ಮಾಹಿತಿ ಲೀಕ್ ಬಳಿಕ ಎಚ್ಚೆತ್ತ ಫೇಸ್‌ಬುಕ್: ಒಂದೇ ವಾರದಲ್ಲಿ ಫುಲ್ ಚೇಂಜ್ ಆಗಲಿದೆ FB....!

|

ಫೇಸ್‌ಬುಕ್ ಮತ್ತೇ ಸುದ್ದಿಯಲ್ಲಿದ್ದು, ಸುಮಾರು 5 ಕೋಟಿ ಬಳಕೆದಾರರ ಮಾಹಿತಿಯೂ ಲೀಕ್ ಆಗಿದೆ. ಈ ಲೀಕ್ ಆದ ಮಾಹಿತಿಯನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿಯೂ ಜಾಗತಿಕವಾಗಿ ಫೇಸ್‌ಬುಕ್ ಬ್ರಾಂಡ್‌ಗೆ ಕಪ್ಪುಚುಕ್ಕೆಯಾಗಿದೆ. ಈ ಹಿನ್ನಲೆಯಲ್ಲಿ ಮತ್ತೆ ಬಳಕೆದಾರರ ನಂಬಿಕೆಯನ್ನುಗಳಿಸುವ ಸಲುವಾಗಿ ಹೊಸ ಮಾದರಿಯ ಫೇಸ್‌ಬುಕ್‌ ಖಾತೆಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಫೇಸ್‌ಬುಕ್ ಆಡಳಿತ ಮಂಡಳಿಯೂ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಮಾಹಿತಿ ಲೀಕ್ ಬಳಿಕ ಎಚ್ಚೆತ್ತ ಫೇಸ್‌ಬುಕ್: ಒಂದೇ ವಾರದಲ್ಲಿ ಫುಲ್ ಚೇಂಜ್ ಆಗಲಿದೆ

ಮುಂದಿನ ವಾರದಿಂದಲೇ ಫೇಸ್‌ಬುಕ್‌ ಬಳಕೆದಾರರು ತಮ್ಮ ಖಾತೆಯ ಭದ್ರತೆ ವಿಚಾರದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಇನ್ನು ಮುಂದೆ ಬಳಕೆದಾರರ ಮಾಹಿತಿಯನ್ನು ಮೂರನೇ ವ್ಯಕ್ತಿಯೂ ಬಳಕೆ ಮಾಡಿಕೊಳ್ಳದಂತೆ ಸೆಕ್ಯೂರ್ ಮಾಡಲಾಗುತ್ತಿದೆ. ಈಗಾಗಲೇ ಈ ಕಾರ್ಯವೂ ಆರಂಭವಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಮಾರ್ಕ್ ಜುಕರ್‌ಬರ್ಗ್, ಇನ್ನು ಫೇಸ್‌ಬುಕ್‌ ತಪ್ಪುಗಳನ್ನು ತಿದ್ದುಕೊಂಡು ಹೊಸ ಮಾದರಿಯಲ್ಲಿ ಭದ್ರತೆಯನ್ನು ಬಳಕೆದಾರರಿಗೆ ನೀಡಲಿದೆ ಎಂದು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಮಾರ್ಕ್:

ಫೇಸ್‌ಬುಕ್‌ನಲ್ಲಿ ಮಾರ್ಕ್:

ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದಲ್ಲಿ ಫೇಸ್‌ಬುಕ್‌ ಮೇಲೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಫೇಸ್‌ಬುಕ್ ಫೋಸ್ಟ್‌ವೊಂದನ್ನು ಹಾಕಿರುವ ಮಾರ್ಕ್ ಜುಕರ್‌ಬರ್ಗ್, ಇನ್ನೆಂದು ಫೇನ್‌ಬುಕ್‌ನಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಫೇಸ್‌ಬುಕ್ ಭದ್ರತೆಯ ವಿಚಾರದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುವುದಾಗಿ ತಿಳಿಸಿದ್ದಾರೆ.

ಆಪ್‌ಗಳಿಗೆ ನಿಷೇಧ:

ಆಪ್‌ಗಳಿಗೆ ನಿಷೇಧ:

ನೀವು ಈಗಾಗಲೇ ಫೇಸ್‌ಬುಕ್‌ನಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಆಪ್‌ಗಳಲ್ಲಿ ಕೆಲವು ನಿ‍ಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಬಳಕೆದಾರರ ಮಾಹಿತಿಯನ್ನು ಕದಿಯುವ ಸಂಶಯಾಸ್ಪದ ಆ್ಯಪ್‌ಗಳನ್ನು ನಿಷೇಧಿಸುತ್ತೇವೆ ಎಂದು ಫೇಸ್‌ಬುಕ್ ತಿಳಿಸಿದೆ. ಅಲ್ಲದೇ ಯಾವ ಆಪ್‌ಗಳು ಮಾಹಿತಿಯನ್ನು ಕದ್ದಿವೇ ಎಂಬುದನ್ನು ಬಹಿರಂಗಪಡಿಸುವುದಾಗಿ ತಿಳಿಸಿದೆ.

ಮಾಹಿತಿ ಸಿಗುವುದಿಲ್ಲ:

ಮಾಹಿತಿ ಸಿಗುವುದಿಲ್ಲ:

ಈ ಹಿಂದೆ ಫೇಸ್‌ಬುಕ್ ಬಳಕೆದಾರರ ಮಾಹಿತಿಯೂ ಬೇರೆ ಆಪ್‌ ಡೆವಲಪರ್‌ಗಳಿಗೆ ದೊರೆಯುತ್ತಿತ್ತು. ಆದರೆ ಇನ್ನು ಮುಂದೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇದರಲ್ಲಿ ಆಪ್‌ಗಳಿಗೆ ಫೇಸ್‌ಬುಕ್‌ ಬಳಕೆದಾರರ ಹೆಸರು, ಪ್ರೊಫೈಲ್‌ ಫೋಟೋ ಹಾಗೂ ಇ-ಮೇಲ್‌ ವಿಳಾಸವನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಇದನ್ನು ಬಿಟ್ಟು ಬೇರಾವುದೇ ಮಾಹಿತಿ ಬೇಕಿದ್ದರೆ ಫೇಸ್‌ಬುಕ್‌ ಬಳಿ ಪಡೆಯಬೇಕಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಆಪ್‌ ಬಗ್ಗೆ ಮಾಹಿತಿ:

ಆಪ್‌ ಬಗ್ಗೆ ಮಾಹಿತಿ:

ಅಲ್ಲದೇ ಬಳಕೆದಾರರು ಫೇಸ್‌ಬುಕ್‌ನಲ್ಲಿ ಯಾವ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಸುವ ಸಲುವಾಗಿ ಆಪ್‌ಗಳ ಮಾಹಿತಿಯನ್ನು ಫೇಸ್‌ಬುಕ್‌ ಮೇಲ್‌ ಭಾಗದಲ್ಲಿ ನೀಡಲಿದೆ ಎನ್ನಲಾಗಿದೆ. ಅಲ್ಲದೇ ಸುಮ್ಮನೆ ಅಗತ್ಯವಿಲ್ಲ ಆಪ್‌ಗಳನ್ನು ಬಳಸದಂತೆ ಮಾಹಿತಿಯನ್ನು ನೀಡಲಿದೆ.

Best Mobiles in India

English summary
Facebook security chief plans. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X