ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಮತ್ತಷ್ಟು ವಿಡಿಯೋ ಕಾಣಿಸಿಕೊಳ್ಳಲಿದೆ...!

By Lekhaka
|

ಬಳಕೆದಾರರನ್ನು ಇನಷ್ಟು ಕಾಲ ಹಿಡಿದಿಡುವ ಸಲುವಾಗಿ ಫೇಸ್ ಬುಕ್ ತನ್ನ ನ್ಯೂಸ್ ಫಿಡ್ಸ್ ನಲ್ಲಿ ಮತ್ತಷ್ಟು ವಿಡಿಯೋಗಳನ್ನು ತೋರಿಸಿಲಿದೆ ಎನ್ನಲಾಗಿದೆ. ಈಗಾಗಲೇ ಫೇಸ್ ಬುಕ್ ನಲ್ಲಿ ವಿಡಿಯೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ. ಇದರಿಂದಾಗಿ ಫೇಸ್ ಬುಕ್ ನಲ್ಲಿ ವ್ಯರ್ಥ ಮಾಡುವ ಸಮಯ ಇನಷ್ಟು ಹೆಚ್ಚಾಗಲಿದೆ.

ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಮತ್ತಷ್ಟು ವಿಡಿಯೋ ಕಾಣಿಸಿಕೊಳ್ಳಲಿದೆ...!

ಈಗಾಗಲೇ ಫೇಸ್ ಬುಕ್ ಯೂಟ್ಯೂಬ್ ಮಾದರಿಯಲ್ಲಿ ತನ್ನದೇ ವಿಡಿಯೋ ಸ್ಟ್ರೀಮಿಂಗ್ ಅನ್ನು ಆರಂಭಿಸುವ ಯೋಜನೆಯನ್ನು ರೂಪಿಸುತ್ತಿದ್ದು, ಇದೇ ಮಾದರಿಯಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸು ಸಲುವಾಗಿಯೇ ತನ್ನ ನ್ಯೂಸ್ ಫಿಡ್ಸ್ ನಲ್ಲಿ ಅತೀ ಹೆಚ್ಚಿನ ವಿಡಿಯೋಗಳನ್ನು ಹಾಕಲಿದ್ದು, ಈ ಮೂಲಕ ಜನರನ್ನು ಎಂಗೇಜ್ ಮಾಡಲು ಮುಂದಾಗಿದೆ.

ಅಲ್ಲದೇ ದಿನ ಕಳೆದಂತೆ ವಿಡಿಯೋ ಆಡ್ ಗಳನ್ನು ಫೇಸ್ ಬುಕ್ ಹೆಚ್ಚು ಮಾಡಲಿದ್ದು, ಈ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ರೂಪಿಸಿಕೊಂಡಿದೆ. ಈಗಾಗಲೇ ದೇಶದಲ್ಲಿ ವಿಡಿಯೋ ಬಳಕೆಯೂ ಹೆಚ್ಚಿನ ಆದ್ಯತೆಯನ್ನು ಪಡೆದುಕೊಂಡಿದ್ದು, ಯೂಟ್ಯೂಬ್ ವಿಡಿಯೋ ಗಳಿಗೆ ಪರ್ಯಯವೇ ಇಲ್ಲ ಎನ್ನುವಂತಾಗಿದೆ. ಇದಕ್ಕಾಗಿ ಫೇಸ್ ಬುಕ್ ವಿಡಿಯೋ ಮಾರುಕಟ್ಟೆಗೆ ಬರಲಿದೆ.

ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆ..!ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆ..!

ಇದಕ್ಕಾಗಿಯೇ ಫೇಸ್ ಬುಕ್ ವಿಡಿಯೋ ಸೆಗ್ಮೆಂಟ್ ಮೇಲೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯವನ್ನು ಗಳಿಕೆ ಮಾಡುವುದು ಹೇಗೆ ಎಂದು ಈಗಾಗಲೇ ಲೆಕ್ಕಚಾರವನ್ನು ಶುರುವಾಗಿದೆ. ಅಲ್ಲದೇ ಯೂಟ್ಯೂಬ್ ಮಾದರಿಯಲ್ಲಿ ವಿಡಿಯೋ ಹಾಕಿದವರಿಗೆ ಹಣವನ್ನು ಫೇಸ್ ಬುಕ್ ನೀಡಲಿದೆ.

ಈಗಾಗಲೇ ಫೇಸ್ ಬುಕ್ ಬಳಕೆಯಿಂದ ಸಮಯ ವ್ಯರ್ಥ ಎನ್ನುವರರಿಗೆ ಈ ಹೊಸ ವಿಚಾರದಿಂದ ಮತ್ತಷ್ಟು ಸಮಯ ಹಾಳಗಳಿದೆ ಎನ್ನಲಾಗಿದೆ. ಒಟ್ಟಿನಲ್ಲಿ ವಿಡಿಯೋ ಪ್ರಿಯರಿಗೆ ಇನ್ನು ಫೇಸ್ ಬುಕ್ ಮತ್ತಷ್ಟು ಹತ್ತಿರವಾಗುವುದು ಖಂಡಿತ.

Best Mobiles in India

Read more about:
English summary
Facebook also said that it is making changes to the kind of video advertisement that are present on the network

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X