Subscribe to Gizbot

ಮನುಷ್ಯರಂತೆ ಚಾಟ್ ಮಾಡುವುದನ್ನು ಕಲಿಸುತ್ತಿರುವ ಫೇಸ್‌ ಬುಕ್ ಸಂಶೋಧಕರು!

Written By: Lekhaka

ಚ್ಯಾಟ್ಬಾಟ್ ಗಳಿಗೆ ಮನುಷ್ಯರಂತೆ ಸಂಭಾಷಣೆ ನಡೆಸುವ ಸಾಮರ್ಥ್ಯವನ್ನು ನೀಡಲು ಫೇಸ್ಬುಕ್ ಹಗಲಿರುಳು ಪ್ರಯತ್ನಿಸುತ್ತದೆ. ಚ್ಯಾಟ್ಬಾಟ್ ಗಳ ಹೆಸರು ಸೂಚಿಸುವಂತೆ ಚ್ಯಾಟ್ಬಾಟ್ಗಳು ನಿಜವಾಗಿಯೂ ಚ್ಯಾಟ್ ಮಾಡಲಾರವು. ಫೇಸ್ಬುಕ್ ನ FAIR ಲ್ಯಾಬ್ ನ ಸಂಶೋಧಕರ ಪ್ರೀ-ಪ್ರಿಂಟ್ ಪೇಪರ್ ಒಂದರಲ್ಲಿ ವಿವರಿಸಿರುವಂತೆ ಚ್ಯಾಟ್ಬಾಟ್ ಗಳು ಈ ಕೆಲಸ ನಿರ್ವಹಿಸುವಲ್ಲಿ ಹಲವು ಸ್ತರಗಳಲ್ಲಿ ವಿಫಲವಾಗುತ್ತವೆ.

ಮನುಷ್ಯರಂತೆ ಚಾಟ್ ಮಾಡುವುದನ್ನು ಕಲಿಸುತ್ತಿರುವ ಫೇಸ್‌ ಬುಕ್ ಸಂಶೋಧಕರು!

ಚ್ಯಾಟ್ಬಾಟ್ಗಳು ಒಂದು ಸ್ಥಿರವಾದ ವ್ಯಕ್ತಿತ್ವವನ್ನು ಹೊಂದುವಲ್ಲಿ ವಿಫಲವಾಗುತ್ತದಲ್ಲದೆ, ತಾವು ಅಥವ ತಮ್ಮ ಜೊತೆಗಾರರು ಈ ಹಿಂದೆ ಏನು ಸಂಭಾಷಣೆ ನಡೆಸಿದ್ದಾರೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತವೆ.

ಅಷ್ಟೇ ಅಲ್ಲದೆ, ಚ್ಯಾಟ್ಬಾಟ್ಗಳಿಗೆ ಅರ್ಥವಾಗದ ಪ್ರಶ್ನೆಗಳನ್ನು ಕೇಳಿದರೆ, ಅವುಗಳು "ಐ ಡೋಂಟ್ ನೋ" ಎಂಬಂತಹ ಪೂರ್ವ ನಿಯೋಜಿತ ಉತ್ತರಗಳನ್ನಷ್ಟೇ ನೀಡುತ್ತದೆ. ಇಷ್ಟೆಲ್ಲಾ ಕುಂದುಕೊರತೆಗಳಿದ್ದರೂ ಚ್ಯಾಟ್ಬಾಟ್ಗಳು ಬಹಳ ಸಮಯ ನಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಚ್ಯಾಟ್ಬಾಟ್ಗಳೊಂದಿಗೆ ನೈಜ ಮತ್ತು ಅರ್ಥಪೂರ್ಣ ಸಂಭಾಷಣೆ ನಡೆಸಲು ಸಾಧ್ಯವಿಲ್ಲ. ಈಗ ಇದನ್ನು ಸಾಧ್ಯವಾಗಿಸಲು ಫೇಸ್ಬುಕ್ ಸಂಸ್ಥೆಯು "ಡೀಪ್ ಲರ್ನಿಂಗ್" ಅಥವಾ ಆಳವಾದ ಕಲಿಕೆಯತ್ತ ಮುಖಮಾಡಿದೆ.

ಚ್ಯಾಟ್ಬಾಟ್ ಗಳಿಗೆ ಪೂರ್ವ ನಿಯೋಜಿತ ಪ್ರಶ್ನೋತ್ತರಗಳನ್ನು ತುಂಬುವ ಬದಲು , ದೊಡ್ಡ ಡೇಟಾಸೆಟ್ಗಳಲ್ಲಿ ವಿನ್ಯಾಸಗಳನ್ನು ಹುಡುಕುವ ಮೂಲಕ ಅರ್ಥಪೂರ್ಣ ಸಂಭಾಷಣೆ ನಡೆಸುವುದನ್ನು ಚ್ಯಾಟ್ಬಾಟ್ಗಳಿಗೆ ಕಲಿಸಲಾಗುವುದು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದ್ದರೂ, ಸಂಶೋಧಕರು ಇದನ್ನು ಪ್ರಾರಂಭಿಸಲು ಅಗತ್ಯವಾದ ಸರಿಯಾದ ಡೇಟಾ ಆಯ್ಕೆ ಮಾಡುವುದರಲ್ಲಿ ತೊಂದರೆ ಎದುರಿಸುತ್ತಿದ್ದಾರೆ.

ಉದಾಹರೆಣೆಗೆ, ಕೆಲವು ಚ್ಯಾಟ್ಬಾಟ್ಗಳು ಚಲನಚಿತ್ರಗಳಿಂದ ಡೈಲಾಗ್ ಗಳನ್ನು ಹೇಳಲು ತರಬೇತಿ ಪಡೆದಿರುತ್ತವೆ. ಇಂತಹ ಚ್ಯಾಟ್ಬಾಟ್ಗಳು ಸದಾ ಅಪ್ರಸ್ತುತ ಡೈಲಾಗ್ ಗಳನ್ನು ಹೇಳುವುದರಿಂದ ಅವುಗಳೊಡನೆ ಅರ್ಥಪೂರ್ಣ ಸಂಭಾಷಣೆ ನಡೆಸುವುದು ಅಸಾಧ್ಯ. ಈ ತೊಂದರೆಯನ್ನು ನಿವಾರಿಸಲು ಫೇಸ್ಬುಕ್ ನ ಸಂಶೋಧಕರು ಚ್ಯಾಟ್ಬಾಟ್ಗಳ ಕಲಿಕೆಗಾಗಿ ತಮ್ಮದೇ ಸ್ವಂತ ಡೇಟಾಸೆಟ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

How to view all photos, pages, comments and posts you liked on Facebook (KANNADA)

ಜಿಯೋ ಎಫೆಕ್ಟ್!..100% ಎಫ್‌ಡಿಐಗಾಗಿ ಕೇಂದ್ರ ಸರ್ಕಾರಕ್ಕೆ ಐಡಿಯಾ ಟೆಲಿಕಾಂ ಮನವಿ!!

ಪರ್ಸೋನಾ ಚ್ಯಾಟ್ ಎಂದು ಕರೆಯಲ್ಪಡುವ ಈ ಡೇಟಾಸೆಟ್ 160,000 ಗಿಂತಲೂ ಅಧಿಕ ಡೈಲಾಗ್ ಗಳನ್ನು ಹೊಂದಿದ್ದು, ಈ ಡೈಲಾಗ್ ಗಳನ್ನು ಅಮೇಜಾನ್ ನ ಮೆಕ್ಯಾನಿಕಲ್ ಟರ್ಕ್ ಮಾರ್ಕೆಟ್ಪ್ಲೇಸ್ ನಲ್ಲಿರುವ ಕೆಲಸಗಾರರಿಂದ ಪಡೆಯಲಾಗಿದೆ. ಅಮೇಜಾನ್ ಮೆಕ್ಯಾನಿಕಲ್ ಟರ್ಕ್(MTurk) ಒಂದು ಮಾನವ ಬುದ್ಧಿಮತ್ತೆಯ ಅಗತ್ಯವಿರುವ ಕೆಲಸಗಳ ಆನ್ಲೈನ್ ಮಾರುಕಟ್ಟೆಯಾಗಿದೆ.

ಪರ್ಸೋನಾ ಚ್ಯಾಟ್ ನಲ್ಲಿರುವ ಮಾಹಿತಿ ಅಥವಾ ಡೈಲಾಗ್ ಗಳು ಯಾದೃಚ್ಛಿಕವಾಗಿಲ್ಲ ಎಂಬುದು ಗಮನಿಸಬೇಕಾದ ವಿಷಯವಾಗಿದೆ. ಚ್ಯಾಟ್ಬಾಟ್ಗಳಿಗೆ ಒಂದು ವ್ಯಕ್ತಿತ್ವವನ್ನು ನೀಡುವ ಸಲುವಾಗಿ ಮೆಕ್ಯಾನಿಕಲ್ ಟರ್ಕ್ ಕೆಲಸಗಾರರಿಗೆ ಅವರ ಸ್ವಂತ ವ್ಯಕ್ತಿತ್ವಕ್ಕೆ ಅನುಸಾರವಾಗಿ ಡೈಲಾಗ್ ಗಳನ್ನು ಸೃಷ್ಟಿಸುವಂತೆ ತಿಳಿಸಲಾಗಿತ್ತು. ಅವರು ಒಂದು ಸಂಭಾಷಣೆಯ ಒಳಗೆ ಬಳಸಬಹುದಾದ ಐದು ಮೂಲಭೂತ ಜೀವನ ಚರಿತ್ರೆಯ ಹೇಳಿಕೆಗಳನ್ನು ಸೃಷ್ಟಿಸಿದರು.

ಉದಾಹರಣೆಗೆ, ಒಂದು ಪರ್ಸೋನಾ ಅಥವಾ ವ್ಯಕ್ತಿತ್ವವನ್ನು ಈ ಕೆಳಗಿನ ಹೇಳಿಕೆಗಳ ಸುತ್ತ ಹೆಣೆಯಲಾಗಿದೆ." ನಾನೋರ್ವ ಕಲಾವಿದ. ನನಗೆ ನಾಲ್ಕು ಮಕ್ಕಳಿದ್ದಾರೆ. ನಾನು ಇತ್ತೀಚೆಗಷ್ಟೇ ಒಂದು ಬೆಕ್ಕನ್ನು ಸಾಕಲಾರಂಭಿಸಿದ್ದೇನೆ. ನಾನು ವ್ಯಾಯಾಮಕ್ಕಾಗಿ ನಡೆಯುವುದನ್ನು ಇಷ್ಟಪಡುತ್ತೇನೆ.ನನಗೆ ಗೇಮ್ ಆಫ್ ಥ್ರೋನ್ಸ್ ನೋಡುವುದೆಂದರೆ ಬಲು ಇಷ್ಟ." ಈ ಉದಾಹರಣೆಯನ್ನು ಗಮನಿಸಿದರೆ ಚ್ಯಾಟ್ಬಾಟ್ಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕು ಎಂದು ಎನಿಸುವುದರಲ್ಲಿ ಸಂಶಯವಿಲ್ಲ, ಆದರೆ ಇದಿನ್ನೂ ಆರಂಭವಷ್ಟೇ!

ಈ ಡೇಟಾವನ್ನು ನಂತರ ಚ್ಯಾಟ್ಬಾಟ್ಗಳಿಗೆ ಸಲ್ಲಿಸಿ, ಅದರ ಫಲಿತಾಂಶವನ್ನು ನಿರ್ಣಯಿಸಲು ಮೆಕ್ಯಾನಿಕಲ್ ಟರ್ಕರ್ ಗಳ ಮತ್ತೊಂದು ಗುಂಪನ್ನು ನಿಯೋಜಿಸಲಾಯಿತು. ಇವರ ಅನುಸಾರ ಪರ್ಸೋನಾ ಬಾಟ್ ಗಳು ಮನುಷ್ಯರಂತೆ ಸುಲಲಿತವಾಗಿ ಮತ್ತು ಸ್ಥಿರವಾಗಿ ಸಂಭಾಷಣೆ ನಡೆಸುವಲ್ಲಿ ವಿಫಲವಾದರೂ ಚಲನಚಿತ್ರಗಳ ಡೈಲಾಗ್ ಗಳನ್ನು ಹೇಳಲು ತರಬೇತಿ ಪಡೆದಿರುವ ಚ್ಯಾಟ್ಬಾಟ್ ಗಳಿಗಿಂತ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸಿದವು.

ಆದರೆ, ಈ ಪರ್ಸೋನಾ ಬಾಟ್ ಗಳು ಬಹಳ ಬೇಗ ಸಂಭಾಷಣೆಗೆ ನಡೆಸಬಹುದಾದ ವಿಷಯಗಳನ್ನು ಕಳೆದುಕೊಂಡ ಕಾರಣ ಚಲನಚಿತ್ರಗಳ ಡೈಲಾಗ್ ಗಳನ್ನು ಹೇಳಲು ತರಬೇತಿ ಪಡೆದಿರುವ ಚ್ಯಾಟ್ಬಾಟ್ ಗಳಿಗಿಂತ ಕಡಿಮೆ ಹೊತ್ತು ಮನುಷ್ಯರ ಗಮನವನ್ನು ಹಿಡಿದಿಟ್ಟುಕೊಳ್ಳಲು ಸಫಲವಾಯಿತಷ್ಟೆ. ಇದರ ಹಿಂದಿನ ಕಾರಣವನ್ನು ಫೇಸ್ಬುಕ್ ನ ಸೋಶೋಧಕರು ಇನ್ನೂ ಬಹಿರಂಗಪಡಿಸಿಲ್ಲ.

Read more about:
English summary
Facebook is trying to teach chatbots how to converse like a human. Facebook's engineers have built their own dataset which the chatbots will learn from. Called Persona-chat, this dataset comprises of over 160,000 lines of dialogue, sourced from workers found on Amazon’s Mechanical Turk marketplace.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot