ಎರಡು ಭಾಗವಾಗಿ ಬದಲಾಗಲಿದೆ ಫೇಸ್ ಬುಕ್ ನ್ಯೂಸ್ ಫಿಡ್

By Lekhaka
|

ಫೇಸ್ ಬುಕ್ ತನ್ನ ನ್ಯೂಸ್ ಫಿಡ್ಸ್ ನಲ್ಲಿ ಭಾರೀ ಬದಲಾವಣೆಯನ್ನು ಮಾಡಲು ಮುಂದಾಗಿದೆ. ತನ್ನ ನ್ಯೂಸ್ ಫೀಡ್ಸ್ ಅನ್ನು ಎರಡು ವಿಭಾಗವಾಗಿ ವಿಂಗಡಿಸುವ ಕ್ರಮಕ್ಕೆ ಫೇಸ್ ಬುಕ್ ಮುಂದಾಗಿದ್ದು, ಈ ಪ್ರಯತ್ನದ ಪರೀಕ್ಷೆಯನ್ನು ನಡೆಸುತ್ತಿದೆ ಎನ್ನಲಾಗಿದೆ.

ಎರಡು ಭಾಗವಾಗಿ ಬದಲಾಗಲಿದೆ ಫೇಸ್ ಬುಕ್ ನ್ಯೂಸ್ ಫಿಡ್

ಇದರಲ್ಲಿ ಒಂದು ಕರ್ಮಷಿಯಲ್ ಪೇಜ್ ಮತ್ತೊಂದು ಪರ್ನಸಲ್ ನ್ಯೂಸ್ ಫಿಡ್ ಪೇಚ್ ಎಂಬ ಎರಡು ವಿಭಾಗವನ್ನು ತೆರೆಯಲು ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ. ಒಟ್ಟು ಆರು ದೇಶಗಳಲ್ಲಿ ಈ ಹೊಸ ಪರೀಕ್ಷೆಯನ್ನು ನಡೆಸಲಿದ್ದು, ಯಶಸ್ವಿಯಾದರೆ ಎಲ್ಲೆಡೆ ಪರಿಚಯಿಸಲಿದೆ.

ಶ್ರೀಲಂಕಾ, ಬಲೊವಿಯಾ, ಸ್ಲೋವಕಿಯಾ, ಸರ್ಬಿಯಾ, ಗ್ವಾಟೆಮಲಾ ಮತ್ತು ಕಾಂಬೊಡಿಯಾಗಳಲ್ಲಿ ಈ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ ಎನ್ನಲಾಗಿದೆ. ಫೇಸ್ ಬುಕ್ ಲಾಗ್ ಆದವರೆಲ್ಲರಿಗೂ ನ್ಯೂಸ್ ಫಿಡ್ ಕಾಣಿಸುವುದರಿಂದ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಗ್ರೂಪ್ ಅಡ್ಮಿನ್ಗಳಿಗೆ ಹೆಚ್ಚಿನ ಫೀಚರ್ ನೀಡಲಿರುವ ವಾಟ್ಸಾಪ್ಗ್ರೂಪ್ ಅಡ್ಮಿನ್ಗಳಿಗೆ ಹೆಚ್ಚಿನ ಫೀಚರ್ ನೀಡಲಿರುವ ವಾಟ್ಸಾಪ್

'ಒಂದು ಪೇಜ್ ನಲ್ಲಿ ಸ್ನೇಹಿತರು, ಫ್ಯಾಮಿಲಿ ಮತ್ತು ಸೆಲೆಬ್ರಿಟಿಗಳನ್ನು ಒಂದು ಕಡೆ, ಆಡ್ ಗಳು ಸೆಜೆಷನ್ ಗಳು, ಫಾಲೋ ಪೇಜ್ ಗಳು ಮತ್ತೊಂದು ಇರುವಂತೆ ಮಾಡಲು ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ, ಇದು ಬಳಕೆದಾರರಿಗೆ ಮತ್ತು ಫೇಸ್ ಬುಕ್ ಎರಡಕ್ಕೂ ಲಾಭವಾಗಲಿದೆ.

ಈಗಾಗಲೇ ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ಎಲ್ಲಾ ಮಾದರಿಯಲ್ಲೂ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತಿದೆ. ಈ ಹೊಸ ಆಯ್ಕೆಯನ್ನು ಪರಿಚಯಿಸುವ ಮೂಲಕ ಮತ್ತೊಂದು ಹಂತದಲ್ಲಿ ಜಾಹಿರಾತುಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ.

Best Mobiles in India

Read more about:
English summary
Facebook is now testing the idea of dividing its News Feed in two, separating commercial posts from personal news.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X