Subscribe to Gizbot

ಫೇಸ್‌ಬುಕ್‌ ಅನುಭವಿಸಿರುವ ನಷ್ಟ ತುಂಬಲು ಇದೊಂದು ಆಯ್ಕೆ ಸಾಕು..!

Written By:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೇ ಮಾದರಿಯಲ್ಲಿ ಹೊಸ ಹೊಸ ಆಯ್ಕೆಗಳು ಸಹ ಬಳಕೆಗೆ ಲಭ್ಯವಿದೆ. ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಮೊಬೈಲ್ ನಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಕಂಪ್ಯೂಟರ್ನಲ್ಲಿ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ತೀರಾ ಕಡಿಮೆಯಾಗುತ್ತಿದೆ. ಇದನ್ನು ಹೆಚ್ಚು ಮಾಡಲು ಹೊಸದೊಂದು ಪ್ರಯತ್ನಕ್ಕೆ ಫೇಸ್‌ಬುಕ್ ಮುಂದಾಗಿದೆ.

ಫೇಸ್‌ಬುಕ್‌ ಅನುಭವಿಸಿರುವ ನಷ್ಟ ತುಂಬಲು ಇದೊಂದು ಆಯ್ಕೆ ಸಾಕು..!

ಈಗಾಗಲೇ ತನ್ನ ಆಪ್ ಬಳಕೆದಾರರಿಗೆ ಮಾತ್ರವೇ ನೀಡಿರುವ ಸ್ಟೋರಿ ಆಪ್‌ಲೋಡ್ ಮಾಡುವ ಅವಕಾಶವನ್ನು ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗೂ ನೀಡಲು ಫೇಸ್‌ಬುಕ್ ಮುಂದಾಗಿದ್ದು, ಈಗಾಗಲೇ ಈ ಹೊಸ ಆಯ್ಕೆಯನ್ನು ಪ್ರಯೋಗ ಮಾಡುತ್ತಿದ್ದು, ಶೀಘ್ರವೇ ತನ್ನ ಬಳಕೆದಾರರಿಗೆ ಇದನ್ನು ಮುಕ್ತವಾಗಲಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯೂ ಹೆಚ್ಚಿನ ಆಕರ್ಷಣಿಯವಾಗಿದೆ.

ಓದಿರಿ: ರೂ.2000ಕ್ಕೆ ನೋಕಿಯಾ 1 ಆಂಡ್ರಾಯ್ಡ್‌ ಫೋನ್‌: ಬಿಡುಗಡೆಗೆ ಮೂಹುರ್ತ ಫಿಕ್ಸ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೋರಿ ಆಪ್‌ಲೋಡ್‌:

ಸ್ಟೋರಿ ಆಪ್‌ಲೋಡ್‌:

ಇಷ್ಟು ದಿನ ಫೇಸ್‌ಬುಕ್ ಡೆಸ್ಕ್‌ಟಾಪ್ ಬಳಕೆದಾರರು ಸ್ಟೋರಿಸ್‌ ಅನ್ನು ನೋಡುವ ಅವಕಾಶವನ್ನು ಮಾತ್ರವೇ ಪಡೆದುಕೊಂಡಿದ್ದರು. ಆದರೆ ಈ ಬಾರಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಸ್ಟೋರಿಯನ್ನು ಆಪ್‌ಲೋಡ್ ಮಾಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ಡೆಸ್ಕ್‌ಟಾಪ್‌ನಲ್ಲಿಯೇ ಸ್ಟೋರಿಯನ್ನು ಆಪ್‌ಲೋಡ್ ಮಾಡುವ ಅವಕಾಶವು ದೊರೆತಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಇನ್ಟಗ್ರಾಮ್ ಮಾದರಿ:

ಇನ್ಟಗ್ರಾಮ್ ಮಾದರಿ:

ಈಗಾಗಲೇ ಇನ್ಟಗ್ರಾಮ್ ಬಳಕೆದಾರರು ಸ್ಟೋರಿಯನ್ನು ಆಪ್‌ಲೋಡ್ ಮಾಡುವ ಮಾದರಿಯಲ್ಲಿ ಫೇಸ್‌ಬುಕ್ ಬಳಕೆದಾರರು ಸ್ಟೋರಿಯನ್ನು ಆಪ್‌ಲೋಡ್ ಮಾಡುವ ಅವಕಾಶವು ಹಲವು ದಿನಗಳ ಹಿಂದೆಯೇ ಲಭ್ಯವಿತ್ತು, ಆದರ ಇದು ಮೊಬೈಲ್ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿತ್ತು. ಇನ್ನು ಮುಂದೆ ಕಂಪ್ಯೂಟರ್ ಬಳಕೆದಾರರಿಗೆ ಈ ಆಯ್ಕೆ ದೊರೆಯಲಿದೆ.

ಫೇಸ್‌ಬುಕ್ ಇನಷ್ಟು ಆಕರ್ಷಣಿಯ:

ಫೇಸ್‌ಬುಕ್ ಇನಷ್ಟು ಆಕರ್ಷಣಿಯ:

ಫೇಸ್‌ಬುಕ್ ಈಗಾಗಲೇ ಸಾಕಷ್ಟು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಹೊಸ ಆಯ್ಕೆಯಿಂದಾಗಿ ಮತ್ತಷ್ಟು ಜನರು ಫೇಸ್‌ಬುಕ್ ಬಳಕೆ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಹೊಸ ಲೆಕ್ಕಚಾರದಲ್ಲಿದೆ ಎನ್ನಲಾಗಿದೆ. ಫೇಸ್‌ಬುಕ್ ಸ್ಟೋರಿಸ್ ಇನ್ನಷ್ಟು ಸುಂದಾರವಾಗಲಿದೆ ಎನ್ನಲಾಗಿದೆ.

ಸ್ಟೋರಿಸ್ ಪ್ರಾಮುಖ್ಯತೆ:

ಸ್ಟೋರಿಸ್ ಪ್ರಾಮುಖ್ಯತೆ:

ಫೇಸ್‌ಬುಕ್ ಸ್ಟೋರಿಗಳು ಆಷ್ಟಾಗಿ ಖ್ಯಾತಿಯನ್ನು ಗಳಸಿಕೊಂಡಿಲ್ಲ ಎನ್ನಲಾಗಿದೆ. ಇದನ್ನು ಹೆಚ್ಚು ಮಾಡುವ ಸಲುವಾಗಿ ಫೇಸ್‌ಬುಕ್ ಡೆಸ್ಕ್‌ಟಾಪ್ ಬಳೆದಾರರಿಗೆ ಈ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Facebook is testing desktop uploads for Stories. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot