ಫೇಸ್ ಬುಕ್ ಸಿಇಓ ಗೆ ಈ 15 ಪ್ರಶ್ನೆಗಳಿಗೆ ಉತ್ತರಿಸಲು ಆಗಲೇ ಇಲ್ಲ..!

  |

  ಕಾನೂನು ತಜ್ಞರೊಂದಿಗಿನ ನಂಬಿಕೆಯನ್ನು ಫೇಸ್ ಬುಕ್ ಸಿಇಓ ಮಾರ್ಕ್ ಜ್ಯೂಕ್ ಬರ್ಗ್ ಉಳಿಸಿಕೊಳ್ಳುತ್ತಾರೆ ಎಂದು ಅನ್ನಿಸುತ್ತಿಲ್ಲ. ಇತ್ತೀಚೆಗೆ ಫೇಸ್ ಬುಕ್ ಸಿಇಓ ಮಾರ್ಚ್ 2018 ರಲ್ಲಿ ಬೆಳಕಿಗೆ ಬಂದ ಕ್ಯಾಂಬ್ರಿಡ್ಜ್ ಎನಾಲಟಿಕಲ್ ಹಗರಣದ ನಂತರದ ಯುರೋಪಿಯನ್ ಒಕ್ಕೂಟ ವ್ಯವಸ್ಥೆಯ ಸಂಸತ್ತಿನ ಕಲಾಪ ನಡೆಯುವ ಮುನ್ನ ಕಾಣಿಸಿಕೊಂಡಿದ್ದರು. ಯುಎಸ್ ಕಾನೂನು ತಜ್ಞರ ಪ್ರಶ್ನೆಗಳಿಗೆ ಜ್ಯೂಕ್ ಬರ್ಗ್ ಉತ್ತರಿಸಿದ್ದರು.

  ಫೇಸ್ ಬುಕ್ ಸಿಇಓ ಗೆ ಈ 15 ಪ್ರಶ್ನೆಗಳಿಗೆ ಉತ್ತರಿಸಲು ಆಗಲೇ ಇಲ್ಲ..!

  ಆದರೀಗ ಯುರೋಪ್ ಕಾನೂನು ತಜ್ಞರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಜ್ಯೂಕ್ ಬರ್ಗ್ ವಿಫಲರಾಗಿದ್ದಾರೆ. ಜರ್ಮನಿ, ಬೆಲ್ಜಿಯಂ, ಮತ್ತು ನಾರ್ತ್ ಐರ್ಲ್ಯಾಂಡ್ ಸೇರಿದಂತೆ ಹಲವು ಬೇರೆಬೇರೆ ದೇಶಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಜ್ಯೂಕ್ ಬರ್ಗ್ ನೀಡಲೇ ಇಲ್ಲ. ಹಾಗಾದ್ರೆ ಆ ಪ್ರಶ್ನೆಗಳು ಯಾವುದು ಎಂಬ ಮಾಹಿತಿ ಇಲ್ಲಿದೆ ನೋಡಿ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪ್ರಶ್ನೆ 1 -

  Manfred Weber ಜರ್ಮನಿ : ಕ್ಯಾಂಬ್ರಿಡ್ಜ್ ಎನಲೆಟಿಕಾ ಹಗರಣದ ಸಂದರ್ಬದಲ್ಲಿ ಕೆಲವು ಬಳಕೆದಾರರು ತಮ್ಮ ಡಾಟಾವನ್ನು ಕಳೆದುಕೊಂಡಿರುವ ಬಗ್ಗೆ ಅಥವಾ ಮಾಹಿತಿ ಸೋರಿಕೆಯಾಗಿರುವ ಬಗ್ಗೆ 2015 ರಲ್ಲಿ ತಾವೇನಾದರೂ ವಯಕ್ತಿಕ ನಿರ್ಧಾರಗಳನ್ನು ಕೈಗೊಂಡಿದ್ದೀರಾ?

  ಪ್ರಶ್ನೆ 2 -

  Manfred Weber ಜರ್ಮನಿ : ನೀವು ಇದು ಫೇಸ್ ಬುಕ್ ನ್ನು ಬ್ರೇಕ್ ಮಾಡಲು ಇರುವ ಸಮಯ ಎಂದು ಭಾವಿಸುತ್ತಿದ್ದೀರಾ? ಒಂದು ವೇಳೆ ಇಲ್ಲವಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬಹುದೇ?

  ಪ್ರಶ್ನೆ 3 –

  Udo Bullmann ಜರ್ಮನಿ - ದಿನದಿಂದ ದಿನಕ್ಕೆ ಫೇಸ್ ಬುಕ್ ನಲ್ಲಿ ಕಳ್ಳ ಅಕೌಂಟ್ ಗಳು ಅಧಿಕಗೊಳ್ಳುತ್ತಿರುವು ಹೇಗೆ ಎಂಬುದನ್ನು ವಿವರಿಸುವಿರಾ?

  ಪ್ರಶ್ನೆ 4 -

  Udo Bullmann ಜರ್ಮನಿ - ಫೇಸ್ಬುಕ್ ಬಳಕೆದಾರನ ಯಾವುದೇ ವಿವರ ಮತ್ತು ದಾಖಲಾತಿಗಳು ಬಳಕೆದಾರನ ಒಪ್ಪಿಗೆ ಪಡೆಯದೆ ಬೇರೆಯವರಿಗೆ ತಿಳಿಯುವುದಿಲ್ಲ ಮತ್ತು ಮಾರಾಟ ಮಾಡುವುದಿಲ್ಲ ಎಂಬ ಖರಾರನ್ನು ನೀವು ನೀಡಬಹುದಾ? ಒಂದು ವೇಳೆ ಬಳಕೆದಾರ ಫೇಸ್ಬುಕ್ ನಿಂದ ಹೊರನಡೆದರೂ ಕೂಡ ಆತನ ವಿವರಗಳು ಸೋರಿಕೆಯಾಗುವುದಿಲ್ಲ ಎಂಬ ಬಗ್ಗೆ ಖಚಿತತೆ ನೀಡಬಹುದೇ?

  ಪ್ರಶ್ನೆ 5 –

  Udo Bullmann ,ಜರ್ಮನಿ- ಎಷ್ಟು ಬೇಗ ಮತ್ತು ಯಾವ ನಿಯಮಾವಳಿಗಳ ಪ್ರಕಾರ ಫೇಸ್ ಬುಕ್ ನಿಂದ ಹೊರನಡೆದ ಬಳಕೆದಾರನ ಮಾಹಿತಿಯನ್ನು ಪೂರ್ಣಪ್ರಮಾಣದಲ್ಲಿ ಫೇಸ್ಬುಕ್ ನಿಂದ ತೆಗೆಯಲಾಗುತ್ತೆ?

  ಪ್ರಶ್ನೆ 6 -

  Udo Bullmann , ಜರ್ಮನಿ - ಕಳ್ಳ ಅಕೌಂಟ್ ಗಳ ಬಗ್ಗೆ ನೀವು ಯಾವ ಕ್ರಮ ತೆಗೆದುಕೊಳ್ಳುತ್ತಿದ್ದೀರಿ ಅದರಲ್ಲೂ ಪ್ರಮುಖವಾಗಿ ರಾಜಕೀಯ ವಿಚಾರಕ್ಕಾಗಿ ಬಳಸಿಕೊಳ್ಳುತ್ತಿರುವ ಸುಳ್ಳು ಅಕೌಂಟ್ ಗಳ ತಡೆಗೆ ನಿಮ್ಮ ಕ್ರಮ ಏನು?

  ಪ್ರಶ್ನೆ 7-

  ಸೈಯದ್ ಕಮಾಲ್ ,ಬ್ರಿಟನ್ - ಫೇಸ್ ಬುಕ್ ನಿಂದ ಹೊರನಡೆದ ಬಳಕೆದಾರರ ವಿವರವನ್ನು ಇಟ್ಟುಕೊಂಡು ಫೇಸ್ ಬುಕ್ ಏನು ಮಾಡುತ್ತೆ? ನೀವದನ್ನು ಯಾವ ರೀತಿಯಲ್ಲಾದರೂ ಮಾರಾಟ ಮಾಡುತ್ತಿದ್ದೀರಾ?

  ಪ್ರಶ್ನೆ 8 -

  ಸೈಯದ್ ಕಮಾಲ್ ,ಬ್ರಿಟನ್ - ಫೇಸ್ ಬುಕ್ ನಿಂದ ಹೊರನಡೆದ ಬಳಕೆದಾರ ತಮ್ಮ ಯಾವೆಲ್ಲ ಮಾಹಿತಿಗಳನ್ನು ಫೇಸ್ ಬುಕ್ ಕಲೆ ಹಾಕಿ ಇಟ್ಟುಕೊಂಡಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಯಾವುದಾದರೂ ಮಾರ್ಗಗಳಿವೆಯಾ?

  ಪ್ರಶ್ನೆ 9

  Guy Verhofstadt , ಬೆಲ್ಜಿಯಂ - ಮೆಸೇಂಜರ್ ಮತ್ತು ವಾಟ್ಸ್ ಆಪ್ ನ್ನು ಸ್ಪ್ಲಿಟ್ ಮಾಡುವ ಬಗೆಗಿನ ಉಪಾಯಕ್ಕೆ ನಿಮ್ಮ ಅಭಿಪ್ರಾಯವೇನು?

  ಪ್ರಶ್ನೆ 10 -

  Guy Verhofstadt , ಬೆಲ್ಜಿಯಂ - ಭವಿಷ್ಯದಲ್ಲಿ ನಿಮ್ಮನ್ನು ಜನ ಯಾವ ರೀತಿ ನೆನಪಿಟ್ಟುಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಿ?, ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್ ಜೊತೆ ನಿಮ್ಮ ಹೆಸರೂ ಸೇರಿ ಮೂರು ಜನ ಎಂದು ಗುರುತಿಸಿಕೊಳ್ಳಲು ಅಥವಾ ಡಿಜಿಟನ್ ಮಾನ್ಟ್ಸರ್ ನ್ನು ಹುಟ್ಟುಹಾಕಿದ ಬುದ್ಧಿವಂತ ಅಂತಲೋ?

  ಪ್ರಶ್ನೆ 11

  ನಿರ್ಧಿಷ್ಟವಾಗಿ ಗುರಿಯಾಗಿಸಿರುವ ಜಾಹಿರಾತುಗಳಿಂದ ದೂರವಿರಲು ಫೇಸ್ ಬುಕ್ ನ ಎಲ್ಲಾ ಬಳಕೆದಾರರಿಗೆ ಅವಕಾಶ ನೀಡಬಹುದೇ?

  Philippe Lamberts, ಬೆಲ್ಜಿಯಂ

  ಪ್ರಶ್ನೆ 12 -

  Diane Dodds - ನಾರ್ತ್ ಐರ್ಲ್ಯಾಂಡ್ - ಫೇಸ್ ಬುಕ್ ನ ಡಿಫಾಲ್ಟ್ ಸೆಟ್ಟಿಂಗ್ ಇರುವುದರಿಂದ ಪ್ರತಿಯೊಂದು ಮಗುವೂ ಸೇಫ್ ಆಗಿರಲಿದೆ ಎಂಬ ಗ್ಯಾರೆಂಟಿಯನ್ನು ಕೊಡಲು ನಿಮ್ಮಿಂದ ಸಾಧ್ಯವಿದೆಯೇ?

  How to use WhatsApp in Kannada - GIZBOT KANNADA
  ಪ್ರಶ್ನೆ 13 –

  ಪ್ರಶ್ನೆ 13 –

  Claude Moraes, ಬ್ರಿಟನ್ - ಫೇಸ್ ಬುಕ್ ಬಳಕೆದಾರರಿಗೆ ತಮ್ಮ ಮಾಹಿತಿಗಳನ್ನು ಒಪ್ಪಂದಕ್ಕೆ ಒಳಪಡಿಸಲಾಗಿದೆ ಎಂಬುದನ್ನು ಯಾಕೆ ಹೇಳುವುದಿಲ್ಲ? ಬಳಕೆದಾರನಿಗೆ ನೀವು ತಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಯಾಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ?

  ಪ್ರಶ್ನೆ 14 -

  Jan Philipp Albrecht, ಜರ್ಮನಿ - ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಮುಖಾಂತರ ಯುರೋಪಿಯನ್ ಬಳಕೆದಾರರ ಮಾಹಿತಿಗಳು ಯಾರಿಗೂ ಕೂಡ ಹಂಚಲಾಗಿಲ್ಲ ಅಥವಾ ಬದಲಾಯಿಕೊಳ್ಳಲು ನೀಡಲಾಗಿಲ್ಲ ಅಥವಾ ಸೋರಿಕೆಯಾಗಿಲ್ಲ ಎಂಬ ವಚನವನ್ನು ನೀವು ನೀಡಬಹುದೇ?

  ಪ್ರಶ್ನೆ 15 -

  Jan Philipp Albrecht, ಜರ್ಮನಿ -

  ಭವಿಷ್ಯದ ಮತ್ತು ವರ್ತಮಾನದ ಫೇಸ್ ಬುಕ್ ಬಳಕೆದಾರರಿಗೆ ಯಾವುದೇ ಮಾಹಿತಿಯನ್ನೂ ನಿಮ್ಮ ಒಪ್ಪಿಗೆ ಇಲ್ಲದೆ ಪಡೆಯುವುದಿಲ್ಲ ಎಂಬ ಬಗ್ಗೆ ನೀವು ಭರವಸೆ ನೀಡಬಹುದೇ? ಫೇಸ್ ಬುಕ್ ಬಳಕೆಗೆ ಎಷ್ಟು ಬೇಕೋ ಅಷ್ಟನ್ನು ಹೊರತು ಪಡಿಸಿ ಉಳಿದ ಯಾವ ಮಾಹಿತಿಯೂ ಅವರ ಒಪ್ಪಿಗೆ ಇಲ್ಲದೆ ಪಡೆಯುವುದಿಲ್ಲವೇ?

  1.4 ಲಕ್ಷ ಕೋಟಿಯ ಫ್ಲಿಪ್‌ಕಾರ್ಟ್ ಮೇಗಾಡೀಲ್‌ಗೆ ಎದುರಾಯಿತು ಭಾರೀ ಸಂಕಷ್ಟ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Facebook CEO Mark Zuckerberg failed to answer These questions

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more