ಮತ್ತೇ ಫೇಸ್‌ಬುಕ್‌ ಹ್ಯಾಕ್..! ಖಾಸಗಿ ಮೆಸೇಜ್‌ಗಳನ್ನು ಪ್ರಕಟಿಸಿದ ಹ್ಯಾಕರ್ಸ್‌..!

|

ಜಗತ್ತಿನ ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ನ ಹ್ಯಾಕ್‌ ಕಥೆ ಇನ್ನು ಮುಗಿದಿಲ್ಲ. ಅಮೇರಿಕಾದ ಚುನಾವಣೆಯಿಂದ ಇಲ್ಲಿಯವರೆಗೂ ಫೇಸ್‌ಬುಕ್‌ ಭಾರೀ ಮಟ್ಟದ ಹ್ಯಾಕಿಂಗ್‌ಗೆ ಒಳಗಾಗುತ್ತಿದೆ. ಈ ಸಲ ಹ್ಯಾಕರ್ಸ್‌ ಒಟ್ಟು 81,000 ಅಕೌಂಟ್‌ಗಳ ಖಾಸಗಿ ಮೆಸೇಜ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದು, ಆ 81,000 ಅಕೌಂಟ್‌ಗಳ ಕಥೆ ಏನಾಗಿದೆ ಎಂಬುದು ದೇವರಿಗೆ ಗೊತ್ತು.

ಮತ್ತೇ ಫೇಸ್‌ಬುಕ್‌ ಹ್ಯಾಕ್..! ಖಾಸಗಿ ಮೆಸೇಜ್‌ಗಳನ್ನು ಪ್ರಕಟಿಸಿದ ಹ್ಯಾಕರ್ಸ್‌..!

ಹೌದು, ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ವರದಿ ಮಾಡಿರುವಂತೆ ಹ್ಯಾಕರ್‌ಗಳು ಭಾರೀ ಮಟ್ಟದಲ್ಲಿ ಅಕೌಂಟ್‌ಗಳ ಅಕ್ಸೇಸ್‌ ಹೊಂದಿದ್ದಾರೆ. ಸದ್ಯಕ್ಕೆ ಕೇವಲ 81,000 ಅಕೌಂಟ್‌ಗಳ ಖಾಸಗಿ ಮೆಸೇಜ್‌ಗಳನ್ನು ಆನ್‌ಲೈನ್‌ನಲ್ಲಿ ಹಣಕಾಸಿನ ಉದ್ದೇಶಕ್ಕಾಗಿ ಪ್ರಕಟಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹ್ಯಾಕಿಂಗ್‌ ಬಗ್ಗೆ ಫೇಸ್‌ಬುಕ್‌ ಏನೇಳುತ್ತೆ ಕಾದು ನೋಡಬೇಕು.

ಭಾರೀ ಪ್ರಮಾಣದ ಅಕೌಂಟ್‌ ಹ್ಯಾಕ್‌

ಭಾರೀ ಪ್ರಮಾಣದ ಅಕೌಂಟ್‌ ಹ್ಯಾಕ್‌

ಬಿಬಿಸಿ ವರದಿಯಂತೆ ಫೇಸ್‌ಬುಕ್‌ನ 120 ಮಿಲಿಯನ್‌ ಅಕೌಂಟ್‌ಗಳ ಖಾಸಗಿ ಮೆಸೇಜ್‌ಗಳನ್ನು ಹ್ಯಾಕ್‌ ಮಾಡಿದ್ದಾರೆ. ಅದರಲ್ಲಿ 81,000 ಅಕೌಂಟ್‌ಗಳ ಖಾಸಗಿ ಮೆಸೇಜ್‌ಗಳನ್ನು ಆನ್‌ಲೈನ್‌ನಲ್ಲಿ ಹ್ಯಾಕರ್‌ಗಳು ಹೀಗಾಗಲೇ ಮಾರಾಟಕ್ಕಿಟ್ಟಿದ್ದಾರೆ.

ಒಂದು ಅಕೌಂಟ್‌ಗೆ 10 ಸೆಂಟ್‌

ಒಂದು ಅಕೌಂಟ್‌ಗೆ 10 ಸೆಂಟ್‌

ಹ್ಯಾಕರ್‌ಗಳು ಒಂದು ಅಕೌಂಟ್‌ನ ಖಾಸಗಿ ಮೆಸೇಜ್‌ಗಳನ್ನು 10 ಸೆಂಟ್‌ಗೆ ಮಾರಾಟ ಮಾಡುತ್ತಿದ್ದಾರೆ. ಡಾರ್ಕ್‌ ವೆಬ್‌ನಲ್ಲಿ ಈ ರೀತಿ ಅಸಂಖ್ಯಾತ ಅಕೌಂಟ್‌ಗಳ ಮಾಹಿತಿ ಬಿಕರಿಯಾಗುತ್ತಿದೆ. ಇದರ ಕುರಿತು ಫೇಸ್‌ಬುಕ್‌ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಹ್ಯಾಕಿಂಗ್‌ ಮಾತ್ರ ನಿಲ್ಲುತ್ತಿಲ್ಲದಿರುವುದು ಫೇಸ್‌ಬುಕ್‌ ಆಡಳಿತ ವರ್ಗದ ನಿದ್ದೆಗೆಡಿಸಿದೆ.

ಸೆಪ್ಟೆಂಬರ್‌ನಲ್ಲಿ ಬಹಿರಂಗ

ಸೆಪ್ಟೆಂಬರ್‌ನಲ್ಲಿ ಬಹಿರಂಗ

ಈ ಮಾಹಿತಿ ಹಗರಣ ಸೆಪ್ಟೆಂಬರ್‌ನಲ್ಲಿ ಬಹಿರಂಗವಾಗಿತ್ತು. ಹೆಸರಿಲ್ಲದ ರೋಗ್‌ ಬ್ರೌಸರ್‌ ಎಕ್ಸಟೆನ್ಷನ್‌ನಿಂದ ಖಾಸಗಿ ಮೆಸೇಜ್‌ಗಳು ಹ್ಯಾಕರ್‌ಗಳ ಕೈ ಸೇರುತ್ತಿವೆಯಂತೆ. ಆದರೂ, ಫೇಸ್‌ಬುಕ್‌ ಹೇಳುವಂತೆ ಆ ಮಾಹಿತಿ ಹಗರಣಕ್ಕೂ ಈ ಖಾಸಗಿ ಮೆಸೇಜ್‌ಗಳ ಹ್ಯಾಕ್‌ಗೂ ಸಂಬಂಧವಿಲ್ಲ. ಇದು ಪ್ರತ್ಯೇಕ ಎಂದು ಹೇಳಿದೆ.

ಬ್ರೌಸರ್‌ಗಳ ಜತೆ ಮಾತುಕತೆ

ಬ್ರೌಸರ್‌ಗಳ ಜತೆ ಮಾತುಕತೆ

ಹೀಗಾಗಲೆ ಬ್ರೌಸರ್ ಉತ್ಪಾದಕರ ಜತೆ ಮಾತುಕತೆ ನಡೆಸಿದ್ದು, ಅಪಾಯಕಾರಿ ಎಕ್ಸ್‌ಟೆನ್ಷನ್‌ಗಳನ್ನು ತಮ್ಮ ಸ್ಟೋರ್‌ಗಳಲ್ಲಿ ಹೆಚ್ಚಿನ ಸಮಯವಿರದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದೇವೆ ಎಂದು ಫೇಸ್‌ಬುಕ್‌ನ ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ಗೈ ರೋಸ್‌ ಹೇಳಿದ್ದಾರೆ.

ಸ್ಥಳೀಯ ಕಾನೂನು ಬೆಂಲಕ್ಕೆ ಕೋರಿಕೆ

ಸ್ಥಳೀಯ ಕಾನೂನು ಬೆಂಲಕ್ಕೆ ಕೋರಿಕೆ

ಹೀಗಾಗಲೇ ಸ್ಥಳೀಯ ಕಾನೂನು ಪ್ರಾಧಿಕಾರಗಳ ಜತೆ ಸಂಪರ್ಕ ಬೆಳೆಸಿದ್ದು, ಫೇಸ್‌ಬುಕ್‌ ಅಕೌಂಟ್‌ಗಳಿಂದ ತೆಗೆದುಕೊಂಡ ಮಾಹಿತಿಯನ್ನು ಪಬ್ಲಿಷ್‌ ಮಾಡಿದ ವೆಬ್‌ಸೈಟ್‌ನ್ನು ಬ್ಲಾಕ್‌ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಖಾಸಗಿ ಮೆಸೇಜ್‌ಗಳನ್ನು ವೆಬ್‌ಸೈಟ್‌ನಿಂದ ಡಿಲೇಟ್‌ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಫೇಸ್‌ಬುಕ್‌ ಹೇಳಿದೆ.

ಬಿಬಿಸಿ ವರದಿಯಲ್ಲಿ ಇನ್ನೇನಿದೆ..?

ಬಿಬಿಸಿ ವರದಿಯಲ್ಲಿ ಇನ್ನೇನಿದೆ..?

ಬಿಬಿಸಿಯ ರಷ್ಯಾ ವರದಿಗಾರರು ಖಾಸಗಿ ವೆಬ್‌ಸೈಟ್‌ನಲ್ಲಿ ಮೆಸೇಜ್‌ಗಳು ಅಪ್‌ಲೋಡ್‌ ಮಾಡಲಾದ ರಷ್ಯಾದ 5 ಫೇಸ್‌ಬುಕ್‌ ಬಳಕೆದಾರರನ್ನು ಸಂಪರ್ಕಿಸಿದ್ದು, ಅವರು ತಮ್ಮವೇ ಮೆಸೇಜ್‌ಗಳು ಎಂದು ಹ್ಯಾಕ್‌ ಬಗ್ಗೆ ಖಚಿತ ಪಡಿಸಿದ್ದಾರೆ. ಅದಲ್ಲದೇ ಫೋಟೋಗ್ರಾಫ್‌ಗಳು ಲಭ್ಯವಾಗಿವೆ. ಬ್ರಿಟಿಷ್‌ ರಾಕ್‌ ಬ್ಯಾಂಡ್‌ ಚಾಟ್‌, ಅಳಿಯನ ಕುರಿತು ದೂರು ಇರುವ ಮೆಸೇಜ್‌ಗಳ ಫೋಟೋಗಳ ಲಭ್ಯವಿವೆ.

ಭಾರೀ ದೊಡ್ಡ ಹಗರಣ

ಭಾರೀ ದೊಡ್ಡ ಹಗರಣ

ಅಕ್ಟೋಬರ್‌ನಲ್ಲಿ ಬಯಲಾದ ಕೇಂಬ್ರಿಡ್ಜ್‌ ಅನಾಲಿಟಿಕಾ ಹಗರಣದಲ್ಲಿ ಹ್ಯಾಕರ್‌ಗಳು 50 ಮಿಲಿಯನ್‌ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ತೆಗೆದುಕೊಂಡಿದ್ದರು. ಆದರೆ, ಇಲ್ಲಿ 120 ಮಿಲಿಯನ್‌ ಫೇಸ್‌ಬುಕ್‌ ಅಕೌಂಟ್‌ಗಳ ಖಾಸಗಿ ಮೆಸೇಜ್‌ಗಳು ಹ್ಯಾಕರ್‌ಗಳ ಕೈಯಲ್ಲಿದ್ದು, ಫೇಸ್‌ಬುಕ್‌ನ್ನು ಅಲುಗಾಡಿಸಿದೆ.

ಯಾವ್ಯಾವ ದೇಶದ ಬಳಕೆದಾರರ ಮಾಹಿತಿ ಹ್ಯಾಕ್‌

ಯಾವ್ಯಾವ ದೇಶದ ಬಳಕೆದಾರರ ಮಾಹಿತಿ ಹ್ಯಾಕ್‌

ಬಿಬಿಸಿ ವರದಿಯಂತೆ ಉಕ್ರೇನ್‌, ರಷ್ಯಾ ಮತ್ತು ಇಂಗ್ಲೆಂಡ್, ಅಮೆರಿಕಾ, ಬ್ರೆಜಿಲ್‌ನ ಬಳಕೆದಾರರ ಮಾಹಿತಿಗಳು ಹ್ಯಾಕ್‌ ಆಗಿವೆಯಂತೆ. ಈ ದೇಶಗಳನ್ನು ಬಿಟ್ಟು ಅನೇಕ ದೇಶಗಳ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಹ್ಯಾಕರ್‌ಗಳ ಕೈಯಲ್ಲಿರುವುದಂತು ಸತ್ಯ. ಭಾರತದ ಬಳಕೆದಾರರ ಮಾಹಿತಿಯೂ ಕೂಡ ಇರಬಹುದು.

ಐರ್ಲೆಂಡ್‌ ಸಂಸ್ಥೆಯಿಂದ ತನಿಖೆ

ಐರ್ಲೆಂಡ್‌ ಸಂಸ್ಥೆಯಿಂದ ತನಿಖೆ

ಯುರೋಪ್‌ನಲ್ಲಿ ಫೇಸ್‌ಬುಕ್‌ನ ಪ್ರಮುಖ ಖಾಸಗಿ ನಿಯಂತ್ರಣ ಹೊಂದಿರುವ ಐರ್ಲೆಂಡ್‌ನ ಡಾಟಾ ಪ್ರೊಟೆಕ್ಷನ್‌ ಕಮಿಷನ್‌ನಿಂದ ಅಧಿಕೃತ ತನಿಖೆಯನ್ನು ಆರಂಭಿಸಿದ್ದು, 1.67 ಬಿಲಿಯನ್‌ ಡಾಲರ್‌ ದಂಡವನ್ನು ಹಾಕಲು ಚಿಂತನೆ ನಡೆಸಿದೆ. ಡಿಜಿಟಲ್‌ ಟ್ರೆಂಡ್ಸ್‌ ಪ್ರಕಾರ ಈ ಹ್ಯಾಕ್‌ ಕೂಡ ಬ್ರೌಸರ್‌ ಎಕ್ಸಟೆನ್ಷನ್‌ಗಳ ಸಹಾಯದಿಂದ ಮಾಡಲಾಗಿದೆಯಂತೆ.

ಎಕ್ಸಟೆನ್ಷನ್‌ಗಳನ್ನು ಬಳಸುವ ಮುನ್ನ ಇರಲಿ ಎಚ್ಚರ

ಎಕ್ಸಟೆನ್ಷನ್‌ಗಳನ್ನು ಬಳಸುವ ಮುನ್ನ ಇರಲಿ ಎಚ್ಚರ

ನಿಮ್ಮ ಬ್ರೌಸರ್‌ಗೆ ಎಕ್ಸಟೆನ್ಷನ್‌ಗಳನ್ನು ಬಳಸುವ ಮುನ್ನ ಸ್ವಲ್ಪ ಎಚ್ಚರವಿರಲಿ. ಆ ಎಕ್ಸಟೆನ್ಷನ್‌ನ ಮೂಲ, ಅದು ಎಲ್ಲಿಂದ ಬಂತು ಮತ್ತು ಅದು ಏನೇನು ಪರ್ಮಿಷನ್‌ ಕೇಳುತ್ತಿದೆ ಎಂಬುದನ್ನು ನೋಡಿ ಆನಂತರ ಇನ್‌ಸ್ಟಾಲ್‌ ಮಾಡಿ.

Best Mobiles in India

English summary
Facebook hack: Private messages from 81,000 accounts published online. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X