ಫೇಸ್ಬುಕ್ F8 2018: ಹೊಸ 'ಕ್ಲಿಯರ್ ಹಿಸ್ಟರಿ' ಬಟನ್ ನೀಡಲಿದೆ ಫೇಸ್ ಬುಕ್

By Tejaswini P G

  ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ ದಲ್ಲಿ ಈ ವರ್ಷದ ಫೇಸ್ಬುಕ್ F8 ಡೆವಲಪರ್ ಕಾನ್ಫರೆನ್ಸ್ ನಡೆಯುತ್ತಿದ್ದು, ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮೊದಲಾದ ಪ್ಲ್ಯಾಟ್ಫಾರ್ಮ್ ಗಳಲ್ಲಿ ತರಲಿರುವ ಬದಲಾವಣೆಗಳನ್ನು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತಿದೆ. ಫೇಸ್ಬುಕ್ ಸಂಸ್ಥೆಯು ಈ ಹೊಸ ಬದಲಾವಣೆಗಳ ಕುರಿತು ಜನತೆಗೆ ತಿಳಿಸಿದೆ.

  ಫೇಸ್ಬುಕ್ F8 2018: ಹೊಸ 'ಕ್ಲಿಯರ್ ಹಿಸ್ಟರಿ' ಬಟನ್ ನೀಡಲಿದೆ ಫೇಸ್ ಬುಕ್

  ಇತ್ತೀಚೆಗೆ ಕ್ಯಾಂಬ್ರಿಡ್ಜ್ ಎನಲಿಟಿಕಾ ವಿವಾದವು ಫೇಸ್ಬುಕ್ ಮೇಲೆ ಬಹಳ ಪರಿಣಾಮ ಬೀರಿದ್ದು, ಈ ಸಮಸ್ಯೆ ಫೇಸ್ಬುಕ್ ಸಂಸ್ಥೆಯನ್ನು ಇನ್ನೂ ಕಾಡುತ್ತಲೇ ಇದೆ. ಇದರ ಪರಿಣಾಮವಾಗಿ ಈ ಸಮಾವೇಶದಲ್ಲಿ ಡೇಟಾ ಪ್ರೈವೆಸಿ ಗೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆಗಳನ್ನು ತರಲಾಗುತ್ತಿದ್ದು, ಥರ್ಡ್ ಪಾರ್ಟಿ ಆಪ್ಗಳು ಮತ್ತು ಸರ್ವೀಸ್ ಗಳು ಬಳಕೆದಾರರ ಮಾಹಿತಿಯನ್ನು ಬಳಸುವ ರೀತಿಯನ್ನು ಕೂಡ ಬದಲಾಯಿಸಲಿದೆ.

  ಆನಲೈನ್ ನಲ್ಲಿ ಲಭ್ಯವಿರುವ ಮಾಹಿತಿಗಳ ಅನುಸಾರ, ಫೇಸ್ಬುಕ್ ಬಳಕೆದಾರರಿಗೆ ಈ ಆಪ್ ಅಥವಾ ಸರ್ವೀಸ್ ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡಲಾಗುತ್ತದೆ ಮತ್ತು ಅವರ ಡೇಟಾ ಮೇಲೂ ಹಿಡಿತವಿರುತ್ತದೆ. ಇದಕ್ಕಾಗಿ ಲಭ್ಯವಿರುವ ಟೂಲ್ಗಳ ಕುರಿತು ಬಳಕೆದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಜುಕರ್ಬರ್ಗ್ ಅವರು ತಿಳಿಸಿದ್ದಾರೆ.

  2014ರಲ್ಲಿ ಫೇಸ್ಬುಕ್ ತನ್ನ ಆಪ್ ಪಾಲಿಸಿಗಳಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ದೊಡ್ಡ ಸಂಖ್ಯೆಯಲ್ಲಿ ಬಳಕೆದಾರರ ಖಾತೆಗಳನ್ನು ಆಕ್ಸೆಸ್ ಮಾಡಿರುವ ಆಪ್ಗಳನ್ನು ಮತ್ತು ಸರ್ವೀಸ್ ಗಳನ್ನು ವಿಶ್ಲೇಷಿಸುತ್ತೇವೆ ಎಂದು ಫೇಸ್ಬುಕ್ ತಿಳಿಸಿದೆ. ಅಲ್ಲದೆ ನಿಯಮಗಳನ್ನು ಮತ್ತು ಶರತ್ತುಗಳನ್ನು ಉಲ್ಲಂಘಿಸುವ ಯಾವುದೇ ಖಾತೆಗಳನ್ನು ಅಮಾನತುಗೊಳಿಸುತ್ತೇವೆ ಎಂದು ಫೇಸ್ಬುಕ್ ಭರವಸೆ ನೀಡಿದೆ.

  ಪೇಸ್ಬುಕ್ ಭವಿಷ್ಯದಲ್ಲಿ ತನ್ನ ಪ್ರೈವೆಸಿ ಪಾಲಿಸಿಗಳ ಕುರಿತು ಹೆಚ್ಚು ನೇರ ಮತ್ತು ಪ್ರಾಮಾಣಿಕವಾಗಿರಲಿದೆ ಎಂದು ಈ ವರದಿಗಳು ತಿಳಿಸಿವೆ. ಅಲ್ಲದೆ ಫೇಸ್ಬುಕ್ ಸಂಸ್ಥೆಯು ನೂತನ 'ಕ್ಲಿಯರ್ ಹಿಸ್ಟರಿ' ಬಟನ್ ಒಂದನ್ನು ಜಾರಿಗೆ ತರಲಿದ್ದು, ಇದು ವೆಬ್ ಬ್ರೌಸರ್ಗಳಲ್ಲಿ ಲಭ್ಯವಿರುವ ಕ್ಯಾಶ್ ಕ್ಲಿಯರ್ ಮಾಡುವ ಫೀಚರ್ನಂತೆಯೇ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ಫೇಸ್ಬುಕ್ ನ ವಿಪಿ ಮತ್ತು ಚೀಫ್ ಪ್ರೈವೆಸಿ ಆಫೀಸರ್ ಆಗಿರುವ ಎರಿನ್ ಎಗನ್ ಅವರ ಅನುಸಾರ ಈ ಹೊಸ 'ಕ್ಲಿಯರ್ ಹಿಸ್ಟರಿ' ಬಟನ್ ನ ಸಹಾಯದಿಂದ ಬಳಕೆದಾರರು ಯಾವ ವೆಬ್ಸೈಟ್ ಮತ್ತು ಆಪ್ ಗಳು ಫೇಸ್ಬುಕ್ ಜೊತೆ ಮಾಹಿತಿ ಹಂಚಿಕೊಳ್ಳುತ್ತದೆ ಎನ್ನುವುದನ್ನು ತಿಳಿಯಬಹುದಲ್ಲದೆ, ಫೇಸ್ಬುಕ್ ಈ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಗಟ್ಟುವ ಸಲುವಾಗಿ ತಮ್ಮ ಮಾಹಿತಿಯನ್ನು ಡಿಲೀಟ್ ಮಾಡಬಹುದಾಗಿದೆ.

  "ನೀವು ಯಾವ ವೆಬ್ಸೈಟ್ ಅಥವಾ ಆಪ್ ಗಳನ್ನು ಬಳಸಿದಾಗ ಅದು ನಿಮ್ಮ ಮಾಹಿತಿಯನ್ನು ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳುತ್ತದೆ ಎಂಬುದನ್ನು ಈ ಫೀಚರ್ ತಿಳಿಸುತ್ತದೆ. ಅಲ್ಲದೆ ಈ ಮಾಹಿತಿಯನ್ನು ನಿಮ್ಮ ಖಾತೆಯಿಂದ ಡಿಲೀಟ್ ಮಾಡಿ, ಭವಿಷ್ಯದಲ್ಲಿ ಫೇಸ್ಬುಕ್ ಇಂತಹ ಮಾಹಿತಿಯನ್ನು ನಿಮ್ಮ ಖಾತೆಯೊಂದಿಗೆ ಸಂಗ್ರಹಿಸುವುದನ್ನು ಈ ಫೀಚರ್ ಮೂಲಕ ತಡೆಗಟ್ಟಬಹುದಾಗಿದೆ" ಎಂದು ಅವರು ತಿಳಿಸಿದ್ದಾರೆ.

  ಅಷ್ಟೇ ಅಲ್ಲದೆ ಫೇಸ್ಬುಕ್ ಸಂಸ್ಥೆಯು ಆಯ್ದ ಪಾಲಿಸಿ ಅಡ್ವೊಕೇಟ್ಗಳು, ಅಕ್ಯಾಡಮಿಕ್ಸ್ ತಜ್ಞರು, ಪಾಲಿಸಿ ಮೇಕರ್ಗಳು ಮತ್ತು ರೆಗ್ಯುಲೇಟರ್ಗಳೊಂದಿಗೆ ಪ್ರೈವೆಸಿಯನ್ನು ಹೆಚ್ಚಿಸುವ ಕುರಿತು ವಿಶ್ಲೇಷಣೆ ನಡೆಸುತ್ತಿದ್ದು, ಬಳಕೆದಾರರನ್ನು ಗುರತಿಸುವ ಖಾಸಗಿ ಮಾಹಿತಿಯನ್ನು ಹೇಗೆ ಡಿಲೀಟ್ ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಫೇಸ್ಬುಕ್ ಒಂದಷ್ಟು ಖಾಸಗಿ ಮಾಹಿತಿಯನ್ನು ಆಕ್ಸೆಸ್ ಮಾಡಬೇಕಾಗುವ ಸಂದರ್ಭ ಒದಗಬಹುದಾದರೂ ಇಂತಹ ಸಂದರ್ಭಗಳು ಬಹಳ ವಿರಳವಾಗಿರುತ್ತದೆ ಎಂದು ಫೇಸ್ಬುಕ್ ತಿಳಿಸಿದೆ.

  ಈ ರೀತಿಯಾಗಿ ಹಿಸ್ಟರಿ ಕ್ಲಿಯರ್ ಮಾಡುವುದರಿಂದ ಬಳಕೆದಾರರಿಗೆ ಫೇಸ್ಬುಕ್ ನಲ್ಲಿ ಉತ್ತಮ ಅನುಭವ ಒದಗಿಸುವುದು ಸ್ವಲ್ಪ ಕಷ್ಕಕರವಾಗಬಹುದು. ಸಾಮಾಜಿಕ ಜಾಲತಾಣದ ಪ್ಲ್ಯಾಟ್ಫಾರ್ಮ್ ನಲ್ಲಿ ತಮ್ಮ ಮಾಹಿತಿಯ ಪ್ರೈವೆಸಿ ಕುರಿತು ಹೆಚ್ಚು ಕಾಳಜಿ ಹೊಂದಿರುವ ಬಳಕೆದಾರರಿಗೆ ಫೇಸ್ಬುಕ್ನಲ್ಲಿ ತಡೆರಹಿತ ಸೇವೆ ನೀಡುವುದು ಕಷ್ಟಕರವಾಗಬಹುದು ಎಂದು ಫೇಸ್ಬುಕ್ ತಿಳಿಸಿದೆ.

  Karnataka Election 2018: Chunavana app will find your booth in click - GIZBOT KANNADA
  ಈ ನೂತನ 'ಕ್ಲಿಯರ್ ಹಿಸ್ಟರಿ' ಫೀಚರ್ ಬಿಡುಗಡೆಯಾಗಲು ಇನ್ನೂ ಸ್ವಲ್ಪ ಸಮಯ ಬೇಕಾದೀತು ಎಂದು ಫೇಸ್ಬುಕ್ ತಿಳಿಸಿದೆ. ಈ ಫೀಚರ್ ನ ಮೇಲೆ ಫೇಸ್ಬುಕ್ ಕೆಲಸಮಾಡುತ್ತಿದ್ದು ಅದರ ಬಿಡುಗಡೆಗೆ ಕೆಲವು ತಿಂಗಳು ಬೇಕಾಗುತ್ತದೆ. 2018ರ ವರ್ಷಾಂತ್ಯದ ವೇಳೆಗೆ ಈ ಫೀಚರ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಫೇಸ್ಬುಕ್ ಹೇಳಿದೆ.

  English summary
  Facebook F8 2018: Facebook announces 'Clear History' button for its platform. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more