ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಶೀಘ್ರವೇ ಸ್ಥಗಿತಗೊಳ್ಳಲಿದೆ..!

By Precilla Dias
|

13 ವರ್ಷದ ಒಳಗಿನ ಮಕ್ಕಳು ಬಳಕೆ ಮಾಡಿಕೊಳ್ಳಲಿ ಎನ್ನುವ ಕಾರಣಕ್ಕೆ ಡಿಸೈನ್ ಮಾಡಲಾಗಿದ್ದ ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಅನ್ನು ಫೇಸ್ ಬುಕ್ ಶೀಘ್ರವೇ ಬಂದ್ ಮಾಡಲಿದೆ ಎನ್ನಲಾಗಿದೆ. ಈ ಆಪ್ ನಲ್ಲಿ ಮಕ್ಕಳು ವಿಡಿಯೋ ಕಾಲಿಂಗ್ ಮತ್ತು ಮೆಸೇಜ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿತ್ತು.

ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಶೀಘ್ರವೇ ಸ್ಥಗಿತಗೊಳ್ಳಲಿದೆ..!


ಆದರೆ ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ ಕಾರಣ ಮೆಸೆಂಜರ್ ಕಿಡ್ ಆಪ್ ಅನ್ನು ಡಿಲೀಟ್ ಮಾಡಲು ಮಾರ್ಕ್ ಜುಕರ್ ಬರ್ಗ್ ಮುಂದಾಗಿದ್ದಾರೆ ಎನ್ನಲಾಗಿದೆ.

ಪುಟ್ಟ ಮಕ್ಕಳು ಸೋಶಿಯಲ್ ಮೀಡಿಯಾ ಆಕೌಂಟ್ ಹೊಂದುವುದು ಉತ್ತಮವಾದುದ್ದಲ್ಲ. ಅಂತಹುದರಲ್ಲಿ ಮಕ್ಕಳಿಗೆ ವಿಶೇಷವಾಗಿ ಆಪ್ ವೊಂದನ್ನು ಬಳಕೆಗೆ ನೀಡುವುದ ಸರಿಯಾದ ಕ್ರಮವಲ್ಲ. ಇದು ಅವರ ಭವಿಷ್ಯಕ್ಕೆ ಮಾರಾಕವಾಗಲಿದೆ ಎಂದು ತಜ್ಞರು ವರದಿಯೊಂದನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಆಪ್ ಶೀಘ್ರವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೇರಿಕಾದಲ್ಲಿ ಮಾತ್ರವೇ ಮೊದಲಿಗೆ ಈ ಆಪ್ ಬಿಡುಗಡೆಯಾಗಿತ್ತು, ಶೀಘ್ರವೇ ಬೇರೆ ದೇಶಗಳಲ್ಲಿಯೂ ಲಾಂಚ್ ಆಗುವ ಸಾಧ್ಯತೆ ಇತ್ತು, ಆದರೆ ಈ ಆಪ್ ನಿಂದ ತೊಂದರೆಗಳು ಹೆಚ್ಚಾಗಲಿದೆ ಇದರಿಂದಾಗಿ ಈ ಆಪ್ ಬಂದ್ ಮಾಡಲು ಫೇಸ್ ಬುಕ್ ಚಿಂತನೆಯನ್ನು ನಡೆಸಲಿದೆ ಎನ್ನಲಾಗಿದೆ. ಈಗಾಗಲೇ ಸೋಶಿಯಲ್ ಮೀಡಿಯಾಗಳು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವರದಿಗಳು ಇದಕ್ಕೆ ಕಾರಣವಾಗಿದೆ.

How to view all photos, pages, comments and posts you liked on Facebook (KANNADA)

ಟೆಲಿಕಾಂ ಲೋಕದ ಇತಿಹಾಸವನ್ನು ಬದಲಿಸಲಿರುವ ಜಿಯೋ ಆಫರ್: ಇತರೆ ಕಂಪನಿಗಳಿಗೂ ಪಾಠ..!ಟೆಲಿಕಾಂ ಲೋಕದ ಇತಿಹಾಸವನ್ನು ಬದಲಿಸಲಿರುವ ಜಿಯೋ ಆಫರ್: ಇತರೆ ಕಂಪನಿಗಳಿಗೂ ಪಾಠ..!

ಫೇಸ್ ಬುಕ್ ತನ್ನ ಮೆಸೆಂಜರ್ ಕಿಡ್ಸ್ ಸೇವೆಯನ್ನು ನಿಲ್ಲಿಸಿಲಿ ಎಂದು ಪತ್ರವೊಂದನ್ನು ತಜ್ಞರು ಫೇಸ್ ಬುಕ್ ಮುಖ್ಯಸ್ಥರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಫೇಸ್ ಬುಕ್ ಸಹ ಆಲೋಚಿಸುವುದಾಗಿ ತಿಳಿಸಿದೆ ಎನ್ನಲಾಗಿದೆ. ಶೀಘ್ರವೇ ಈ ಕುರಿತು ನಿರ್ಧಾರವು ಹೊರ ಬೀಳಲಿದೆ.

ಈಗಾಗಲೇ ಸೋಶಿಯಲ್ ಮೀಡಿಯಾ ಬಳಕೆಯಿಂದಾಗಿ ತೊಂದರೆಗೆ ಸಿಲುಕಿರುವ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮಕ್ಕಳನ್ನು ಅದೇ ಸಾಲಿಗೆ ಸೇರಿಸುವುದು ಬೇಡ ಎನ್ನುವ ಕಾಳಜಿಯಿಂದಾಗಿ ಫೇಸ್ ಬುಕ್ ಯನ್ನ ಕಿಡ್ಸ್ ಆಪ್ ಅನ್ನು ನಿಲ್ಲಿಸಿಲಿ ಎನ್ನುವುದು ಎಲ್ಲರ ಬೇಡಿಕೆಯಾಗಿದೆ.

Best Mobiles in India

Read more about:
English summary
More than 100 child health experts have urged Facebook's CEO Mark Zuckerberg to delete Messenger Kids app permanently.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X