ಫೇಸ್ ಬುಕ್ ನಲ್ಲಿ ಹೊಸ ಆಯ್ಕೆ: ಜಿಫ್ ಅನ್ನು ಹೀಗೂ ಬಳಸಬಹುದು..!

By Lekhaka
|

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಮಾದರಿಯ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಈ ಹಿಂದೆ ಜಿಫ್ ಫೇಲ್ ಗಳನ್ನು ಶೇರ್ ಮಾಡಲು, ಕಾಮೆಂಟ್ ಮಾಡಲು ಮತ್ತು ಪೋಸ್ಟ್ ಮಾಡುವ ಅವಕಾಶವನ್ನು ಮಾಡಿಕೊಟ್ಟ ಮಾದರಿಯಲ್ಲೇ ಇನ್ನೊಂದು ಮಾದರಿಯಲ್ಲಿ ಜಿಫ್ ಬಳಕೆಗೆ ಅವಕಾಶ ನೀಡಿದೆ.

ಫೇಸ್ ಬುಕ್ ನಲ್ಲಿ ಹೊಸ ಆಯ್ಕೆ: ಜಿಫ್ ಅನ್ನು ಹೀಗೂ ಬಳಸಬಹುದು..!

ಫೇಸ್ ಬುಕ್ ತನ್ನ ಪೋಲ್ ಆಯ್ಕೆಯನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಜಿಫ್ ಆಧಾರಿತ ಪೋಲ್ ಗಳನ್ನು ಮಾಡುವ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಲ್ಲಿ ಪೋಲ್ ಪ್ರಶ್ನೆಗಳನ್ನು ಜಿಫ್ ನೊಂದಿಗೆ ಪೋಸ್ಟ್ ಮಾಡಬಹುದಾಗಿದೆ.

ಇದು ಮೊಬೈಲ್ ಮತ್ತು ವೆಬ್ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಇದಲ್ಲದೇ ಪೋಸ್ಟ್ ಗಳಿಗೆ ಕಾಮೆಂಟ್ ಮಾಡುವವರು ಸಹ ಜಿಫ್ ಫೈಲ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಈಗಾಗಲೇ ಈ ಮಾದರಿಯ ಸೇವೆಯನ್ನು ಫೇಸ್ ಬುಕ್ ತನ್ನ ಒಡೆತನಕ್ಕೆ ಸೇರಿರುವ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯಿಸಿತ್ತು ಎನ್ನಲಾಗಿದೆ. ಈಗ ಇದೇ ಮಾದರಿಯ ಸೇವೆಯನ್ನು ಫೇಸ್ ಬುಕ್ ನಲ್ಲಿ ನೀಡಲು ಮುಂದಾಗಿದೆ, ಇದು ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಆಪಲ್ ಗ್ಯಾರೇಜ್ ಬ್ಯಾಂಡ್'ಗೆ ಹೊಸ ಆಪ್ ಡೇಟ್..!ಆಪಲ್ ಗ್ಯಾರೇಜ್ ಬ್ಯಾಂಡ್'ಗೆ ಹೊಸ ಆಪ್ ಡೇಟ್..!

ಈ ಹಿಂದೆ ಫೋಲ್ ಕ್ರಿಯೇಟ್ ಮಾಡುತ್ತಿದ್ದ ಮಾದರಿಯಲ್ಲಿಯೇ ಜಿಫ್ ಪೋಲ್ ಗಳನ್ನು ಕ್ರಿಯೇಟ್ ಮಾಡಬಹುದು. ಇದು ಸುಲಭ ಮತ್ತು ಸರಳವಾಗಿದೆ.

Best Mobiles in India

English summary
Facebook now rolls out GIF-supported polls feature to web and mobile apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X