ಫೇಸ್‌ಬುಕ್ ಬ್ಲೂ ಬಣ್ಣದಲ್ಲಿ ಇರುವುದೇಕೆ..? ಫೇಸ್‌ಬುಕ್ ಕುರಿತ ಹಲವು ಅಚ್ಚರಿಗಳು..!

|

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂದು ವಿಶ್ವದ ಅತೀ ಹೆಚ್ಚು ಮಂದಿಯನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ. ಕೆಲವೇ ಕೆಲವು ವರ್ಷಗಳಲ್ಲಿ ಇಡಿ ವಿಶ್ವವೇ ಬೆರಗು ಆಗುವ ರೀತಿಯಲ್ಲಿ ಬೆಳೆದು ನಿಂತಿದೆ. ಎಲ್ಲಾ ವಯಸ್ಸಿನ ಬಳಕೆದಾರರು ಫೇಸ್‌ಬುಕ್ ಮೋಡಿಗೆ ಬಲಿಯಾಗಿದ್ದು, ದಿನದಿಂದ ದಿನಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ಅಧಿಕವಾಗುತ್ತಿದೆಯೇ ಹೊರತು ಇಳೆಕೆಯಾಗುವುದಂತು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಫೇಸ್‌ಬುಕ್ ಬ್ಲೂ ಬಣ್ಣದಲ್ಲಿ ಇರುವುದೇಕೆ..? ಫೇಸ್‌ಬುಕ್ ಕುರಿತ ಹಲವು ಅಚ್ಚರಿಗಳು

ಇದೇ ಸಂದರ್ಭದಲ್ಲಿ ಫೇಸ್‌ಬುಕ್ ಬಣ್ಣದ ಕುರಿತು ಇಂಟರೆಸ್ಟಿಂಗ್ ವಿಷಯವೊಂದು ಬಯಲು ಗೊಂಡಿದ್ದು, ಫೇಸ್‌ಬುಕ್ ಬ್ಲೂ ಬಣ್ಣದಲ್ಲಿ ಇರಲು ಕಾರಣವೇನು ಎಂಬುದು ತಿಳಿದು ಬಂದಿದೆ. ಫೇಸ್‌ಬುಕ್‌ ಬಣ್ಣಕ್ಕೂ ಮತ್ತು ಫೇಸ್‌ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್ ಬರ್ಗಗೆ ನೇರ ಸಂಬಂಧವಿದೆ ಎನ್ನಲಾಗಿದೆ.

ಫೇಸ್‌ಬುಕ್ ಬ್ಲೂ ಬಣ್ಣ

ಫೇಸ್‌ಬುಕ್ ಬ್ಲೂ ಬಣ್ಣ

ಫೇಸ್‌ಬುಕ್ ಸೃಷ್ಟಿ ಕರ್ತ ಮಾರ್ಕ್ ಜುಕರ್ ಬರ್ಗ್ ಕಲರ್ ಬ್ಲೈಂಡ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಹೆಚ್ಚಾಗಿ ಬೇರೆ ಯಾವುದೇ ಬಣ್ಣಗಳು ಕಾಣಿಸುವುದಿಲ್ಲ. ಈ ಹಿನ್ನಲೆಯಲ್ಲಿ ತಮ್ಮ ಸೈಟಿಗೆ ಬ್ಲೂ ಬಣ್ಣವನ್ನೇ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಬಣ್ಣ ಮಾತ್ರ ಬದಲಾಗಲ್ಲ:

ಬಣ್ಣ ಮಾತ್ರ ಬದಲಾಗಲ್ಲ:

2004 ಫೆಬ್ರವರಿ 4 ರಂದು ಜನ್ಮ ತಾಳಿದ ಫೇಸ್‌ಬುಕ್ ಅಂದಿನಿಂದ ಇಂದಿನವರೆಗೂ ವಿನ್ಯಾಸ, ವಿವರಣೆ ಮತ್ತು ಸೇವೆಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದೆಯಾದರು, ಫೇಸ್‌ಬುಕ್ ಬಣ್ಣದಲ್ಲಿ ಮಾತ್ರ ಯಾವುದೇ ಬದಲಾವಣೆಯನ್ನು ಮಾಡಲು ಮಂದಾಗಿಲ್ಲ.

ಜುಕರ್ ಬರ್ಗ್ ಕುರಿತ ಸತ್ಯ:

ಜುಕರ್ ಬರ್ಗ್ ಕುರಿತ ಸತ್ಯ:

ಫೇಸ್‌ಬುಕ್ ಸೃಷ್ಟಿ ಕರ್ತ, CEO ಮಾರ್ಕ್ ಜುಕರ್ ಬರ್ಗ್‌ ಪ್ರತಿ ನಿತ್ಯ ಒಂದೇ ಮಾದರಿಯ, ಒಂದೇ ಬಣ್ಣದ ಬಟ್ಟೆಗಳನ್ನು ತೊಡುತ್ತಾರೆ, ಇದಕ್ಕೆ ಕಾರಣ ಬೆಳಗ್ಗೆ ಎದ್ದು ಬೇರೆ ಬೇರೆ ಬಟ್ಟೆ ಹುಡುಕಲು ಕಳೆಯುವ ಸಮಯವನ್ನು ಉಳಿಸಲು ಎನ್ನಲಾಗಿದೆ.

How to view all photos, pages, comments and posts you liked on Facebook (KANNADA)
ಬ್ಲಾಕ್ ಮಾಡಕ್ಕೆ ಆಗಲ್ಲ:

ಬ್ಲಾಕ್ ಮಾಡಕ್ಕೆ ಆಗಲ್ಲ:

ಇದಲ್ಲದೇ ಫೇಸ್‌ಬುಕ್‌ನಲ್ಲಿ ನೀವು ಯಾರನ್ನು ಬೇಕಾದರು ಬ್ಲಾಕ್ ಮಾಡುವ ಆಯ್ಕೆಯನ್ನು ಪಡೆದುಕೊಂಡಿದ್ದೀರಾ. ಆದರೆ ನೀವು ಫೇಸ್‌ಬುಕ್ ಸೃಷ್ಟಿ ಕರ್ತ ಮಾರ್ಕ್ ಜುಕರ್ ಬರ್ಗ ಅವರನ್ನು ಬ್ಲಾಕ್ ಮಾಡಲು ಸಾಧ್ಯವೇ ಇಲ್ಲ ಎನ್ನಲಾಗಿದೆ.

ಪ್ರಿಯತಮೆಗಾಗಿ ಚೀನಿ ಕಲಿತ:

ಪ್ರಿಯತಮೆಗಾಗಿ ಚೀನಿ ಕಲಿತ:

ಫೇಸ್‌ಬುಕ್ ಸೃಷ್ಟಿ ಕರ್ತ ಮಾರ್ಕ್ ಜುಕರ್ ಬರ್ಗ ತನ್ನ ಪ್ರೇಯಸಿ ಮತ್ತು ಆಕೆಯ ಮನೆಯವರನ್ನು ಇಂಪ್ರೆಸ್ ಮಾಡುವ ಸಲುವಾಗಿ ಚೈನಿಸ್ ಭಾಷೆಯನ್ನು ಕಲಿತು ಕೊಂಡರು ಎನ್ನಲಾಗಿದೆ.

Best Mobiles in India

English summary
Facebook is blue because Mark Zuckerberg is colour-blind. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X