ಲಕ್ಷಾಂತರ ಪಾಸ್ ವರ್ಡ್ ಗಳನ್ನು ಬಿಡುಗಡೆಗೊಳಿಸಿದ ಫೇಸ್ ಬುಕ್: ಯಾರು ಎಫೆಕ್ಟ್ ಆಗಿದ್ದಾರೆ, ನೀವೇನು ಮಾಡಬಹುದು?

By Gizbot Bureau
|

ಫೇಸ್ ಬುಕ್ ಮತ್ತೆ ಈ ಕೆಲಸ ಮಾಡಿದೆ. ವಿಶ್ವದ ಅತೀ ದೊಡ್ಡ ಸಾಮಾಜಿಕ ನೆಟ್ ವರ್ಕ್ ಫೇಸ್ ಬುಕ್ ಅಕೌಂಟ್ ನ್ನು ಡಿಲೀಟ್ ಮಾಡುವುದಕ್ಕೆ ಇದೀಗ ಮತ್ತೊಂದು ಕಾರಣ ಲಭ್ಯವಾಗುತ್ತಿದೆ. ಇತ್ತೀಚೆಗಿನ ನೂತನ ಸೆಕ್ಯುರಿಟಿ ನ್ಯೂನ್ಯತೆಯಲ್ಲಿ ಮಿಲಿಯನ್ ಗಟ್ಟಲೆ ಬಳಕೆದಾರರು ಪರಿಣಾಮಕ್ಕೆ ಒಳಗಾಗಿದ್ದಾರೆ. ತನ್ನ ಇಂಟರ್ನಲ್ ಸರ್ವರ್ ನಲ್ಲಿ ಮಿಲಿಯನ್ ಗಟ್ಟಲೆ ಪಾಸ್ ವರ್ಡ್ ಗಳು ಸಂಗ್ರಹವಾಗಿರುವುದನ್ನು ಕಂಪೆನಿ ತಿಳಿಸಿದೆ. ಈ ಸೆಕ್ಯುರಿಟಿ ಬ್ಲಂಡರ್ ನ್ನು ಮೊದಲು ಕ್ರೆಬ್ಸ್ ವರದಿ ಮಾಡಿದೆ. ಪಾಸ್ ವರ್ಡ್ ನ್ಯೂನ್ಯತೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿವೆ ನೋಡಿ.

ಲಕ್ಷಾಂತರ ಪಾಸ್ ವರ್ಡ್ ಗಳನ್ನು ಬಿಡುಗಡೆಗೊಳಿಸಿದ ಫೇಸ್ ಬುಕ್

ಪ್ಲೈನ್ ಟೆಕ್ಸ್ಟ್ ರೂಪದಲ್ಲಿ ಅಕೌಂಟಿನ ಪಾಸ್ ವರ್ಡ್ ಗಳು ಸ್ಟೋರ್ ಆಗಿದೆ ಮತ್ತು ಸಾವಿರಕ್ಕೂ ಅಧಿಕ ಫೇಸ್ ಬುಕ್ ನೌಕರರು ಇದನ್ನು ಹುಡುಕಾಟ ನಡೆಸುವುದಕ್ಕೆ ಅವಕಾಶವಿರುತ್ತದೆ.

200 ಮಿಲಿಯನ್ ಮತ್ತು 600 ಮಿಲಿಯನ್ ಫೇಸ್ ಬುಕ್ ಬಳಕೆದಾರರಿಗೆ ಸೆಕ್ಯುರಿಟಿ ನ್ಯೂನ್ಯತೆಯ ಪರಿಣಾಮ ಬೀರಿದೆ ಎಂದು ನಂಬಲಾಗಿದೆ.

ಫೇಸ್ ಬುಕ್ ಬಳಕೆದಾರರ ಜೊತೆಗೆ ಇನ್ಸ್ಟಾಗ್ರಾಂ ಬಳಕೆದಾರರ ಪಾಸ್ ವರ್ಡ್ ಗಳು ಕೂಡ ಬಹಿರಂಗಗೊಂಡಿದೆ.

ನಿಖರವಾದ ಸಂಖ್ಯೆಯನ್ನು ಇನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲವಾದರೂ ಕೂಡ 2012 ರ ವರೆಗಿನ ಪಾಸ್ ವರ್ಡ್ ಗಳು ಎನ್ಕ್ರಿಪ್ಟ್ ಆಗಿರುವ ರೂಪದಲ್ಲಿ ಆರ್ಕೈವ್ ಆಗಿದೆ.

ಫೇಸ್ಬುಕ್ ನೂರಾರು ಮಿಲಿಯನ್ ಫೇಸ್ಬುಕ್ ಲೈಟ್ ಬಳಕೆದಾರರಿಗೆ, ಹತ್ತಾರು ಮಿಲಿಯನ್ ಇತರ ಫೇಸ್ಬುಕ್ ಬಳಕೆದಾರರಿಗೆ ಮತ್ತು ಅದರ ಪಾಸ್ವರ್ಡ್ ನಿರ್ವಹಣಾ ವ್ಯವಸ್ಥೆಯಲ್ಲಿನ ದೋಷವನ್ನು ಕುರಿತು ಸಾವಿರಾರು ಇನ್ಸ್ಟಾಗ್ರಾಂ ಬಳಕೆದಾರರಿಗೆ ತಿಳಿಸಲು ಯೋಜಿಸಿದೆ ಎಂದು ಫೇಸ್ಬುಕ್ ಹೇಳಿದೆ.

ಈ ಕೂಡಲೇ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಬಳಕೆದಾರರು ಏನು ಮಾಡಬೇಕು: ತಮ್ಮ ಪಾಸ್ ವರ್ಡ್ ಗಳನ್ನು ಬದಲಾಯಿಸಿಕೊಳ್ಳಬೇಕು

ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಬಳಕೆದಾರರು ಏನನ್ನು ಮಾಡಬಾರದು: ಬೇರೆಬೇರೆ ಸೇವೆಗಳಲ್ಲಿ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಪಾಸ್ ವರ್ಡ್ ಗಳನ್ನು ಬಳಕೆ ಮಾಡಬಾರದು

ಫೇಸ್ ಬುಕ್ ಟಿಪ್ಸ್ : ಕಠಿಣವಾಗಿರುವ ಮತ್ತು ಜಠಿಲವಾಗಿರುವ ಪಾಸ್ ವರ್ಡ್ ಗಳನ್ನು ತಮ್ಮ ಅಕೌಂಟಿಗೆ ಹಾಕಿಕೊಳ್ಳಬೇಕು ಎಂದು ಕಂಪೆನಿಯ ತನ್ನ ಬಳಕೆದಾರರಿಗೆ ಸಲಹೆ ನೀಡಿದೆ.

Best Mobiles in India

English summary
Facebook exposes millions of passwords: Who is affected, what you can do and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X