಗೆ ಚ್ಯಾಟಿಂಗ್ ಹಾಗೂ 3ಡಿ ಅನಿಮೇಶನ್‍ಗಳ ಮೂಲಕ ಪರಸ್ಪರ ಸಂಭಾಷಣೆ ನಡೆಸಬಹುದಾಗಿದೆ. "ಫೇಸ್‍ಬುಕ್ ಸ್ಪೇಸಸ್ ನಿಂದ ಲೈವ್ ಆಗುವ ಮೂಲಕ,ನೀವು ನಿಮ್ಮ ಅಪರೂಪದ ಕ್ಷಣಗಳನ್ನು ವಿಶೇಷ ರೀತಿಯಲ್ಲಿ ವಿಆರ್ ಮೂಲಕ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ನಿಮ್ಮ ಪ್ರವಾಸದ ಅದ್ಭುತ ಸ್ಥಳಗಳಿರಬಹುದು, ನಿಮ್ಮ ಅಪರೂಪದ ಕ್ಷಣಗಳಿರಬಹುದು, ನೀವು ಇಷ್ಟ ಪಟ್ಟ ವೈರಲ್ ವೀಡಿಯೋ ಇರಬಹುದು, ಇವೆಲ್ಲವನ್ನೂ ನಿಮ್ಮ ಆಪ್ತರು ಫೇಸ್‍ಬುಕ್‍ನಲ್ಲಿ ರಿಯಲ್ ಟೈಮ್‍ನಲ್ಲಿ ಫಾಲೋ ಮಾಡಬಹುದಾಗಿದೆ" ಎನ್ನುತ್ತದೆ ಆ ಬ್ಲಾಗ್‍ಪೋಸ್ಟ್.

ಫೇಸ್‍ಬುಕ್ ಸ್ಪೇಸಸ್ ಮೂಲಕ ಲೈವ್ ಆಗುವ ಬಳಕೆದಾರರು ತಮ್ಮ ಆಗುಹೋಗುಗಳನ್ನು ವರ್ಚ್ಯುವಲ್ ಕ್ಯಾಮೆರಾ ಮೂಲಕ ಪ್ರಸಾರ ಮಾಡಬಹುದಾಗಿದೆ ಹಾಗು ಅವರ ಗೆಳೆಯರು ಆ ಪ್ರಸಾರದ ಕುರಿತು ಕಾಮೆಂಟ್ ಕೂಡ ಮಾಡಬಹದು. ಫೇಸ್‍ಬುಕ್ ಸ್ಪೇಸಸ್ ಬಳಕೆದಾರರು ತಮ್ಮ ವಿಆರ್ ಸೆಶನ್‍ಗಳನ್ನು "ಆಕ್ಯಲಸ್ ರಿಫ್ಟ್" ಬಳಸದ ಸ್ನೇಹಿತರೊಂದಿಗೂ ಹಂಚಹಿಕೊಳ್ಳಬಹುದಾಗಿದೆ.

ಫೇಸ್‍ಬುಕ್ ಜನರನ್ನು ತಮ್ಮ ವಿಆರ್‍ನತ್ತ ಸೆಳೆಯುವ ಪ್ರಯತ್ನದಲ್ಲಿ ತನ್ನ "ಆಕ್ಯಲಸ್ ರಿಫ್ಟ್" ಹೆಡ್‍ಸೆಟ್‍ನ ದರವನ್ನು 400 ಡಾಲರ್‍ಗೆ ಇಳಿಸಿದೆ. ಪೇಸ್‍ಬುಕ್‍ನ ಈ ಪ್ರಯತ್ನಕ್ಕೆ ಜನರ ಸ್ಪಂದನ ಹೇಗಿರುತ್ತದೆ ಎಂದು ಕಾದುನೋಡಬೇಕಾಗಿದೆ.

Best Mobiles in India

Read more about:
English summary
Facebook has brought livestreaming to virtual reality via Facebook Spaces virtual reality app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X